Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನೀವು ಯಾವ ರೀತಿ ಸಹಿ ಮಾಡುತ್ತೀರಿ.? ನಿಮ್ಮ ಸಹಿ ವ್ಯಕ್ತಿತ್ವ ತಿಳಿಸುತ್ತೆ.!
ನಿಮ್ಮ ಗುಣಗಳನ್ನು ನಿಮ್ಮ ವರ್ತನೆಯನ್ನು ಗುರುತಿಸಲು ಹಲವು ಮಾನದಂಡಗಳಿವೆ. ನಿಮ್ಮ ಕೈ ನೋಡಿ ನಿಮ್ಮ ಗುಣ ಭವಿಷ್ಯ ಹೇಳುವುದು ನೋಡಿರುತ್ತೀರಿ. ನಿಮ್ಮ ಹಸ್ತ ರೇಖೆಗಳು, ಜನ್ಮ ನಕ್ಷತ್ರ, ಹೆಸರು ಹೀಗೆ ಕೆಲವೊಂದು ವಿಚಾರಗಳು ನಿಮ್ಮ ಗುಣಗಳನ್ನು ಹೇಳುತ್ತವೆ. ನೀವು ಯಾವ ರೀತಿಯ ಗುಣ ಹೊಂದಿದ್ದೀರಿ. ನಿಮ್ಮ ಭಾವನೆಗಳು ಹೇಗಿರಲಿವೆ. ನಿಮ್ಮ ಆಂತರಿಕ ಮನಸ್ಥಿತಿ ಹೇಗಿರಲಿದೆ ಎಂಬುದನ್ನು ಇವು ಸೂಚಿಸುವ ಮಾನದಂಡಗಳಾಗಿರುತ್ತವೆ.
ಹಾಗೆ ನಿಮ್ಮ ಕೈಬರಹ ಕೂಡ ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂಬುದು ಕೂಡ ನಿಮಗೆ ತಿಳಿದಿರಬಹುದು. ನಿಮ್ಮ ಕೈ ಬರಹಗಳು ನಿಮ್ಮ ಆಲೋಚನೆ, ನಿಮ್ಮ ವ್ಯಕ್ತಿತ್ವ ಸೂಚಿಸಲಿದೆ. ಎಲ್ಲರೂ ಸುಂದರವಾದ ಕೈ ಬರಹ ನಮ್ಮದಾಗಬೇಕು ಎಂದುಕೊಳ್ಳುತ್ತಾರೆ. ನಾವು ಬರವಣಿಗೆಯ ಶೈಲಿ ಬದಲಾಯಿಸಬಹುದೇ ಹೊರತು, ಕೈಬರಹವನ್ನ ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಹಾಗೆ ನಾವು ಯಾವ ರೀತಿ ಸಹಿ ಮಾಡುತ್ತೇವೆ ಎನ್ನುವುದು ಕೂಡ ನಮ್ಮ ವ್ಯಕ್ತಿತ್ವವನ್ನು ನಮ್ಮ ಗುಣವನ್ನು ನಿರ್ಧರಿಸುವ ಅಂಶವಾಗಿರುತ್ತದೆ. ನಾವು ಒಮ್ಮೆ ಹೇಗೆ ಸಹಿ ಮಾಡುತ್ತೇವೋ ಬಹುತೇಕ ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಸಹಿ ಮಾಡುತ್ತೇವೆ. ಈ ರೀತಿ ನಮ್ಮ ಸಹಿಗಳು ಕೂಡ ನಮ್ಮ ಗುಣಗಳೇನು ಎಂಬುದನ್ನು ತೆರೆದಿಡುತ್ತವೆ. ಹಾಗಾದ್ರೆ ನಾವು ಯಾವ ರೀತಿ ಸಹಿ ಮಾಡುವವರು ಯಾವ ರೀತಿಯ ಗುಣ ಹೊಂದಿರುತ್ತಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಿಮ್ಮ ಸಹಿ ಹೇಗಿದೆ ಎಂಬುದನ್ನು ವಿಶ್ಲೇಷಿಸಲೆಂದೇ ಕಾರ್ಟೋಗ್ರಫಿ ಎಂಬ ಅಧ್ಯಯನ ವಿಷಯ ಕೂಡ ಇದೆ. ಇದು ನಮ್ಮ ಸಹಿಯನ್ನು ವಿವರಿಸುತ್ತದೆ, ಹಾಗೆ ನಮ್ಮ ಗುಣಗಳ ಕುರಿತ ವಿಶ್ಲೇಷಣೆ ಮಾಡಲಾಗುತ್ತದೆ. ತಜ್ಞರು ನೀವು ಹಾಕುವ ಸಹಿಯ ಗಾತ್ರ, ಆಕಾರ, ಅಕ್ಷರಗಳ ನಡುವಿನ ಅಂತರ, ಅವುಗಳ ರಚನೆ ಕುರಿತಂತೆ ವಿಶ್ಲೇಷಣೆಯ ಮೂಲಕ ನಿಮ್ಮ ವ್ಯಕ್ತಿತ್ವ ವಿವರಿಸಲಾಗುತ್ತದೆ. ನಿಮ್ಮ ಸಹಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ದೊಡ್ಡ ಮತ್ತು ದಪ್ಪ ಕೈಬರಹ
ನಿಮ್ಮ ಸಹಿ ದೊಡ್ಡದಾಗಿದ್ದರೆ ಮತ್ತು ದಪ್ಪವಾಗಿದ್ದರೆ, ನಿಮ್ಮ ಸಹಿಯನ್ನು ಆಧರಿಸಿ ಯಾವ ಗುಣ ಹೊಂದಿದ್ದೀರಿ ಎಂಬುದನ್ನು ವಿವರಿಸಲಾಗುತ್ತದೆ. ನೀವು ಹೆಚ್ಚು ಆತ್ಮವಿಶ್ವಾಸ ಹೊಂದಿರುವವರು, ಧೈರ್ಯಶಾಲಿಗಳು, ಯಾವುದೇ ಕಾರಣಕ್ಕೂ ಯಾವ ವಿಚಾರವನ್ನಾಗಲಿ ಹಿಂಜರಿಕೆಯಿಲ್ಲದೆ ಮಾಡುವವರು ಎಂದು ಹೇಳಲಾಗಿದೆ. ಹಾಗೆ ನೀವು ಮಾಡುತ್ತಿರುವ ಕೆಲಸದಲ್ಲಿ ಮಹತ್ವಾಕಾಂಕ್ಷೆಯುಳ್ಳವರು. ವೈಯಕ್ತಿಕ ಸಂಬಂಧಗಳಿಗಿಂತ ವ್ಯಾಪಾರ ಅಥವಾ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.
ಸಹಿ ಕೆಳಗೆ ಗೆರೆ ಎಳೆಯುವುದು
ನೀವು ಸಹಿ ಮಾಡಿ ಕೆಳಗೆ ಗೆರೆ ಎಳೆಯುವ ಅಭ್ಯಾಸ ಇಟ್ಟುಕೊಂಡಿದ್ದರೆ ಯಾವಾಗಲೂ ಸಮಾಜದ ಪ್ರಮುಖ ಸದಸ್ಯರಾಗಿ ತಮ್ಮನ್ನು ತಾವು ನೋಡಲು ಬಯಸುತ್ತಾರೆ. ಅವರು ಬಹುತೇಕ ಎಲ್ಲಾ ವಿಚಾರಗಳಲ್ಲೂ ದೃಢವಾದ ನಂಬಿಕೆ ಇಡುವವರಂತೆ. ಅವರಲ್ಲಿ ಗುರಿಗಳ ಕಡೆಗೆ ಸಾಗುವವರು. ಒಂದಕ್ಕಿಂತ ಹೆಚ್ಚು ಗೆರೆಗಳ ಎಳೆಯುವವರು ಆತ್ಮವಿಶ್ವಾಸದ ಕೊರತೆಯನ್ನು ಕೂಡ ಸೂಚಿಸುತ್ತದೆಯಂತೆ. ಹಾಗೆ ನಿಮ್ಮಲ್ಲಿ ಹೆಚ್ಚು ನಂಬಿಕೆ ಇಟ್ಟವರಿಗೆ ನೀವು ಎಂದಿಗೂ ಸಹಾಯ ಮಾಡಲು ಮುಂದಾಗುತ್ತೀರಿ ಎಂದರ್ಥ.
ಅಸ್ಪಷ್ಟವಾದ ಸಹಿ
ನೀವು ಯಾರಿಗೂ ಅರ್ಥವಾಗದ ರೀತಿಯಲ್ಲಿ ಅಥವಾ ಯಾವ ಅಕ್ರ ಬರೆದಿದ್ದೀರಿ ಎಂಬುದೇ ತಿಳಿಯದಂತೆ ಸಹಿ ಮಾಡುತ್ತಿದ್ದರೆ ತುಂಬಾನೆ ಅವಸರದ ವ್ಯಕ್ತಿತ್ವ ಹೊಂದಿದ್ದೀರಿ. ತಮ್ಮ ಸಾಮರ್ಥ್ಯಗಳಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಎಂದು ತೋರಿಸುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
