Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ರಾಶಿಯವರು ಸ್ನೇಹವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ
ನಮ್ಮ ಜೀವನದಲ್ಲಿ ಅಪ್ಪ- ಅಮ್ಮಾ ಎಷ್ಟು ಮುಖ್ಯ ಪಾತ್ರ ವಹಿಸುತ್ತಾರೋ ಅದೇ ರೀತಿ ಒಬ್ಬ ಸ್ನೇಹಿತ ಕೂಡ ತುಂಬಾನೇ ಮುಖ್ಯ. ಎಷ್ಟೋ ಸಲ ನಾವು ನಮ್ಮ ಪೋಷಕರಲ್ಲಿ ಹಂಚಿಕೊಳ್ಳೋದಕ್ಕೆ ಆಗದೇ ಇರೋ ವಿಚಾರಗಳನ್ನು ನಾವು ನಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುತ್ತೇವೆ.
ಸ್ನೇಹಿತರಲ್ಲಿ ಎರಡು ವಿಧ. ಕೆಲವು ಸ್ನೇಹಿತರು ಮಿಂಚಿನಂತೆ ಬಂದು ಮರೆಯಾಗಿ ಬಿಡುತ್ತಾರೆ. ಇನ್ನೂ ಕೆಲವು ಸ್ನೇಹಿತರು ನಮ್ಮ ಜೊತೆಗೆ ಜೀವನ ಪರ್ಯಂತ ಇರುತ್ತಾರೆ. ಈ ರಾಶಿಯವರು ಕೊನೆವರೆಗೂ ತಮ್ಮ ಸ್ನೇಹವನ್ನು ಉಳಿಸಿಕೊಳ್ಳುತ್ತಾರಂತೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರು ತಮ್ಮ ಸ್ನೇಹಕ್ಕಾಗಿ ಏನು ಬೇಕಾದರೂ ಮಾಡೋದಕ್ಕೆ ಸಿದ್ಧವಾಗಿರುತ್ತಾರೆ. ಇವರು ಬಿಡುವಿಲ್ಲದ ಜೀವನಶೈಲಿಯನ್ನು ಹೊಂದಿರುತ್ತಾರೆ. ಆದರೆ ಇವರು ಯಾವಾಗಲೂ ತಮ್ಮ ಸ್ನೇಹಿತರಿಗಾಗಿ ಸಮಯವನ್ನು ಕಳೆಯುತ್ತಾರೆ. ಮೇಷ ರಾಶಿಯವರಿಗೆ ಸ್ನೇಹಿತರು ಹೆಚ್ಚು. ಆದರೆ ಅದರಲ್ಲಿ ಕೆಲವೇ ಕೆಲವು ಜನರೊಂದಿಗೆ ಇವರು ತುಂಬಾನೇ ಆತ್ಮೀಯರಾಗಿರುತ್ತಾರೆ. ಈ ರಾಶಿಯವರು ತಮ್ಮ ಸ್ನೇಹದ ವಿಚಾರದಲ್ಲಿ ತುಂಬಾನೇ ಉತ್ಸುಕರಾಗಿ ಇರುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಅದ್ಭುತ ಸ್ನೇಹಿತರ ಬಳಗವನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರ ಗುಣಕ್ಕೆ ಮನಸೋತು ಅನೇಕರು ಇವರ ಜೊತೆಗೆ ಸ್ನೇಹ ಮಾಡಿಕೊಳ್ಳುತ್ತಾರೆ. ಇವರು ಯಾವಾಗಲೂ ಜೀವಮಾನದ ಸ್ನೇಹಿತರನ್ನು ಹೊಂದಿರುತ್ತಾರೆ. ಈ ಸ್ನೇಹ ಸುಮ್ಮನೆ ಬಂದಿದ್ದಲ್ಲ. ಸಿಂಹ ರಾಶೀಯವರ ಗುಣಕ್ಕೆ ಉಡುಗೊರೆಯಾಗಿ ಬಂದಿರೋದು. ಸಿಂಹ ರಾಶಿಯವರು ತಮ್ಮ ಸ್ನೇಹಿತರ ಜೊತೆಗೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ಪ್ರತಿಯೊಬ್ಬರೊಂದಿಗೂ ಮುಕ್ತವಾಗಿ ಮಾತನಾಡುವ ಗುಣ ಹೊಂದಿದ್ದಾರೆ. ಇವರಿಗೆ ಪ್ರಮಾಣಿಕವಾಗಿ ಹಾಗೂ ಕೊನೆವರೆಗೂ ಇವರ ಜೊತೆಗಿರುವ ಸ್ನೇಹಿತರ ಬಳಗವಿರುತ್ತದೆ. ಇದರ ಜೊತೆಗೆ ಇವರು ಪ್ರತಿಯೊಬ್ಬರ ಜೊತೆಗೂ ಕೂಡ ಸ್ನೇಹಿತರಂತೆ ನಡೆದುಕೊಳ್ಳುತ್ತಾರೆ. ಇವರು ಸ್ನೇಹಿತರ ಜೊತೆಗೆ ಕೂಡಿದಾಗ ಕಿಚಾಯಿಸೋದು, ಕಾಳು ಎಳೆಯೋದನ್ನು ಮಾಡುತ್ತಾರೆ. ಆದರೆ ಎಂತಹ ಪರಿಸ್ಥಿತಿಯಲ್ಲಿ ಸ್ನೇಹಿತರನ್ನು ಬಿಟ್ಟುಕೊಡೋದಿಲ್ಲ.
ವೃಷಭ ರಾಶಿ
ವೃಷಭ ರಾಶಿಯವರು ಉತ್ತಮ ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ. ಎಂತಹ ಪರಿಸ್ಥಿತಿಯಲ್ಲೂ ಇವರು ಸ್ನೇಹಿತರ ಕೈ ಬಿಟ್ಟು ಹೋಗೋದಿಲ್ಲ. ವೃಷಭ ರಾಶಿಯವರು ವಿಶ್ವಾಸಾರ್ಹರು ಮತ್ತು ತಾಳ್ಮೆಯಿಂದಿರುತ್ತಾರೆ. ಇನ್ನೂ ಸ್ನೇಹಿತರು ಕಷ್ಟ ಅಂದಾಗ ಇವರು ಎಂತಹ ಪರಿಸ್ಥಿತಿಯಲ್ಲೂ ಅವರ ಬೆನ್ನಿಗೆ ನಿಲ್ಲುತ್ತಾರೆ. ಆದರೆ ಕಷ್ಟ ಬಂತು ಅಂತ ಸ್ನೇಹಿತರನ್ನು ದೂರ ಮಾಡುವ ಗುಣ ಇವರದಲ್ಲ.
ಮಿಥುನ ರಾಶಿ
ಸ್ನೇಹಿತರ ಕೈ ಬಿಡುವ ಗುಣ ಮಿಥುನ ರಾಶಿಯವರಿಗಿಲ್ಲ. ಅವರು ಒಂದು ಸಾರಿ ನಿಮ್ಮ ಕೈ ಹಿಡಿದರೆ ಮತ್ತೆ ಬಿಟ್ಟು ಬಿಡುವ ಮಾತೇ ಇಲ್ಲ. ಮಿಥುನ ರಾಶಿಯವರ ಜೊತೆಗೆ ನಿಮಗೆ ಮಾತನಾಡೋದಕ್ಕೆ ಖುಷಿಯಾಗುತ್ತದೆ. ಮತ್ತು ಜೀವನ ಸಲಹೆಯನ್ನು ನೀಡುವಲ್ಲಿ ಅವರು ಉತ್ತಮರು. ಮಿಥುನ ರಾಶಿಯವರು ನಿಮ್ಮ ಸ್ನೇಹಿತರ ಬಳಗದಲ್ಲಿದ್ದರೆ ನಿಮ್ಮ ನಗುವಿಗೆ ಬರವಿಲ್ಲ. ಮಿಥುನ ರಾಶಿಯವರು ನಿಮ್ಮ ಸ್ನೇಹಿತರಾಗಿದ್ದರೆ ಅವರು ನಿಮಗೆ ಸಮಯವನ್ನು ನೀಡುತ್ತಾರೆ.



Click it and Unblock the Notifications

