Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರಾಶಿಯವರು ಇಂತಹ ಬಾಳ ಸಂಗಾತಿಯನ್ನು ಬಯಸುತ್ತಾರೆ
ಈ ಪ್ರಪಂಚದಲ್ಲಿ ಕೋಟ್ಯಾಂತರ ಜನರಿದ್ದಾರೆ ಒಬ್ಬೊಬ್ಬರು ಒಂದೊಂದು ರೀತಿಯ ಗುಣ ಹಾಗೂ ನಡತೆಗಳನ್ನು ಹೊಂದಿರುತ್ತಾರೆ. ಒಬ್ಬರು ಇದ್ದ ಹಾಗೆ ಮತ್ತೊಬ್ಬರು ಇರೋದಿಲ್ಲ. ಹೀಗಾಗಿ ನಾವು ಸಂಗಾತಿಯನ್ನು ಹುಡುಕುವಾಗಲೂ ಕೂಡ ನಮ್ಮ ಗುಣ ನಡತೆಗಳಿಗೆ ಹಾಗೂ ನಮ್ಮ ಹುಚ್ಚುತನಗಳನ್ನು ಯಾರು ಸಹಿಸುತ್ತಾರೋ ಅಂತವರನ್ನೇ ನಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಅಷ್ಟಕ್ಕು ಈ 5 ರಾಶಿಯವರಿಗೆ ಎಂತಹ ಬಾಳ ಸಂಗಾತಿ ಸಿಗುತ್ತಾರೆ. ಎಂತವರನ್ನು ಅವರು ಬಾಳ ಸಂಗಾತಿಯನ್ನಾಗಿ ಆಯ್ದುಕೊಳ್ಳೋದಕ್ಕೆ ಇಚ್ಛಿಸುತ್ತಾರೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ತುಂಬಾ ಆಕ್ಟೀವ್ ಆಗಿರುತ್ತಾರೆ. ಯಾವಾಗಲೂ ಉತ್ಸಾಹದಿಂದಿರೋದು ಎಂದರೆ ಅವರಿಗೆ ತುಂಬಾನೇ ಇಷ್ಟ. ಅವರು ತಮ್ಮಂತೆಯೇ ಉತ್ಸಾಹ ಭರಿತ ಹಾಗೂ ಸಾಹಸಮಯ ಸಂಗಾತಿಯನ್ನೇ ಬಯಸುತ್ತಾರೆ. ಇಂತವರ ಸಂಘ ಅವರಿಗೆ ತುಂಬಾನೇ ಇಷ್ಟವಾಗುತ್ತದೆ. ಹೀಗಾಗಿ ಇಂತಹ ಗುಣಗಳನ್ನು ಹೊಂದಿರುವವನ್ನೇ ಅವರು ಹುಡುಕಾಡೋದು.

ವೃಷಭ ರಾಶಿ
ವೃಷಭ ರಾಶಿಯವರು ಎಂತಹ ಸಂಗಾತಿಯನ್ನು ಹುಡುಕುತ್ತಾರೆ ಎಂದರೆ ಆ ವ್ಯಕ್ತಿ ಅವರಿಗೆ ರಕ್ಷಣೆ ಅಥವಾ ಭದ್ರತೆ ಕೊಡುವಂತಿರಬೇಕು. ತಮ್ಮನ್ನು ಯಾರು ಕಂಫರ್ಟ್ ಫೀಲ್ ಮಾಡುತ್ತಾರೋ ಅವರೊಂದಿಗೆ ಇರೋದಕ್ಕೆ ಈ ರಾಶಿಯವರು ಇಷ್ಟ ಪಡುತ್ತಾರೆ. ಸಂಬಂಧದಲ್ಲಿ ಯಾರು ಭದ್ರತೆ ಹಾಗೂ ಭರವಸೆಗಳನ್ನು ನೀಡುವುದಿಲ್ಲವೋ ಅವರೊಂದಿಗೆ ಖಂಡಿತ ಈ ರಾಶಿಯವರು ಇರೋದಿಲ್ಲ.
ಮಿಥುನ
ಮಿಥುನ ರಾಶಿಯವರು ತುಂಬಾನೇ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ತಮ್ಮ ಸಂಗಾತಿಯ ಮೇಲೆ ಜೀವವನ್ನೇ ಇಟ್ಟಿರುತ್ತಾರೆ. ಅವರು ಜೀವನದ ಪ್ರತಿ ಕ್ಷಣವನ್ನು ರೋಮಾಂಚನಕಾರಿಯಾಗಿ ಕಳೆಯೋದಕ್ಕೆ ಇಷ್ಟ ಪಡುತ್ತಾರೆ. ಇವರು ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಾರೆ. ಇವರು ಇಂತಹದ್ದೇ ಗುಣವಿರುವ ಬಾಳ ಸಂಗಾತಿಯನ್ನು ಪಡೆಯೋದಕ್ಕೆ ಇಷ್ಟ ಪಡುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಗಳು. ಹಾಗೂ ತುಂಬಾನೇ ಸೂಕ್ಷ್ಮ ಸ್ವಭಾವದವರು. ಅವರು ತಮ್ಮ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳೋದಿಲ್ಲ. ಅದಕ್ಕಾಗಿ ಅವರು ಒಬ್ಬ ಪರಿಪೂರ್ಣ ಸಂಗಾತಿಯ ಹುಡುಕಾಟದಲ್ಲಿರುತ್ತಾರೆ. ಅವರು ಯಾವುದೇ ಹಿಂಜರಿಕೆಯಿಲ್ಲದೆ ಸರಳವಾಗಿ ಮಾತನಾಡಬಲ್ಲ ವ್ಯಕ್ತಿಯನ್ನು ಬಯಸುತ್ತಾರೆ. ಹಾಗೂ ಅವರನ್ನೇ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಾರೆ.
ಸಿಂಹ ರಾಶಿಯವರು ಹೆಚ್ಚು ತಾಳ್ಮೆ ಇರುವ ಪತಿಗಾಗಿ ಹುಡುಕಾಡುತ್ತಾರೆ. ಮತ್ತು ತಮ್ಮ ಸಂಗಾತಿಯು ತಮಗೆ ಇಷ್ಟ ಆಗುವ ರೀತಿಯಲ್ಲಿ ಇರಬೇಕು ಎಂದು ಅವರು ಯಾವಾಗಲೂ ಬಯಸುತ್ತಾರೆ. ಇವರು ಭಾವೋದ್ರಿಕ್ತ ಮತ್ತು ಬೆರಗುಗೊಳಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ತಮ್ಮ ಸಂಗಾತಿಯಿಂದ ಅಭಿನಂದನೆ ಮತ್ತು ಕೃತಜ್ಞತೆಯನ್ನು ಬಯಸುತ್ತಾರೆ.



Click it and Unblock the Notifications
