Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಯೂಟ್ಯೂಬ್ ನಿಯಮದಲ್ಲಿ ಬದಲಾವಣೆ: ಹಲವು ಚಾನಲ್‌ಗಳು ಬಂದ್ ಆಗೋ ಭೀತಿ..ರೆವಿನ್ಯೂ ಕಡಿತ.!!
ಗೂಗಲ್‌ನ ಅಂಗಸಂಸ್ಥೆಗಳಲ್ಲಿ ಒಂದಾಗಿರುವ ಯೂಟ್ಯೂಬ್ ಈಗ ಸಾವಿರ ಕೋಟಿ ಉದ್ಯಮವಾಗಿ ಬೆಳೆದು ನಿಂತಿದೆ. 2005ರಲ್ಲಿ ಆರಂಭಗೊಂಡ ಯೂಟ್ಯೂಬ್ ಈಗ ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ನಿತ್ಯವು ಲಕ್ಷ ಲಕ್ಷ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ. ಹಾಗೆ ಯೂಟ್ಯೂಬ್ ನಂಬಿಕೊಂಡು ಜೀವನ ಕಟ್ಟಿಕೊಂಡವರ ಸಂಖ್ಯೆಯೂ ಕಡಿಮೆ ಇಲ್ಲ.
ಯೂಟ್ಯೂಬ್‌ನಿಂದಲೇ ಈಗ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವ ಸಾವಿರಾರು ಚಾನಲ್‌ಗಳ ಪಟ್ಟಿ ಮಾಡಬಹುದು. ಹಾಗೆ ಜೀವನಾಧಾರಕ್ಕೆ ಅಲ್ಪ ಸ್ವಲ್ಪ ಆದಾಯ ಗಳಿಸುತ್ತಿರುವ ಚಾನಲ್‌ಗಳು ಕೂಡ ಒಂದು ಕಡೆ ಇವೆ. ಆದ್ರೆ ಈಗ ಯೂಟ್ಯೂಬ್ ಹೊರಡಿಸಿರುವ ಹೊಸ ನಿಯಮವೊಂದು ಎಲ್ಲರಲ್ಲೂ ಶಾಕ್ ನೀಡಿದೆ.

ಯೂಟ್ಯೂಬ್ ನಿಯಮಾವಳಿ ಈಗ ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಆಘಾತ ತಂದಿದೆ. ಹಲವು ಚಾನಲ್‌ಗಳು ನಷ್ಟ ಅನುಭವಿಸುವ ಅಥವಾ ಅದಾಯದಲ್ಲಿ ಕಡಿತ ಅನುಭವಿಸುವ ಭೀತಿಗೆ ಒಳಗಾಗಿವೆ. ಇದೇ ಜುಲೈ 15ರಿಂದ ತನ್ನ ಹಣ ಗಳಿಕೆಯ ನಿಯಮಗಳಲ್ಲಿ ಬದಲಾವಣೆಗೆ ಮುಂದಾಗಿದ್ದು, ಈ ನಿಯಮಗಳಲ್ಲಿ ಮತ್ತಷ್ಟು ಕಠಿಣ ರೂಲ್ಸ್ ಜಾರಿಗೆ ಮುಂದಾಗಿದೆ.
ಯೂಟ್ಯೂಬ್ ಇನ್ನು ಮುಂದೆ ಸ್ವಂತ ಕಂಟೆಂಟ್‌ಗಳಿಗೆ ಹೆಚ್ಚು ಮಾನ್ಯತೆ ನೀಡುವುದಾಗಿ ಹೇಳಿದೆ. ಹಳೆಯ ಕಂಟೆಂಟ್‌ಗಳು, ಬೇರೆಯವರ ವಿಡಿಯೋಗಳು, ನಕಲಿ ವಾಯ್ಸ್, ಎಐ ರಚಿತ ವಿಡಿಯೋ ಹಾಗೂ ವಾಯ್ಸ್‌ಗಳಿಗೆ ಹೆಚ್ಚಿನ ಮಾನ್ಯತೆ ನೀಡುವುದಿಲ್ಲ ಎಂಬ ನಿರ್ಧಾರ ಜಾರಿಗೆ ಮುಂದಾಗಿದೆ.
ಯೂಟ್ಯೂಬ್ ಹೊಸ ನೀತಿಯಲ್ಲಿ ಕಂಟೆಂಟ್ ಕ್ರಿಯೇಟರ್ ತನ್ನ ವಿಡಿಯೋಗಳನ್ನು ಸ್ವಂತವಾಗಿ ರಚಿಸಿರಬೇಕಂತೆ. ವಿಡಿಯೋಗಳು ವೀಕ್ಷಣೆಗಳಿಗಿಂತ ಮಾಹಿತಿಯನ್ನು ನೀಡುವುದು ಅಥವಾ ಪ್ರೇಕ್ಷಕರನ್ನು ರಂಜಿಸುವತ್ತ ಹೆಚ್ಚು ಗಮನಹರಿಸಬೇಕೆಂದು ಬಯಸುತ್ತದೆ. ಇದು ಮಾತ್ರವಲ್ಲದೆ AI ಬಳಸಿ ರಚಿಸಲಾದ ವಿಷಯಕ್ಕೂ ಈ ಕಟ್ಟುನಿಟ್ಟು ನಿಯಮ ಅನ್ವಯಿಸುತ್ತದೆ.
ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಎಐ ವಿಡಿಯೋಗಳ ಪ್ರವಾಹ ಕಂಡುಬಂದಿದೆ. ಅಂತಹ ವಿಡಿಯೊಗಳು YouTube ನ ಕಠಿಣ ನಿಯಮಗಳ ಹೊರೆಯನ್ನು ಸಹ ಹೊರಬೇಕಾಗಬಹುದು. AI-ನಿರ್ಮಿತ ವಿಡಿಯೋಳನ್ನು ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಸೇರಿಸಬಹುದು ಎಂದು ಹೇಳಲಾಗುತ್ತಿದೆ. ಇವು AI ರಚಿತ ಧ್ವನಿಗಳನ್ನು ಬಳಸಿಕೊಂಡು ಬೇರೊಬ್ಬರ ವಿಡಿಯೋಗಳಿಗೆ ಕ್ರಿಯೇಟರ್ಸ್ ಪ್ರತಿಕ್ರಿಯಿಸುವ ವಿಡಿಯೋಗಳಾಗಿರಲಿವೆ. ಈ ಕುರಿತು ಹೆಚ್ಚಿನ ಸ್ಪಷ್ಟನೆ ನಿರೀಕ್ಷಿಸಲಾಗಿದೆ.
ಯೂಟ್ಯೂಬ್‌ನಲ್ಲಿ ಬೇರೋಂದು ಮೂಲದಿಂದ ವಿಡಿಯೋ ಪಡೆಯುವುದು ಹಾಗೆ ಮೂಲ ಸಂಗೀತ ಬದಲಾಯಿಸುವುದು, ಪ್ಲೇ ಬ್ಯಾಕ್ ವೇಗ ಹೆಚ್ಚಿಸುವುದು, ಕೆಲವು ದೃಶ್ಯಗಳ ಕತ್ತರಿಸಿ ತಾವು ಬಳಸಿಕೊಳ್ಳುವುದು ಸೇರಿ ಹಲವು ವಿಡಿಯೋಗಳು ಪರಿಶೀಲನೆಗೆ ಒಳಪಡಲಿವೆ. ಹಾಗೆ ಟೆಂಪ್ಲೇಟ್ ಮಾಡಲಾದ, ಹೆಚ್ಚು ಪುನರಾವರ್ತಿತ ಸ್ವರೂಪಗಳನ್ನು ಅನುಸರಿಸುವ ಅಥವಾ ಮನರಂಜನೆ ಅಥವಾ ಶೈಕ್ಷಣಿಕ ಮೌಲ್ಯವನ್ನು ಒದಗಿಸದೆ ವೀಕ್ಷಣೆಗಳ ಪಡೆಯುವ ಉದ್ದೇಶಕ್ಕಾಗಿ ಮಾತ್ರ ಅಪ್‌ಲೋಡ್ ಮಾಡಲಾದ ವಿಡಿಯೋಗಳನ್ನು ಕೂಡ ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಜಾಹೀರಾತುದಾರರು ತಮ್ಮ ಬ್ರ್ಯಾಂಡ್‌ಗಳನ್ನು ಉತ್ತಮ ಗುಣಮಟ್ಟದ, ಅಧಿಕೃತ ವಿಷಯಗಳು, ಅಥವಾ ನಿಖರ ಮಾಹಿತಿ ಇರುವಂತಹ ವಿಡಿಯೋಗಳೊಂದಿಗೆ ಕಾಣಿಸಿಕೊಳ್ಳಲು ಬಯಸುತ್ತಾರೆ. ಹೀಗಾಗಿ ಜಾಹೀರಾತು ಆದಾಯವು ಇಂತಹ ಶ್ರಮಜೀವಿ ಕ್ರಿಯಟರ್ಸ್‌ಗಳಿಗೆ ಹಂಚಿಕೆಯಾಗಬೇಕು ಎಂಬ ಗುರಿಯನ್ನು ಹೊಂದಲಾಗಿದೆಯಂತೆ.
ಯಾರ ಮೇಲೆ ಹೆಚ್ಚು ಪರಿಣಾಮ?
ತಮ್ಮ ಸ್ವಂತ ಕಂಟೆಂಟ್‌ಗಳಗಿಂತ ಮರುಬಳಕೆಯ ಕಂಟೆಂಟ್ ಹಂಚಿಕೊಳ್ಳುತ್ತಿದ್ದ ಚಾನಲ್‌ಗೆ ಇದು ಹೊಡೆತ ನೀಡಲಿದೆ. ಉದಾಹರಣೆಗೆ ರಿಯಾಕ್ಷನ್ ಚಾನಲ್‌ಗಳು, ಬೇರೊಂದು ವಿಡಿಯೋ ಮುಂದಿಟ್ಟುಕೊಂಡು ಅದರ ಮೇಲೆ ಕಂಟೆಂಟ್ ಮಾಡುವುದು, ಎಐ ನಿರ್ಮಿತ ವಿಡಿಯೋಗಳಿಗೆ ಎಐ ವಾಯ್ಸ್ ನೀಡಿ ವಿಡಿಯೋ ಕ್ರಿಯೇಟ್ ಮಾಡುವುದು, ಪುನರಾವರ್ತೀತ ವಿಡಿಯೋಗಳು, ಪರ್ಸೊನಲ್ ವ್ಲಾಗಿಂಗ್ ವಿಡಿಯೋಗಳ ಮೇಲೆ ಇದು ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.



Click it and Unblock the Notifications
