Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
ದೇಶದಾದ್ಯಂತ ಲೋಕಸಭೆ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದರೆ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗವು ಸಕಲ ಸಿದ್ಧತೆಯಲ್ಲಿದೆ.
ಇನ್ನು ಭಾರತೀಯ ಪ್ರಜೆಯಾಗಿ 18 ವರ್ಷ ತುಂಬಿರುವವರು ಮತದಾನ ಮಾಡಬಹುದು. ಮತದಾನ ಕಡ್ಡಾಯವಾಗಿ ಮಾಡಬೇಕು, ಹಾಗೂ ತಮ್ಮ ಹಕ್ಕನ್ನು ಚಲಾಯಿಸಬೇಕು. ಇದಕ್ಕೆಂದು ಚುನಾವಣಾ ಆಯೋಗವು ಗುರುತಿನ ಚೀಟಿ ನೀಡಿರುತ್ತದೆ. ಈ ಚೀಟಿ ಇರುವವರು ಮತದಾನ ಮಾಡಲು ಅರ್ಹರಾಗಿರುತ್ತಾರೆ. ಜೊತೆಗೆ ಇದೊಂದು ಮೂಲಭೂತ ಕರ್ತವ್ಯವೂ ಆಗಿದೆ.

ಈ ಗುರುತಿನ ಚೀಟಿ ಮತ ಚಲಾಯಿಸಲು ಮಾತ್ರವಲ್ಲ ಭಾರತೀಯ ನಾಗರಿಕನ ಗುರುತಾಗಿರುತ್ತದೆ. ಅದರಲ್ಲಿ ಆತನ ಹೆಸರು, ಜನ್ಮ ಸ್ಥಳ, ವಿಳಾಸ ಸೇರಿದಂತೆ ಒಂದು EPIC ನಂಬರ್ ಅನ್ನು ಸಹ ನೀಡಲಾಗಿರುತ್ತದೆ. ಈ ಸಂಖ್ಯೆ ನಿಮ್ಮ ಗುರುತಿನ ಭಾಗವಾಗಿ ನೀಡಲಾಗಿರುತ್ತದೆ. ಈ ಸಂಖ್ಯೆಯಿಂದ ನಿಮ್ಮ ಹೆಸರು, ವಿಳಾಸ, ವರ್ಷ ತಿಳಿಯಬಹುದಾಗಿದೆ.
ಈ ಗುರುತಿನ ಚೀಟಿ ಇಲ್ಲದೆಯೂ ಮತ ಚಲಾಯಿಸಬಹುದು
ಇನ್ನು ಇದೊಂದು ಚೀಟಿಯಿಂದ ನೀವು ಭಾರತೀಯ ಪ್ರಜೆಯಾಗಿ ಹಾಗೂ ಮತಚಲಾಯಿಸಲು ಅರ್ಹತೆ ಪಡೆಯುತ್ತೀರಿ ಎಂದುಕೊಳ್ಳಬೇಡಿ. ಈ ಗುರುತಿನ ಚೀಟಿ ಇಲ್ಲದೆಯೂ ಸಹ ನೀವು ಮತದಾನ ಮಾಡಲು ಅರ್ಹರಾಗಿರುತ್ತೀರಿ. ಆದರೆ ಈ ಮೊದಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮ್ಮ ಬಳಿ ವೋಟರ್ ಐಡಿ ಇದ್ದೂ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದಾದರೆ ನೀವು ಅಲ್ಲಿ ಮತದಾನ ಮಾಡಲು ಬರುವುದಿಲ್ಲ. ಹೀಗಾಗಿ ಮತದಾನಕ್ಕೂ ಮೊದಲು ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಮತದಾನಕ್ಕೂ ಮುನ್ನ ಸೇರಿಸಬಹುದು. ಇಲ್ಲವೆ ತಿದ್ದುಪಡಿ ಮಾಡಿಕೊಂಡು ಬೇರೆ ವಿಳಾಸಕ್ಕೆ ಸ್ಥಳಾಂತರಿಸಬಹುದು.
ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದು, ನಿಮ್ಮ ಬಳಿ ವೋಟರ್ ಐಡಿ ಇಲ್ಲದಿದ್ದರೆ ಮತ ಚಲಾಯಿಸಲು ನೀವು ಅರ್ಹರಾಗುತ್ತೀರಿ. ನಿಮ್ಮ ಬಳಿ ಗುರುತಿನ ಚೀಟಿ ಹಾಗೂ ಅದರ ಎಪಿಕ್ ನಂಬರ್ ಇಲ್ಲ ಎಂದುಕೊಳ್ಳಿ, ಈ ವೇಳೆ ಬದಲಿ ದಾಖಲೆಗಳ ನೀಡಿ ನೀವು ಮತ ಚಲಾಯಿಸಬಹುದು.
ಯಾವೆಲ್ಲಾ ದಾಖಲೆ ನೀಡುವ ಮೂಲಕ ಮತಚಲಾಯಿಸಬಹುದು
- ಆಧಾರ್ ಕಾರ್ಡ್
- ಬ್ಯಾಂಕ್/ಪೋಸ್ಟ್ ಆಫೀಸ್ ಪಾಸ್‌ಬುಕ್‌ಗಳು
- ಡ್ರೈವಿಂಗ್ ಲೈಸೆನ್ಸ್
- ಪ್ಯಾನ್ ಕಾರ್ಡ್
- NPR ಅಡಿ RGI ನೀಡಿದ ಸ್ಮಾರ್ಟ್ ಕಾರ್ಡ್
- ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಸ್ಮಾರ್ಟ್‌ಕಾರ್ಡ್
- ಪಾಸ್‌ಪೋರ್ಟ್
- ಭಾವಚಿತ್ರವಿರುವ ಪಿಂಚಣಿ ದಾಖಲೆ
- ಕೇಂದ್ರ/ರಾಜ್ಯ ಸರ್ಕಾರ/PSU/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ
- ವಿಶಿಷ್ಟ ಅಂಗವೈಕಲ್ಯ ಐಡಿ(UDID) ಕಾರ್ಡ್‌ಗಳು
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು ಹೇಗೆ?
ನಾವು ಮೊದಲೇ ಹೇಳಿದಂತೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ಮತಚಲಾಯಿಸಬಹುದು. ಮತದಾನದ ದಿನ ಪೂಲಿಂಗ್ ಸಿಬ್ಬಂದಿ ಬಳಿ ನೀವು ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು, ಆದೆ ಅದಕ್ಕೂ ಮೊದಲು ನೀವು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಮೂಲಕ ಪರಿಶೀಲಿಸಿಕೊಳ್ಳುವುದು ಉತ್ತಮ. ನೀವು https://electoralsearch.eci.gov.in ವೆಬ್‌ಸೈಟ್‌ಗೆ ತೆರಳಿ ನಿಮ್ಮ ಹೆಸರು ಪರಿಶೀಲಿಸಬಹುದು. ಇಲ್ಲದಿದ್ದರೆ 1950ಕ್ಕೆ ಕರೆ ಮಾಡಿಯಾದರು ನಿಮ್ಮ ಹೆಸರು ಇದೆಯೇ ಎಂದು ಪರಿಶೀಲನೆ ಮಾಡಬಹುದು.



Click it and Unblock the Notifications
