Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಾಲ ಒಕೆ, ಆದರೆ ಈ 4 ತಪ್ಪು ಮಾಡಿದರೆ ಮಾತ್ರ ಉಸಿರು ಕಟ್ಟಿದಂತಾಗುವುದು
ಸಾಲ ಮಾಡದ ವ್ಯಕ್ತಿಗಳಿರಲಿ, ಬಡವರಿಗೆ ಸಾವಿರ ಲೆಕ್ಕದಲ್ಲಿ ಸಾಲ ಮಾಡಿದರೆ ಶ್ರೀಮಂತರ ಲಕ್ಷ, ಕೋಟಿ ಲೆಕ್ಕದಲ್ಲಿ ಸಾಲ ಮಾಡುತ್ತಾರೆ ಹಾಗಾಗಿ ಸಾಲ ಮಾಡುವುದು ಎಲ್ಲರೂ ಮಾಡುತ್ತಾರೆ, ಆದರೆ ಸಾಲ ತೀರಿಸುವ ಟೆಕ್ನಿಕ್ ಗೊತ್ತಿಲ್ಲ ಎಂದರೆ ಸಾಲದ ಮೇಲೆ ಸಾಲ ಎಂಬಂತೆ ಸಾಲದ ಸುಳಿಯಲ್ಲಿ ಸಿಕ್ಕಾಕೊಳ್ಳಬೇಕಾಗುತ್ತದೆ.ಅದರಲ್ಲಿಯೂ ಈ ಕ್ರೆಡಿಡ್ ಇದೆಯೆಲ್ಲಾ ಅದೆಲ್ಲಾ ಸುಮ್ಮನೆ ಉಜ್ಜಿದರೆ ನಂತರ ದುಡ್ಡು ಕಟ್ಟಲು ಬಂದಾಗ ಉಸಿರು ಕಟ್ಟಿದಂತಾಗುವುದು.

ಕೆಲವೊಂದು ಅವಶ್ಯಕತೆಗಳಿಗೆ ಸಾಲ ಮಾಡಬೇಕಾಗುತ್ತದೆ, ಆದರೆ ಆ ಸಾಲವನ್ನು ಹೇಗೆ ಮರುಪಾವತಿ ಮಾಡುತ್ತೇವೆ ಎಂಬುವುದರ ಮೇಲೆ ನಮ್ಮ ಜಾಣ್ಮೆ ಅಡಗಿದೆ. ಕೆಲವರು ಇಲ್ಲಿಂದು ತೆಗೆದು ಅಲ್ಲಿ ಕಟ್ಟುವುದು, ಮತ್ತೊಂದು ಕಡೆಯಿಂದ ತೆಗೆದು ಇನ್ನೊಂದು ಕಡೆ ಕಟ್ಟುವುದು ಮಾಡುತ್ತಾರೆ, ಹೀಗೆ ರೊಟೇಷನ್ ಮಾಡ್ತಾ ಮಾಡ್ತಾ ಕೊನೆಗೆ ಎಲ್ಲಿಯೂ ಹಣ ಸಿಗಲ್ಲ, ಎಲ್ಲಾ ಕಡೆ ಹಣ ಪಾವತಿಸಬೇಕು, ಹಣದ ಸುಳಿಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ.
ಹಾಗಾಗಿ ಸಾಲ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ
ನಿಮ್ಮ ಸಾಮರ್ಥ್ಯಕ್ಕೆ ಹೆಚ್ಚಿನ ಸಾಲ ತೆಗೆದುಕೊಳ್ಳಬೇಡಿ, ನಿಮಗೆ ಒಂದು 20 ಸಾವಿರ ಸಂಬಳ ಎಂದಾದರೆ ಅದರಲ್ಲಿ ಒಂದು 5 ಸಾವಿರ ಹಣ ಸಾಲಕ್ಕೆ ಪಾವತಿಸಬೇಕಾಗಿದ್ದರೆ ಒಕೆ, ಆದರೆ 20 ಸಾವಿರ ದುಡಿದ ಹಣದಲ್ಲಿ 10 ಸಾವಿರಕ್ಕಿಂತ ಹೆಚ್ಚು ಹಣ ಸಾಲ ಕಟ್ಟಲು ಬೇಕಾಗುತ್ತದೆ ಅಥವಾ 20 ಸಾವಿರ ದುಡಿದು ತಿಂಗಳಿಗೆ 22 ಸಾವಿರ ಸಾಲ ಕಟ್ಟುವ ಪರಿಸ್ಥಿತಿಯಲ್ಲಿದ್ದಾರೆ ಬದುಕು ತುಂಬಾನೇ ಕಷ್ಟವಾಗುವುದು, ಸಾಲ ಸುಳಿಯಲ್ಲಿ ಸಿಕ್ಕಿ ನೆಮ್ಮದಿ ಹಾಳಾಗುವುದು, ಹಾಗಾಗಿ ಸಾಲ ತೆಗೆದುಕೊಳ್ಳುವಾಗ ನಿಮಗೆ ಎಷ್ಟು ಹಣ ಮರು ಪಾವತಿಸಲು ಸಾಧ್ಯ ಎಂಬುವುದನ್ನುಲೆಕ್ಕ ಹಾಕಿ.
ಕ್ರೆಡಿಡ್ ಬಳಸುವುದು ಗೊತ್ತಿರಬೇಕು
ಬ್ಯಾಂಕ್‌ನವರು ಕ್ರಿಡಿಟ್ ಕಾರ್ಡ್ ಆಗಾಗ ಕರೆ ಮಾಡಿ ಕೊಡುತ್ತಾರೆ. ಆ ಕ್ರೆಡಿಟ್ ಕಾರ್ಡ್ ಅನ್ನು ಸರಿಯಾದ ರೀತಿ ಬಳಕೆಯಲ್ಲಿ ಮಾಡಿದರೆ ತೊಂದರೆಯಿಲ್ಲ, ಇಲ್ಲಾಂದ್ರೆ ಕಷ್ಟ, ಅದರಿಂದ ಯಾವುದೇ ಕಾರಣಕ್ಕೆ ಹಣ ಡ್ರಾ ಮಾಡಬಾರದು. ಕ್ರೆಡಿಟ್ ಲಿಮಿಟ್ ಒಂದು 50 ಸಾವಿರ ಅಂತಿದ್ದರೆ ಅದು ಪೂರ್ತಿ ಸಾಲ ಮಾಡಬಾರದು ಅದರಲ್ಲಿ 10-15 ಸಾವಿರ ಸಾಲ ಮಾಡಿ, ಅದನ್ನು EMIನಲ್ಲಿ ಪಾವತಿ ಮಾಡುವುದಾದರೆ 3-4 ಸಾವಿರ ಬರುವಂತೆ ಇದ್ದರೆ ಸಾಕು. ಡ್ರೆಸ್, ಹೋಟೆಲ್ ಬಿಲ್ ಇವುಗಳಿಗೆ ಕ್ರೆಡಿಟ್ ಬಳಸಲು ಹೋಗಬೇಡಿ, ಬದಲಿಗೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಲು, ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಇದನ್ನು ಬಳಸಬಹುದು.
ಚಿಕ್ಕ- ಚಿಕ್ಕ ಸಾಲದ ಬದಲಿಗೆ ಒಂದೇ ಸಾಲ ಮಾಡಿ
ಹೌದು ಸಿಕ್ಕ ಕಡೆಯಿಂದೆಲ್ಲಾ ಸಾಲ ಮಾಡಿದರೆ ಸ್ವಲ್ಪ- ಸ್ವಲ್ಪ ಹಣ ಹಂಚಿದಾಗ ನಿಮ್ಮ ಕೈ ಬರಿದಾಗುವುದು. ಅದರ ಬದಲಿಗೆ ಈ ಎಲ್ಲಾ ಸಾಲ ತೀರಿಸಲು ಒಂದು ಸಾಲ ಮಾಡಿ, ನಂತರ ಅದಕ್ಕೆ ಸರಿಯಾಗಿ ಹಣವನ್ನು ಪಾವತಿಸುತಾ ಬನ್ನಿ. ಹೀಗೆ ಮಾಡಿದಾಗ ರಿಲ್ಯಾಕ್ಸ್ ಅನಿಸುವುದು.
ನಂತರ ಬೇರೆ ಎಲ್ಲಿಯೂ ಸಾಲ ಮಾಡಬೇಡಿ
ಸಾಲದ ಈ ಹಣ ಕಟ್ಟಿ ಮುಗಿಯುವರೆಗೂ ನಿಮ್ಮೆಲ್ಲಾ ಖರ್ಚು ನಿಯಂತ್ರಿಸಬೇಕು, ಬೇರೆ ಎಲ್ಲಿಯೂ ಸಾಲ ಮಾಡಲು ಹೋಗಬಾರದು.
ಅಲ್ಲದೆ ಕಂತಿಗಿಂತ ಹೆಚ್ಚು ಹಣ ಕಟ್ಟುತ್ತಾ ಬನ್ನಿ, ಇದರಿಂದ ಬೇಗನೆ ಸಾಲ ಮರುಪಾವತಿ ಆಗುತ್ತಾ ಬರುವುದು. ಬೇಗನೆ ಸಾಲದಿಂದ ನಾವು ಹೊರಬರಲು ಸಾಧ್ಯವಾಗುವುದು, ಹಾಗಾಗಿ ಸಾಲ ಒಕೆ, ಮರುಪಾವತಿ ಬಗ್ಗೆ ಯೋಚಿಸಲೇಬೇಕು ಈ ಟೆಕ್ನಿಕ್.



Click it and Unblock the Notifications
