Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಕಾಲೇಜು ಮೆಟ್ಟಿಲು ಹತ್ತದ ಈತ ₹400 ಕೋಟಿ ದುಡಿದ..! ಹೇಗೆ ಗೊತ್ತಾ?
ಈಗ ಇಂಜಿನಿಯರಿಂಗ್, ಎಂಬಿಬಿಎಸ್, ಎಂಬಿಎ, ಸಿಎ ಹೀಗೆ ಉನ್ನತ ಶಿಕ್ಷಣ ಪಡೆದವರೇ ಉದ್ಯೋಗ ಅರಸಿ ಅಲೆದಾಬೇಕಾದ ಪರಿಸ್ಥಿತಿ ಇದೆ. ಅದ್ರಲ್ಲೂ ಭಾರತದಲ್ಲಿ ನಿರುದ್ಯೋಗ ಸಮಸ್ಯೆಯಂತು ಹೆಚ್ಚಾಗಿಯೇ ಇದೆ. ಈಗ ಇಲ್ಲೊಬ್ಬ ಯುವಕ ಕಾಲೇಜು ಮೆಟ್ಟಿಲು ಹತ್ತದೆಯೇ 400 ಕೋಟಿ ರೂಪಾಯಿ ವ್ಯವಹಾರ ಮಾಡಿದ್ದಾನೆ.
26 ವರ್ಷದ ಕಿಶನ್ ಬಗಾರಿಯಾ, ಟೆಕ್ ಕ್ಷೇತ್ರದಲ್ಲಿ ಯಾರು ಪಡೆಯದಂತಹ ಜ್ಞಾನ ಪಡೆದು ತನ್ನ ಕೌಶಲ್ಯಗಳ ಬಳಸಿಕೊಂಡು ಈಗ 400 ಕೋಟಿ ರೂಪಾಯಿಯ ವ್ಯವಹಾರ ನಡೆಸಿದ್ದಾನೆ. ಆತ ಡಬಲ್ ಡಿಗ್ರಿ ಮಾಡದಿದ್ದರೂ ಸಹ ತನ್ನದೇ ಆದ ತಂತ್ರಾಂಶ ಕಂಡುಹಿಡಿದು ಅದನ್ನು ಮಾರಾಟ ಮಾಡಿದ್ದಾನೆ.

ಭಾರತೀಯ ಯುವ ಉದ್ಯಮಿಗಳು ವ್ಯಾಪಾರ ಕ್ಷೇತ್ರದಲ್ಲಿ ಪ್ರಭಾವಶಾಲಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಸ್ಟಾರ್ಟ್‌ಅಪ್ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರು ಅತ್ಯಂತ ದೊಡ್ಡ ಸ್ಥಾನ ಹಾಗೂ ಹೆಸರು ಗಳಿಸುತ್ತಲೇ ಇದ್ದಾರೆ. 26 ವರ್ಷದ ಕಿಶನ್ ಬಗಾರಿಯಾ ಈಗ ತಮ್ಮ ಟೆಕ್ಟ್ಸ್ (Texts) ಎಂಬ ಹೊಸ ತಂತ್ರಾಂಶ ಅಭಿವೃದ್ಧಿ ಪಡೆಸಿ ವಿಶ್ವದ ದೊಡ್ಡ ಸಂಸ್ಥೆಯಾಗಿರುವ ವರ್ಡ್‌ಪ್ರೆಸ್ (WordPress)ಗೆ ಮಾರಾಟ ಮಾಡಿದ್ದಾನೆ.
ಕಿಶನ್ ಬಗಾರಿಯಾ ಅಸ್ಸಾಂ ಮೂಲದ ಹಳ್ಳಿಯಿಂದ ಬಂದ ಯುವಕ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ ದಿಬ್ರುಗಢ್‌ನ ಡಾನ್ ಬಾಸ್ಕೋ ಶಾಲೆಯಲ್ಲಿ 8ನೇ ತರಗತಿಯವರೆಗೆ ಓದಿದ್ದಾನೆ. ಅವರು ದಿಬ್ರುಗಢ್‌ನಲ್ಲಿರುವ ಅಗ್ರಸೇನ್ ಅಕಾಡೆಮಿಯಲ್ಲಿ 9 ಮತ್ತು 10 ನೇ ತರಗತಿಗಳೊಂದಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.
ಆದರೆ 12ನೇ ವಯಸ್ಸಿನಲ್ಲಿ ಅವರು ಗ್ಯಾಜೆಟ್ ಹಾಗೂ ತಂತ್ರಾಂಶ ಅಭಿವೃದ್ಧಿ ಬಗ್ಗೆ ಒಲವು ಹೊಂದಿದ್ದರು. ಆದರೆ ಅವರಿಗೆ ಈ ಬಗ್ಗೆ ಜ್ಞಾನ ಪಡೆಯಲು ಒಂದಿಷ್ಟು ಮಾರ್ಗದರ್ಶನದ ಅವಶ್ಯಕತೆ ಇತ್ತು. 2020ರಲ್ಲಿ ಅವರು ಟೆಕ್ಸ್ಟ್ ತಂತ್ರಾಂಶ ಕಂಡು ಹಿಡಿದರು. ಇದು ಎಐ ತಂತ್ರಜ್ಞಾನ ಬಳಸಿಕೊಂಡು ಎಲ್ಲಾ ಸಂದೇಶವನ್ನ ಒಂದೇ ಫ್ಲಾಟ್‌ಫಾರ್ಮ್‌ನಲ್ಲಿ ಬರುವಂತೆ ಮಾಡಲಿದೆ.
ಅಂದರೆ ನಿಮ್ಮ ಪಾಟ್ಸಾಪ್, ಫೇಸ್‌ಬುಕ್, ಜಿಮೇಲ್, ಇಮೇಲ್, ಟೆಲಿಗ್ರಾಮ್, ಎಕ್ಸ್ ಹೀಗೆ ಹತ್ತಾರು ಸೋಶಿಯಲ್ ಮೀಡಿಯಾಗಳ ಮೆಸೇಜ್‌ಗಳು ಒಂದೇ ಆಪ್‌ಗೆ ಬರುವಂತೆ ಮಾಡುವ ಏಕೈಕ ಹಾಗೂ ವಿಭಿನ್ನ ಫ್ಲಾಟ್‌ಫಾರ್ಮ್ ಇದಾಗಿತ್ತು. ಆರಂಭದಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಇದರ ಕುರಿತು ಚರ್ಚಿಸಿ ಬಳಕೆಗೆ ನೀಡಿದ್ದರು. ಅವರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಇದಾಗಿ ಕೆಲವೇ ತಿಂಗಳುಗಳಲ್ಲಿ ಹೆಸರುವಾಸಿಯಾಗಿತ್ತು.
ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಬಂದು ಸುಮಾರು 416 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. WordPress ಮತ್ತು Tumblr ಮಾಲೀಕ ಮ್ಯಾಟ್ ಮುಲ್ಲೆನ್ವಾಗ್, ಕಿಶನ್ ಅವರ ಹೊಸತನದಿಂದ ಹೆಚ್ಚು ಪ್ರಭಾವಿತರಾದ ಮುಲ್ಲೆನ್‌ವಾಗ್ ಅವರು 50 ಮಿಲಿಯನ್ ಡಾಲರ್‌ಗಳಿಗೆ ಈ ಫ್ಲಾಟ್‌ಫಾರ್ಮ್ ಅನ್ನು ಸ್ವಾದೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರು.
ಕಿಶನ್ ಬಗಾರಿಯಾ ಪ್ರಸ್ತುತ USA ನಲ್ಲಿ ನೆಲೆಸಿದ್ದಾರೆ ಮತ್ತು texts.com ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ವಿಸ್ತರಿಸಲು ಕೆಲಸ ಮಾಡುತ್ತಿದ್ದಾರೆ. ವೇದಿಕೆಯನ್ನು ಸ್ವಾಧೀನಪಡಿಸಿಕೊಂಡ ನಂತರವೂ, ಅವರು ಈ ಸಂಸ್ಥಗೆ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದನ್ನು ಮುಂದುವರಿಸಿದ್ದಾರೆ. ಈ ಆಪ್ ಇನ್ನಷ್ಟು ಸುಲಭವಾಗಿ ಬಳಕೆದಾರರ ಕೈ ಸೇರುವಂತೆ ಮಾಡಲು ಶ್ರಮಿಸುತ್ತಿದ್ದಾರೆ.
ಅವರು ಕಾಲೇಜು ಮೆಟ್ಟಿಲು ಹತ್ತದೆ ಕೇವಲ ಅಲ್ಪ ಸ್ವಲ್ಪ ತಂತ್ರಜ್ಞಾನ ಕುರಿತ ಅರಿವಿನಿಂದಲೇ 400 ಕೋಟಿ ರೂ. ಡೀಲ್ ಮಾಡಿದ್ದಾರೆ. ಅಚ್ಚರಿ ಎಂದರೆ ಈ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾರು ಹೇಗೆ ಬೇಕಾದರು ತಮ್ಮ ಟ್ಯಾಲೆಂಟ್ ತೋರಿಸಬಹುದು. ಅದಕ್ಕೆ ಕಾಲೇಜು ಶಿಕ್ಷಣವೇ ಅಗತ್ಯ ಎಂಬುದೆಲ್ಲ ಸುಳ್ಳು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.



Click it and Unblock the Notifications