Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 6 ರಾಶಿಯವರಲ್ಲಿ ಮಕ್ಕಳನ್ನು ಸ್ನೇಹಿತರಂತೆ ಕಾಣುವ ಗುಣವಿದೆ!
ಪೋಷಕರು ಹಾಗೂ ಮಕ್ಕಳ ಮಧ್ಯೆ ಒಂದು ರೀತಿಯ ಅವಿನಾಭಾವ ಸಂಬಂಧ ಇರುತ್ತದೆ. ಅದೇ ರೀತಿ ಮಕ್ಕಳಿಗೆ ಅಪ್ಪ- ಅಮ್ಮ ಅಂದ್ರೆ ಒಂದು ರೀತಿಯ ಭಯ ಇದ್ದೇ ಇರುತ್ತೆ. ತಪ್ಪು ಮಾಡಿದಾಗ ಪೋಷಕರು ಎಲ್ಲಿ ಹೊಡೆದು ಬಿಡುತ್ತಾರೋ ಅನ್ನೋ ಆಂತಕ, ಭಯ ಜೊತೆಗೆ ಚೆನ್ನಾಗಿ ಓದಬೇಕೆಂಬ ಒತ್ತಡವೂ ಇರುತ್ತದೆ. ಆದರೆ ಎಲ್ಲಾ ಪೋಷಕರು ಈ ರೀತಿ ಇರೋದಿಲ್ಲ.
ಕೆಲ ಪೋಷಕರು ತಮ್ಮ ಮಕ್ಕಳ ಜೊತೆಗೆ ತುಂಬಾನೇ ಆತ್ಮೀಯವಾಗಿ ಇರುತ್ತಾರೆ. ಮಕ್ಕಳನ್ನು ಸ್ನೇಹಿತರಂತೆ ಕಾಣುತ್ತಾರೆ. ತಮ್ಮ ಮಕ್ಕಳ ಜೊತೆಗೆ ಸ್ನೇಹಿರಂತೆ ಒಂದಾಗಿ ಇರುತ್ತಾರೆ. ಅಷ್ಟಕ್ಕು ಯಾವ ರಾಶಿಯವರು ಮಕ್ಕಳ ಜೊತೆಗೆ ಸ್ನೇಹಿತರಂತೆ ಇರುತ್ತಾರೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯ ಪೋಷಕರು ಸಂಪ್ರದಾಯಿಕ ಪೋಷಕರಂತೆ ಇರೋದಿಲ್ಲ. ತುಂಬಾನೇ ಮೋಜು, ಮಸ್ತಿ ಮಾಡುತ್ತಾರೆ ಇವರು. ಇವರು ತಮ್ಮ ಮಕ್ಕಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಜೊತೆಗೆ ಮಕ್ಕಳಿಗೆ ಆಪ್ತರಾಗಿ ಇರುತ್ತಾರೆ. ಈ ರಾಶಿಯವರು ಮಕ್ಕಳಿಗೆ ಬೇಕಾದಷ್ಟು ಸ್ವಾತಂತ್ರವನ್ನು ನೀಡುತ್ತಾರೆ. ಹಾಗೂ ಅವರ ಆಸಕ್ತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಪೋಷಕರು ಯಾವತ್ತಿಗೂ ಮಕ್ಕಳ ಖುಷಿಯನ್ನೇ ಬಯಸುತ್ತಾರೆ. ಮಕ್ಕಳು ತಮ್ಮ ಜೊತೆಗೆ ಆರಾಮಾಗಿರಲು ಅವಕಾಶವನ್ನು ನೀಡುತ್ತಾರೆ. ಮಕ್ಕಳಿಗೆ ಮನೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗೋದಿಲ್ಲ. ಪೋಷಕರೊಂದಿಗೆ ಬೆರೆಯುತ್ತಾ ಖುಷಿ ಖುಷಿಯಾಗಿ ಮಕ್ಕಳು ಇರುತ್ತಾರೆ. ಮಕ್ಕಳು ತಮ್ಮ ಮನಸ್ಸಿನ ಮಾತನನ್ನು ಪೋಷಕರ ಜೊತೆಗೆ ಹಂಚಿಕೊಳ್ಳೋದಕ್ಕೆ ಇವರು ಅವಕಾಶ ನೀಡುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯವರು ಜೀವನವನ್ನು ತುಂಬಾನೇ ಎಂಜಾಯ್ ಮಾಡುತ್ತಾ ಖುಷಿ ಖುಷಿಯಾಗಿ ಇರುತ್ತಾರೆ. ಮಕ್ಕಳ ಖುಷಿಗೆ ಇವರು ಮೊದಲ ಆಧ್ಯತೆಯನ್ನು ನೀಡುತ್ತಾರೆ. ಮಕ್ಕಳ ಜೊತೆಗೆ ಹೊರಗಡೆ ಹೋಗಿ ಖುಷಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಮಕ್ಕಳು ಹಾದಿ ತಪ್ಪದಂತೆ ಕಾಳಜಿ ವಹಿಸುವ ಜೊತೆಗೆ ಮಕ್ಕಳು ಕೇಳಿದ್ದನ್ನು ಇಲ್ಲ ಅಂತ ಹೇಳೋದಿಲ್ಲ. ಇನ್ನೂ ಈ ರಾಶಿಯವರು ಮಕ್ಕಳ ಜೊತೆಗೆ ಯಾವುದೇ ವಿಚಾರ ಮಾತನಡೋದಕ್ಕೂ ಮುಚ್ಚು ಮರೆ ಮಾಡೋದಿಲ್ಲ.
ಸಿಂಹ ರಾಶಿ
ಸಿಂಹ ರಾಶಿಯವರು ಮಕ್ಕಳ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾರೆ. ಮಕ್ಕಳ ರಕ್ಷಣೆಗೆ ಇವರು ಮೊದಲ ಆಧ್ಯತೆಯನ್ನು ನೀಡುತ್ತಾರೆ. ಇನ್ನೂ ಮಕ್ಕಳು ಯಾವುದಾದರೂ ಸಮಸ್ಯೆಗೆ ಸಿಲುಕಿದಾಗ ಅದನ್ನು ಬಗೆ ಹರಿಸೋದಕ್ಕೆ ಮಕ್ಕಳಿಗೆ ಸಹಾಯ ಮಾಡುತ್ತಾರೆ. ಇನ್ನೂ ಇವರು ತಮ್ಮ ಮಕ್ಕಳಿಗೆ ರೋಲ್ ಮಾಡಲ್ ಗಳಾಗಿ ಇರುತ್ತಾರೆ. ಹಾಗೂ ಅವರೊಂದಿಗೆ ಸ್ನೇಹಿತರಂತೆಯೂ ನಡೆದುಕೊಳ್ಳುತ್ತಾರೆ.
ಧನು ರಾಶಿ
ಧನು ರಾಶಿಯ ಪೋಷಕರು ತುಂಬಾನೇ ಕೂಲ್ ಆಗಿರುತ್ತಾರೆ. ಮಕ್ಕಳನ್ನು ಅಡ್ವೆಂಚರ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಾಗೂ ಮಕ್ಕಳಿಗೆ ತಾವು ಇಷ್ಟ ಪಟ್ಟಿರೋದನ್ನು ಮಾಡೋದಕ್ಕೆ ಇವರು ಅವಕಾಶವನ್ನು ನೀಡುತ್ತಾರೆ. ಧನು ರಾಶಿಯ ಪೋಷಕರು ಮಕ್ಕಳ ಜೊತೆಗೆ ಫ್ರೀಯಾಗಿ ಇರೋದ್ರಿಂದ ಮಕ್ಕಳು ಕೂಡ ಮುಕ್ತವಾಗಿ ಎಲ್ಲಾ ವಿಚಾರವನ್ನೂ ಹಂಚಿಕೊಳ್ಳುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ಮಕ್ಕಳ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಮಕ್ಕಳ ದೈಹಿಕ ಚಟುವಟಿಕೆಗಳ ಬಗ್ಗೆ ಇವರು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಾರೆ. ಹಾಗೂ ಅವರ ಬೌದ್ಧಿಕ ಅಗತ್ಯತೆಗಳ ಬಗ್ಗೆಯೂ ಗಮನ ಹರಿಸುತ್ತಾರೆ. ಜೊತೆಗೆ ಇವರು ತಮ್ಮ ಮಕ್ಕಳ ಪ್ರತ್ಯೇಕತೆಯ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅದರಂತೆ ತಮ್ಮ ಮಕ್ಕಳನ್ನು ಏಳಿಗೆಗೆ ಅವಕಾಶ ನೀಡುತ್ತಾರೆ. ತಮ್ಮ ಮಕ್ಕಳನ್ನು ಸ್ನೇಹಿತರಂತೆ ಕಾಣುವ ಗುಣ ಇವರಲ್ಲಿದೆ.



Click it and Unblock the Notifications
