Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೂದಲು ಉದುರುವಿಕೆಗೆ ಮೊಡವೆ ಔಷಧಿ ಹಚ್ಚಿದ ಯುವತಿ..! ಫಲಿತಾಂಶ ಕಂಡು ಶಾಕ್..!
ಕೂದಲು ಉದುರುವಿಕೆ ಅನ್ನೋದು ಈಗ ಸಾಮಾನ್ಯ ಸಮಸ್ಯೆಯಾಗಿ ಎಲ್ಲರನ್ನು ಕಾಡುತ್ತಿದೆ. ಬಹುತೇಕ ಎಲ್ಲರಲ್ಲೂ ಈ ಸಮಸ್ಯೆ ತಲೆದೂರುತ್ತದೆ. ಹೀಗಾಗಿ ಜನರು ಕೂದಲು ಉದುರುವಿಕೆಯಿಂದ ಪಾರಾಗಲು ನಾನಾ ಯತ್ನ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಉತ್ಪನ್ನವನ್ನೂ ಸಹ ಬಳಸಿ ನೋಡುತ್ತಾರೆ.
ಆದರೆ ಬಹುತೇಕ ಮಂದಿಗೆ ಕೂದಲು ಉದುರುವಿಕೆ ನಿಲ್ಲುವುದೇ ಇಲ್ಲ. ಅವರು ಎಷ್ಟೇ ದುಬಾರಿ ಮೊತ್ತದ ಔಷಧಿಗಳ ಬಳಸಿದರು ಸಹ ಕೂದಲು ಉದುರುವುದನ್ನು ತಡೆಯಲು ಸಾಧ್ಯವಾಗುವುದೇ ಇಲ್ಲ. ಇದರ ಜೊತೆಗೆ ಕೂದಲು ಉದುರುವಿಕೆ ಹಲವು ರೀತಿಯ ಮಾನಸಿಕ ಸಮಸ್ಯೆಗೆ ದಾರಿಯಾಗುತ್ತಾ ಹೋಗುತ್ತದೆ.

ಒತ್ತಡ, ಖಿನ್ನತೆಯಂತಹ ಸಮಸ್ಯೆಗೆ ಆತ ಒಳಗಾಗಲೂ ಬಹುದು. ಹೀಗಿರುವಾಗ ನಾವು ಹಲವು ರೀತಿಯ ಮನೆ ಮದ್ದು ಸಹ ಬಳಸಿ ಸೋತಿರುತ್ತೇವೆ. ಅದರೆ ಇಲ್ಲೊಂದು ಕಡೆ ಮೊಡವೆಗೆ ಬಳಸುವ ಔಷಧಿಯು ಕೂದಲು ಉದುರುವಿಕೆಗೆ ರಾಮಬಾಣವಾಗಿದೆ ಎಂಬ ವಿಡಿಯೋ ಹರಿದಾಡುತ್ತಿದ್ದು, ಭಾರೀ ವೈರಲ್ ಆಗಿದೆ.
ಯುವತಿಯೊಬ್ಬಾಕೆ ಟ್ರೆಟಿನೋಯಿನ್ ಎಂಬ ಔಷಧಿಯನ್ನು ಕೂದಲು ಉದುರುವಿಕೆ ತಡೆಯಲು ಬಳಸಿ ಅದರಿಂದ ಉತ್ತಮ ಫಲಿತಾಂಶ ಪಡೆದಿದ್ದಾಳೆ . ಅಚ್ಚರಿ ಎಂದರೆ ಈ ಔಷಧಿಯನ್ನು ಮೊಡವೆಗಳಿಗೆ ಬಳಸಲಾಗುತ್ತದೆ. ಮುಖದ ಮೇಲೆ ಆಗುವ ಮೊಡವೆ ಹಾಗೂ ಕಲೆಗಳ ಹೋಗಲಾಡಿಸಲು ಈ ಔಷಧಿ ಬಳಸಲಾಗುತ್ತದೆ. ಆದರೆ ಯುವತಿ ಕೂದಲು ಉದುರುವಿಕೆ ತಡೆಯಲು ಇದೇ ಔಷಧಿ ಬಳಸಿರುವುದಾಗಿ ಹೇಳಿದ್ದಾಳೆ.
ಟ್ರೆಟಿನೊಯಿನ್ ಒಂದು ವಿಟಮಿನ್ ಎ ಉತ್ಪನ್ನವಾಗಿದೆ ಮತ್ತು ಮೊಡವೆಗಳಿಗೆ ಚಿಕಿತ್ಸೆ ನೀಡಲು ಪ್ರಾಥಮಿಕವಾಗಿ ಸೂಚಿಸಲಾದ ರೆಟಿನಾಯ್ಡ್ ವಿಧವಾಗಿದೆ. ಇದು ಚರ್ಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುವುದಲ್ಲದೆ ಚರ್ಮಕ್ಕೆ ಹೊಸ ರೀತಿ ಹೊಳಪು ನೀಡಲು ಇದು ಸಹಕಾರಿಯಾಗಿದೆ.
ಇದು ಸತ್ತ ಕೋಶಗಳ ತೆಗೆದು ಹಾಕಿ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ವೈದ್ಯರ ಸಲಹೆ ಇಲ್ಲದೆ ಇದನ್ನು ಬಳಸಬಾರದು. ಆದ್ರೆ ಈ ಯುವತಿ ಅದನ್ನು ತಲೆಗೆ ಹಚ್ಚಿಕೊಳ್ಳುವುದು ವಿಡಿಯೋದಲ್ಲಿ ನೋಡಬಹುದು.
ಚರ್ಮರೋಗ ತಜ್ಞರು ಟ್ರೆಟಿನೊಯಿನ್ ಔಷಧಿಯನ್ನು ಮೊಡವೆ ಆಗಿರುವ ಹಾಗಕ್ಕೆ ಮಾತ್ರ ರಾತ್ರಿ ವೇಳೆ ಹಚ್ಚಿಕೊಂಡು ಮಲಗಲು ಹೇಳುತ್ತಾರೆ. ಬೆಳಗ್ಗೆ ಶುದ್ಧ ನೀರಿನಿಂದ ತೊಳೆಯುವಂತೆ ಹೇಳುತ್ತಾರೆ. ಜೊತೆಗೆ ಈ ಔಷಧಿ ಹಚ್ಚಿ ಸೂರ್ಯನ ಕಿರಣಗಳಿಗೆ ಹೋಗಬಾರದು ಏಕೆಂದರೆ ಇದರಿಂದ ಸುಟ್ಟ ಅನುಭವವಾಗಬಹುದು.
ಸರಳವಾಗಿ ಹೇಳುವುದಾದರೆ ಈ ಟ್ರೆಟಿನೊಯಿನ್ ಔಷಧಿ ಚರ್ಮಕ್ಕೆ ಸಂಬಂಧಿಸಿದ ಔಷಧಿ. ಆದ್ರೆ ಇಲ್ಲಿ ಆಕೆ ಕೂದಲು ಉದುರುವಿಕೆ ತಡೆಯಲು ಬಳಸಿರುವುದು ಅಚ್ಚರಿ ಮೂಡಿಸಿದೆ. ಕೂದಲು ಬೆಳವಣಿಗೆಗೆ ಸಹಾಯಕವಾಗುವ ಕೆಲವೊಂದು ಅಂಶ ಈ ಟ್ರೆಟಿನೊಯಿನ್ ಔಷಧಿಯಲ್ಲಿದೆ. ಆದರೆ ಇದು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಟ್ರೆಟಿನೊಯಿನ್ ಕಿರು ಚೀಲಗಳು ಹಾಗೂ ಕೋಶದ ವಹಿವಾಟನ್ನು ಉತ್ತೇಜಿಸುತ್ತದೆ, ಇದು ಕೂದಲು ಕಿರುಚೀಲಗಳನ್ನು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ. ಆದರೆ ಈ ಔಷಧಿಯನ್ನು ಕೂದಲಿನ ಆರೈಕೆಗೆ ಒಳಸಲು ಯಾವ ವೈದ್ಯರು ಸಹ ಶಿಫಾರಸು ಮಾಡುವುದಿಲ್ಲ. ಆದರೆ ಈ ಯುವತಿ ಹೇಗೋ ಈ ಕುರಿತು ಅರಿತುಕೊಂಡಿದ್ದಾಳೆ. ಅಲ್ಲದೆ ಅದನ್ನು ಬಳಸಿ ಫಲಿತಾಂಶ ಸಹ ಕಂಡಿದ್ದಾಳೆ.
ಟ್ರೆಟಿನೊಯಿನ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ನೆತ್ತಿಯ ಉರಿಯೂತವನ್ನು ಕಡಿಮೆ ಮಾಡುತ್ತದೆ, ಕೂದಲು ಬೆಳವಣಿಗೆಗೆ ಆರೋಗ್ಯಕರ ವಾತಾವರಣವನ್ನು ಉತ್ತೇಜಿಸುತ್ತದೆ. ಟ್ರೆಟಿನೋಯಿನ್‌ನ ಕೆಲವು ಗುಣಲಕ್ಷಣಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡಬಹುದೆಂದು ಸೂಚಿಸಿದರೂ, ಕೂದಲು ಬೆಳವಣಿಗೆಗೆ ಪ್ರಾಥಮಿಕ ಚಿಕಿತ್ಸೆಯಾಗಿ ಶಿಫಾರಸು ಮಾಡಲು ಟ್ರೆಟಿನೊಯಿನ್‌ನ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಲು ಹೆಚ್ಚಿನ ಸಂಶೋಧನೆಗಳಿಲ್ಲ ಎಂದು ತಜ್ಞರು ಹೇಳುತ್ತಾರೆ.



Click it and Unblock the Notifications