Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
6 ಅಡಿ ಎತ್ತರದ ದೈತ್ಯ ಐಫೋನ್ ಅನಾವರಣ: ಗಿನ್ನಿಸ್ ದಾಖಲೆ ಬರೆದ ಯೂಟ್ಯೂಬರ್
ಅಬ್ಬಬ್ಬಾ ಅಂದ್ರೆ ನೀವು ಎಷ್ಟು ದೊಡ್ಡ ಮೊಬೈಲ್ ಫೋನ್ ನೋಡಿರಬಹುದು. ಒಂದು ಕೈ ಅಳತೆಗಿಂತ ದೊಡ್ಡ ಮೊಬೈಲ್ ನೋಡಿರಬಹುದು. ಏಕೆಂದರೆ ಇದಕ್ಕಿಂತ ದೊಡ್ಡ ಮೊಬೈಲ್ ಬಳಸಲು ಕಷ್ಟವಾಗುತ್ತದೆ, ಹಾಗೆ ಅದನ್ನು ಎಲ್ಲಿಯು ತೆಗೆದುಕೊಂಡು ಹೋಗದಂತೆ ಆಘುತ್ತದೆ. ಹೀಗಾಗಿ ಮೊಬೈಲ್ ತಯಾರಿಕ ಕಂಪನಿಗಳು ಗ್ರಾಹಕರ ನೆಚ್ಚಿನ ಎಷ್ಟು ಗಾತ್ರದ ಮೊಬೈಲ್ ಬೇಕೋ ಹಾಗೆ ನಿರ್ಮಿಸುತ್ತವೆ.
ಈಗಂತು ಫೋಲ್ಡ್ ಮಾಡುವ ಮೊಬೈಲ್‌ಗಳು, ಅಂಗೈಯಲ್ಲಿ ಸಣ್ಣದಾಗಿ ಕುಳಿತುಕೊಳ್ಳುವಂತಹ ಸಣ್ಣ ಸಣ್ಣ ಮೊಬೈಲ್‌ಗಳು ಸಹ ಬಂದಿದೆ. ಕೆಲವರಿಗೆ ಸಣ್ಣ ಮೊಬೈಲ್‌ಗಳ ಬಳಸುವುದರಂದರೆ ಇಷ್ಟವಾಗುತ್ತದೆ. ಏಕೆಂದರೆ ದೊಡ್ಡ ಮೊಬೈಲ್‌ಗಳು ತೂಕದ ಜೊತೆಗೆ ಬಳಸುವುದು ಕಷ್ಟ ಎನಿಸುತ್ತದೆ. ಆದ್ರೆ ಸಣ್ಣ ಮೊಬೈಲ್ ಹಗುರವಾಗ ಆರಾಮವಾಗಿ ನಮ್ಮ ಜೊತೆ ಇಟ್ಟುಕೊಳ್ಳಬಹುದು.

ಹಾಗೆ ನಾವು ಐಫೋನ್ ಬ್ರಾಂಡ್‌ನ ಫೋನ್‌ಗಳು ಹೆಚ್ಚು ದೊಡ್ಡದಾಗಿರದೇ ಬಳಕೆಗೆ ಸೂಕ್ತ ಗಾತ್ರದಲ್ಲಿರುವುದನ್ನು ನೋಡಬಹುದು. ಐಫೋನ್‌ಗಳ ಎಲ್ಲಾ ಮಾದರಿಯೂ ಹೆಚ್ಚು ಕಡಿಮೆ ಒಂದೇ ಗಾತ್ರದಲ್ಲಿದ್ದು, ಎರಡು ಅಥವಾ ಮೂರು ಇಂಚುಗಳ ಗಾತ್ರದಲ್ಲಿ ವ್ಯತ್ಯಾಸ ನೋಡಬಹುದು. ಆದರೆ ಇಲ್ಲೊಂದು ಫೋನ್ ಮಾತ್ರ ಈಗ ವಿಶ್ವ ದಾಖಲೆ ಬರೆದಿದೆ.
ಬ್ರಿಟಿಷ್-ಭಾರತೀಯ ಯೂಟ್ಯೂಬರ್ ಅರುಣ್ ಮೈನಿ, ಅಕಾ Mrwhosetheboss, 6 ಅಡಿ ಎತ್ತರದ ಸ್ಕೇಲ್ಡ್-ಅಪ್ ಐಫೋನ್ ಅನ್ನು ನಿರ್ಮಿಸುವ ಮೂಲಕ ಅತಿದೊಡ್ಡ ಸ್ಮಾರ್ಟ್‌ಫೋನ್ ನಿರ್ಮಿಸಿ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾರೆ. ಅಚ್ಚರಿಯಾಗಿ ಈ ಮೊಬೈಲ್ ಫೋನ್ ಕಾರ್ಯ ನಿರ್ವಹಿಸುತ್ತದೆ. ಗ್ಯಾಜೆಟ್-ಬಿಲ್ಡಿಂಗ್ ಸ್ಪೆಷಲಿಸ್ಟ್ ಮ್ಯಾಥ್ಯೂ ಪರ್ಕ್ಸ್, ಅಕಾ DIYPerks ಜೊತೆ ಸೇರಿ ಈ ಮಾದರಿಯ ಫೋನ್ ರೆಡಿ ಮಾಡಿದ್ದಾರೆ.
"ಇದು ಜಗತ್ತು ನೋಡಿದ ಶ್ರೇಷ್ಠ ಐಫೋನ್ ಆಗಿದೆ. ನಾವು ಈಗ ಒಂದು ವರ್ಷದಿಂದ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾವು ಯೂಟ್ಯೂಬ್ ಚಂದಾದಾರರ ಪಟ್ಟಿಯಲ್ಲಿ ಆಪಲ್‌ಗಿಂತಲೂ ಹೆಚ್ಚು ಗಳಿಸಿದ್ದೇವೆ. ಈಗ ಈ ಪೋನ್ ಅನ್ನು ಜಗತ್ತಮ ಮುಂದಿಡುವ ಸಮಯವಾಗಿದೆ ಎಂದು ಮೈನಿ ಹೇಳಿಕೊಂಡಿದ್ದಾರೆ.
ಈ ಐಫೋನ್ 6.74 ಅಡಿ ಎತ್ತರವಿದ್ದು, ಐಫೋನ್ 15 ಪ್ರೋ ಮ್ಯಾಕ್ಸ್ ಅಲ್ಟ್ರಾ ಮಾದರಿಯ ಅನಾವರಣಗೊಳಿಸುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ದೈತ್ಯ ಫೋನ್‌ನಲ್ಲಿ ಇಮೇಲ್‌ಗಳನ್ನು ಕಳುಹಿಸಲು, ಎಲ್ಲಾ ಅಪ್ಲಿಕೇಶನ್‌ಗಳನ್ನು ಬಳಸಲು ಮತ್ತು ಸುಲಭವಾಗಿ ಸ್ಕ್ರೋಲಿಂಗ್ ಮಾಡಲು ಸಾಧ್ಯವಾಗುತ್ತದೆ. ಕೆಲಸ ಮಾಡುವ ಕ್ಯಾಮರಾ, ಟಾರ್ಚ್ ಮತ್ತು ಚಾರ್ಜಿಂಗ್ ಪೋರ್ಟ್ ಸಹ ಸರಿಯಾಗಿ ಕೆಲಸ ಮಾಡುತ್ತವೆ.
ಇದು ಪೂರ್ಣ-ಫ್ರೇಮ್ Canon EOS R5 ಕ್ಯಾಮೆರಾವನ್ನು ಹೊಂದಿದೆ, ಇತ್ತೀಚಿನ ಪ್ರೊ ಐಫೋನ್‌ಗಳಿಗಿಂತ 1,000% ದೊಡ್ಡದಾದ ಸಂವೇದಕ ಗಾತ್ರವನ್ನು ಹೊಂದಿದೆ, 8K ವೀಡಿಯೊಗಳನ್ನು ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಫೋನ್ 25x ಆಪ್ಟಿಕಲ್ ಮತ್ತು 100x ಡಿಜಿಟಲ್ ಜೂಮ್‌ನೊಂದಿಗೆ ಜೂಮ್ ಕ್ಯಾಮೆರಾ ವ್ಯವಸ್ಥೆಯನ್ನು ಸಹ ಒಳಗೊಂಡಿದೆ.
ಜೊತೆಗೆ ಇದು 24-ಕೋರ್ ಇಂಟೆಲ್ ಕೋರ್ i9 ಪ್ರೊಸೆಸರ್, 128 GB RAM ಮತ್ತು ಮೀಸಲಾದ AMD ಗ್ರಾಫಿಕ್ಸ್ ಕಾರ್ಡ್ ಹೊಂದಿದೆ. ಅಚ್ಚರಿ ಎಂದರೆ ಇದನ್ನು ಆಂಡ್ರಾಯ್ಡ್ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂಗಳ ನಡುವೆ ಬದಲಾಯಿಸಬಹುದು. ಇದರ ಜೊತೆಗೆ ಟಿವಿಯಂತೆ ದೊಡ್ಡ ಪರದೆಯನ್ನು ಹೊಂದಿದ್ದು, 88-ಇಂಚಿನ OLED ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಇದೆ. ಹಾಗೆ ಕಸ್ಟಮೈಸ್ ಸ್ಪೀಕರ್‌ಗಳನ್ನು ಸಹ ಇದು ಒಳಗೊಂಡಿದೆ.



Click it and Unblock the Notifications
