Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಿಲ್ವರ್ ಪ್ಲೇ ಬಟನ್ ಪಡೆದು ಕುಣಿದು ಕುಪ್ಪಳಿಸಿದ ಯೂಟ್ಯೂಬರ್..? ಯಾರು ಈ ಬಾಲಕ ಗೊತ್ತಾ?
ಸಾಮಾಜಿಕ ಜಾಲತಾಣಗಳು ಎಲ್ಲಾ ವಯಸ್ಸಿನವರ ಮೇಲೂ ಪ್ರಭಾವ ಬೀರಿದೆ. ಆದರೆ ಇತ್ತೀಚಿನ ಕೆಲ ವರ್ಷದಿಂದ ಸಾಮಾಜಿಕ ಜಾಲತಾಣಗಳನ್ನೇ ಕೆಲವರು ವೃತ್ತಿಯಾಗಿ ಆರಿಸಿಕೊಂಡಿದ್ದಾರೆ. ಅದರಿಂದಲೇ ಆದಾಯವನ್ನೂ ಗಳಿಸುತ್ತಿದ್ದಾರೆ. ಈ ಸಾಲಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯ ವ್ಯಕ್ತಿಗಳು ಸಹ ಸೇರಿದ್ದಾರೆ.
ಈ ಸಾಮಾಜಿಕ ಜಾಲತಾಣಗಳ ಪೈಕಿ ಯೂಟ್ಯೂಬ್ ಸಹ ಒಂದು ಪ್ರಸಿದ್ಧವಾದ ಮಾಧ್ಯಮವಾಗಿದೆ. ವಿಡಿಯೋ ಸ್ಟ್ರೀಮಿಂಗ್ ಮಾಧ್ಯಮವಾದ ಯೂಟ್ಯೂಬ್‌ನಲ್ಲಿ ಕೋಟಿಗೂ ಅಧಿಕ ಕ್ರಿಯೇಟರ್ಸ್ ಇದ್ದಾರೆ. ಇವರು ವಿಡಿಯೋ ಹಂಚಿಕೊಳ್ಳುವ ಮೂಲಕ ದಿನಕ್ಕೆ ಲಕ್ಷ ಲಕ್ಷ ಸಂಪಾದಿಸುತ್ತಾರೆ. ಹೀಗೆ ಈ ಚಿಕ್ಕ ಹುಡುಗ ಸಹ ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಈಗ ಭಾರೀ ಸುದ್ದಿಯಾಗಿದ್ದಾರೆ.

ಪಾಕಿಸ್ತಾನದ ಅತೀ ಚಿಕ್ಕ ವ್ಲಾಗರ್ ಆಗಿರುವ ಮೊಹಮ್ಮದ್ ಶಿರಾಜ್ ಎಂಬಾತ ಈಗ ಯೂಟ್ಯೂಬ್‌ನಿಂದ ಸಿಲ್ವರ್ ಬಟನ್ ಪಡೆದು ಸುದ್ದಿಯಾಗಿದ್ದಾನೆ. ಮೊಹಮ್ಮದ್ ಶಿರಾಜ್ ಎಂಬ ಈ ಚಿಕ್ಕ ಹುಡುಗ ತನ್ನ ಮನೆಯಲ್ಲಿ ತಂದೆ ತಾಯಿ ನೆರೆ ಹೊರೆಯವರು ಮಾಡುವ ಕೆಲಸಗಳನ್ನೇ ಮೊಬೈಲ್‌ನಲ್ಲಿ ಶೂಟ್ ಮಾಡುತ್ತಿದ್ದ, ಅದನ್ನೇ ಯೂಟ್ಯೂಬ್‌ಗೆ ಹಾಕುತ್ತಿದ್ದ ಈಗ ಆತನ ಯೂಟ್ಯೂಬ್‌ಗೆ ಬರೋಬ್ಬರಿ 1 ಲಕ್ಷ ಚಂದಾದಾರರು ಇದ್ದು ಸಿಲ್ವರ್ ಬಟನ್ ಪಡೆದಿದ್ದಾನೆ.
ಆತ ಸಿಲ್ವರ್ ಬಟನ್ ಪಡೆದು ಕುಣಿದು ಕುಪ್ಪಳಿಸಿದ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಖುಷಿ ಕಂಡು ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಶಿರಾಜ್ ಪಾಕಿಸ್ತಾನದ ಉತ್ತರ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಖಪ್ಲು ಎಂಬ ಪಟ್ಟಣದ ಹುಡುಗನಾಗಿದ್ದಾನೆ. ಈ ಪ್ರದೇಶವು ಬಹುಪಾಲು ದಿನ ಹಿಮಭರಿತವಾಗಿರುತ್ತದೆ. ಜೊತೆಗೆ ಸುತ್ತಲು ಹಿಮದಿಂದ ಕೂಡಿರುವ ಪರ್ವತಗಳಿಂದ ಆವೃತವಾಗಿದೆ. ಆತ ತಮ್ಮ ದೈನಂದಿನ ವ್ಲಾಗ್‌ಗಳನ್ನು ತಮ್ಮ ಚಾನೆಲ್ "ಶಿರಾಜಿ ವಿಲೇಜ್ ವ್ಲಾಗ್ಸ್" ನಲ್ಲಿ ಹಂಚಿಕೊಳ್ಳುತ್ತಾನೆ. ಅವನ ಕಿರಿಯ ಸಹೋದರಿ ಮುಸ್ಕಾನ್ ಆಗಾಗ್ಗೆ ಅವನೊಂದಿಗೆ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಇಬ್ಬರು ಮುದ್ದಾದ ಉರ್ದು ಭಾಷೆಯಲ್ಲಿ ತಮಗಿಷ್ಟ ಬಂದರೆ ಏನೇನೋ ಹೇಳುತ್ತಾರೆ. ಅವರ ವಿಡಿಯೋ ನೋಡಿ ನೆಟ್ಟಿಗರು ಚಂದದ ಕಮೆಂಟ್ ಮಾಡುತ್ತಾರೆ.
ಕಳೆದ ವಾರ, ಶಿರಾಜ್‌ನ ಚಾನಲ್ 100,000 ಚಂದಾದಾರರನ್ನು ದಾಟಿದೆ. ಹೀಗಾಗಿ ಯೂಟ್ಯೂಬ್ ಬೆಳ್ಳಿಯ ಪ್ಲೇ ಬಟನ್ ಕಳುಹಿಸಿಕೊಟ್ಟಿದೆ. ಈ ಬೆಳ್ಳಿ ಪ್ಲೇ ಬಟ್ನ ಪಡೆದ ಅತ್ಯಂತ ಕಿರಿಯ ವ್ಲಾಗರ್ ಈತ. ಈ ಬೆಳ್ಳಿ ಬಟನ್ ಅನ್ನು ತೆರೆಯುವ ಮೊದಲು ಹುಡುಗ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಸಹ ವೈರಲ್ ಆಗಿತ್ತು. ಆತ ಬೆಳ್ಳಿಯ ಬಟನ್‌ಗೆ ಮುತ್ತಿಟ್ಟು ಕುಣಿದಾಡುತ್ತಿದ್ದಾನೆ. ಅದನ್ನು ತಬ್ಬಿಕೊಳ್ಳುತ್ತಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಆತನ ಖುಷಿ ಕಂಡು ಸಂತಸಗೊಂಡಿದ್ದಾರೆ.
'ನಿಚೆ ಲೈಫ್‌ಸ್ಟೈಲ್' ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯು ಅನ್‌ಬಾಕ್ಸಿಂಗ್ ವಿಡಿಯೋದ ಆಯ್ದ ಭಾಗಗಳನ್ನು ಹಂಚಿಕೊಂಡಿದೆ. ಪಾಕಿಸ್ತಾನದ 'ಕಿರಿಯ' ವ್ಲಾಗರ್ ಮೊಹಮ್ಮದ್ ಶಿರಾಜ್ ಅವರು ಯೂಟ್ಯೂಬ್‌ನಿಂದ ಅಸ್ಕರ್ ಸಿಲ್ವರ್ ಪ್ಲೇ ಬಟನ್ ಅನ್ನು ಸ್ವೀಕರಿಸಿದ್ದಾನೆ ಎಂದು ಶೀರ್ಷಿಕೆ ಹೇಳಿದೆ.
ಏನಿದು ಯೂಟ್ಯೂಬ್ ಸಿಲ್ವರ್ ಪ್ಲೇ ಬಟನ್?
ಯೂಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಕ್ರಿಯೇಟರ್‌ಗಳಿಗೆ ಸಂಸ್ಥೆಯು ಈ ರೀತಿಯ ಯೂಟ್ಯೂಬ್ ಪ್ಲೇ ಬಟನ್ ಚಿತ್ರವುಳ್ಳ ಉಡುಗೊರೆ ನೀಡುತ್ತದೆ. ಸಿಲ್ವರ್, ಗೋಲ್ಡ್, ಪ್ಲಾಟಿನಂ, ಡೈಮಂಡ್ ಪ್ಕೇ ಬಟನ್‌ಗಳನ್ನೂ ಸಹ ಯೂಟ್ಯೂಬ್ ನೀಡುತ್ತದೆ, 10 ಮಿಲಿಯನ್ ಚಂದಾದಾರನ್ನು ಹೊಂದಿರುವ ಚಾನಲ್‌ಗೆ ಡೈಮಂಡ್ ಪ್ಲೇ ಬಟನ್ ನೀಡಲಾಗುತ್ತದೆ. ಇದು 100 ಕೋಟಿ ದಾಟಿದರೆ ರೆಡ್ ಡೈಮಂಡ್ ಪ್ಲೇ ಬಟನ್ ನೀಡಲಿದೆ.



Click it and Unblock the Notifications
