Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 7 ರಾಶಿಯವರು ಸ್ನೇಹಕ್ಕಿಂತ ಹೆಚ್ಚಾಗಿ ತಮಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರಂತೆ!
ನಮ್ಮ ರಕ್ತ ಸಂಬಂಧಿಕರನ್ನು ಬಿಟ್ಟು ನಮ್ಮ ಸಹಾಯಕ್ಕೆ ಯಾವಾಗ್ಲೂ ಇರುವವರು ಅಂದ್ರೆ ಅದು ನಮ್ಮ ಬೆಸ್ಟ್ ಫ್ರೆಂಡ್ಸ್ ಮಾತ್ರ. ಕಷ್ಟ ಕಾಲದಲ್ಲಿ ಸ್ನೇಹಿತನಿಗಾಗಿ ಪ್ರಾಣ ಕೊಡೋದಕ್ಕೆ ಇವರು ಸಿದ್ಧವಾಗಿರುತ್ತಾರೆ. ಅದಕ್ಕೆ ಹೇಳೋದು ಸ್ನೇಹಕ್ಕೆ ಬೆಲೆ ಕಟ್ಟೋದಿಕ್ಕೆ ಆಗೋದಿಲ್ಲ ಅಂತ. ಹಾಗಂತ ಎಲ್ಲ ಸ್ನೇಹಿತರು ಒಳ್ಳೆಯವರಾಗಿರೋದಿಲ್ಲ. ಕೆಲವರು ತಮ್ಮ ಸ್ನೇಹಿತರಂತೆ ನಟಿಸುತ್ತಾರಂತೆ. ಅಷ್ಟಕ್ಕು ಯಾವ ರಾಶಿಯವರು ಸ್ನೇಹಿತರಂತೆ ನಟಿಸಿ ಮೋಸ ಮಾಡುತ್ತಾರೆ ಅನ್ನೋದನ್ನು ತಿಳಿಯೋಣ.
ಮಿಥುನ ರಾಶಿ
ಮಿಥುನ ರಾಶಿಯವರು ಬಹುಮುಖತೆಯನ್ನು ಹೊಂದಿರುತ್ತಾರೆ. ಹಾಗೂ ಈ ರಾಶಿಯವರು ಯಾರೊಂದಿಗೆ ಬೇಕಾದರೂ ಬೆರೆಯೋದಕ್ಕೆ ಸಿದ್ಧವಾಗಿರುತ್ತಾರೆ. ಇವರು ಸುತ್ತಲೂ ಇದ್ದಾಗ ಇವರ ಸ್ನೇಹಿತರು ಖುಷಿಯಾಗಿ ಇರುತ್ತಾರೆ. ಇವರು ಬೇರೆಯವರನ್ನು ಆಕರ್ಷಿಸುವ ಗುಣ ಹೊಂದಿದ್ದಾರೆ. ಇವರ ಸ್ನೇಹ ಸಮಂಜಸವಾಗಿ ಇರೋದಿಲ್ಲ. ಇವರು ದ್ವಂದ್ವ ಸ್ವಭಾವದವರಾಗಿರೋದ್ರಿಂದ, ಬುದ್ಧತೆ ಇರೋದಿಲ್ಲ. ಇವರು ಸ್ನೇಹವನ್ನು ಉಳಿಸಿಕೊಳ್ಳೋದಕ್ಕೆ ವಿಶ್ವಾಸಾರ್ಹರಲ್ಲ.

ತುಲಾ ರಾಶಿ
ತುಲಾ ರಾಶಿಯವರು ತಮ್ಮ ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳೋದಕ್ಕೆ ಬಯಸುತ್ತಾರೆ. ಇವರು ಪ್ರಾಮಾಣಿಕ ಸ್ನೇಹಿತರಂತೆ ಕಂಡರೂ ಕೂಡ ಕೆಲವೊಮ್ಮೆ ಇವರ ಪ್ರಾಮಾಣಿಕತೆ ಮೇಲ್ನೋಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ರಾಶಿಯವರು ಪ್ರಾಮಾಣಿಕವಾಗಿರುವುದಕ್ಕಿಂತ ಶಾಂತಿಯನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಸಾಮಾನ್ಯವಾಗಿ ವರ್ಚಸ್ಸು ಮತ್ತು ಆತ್ಮವಿಶ್ವಾಸ ಹೆಚ್ಚಾಗಿ ಇರುತ್ತದೆ. ಈ ರಾಶಿಯವರು ಉದಾರ ಮತ್ತು ನಿಷ್ಠಾವಂತ ಸ್ನೇಹಿತರಾಗಿದ್ದರೂ ಕೂಡ ಇವರಲ್ಲಿ ಇರುವ ಅಹಂ ಇವರ ಉತ್ತಮ ಉದ್ದೇಶವನ್ನು ಮರೆಮಾಚುವಂತೆ ಮಾಡುತ್ತದೆ. ಈ ರಾಶಿಯವರು ಕೆಲವೊಂದು ಸಲ ವೈಯಕ್ತಿಕ ಲಾಭಕ್ಕಾಗಿ ಸಂದರ್ಭವನ್ನು ಕುಶಲತೆಯಿಂದ ನಿಭಾಯಿಸುತ್ತಾರೆ.
ಮೇಷ ರಾಶಿ
ಮೇಷ ರಾಶಿಯವರು ಬಲವಾದ ವ್ಯಕ್ತಿತ್ವ ಮತ್ತು ದೃಢತೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಸ್ನೇಹಿತರ ಬಗ್ಗೆ ಉತ್ತಮ ಭಾವನೆಗಳನ್ನು ಹೊಂದಿದ್ದರೂ ಕೂಡ ಸ್ವಂತ ಹಿತಾಸಕ್ತಿಯ ಬಗ್ಗೆ ಇವರು ಹೆಚ್ಚಾಗಿ ಗಮನ ನೀಡುತ್ತಾರೆ. ಇನ್ನೂ ಈ ರಾಶಿಯವರು ಸ್ನೇಹವನ್ನು ಕೊನೆವರೆಗೆ ಉಳಿಸಿಕೊಳ್ಳುತ್ತಾರೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಯಾವಾಗ ಬೇಕಾದರೂ ತ್ಯಜಿಸಬಹುದು. ಇನ್ನೂ ದೀರ್ಘಾವಧಿಯ ಸ್ನೇಹವನ್ನು ಉಳಿಸಿಕೊಳ್ಳುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
ಧನು ರಾಶಿ
ಧನು ರಾಶಿಯವರು ಸಾಹಸಮಯ ಚಟುವಟಿಕೆಗಳನ್ನು ಮಾಡಲು ತುಂಬಾನೇ ಇಷ್ಟ ಪಡುತ್ತಾರೆ. ಮತ್ತು ಇವರು ಯಾವಾಗಲೂ ಸ್ವತಂತ್ರವಾಗಿರೋದಕ್ಕೆ ಬಯಸುತ್ತಾರೆ. ಈ ರಾಶಿಯವರು ಜೊತೆಗಿದ್ದರೆ ಅವರ ಸ್ನೇಹಿತರು ತುಂಬಾನೇ ಎಂಜಾಯ್ ಮಾಡುತ್ತಾರೆ. ಆದರೆ ಇವರು ಸ್ನೇಹವನ್ನು ಕಡೆಯವರೆಗೂ ಉಳಿಸಿಕೊಂಡು ಹೋಗುತ್ತಾರೆ ಅಂತ ಗ್ಯಾರಂಟಿ ಕೊಡೋದಿಕ್ಕೆ ಆಗೋದಿಲ್ಲ. ಯಾಕಂದ್ರೆ ಎಲ್ಲದಕ್ಕಿಂತಲೂ ಇವರು ತಮ್ಮ ಸ್ವಾತಂತ್ರಕ್ಕೆ ಮೊದಲ ಆಧ್ಯತೆ ನೀಡುತ್ತಾರೆ.
ಮಕರ ರಾಶಿ
ಮಕರ ರಾಶಿಯವರಲ್ಲಿ ಮಹತ್ವಾಕಾಂಕ್ಷೆ ಗುಣ ಇರುತ್ತದೆ. ಇವರು ಸ್ನೇಹಕ್ಕೆ ವಿಶ್ವಾಸಾರ್ಹರಾಗಿ ಇರುತ್ತಾರೆ. ಈ ರಾಶಿಯವರು ಹೆಚ್ಚು ಶ್ರಮ ಪಟ್ಟು ಕೆಲಸ ಮಾಡುತ್ತಾರೆ. ಯಶಸ್ಸು ಮತ್ತು ಸಾಧನೆಯ ಮೇಲಿನ ಅವರ ಗಮನವು ಕೆಲವೊಮ್ಮೆ ಆಳವಾದ ಸ್ನೇಹವನ್ನು ಪೋಷಿಸುವ ಅವರ ಸಾಮರ್ಥ್ಯವನ್ನು ಮರೆಮಾಡಬಹುದು. ಇನ್ನೂ ಈ ರಾಶಿಯವರು ಸ್ನೇಹ ಸಂಬಂಧಗಳಲ್ಲಿ ಸಮಯ ಮತ್ತು ಶ್ರಮವನ್ನು ಹೂಡಿಕೆ ಮಾಡುವುದಕ್ಕಿಂತ ಅವರು ತಮ್ಮ ವೈಯಕ್ತಿಕ ಗುರಿಗಳಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ.
ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಸ್ವತಂತ್ರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಉತ್ತಮ ಸ್ನೇಹಿತರು ಎಂದು ಹೆಸರು ಪಡೆದುಕೊಂಡಿರುತ್ತಾರೆ. ಆದರೆ ಸ್ವಂತ ವಿಚಾರ ಅಂತ ಬರುವಾಗ ಅವರು ಸ್ನೇಹವನ್ನು ಮರೆಯುತ್ತಾರೆ. ಸ್ನೇಹಿತರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆಯೋದು ಇವರಿಗೆ ಕಷ್ಟ ಆಗುತ್ತದೆ. ಈ ರಾಶಿಯವರು ನಿಕಟ ಸ್ನೇಹವನ್ನು ಕಾಪಾಡಿಕೊಳ್ಳುವುದಕ್ಕಿಂತ ಅವರು ತಮ್ಮ ಆದರ್ಶಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ.



Click it and Unblock the Notifications


