Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಜಾಕಿರ್ ಹುಸೇನ್ ಇನ್ನಿಲ್ಲ: ಸಂಗೀತ ಕ್ಷೇತ್ರದ ದೊರೆ ಕುರಿತ ಆಸಕ್ತಿಕರ ಸಂಗತಿಗಳು
ಪ್ರಸಿದ್ಧ ತಬಲ ವಾದಕ ಪ್ರದ್ಮ ಭೂಷಣ ಪ್ರಶಸ್ತಿ ವಿಜೇತ ಜಾಕಿರ್ ಹುಸೇನ್ ಇಹಲೋಕದ ಯಾತ್ರೆ ಮುಗಿಸಿ ಹೋಗಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಜಾಕಿರ್ ಹುಸೇನ್ ತಂದೆ ಉಸ್ತಾದ್ ಅಲ್ಲಾ ರಖಾರವರು ಕೂಡ ಖ್ಯಾತ ತಬಲವಾದಕರಾಗಿದ್ದರು. ಇವರ ಅಗಲಿಕೆ ಸಂಗೀತ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ.
ಇವರು ಜನಿಸಿದಾಗ ಅವರ ತಂದೆ ಮಗುವಿನ ಕಿವಿಯಲ್ಲಿ ಧ ಧಿನ್ ಧಿನ್ ಧ ಎಂದು ಸಂಗೀತವನ್ನು ಉಚ್ಚರಿಸಿದ್ದರು, ಇದರ ಬಗ್ಗೆ ಅಲ್ಲಿದ್ದವರು ಕೇಳಿದಾಗ ಇದು ತನ್ನ ಮಗನಿಗೆ ಪ್ರಾರ್ಥನೆಯಷ್ಟೇ ಪವಿತ್ರವಾದದ್ದು ಎಂದು ಹೇಳಿದ್ದರಂತೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಜಾಕಿರ್ ಹುಸೇನ್
ಇವರ ಖ್ಯಾತಿ ಅಂರರಾಷ್ಟ್ರೀಯ ಮಟ್ಟದಲ್ಲಿ ಕೂಡ ಹರಡಿತು. ಹಲವಾರು ಹಾಲಿವುಡ್ ಚಿತ್ರಗಳಲ್ಲಿಯೂ ಇವರು ತಬಲ ನುಡಿಸಿದ್ದಾರೆ, 80, 90 ದಶಕಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಆದರೆ ಜಾಕಿರ್ ಹುಸೇನ್ ಹುಡುಕಿ ಹಲವು ಜಾಹೀರಾತು ಬರುತ್ತಿದ್ದೆವು, ಅದರಲ್ಲೊಂದು ವಾಹ್ ತಾಜ್. ಭಾರತೀಯ ಸಂಗೀತ ಕಲಾಕಾರರಲ್ಲಿ ಜಾಕಿರ್ ಹುಸೇನ್ ಕೂಡ ಪ್ರಮುಖವಾಗಿ ಗುರುತಿಸಿಕೊಂಡವರು.
ಜಾಕಿರ್ ಹುಸೇನ್ ಬಗ್ಗೆ ಕೆಲ ಆಸಕ್ತಿಕರ ಸಂಗತಿ ನೋಡುವುದಾದರೆ
ಇವರು ತಮ್ಮ 7ನೇ ವಯಸ್ಸಿನಲ್ಲಿ ಮೊದಲ ಸಂಗೀತ ಕನ್ಸರ್ಟ್ ನೀಡಿದ್ದಾರೆ, 11ನೇ ವಯಸ್ಸಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡಲಾರಂಭಿಸಿದರು.
ಸಿನಿ ಜಗತ್ತಿಗೆ 1989ಕ್ಕೆ ಪಾದಾರ್ಫಣೆ ಮಾಡುತ್ತಾರೆ, ಹೀಟ್ ಅಂಡ್ ಡಸ್ಟ್ ಚಿತ್ರದಲ್ಲಿ ನಟಿಸಿದ್ದಾರೆ ಹಾಗೂ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ.
ಅಮೆರಿಕದ ವೈಟ್‌ಹೌಸ್‌ಗೆ ಆಹ್ವಾನ ಸಿಕ್ಕ ಮೊದಲ ಭಾರತೀಯ ಸಂಗೀತಕಾರ ಆಗಿದ್ದಾರೆ.
ಇವರು ಇಟಲಿಯನ್ ಅಮೆರಿಕ ಕಥಕ್ ಡ್ಯಾನ್ಸರ್ ಆಂಂಟೋನಿಯಾ ಮಿನ್ನೆಕೋಲಾರನ್ನು 1978ರಲ್ಲಿ ಮದುವೆಯಾಗುತ್ತಾರೆ, ಇವರಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ.
ಜಾಜ್ ಫ್ಯೂಷನ್ ಭಾರತದಲ್ಲಿ ಮೊದಲು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 1998ರಲ್ಲಿ ಜಾಕಿರ್ ಹುಸೇಸ್ ಅವರಿಗೆ ಪದ್ಮಶ್ರೀ, 2002ರಲ್ಲಿ ಪದ್ಮ ಭೂಷಣ ಹಾಗೆ ಗ್ರ್ಯಾಮಿ ಅವಾರ್ಡ್ ಕೂಡ ಅವರಿಗೆ ಒಲಿದಿದೆ. ಹೀಗಾಗಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಬರೋಬ್ಬರಿ 10 ಕೋಟಿ ರೂಪಾಯಿ ಆಸ್ತಿ ಮೌಲ್ಯ ಹೊಂದಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ಒಂದು ಮ್ಯೂಸಿಕ್ ಕನ್ಸರ್ಟ್‌ಗೆ ಸುಮಾರು 5 ರಿಂದ 10 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು ಎಂಬ ವರದಿಗಳಿವೆ, ಭಾರತ ಸೇರಿ ವಿದೇಶದಲ್ಲಿ ತಮ್ಮ ಆಸ್ತಿ ಹೊಂದಿದ್ದಾರೆ.



Click it and Unblock the Notifications