Latest Updates
-
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು -
ಬೆಂಗಳೂರು ಮಳೆ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಬೆಳಗಿನ ವ್ಯಾಯಾಮ ಮತ್ತು ಪ್ರಯಾಣಕ್ಕೆ ಇಲ್ಲಿದೆ ಸುರಕ್ಷತಾ ಟಿಪ್ಸ್ -
ಅಮೆರಿಕದಲ್ಲಿ ಸಮಯ ಬದಲಾವಣೆ: ಭಾರತ-ಯುಎಸ್ ಮೀಟಿಂಗ್ಗಳಲ್ಲಿ ಗೊಂದಲ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ
ಈ 7 ರಾಶಿಯವರು ಉತ್ತಮ ಪತ್ನಿ ಅನ್ನಿಸಿಕೊಳ್ಳುತ್ತಾರಂತೆ!
ಒಬ್ಬರ ಹೆಂಡತಿಯಾಗುವುದು ತುಂಬಾನೇ ಸುಲಭ. ಆದರೆ ಒಬ್ಬರನ್ನು ಮದುವೆಯಾಗಿ ಒರ್ವ ಉತ್ತಮ ಹೆಂಡತಿ ಅನ್ನಿಸಿಕೊಳ್ಳುವುದು ತುಂಬಾನೇ ಕಷ್ಟ. ಹೆಂಡತಿ ಎಂದು ಮೇಲೆ ಆಕೆಯ ಕೆಲವು ಕರ್ತವ್ಯಗಳು ಇರುತ್ತದೆ. ಅದನ್ನು ಆಕೆ ಕೊನೆವರೆಗೂ ಉಳಿಸಿಕೊಂಡು ಹೋಗಬೇಕು. ಆದರೆ ಎಲ್ಲರಲ್ಲೂ ಆ ಗುಣ ಇರೋದಿಲ್ಲ. ಕೆಲವೇ ಕೆಲವು ಜನ ಮಾತ್ರ ಗಂಡನಿಗೆ ತಕ್ಕ ಹೆಂಡತಿ ಅನ್ನಿಸಿಕೊಳ್ಳುತ್ತಾರಂತೆ. ಅಷ್ಟಕ್ಕು ಯಾವ ರಾಶಿಯವರು ಗಂಡನಿಗೆ ತಕ್ಕ ಹೆಂಡತಿ ಅನ್ನಿಸಿಕೊಳ್ಳುತ್ತಾರೆಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ನಿಷ್ಠೆ ಹಾಗೂ ಸ್ಥಿರತೆಗೆ ಹೆಸರುವಾಸಿಯಾಗಿದ್ದಾರೆ. ಅವರು ಬದ್ಧತೆಗೆ ಆದ್ಯತೆ ನೀಡುತ್ತಾರೆ ಮತ್ತು ಸಂಬಂಧಗಳಲ್ಲಿ ದೃಢವಾದ ಅಡಿಪಾಯವನ್ನು ನಿರ್ಮಿಸುತ್ತಾರೆ. ಇವರು ತಮ್ಮ ಪತಿಯ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ವೃಷಭ ರಾಶಿಯವರು ಸಾಮಾನ್ಯವಾಗಿ ಅತ್ಯುತ್ತಮ ಜೀವನ ಸಂಗಾತಿಯಾಗಿ ಕೊನೆವರೆಗೂ ಜೊತೆಯಲ್ಲಿಯೇ ಇರುತ್ತಾರೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಪತಿಯನ್ನು ತುಂಬಾನೇ ಕಾಳಜಿಯಿಂದ ನೋಡಿಕೊಳ್ಳುವ ಗುಣ ಹೊಂದಿದ್ದಾರೆ. ಗಂಡನ ಭಾವನೆಗಳನ್ನು ಆತ ಹೇಳಿಕೊಳ್ಳುವ ಮೊದಲೇ ಅರ್ಥ ಮಾಡಿಕೊಳ್ಳುತ್ತಾರೆ. ಕುಟುಂಬದ ಬಂಧವನ್ನು ಇವರುಗಳು ಗೌರವಿಸುತ್ತಾರೆ. ಗಂಡನಿಗೆ ಪ್ರೋತ್ಸಾಹವಾಗಿ ಆತನ ಬೆನ್ನ ಹಿಂದೆ ಸದಾ ಇರುತ್ತಾರೆ. ಒಂದು ಶಕ್ತಿಯಂತೆ ಗಂಡನನ್ನು ಕಾಯುವ ಗುಣ ಹೊಂದಿದ್ದಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಪರಿಶುದ್ಧ ಮನಸ್ಸು ಹೊಂದಿರುತ್ತಾರೆ. ಈ ರಾಶಿಯವರು ಗಂಡನಿಗೆ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ತೋರುತ್ತಾರೆ. ಇವರು ಅತ್ಯತ್ತಮ ಜೀವನ ಸಂಗಾತಿಯಾಗುತ್ತಾರೆ. ಕನ್ಯಾ ರಾಶಿಯವರು ತಮ್ಮ ಪ್ರೀತಿಪಾತ್ರರ ಯೋಗಕ್ಷೇಮಕ್ಕೆ ಸಮರ್ಪಿತರಾಗಿದ್ದಾರೆ ಮತ್ತು ಅವರ ಸಂಬಂಧಗಳಲ್ಲಿ ಪರಿಪೂರ್ಣತೆಗಾಗಿ ಶ್ರಮಿಸುತ್ತಾರೆ. ಸಂಬಂಧದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ನ್ಯಾಯಸಮ್ಮತತೆಗೆ ಆದ್ಯತೆ ನೀಡುತ್ತಾರೆ ಮತ್ತು ಸಾಮರಸ್ಯದ ಸಂಬಂಧಕ್ಕಾಗಿ ಶ್ರಮಿಸುತ್ತಾರೆ. ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿ ಪರಿಣತರಾಗಿದ್ದಾರೆ. ಎಷ್ಟೇ ಜಗಳ, ಮನಸ್ಥಾಪಗಳು ಬಂದರೂ ಕೂಡ ಅದನ್ನು ಸರಿದೂಗಿಸಿಕೊಂಡು ಹೋಗುವುದು ಹೇಗೆ ಅನ್ನೋದನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಗಂಡನ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಗಂಡನ ಜೊತೆಗೆ ಉತ್ತಮ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಇವರು ತಮ್ಮ ನಿಷ್ಠಗೆ ಹೆಸರುವಾಸಿಯಾಗಿರುತ್ತಾರೆ. ಸಂಬಂಧವನ್ನು ದೀರ್ಘಾವಧಿಯವರೆಗೂ ಕಾಪಾಡಿಕೊಂಡು ಹೋಗುತ್ತಾರೆ. ಸಂಬಂಧದಲ್ಲಿ ಸಮತೋಲನವನ್ನು ಕಾಯ್ದುಕೊಳ್ಲೋದು ಹೇಗೆ ಅನ್ನೋದು ಈ ರಾಶಿಯವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಗಂಡನ ಮೇಲೆ ಅತಿಯಾದ ಪ್ರೀತಿ, ಕಾಳಜಿ ಹೊಂದಿರುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ಮಹಾತ್ವಾಕಾಂಕ್ಷೆಯನ್ನು ಹೊಂದಿರುವ ವ್ಯಕ್ತಿಗಳು. ತಮ್ಮ ಗುರಿಗಳನ್ನು ಸಾಧಿಸಲು ಬದ್ಧರಾಗಿದ್ದಾರೆ. ಹಾಗೂ ಪತಿಯ ಗುರಿಗಳನ್ನು ಸಾಧಿಸಲು ಅವರ ಜೊತೆಗೆ ನಿಲ್ಲುತ್ತಾರೆ. ಹಾಗೂ ಅವರಿಗೆ ಪ್ರೋತ್ಸಾಹ ನೀಡುತ್ತಾರೆ. ಈ ರಾಶಿಯವರು ಸಂಬಂಧಗಳಲ್ಲಿ ಸ್ಥಿರತೆ ಮತ್ತು ಬಲವಾದ ಅಡಿಪಾಯವನ್ನು ಹಾಕುತ್ತಾರೆ. ಮತ್ತು ವಿಶ್ವಾಸಾರ್ಹ ಜೀವನ ಸಂಗಾತಿಯಾಗಿ ಬಾಳ್ವೆ ಮಾಡುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಸಹಾನುಭೂತಿಗೆ ಹೆಸರುವಾಸಿ ಆಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಅರ್ಥಗರ್ಭಿತರಾಗಿದ್ದಾರೆ. ಮತ್ತು ಇತರರ ಭಾವನೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುತ್ತಾರೆ. ಬೆಂಬಲ ನೀಡುವುದು, ದಯೆ ಮತ್ತು ಸಹಾನುಭೂತಿ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಈ ರಾಶಿಯವರು ಸಂಗಾತಿಯನ್ನು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.



Click it and Unblock the Notifications


