Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವೀಸಾ ಇಲ್ಲದೆಯೇ 55 ದೇಶ ಸುತ್ತಬಹುದು; ಯಾವೆಲ್ಲಾ ದೇಶಗಳು ಗೊತ್ತಾ?
2026ರಲ್ಲಿ ವಿದೇಶ ಪ್ರವಾಸ ಮಾಡುವ ಪ್ಲಾನ್ ಮಾಡಿಕೊಂಡಿರಬಹುದು. ಅದ್ರಲ್ಲೂ ವಿದೇಶದ ಪ್ರವಾಸ ಅಂದಕೂಡಲೆ ನೀವು ಹಲವು ದೇಶಗಳ ಸುತ್ತಿ ಅಲ್ಲಿನ ಪ್ರಕೃತಿ ಸೌಂದರ್ಯ ಸೇರಿದಂತೆ ಜನಜೀವನ ನೋಡವ ಬಯಕೆ ಹೊಂದಿರುತ್ತೀರಿ. ಹಾಗೆ ಭಾರತದ ಪಾಸ್‌ಪೋರ್ಟ್ ಈಗ 85ನೇ ಸ್ಥಾನದಿಂದ 80ನೇ ಸ್ಥಾನಕ್ಕೆ ಏರಿಕೆಯಾಗಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಸುಧಾರಣೆ ಕಂಡಿದೆ.
ಹಾಗೆ ನೀವು ಬಹುತೇಕ ದೇಶಗಳಿಗೆ ವೀಸಾ ಪಡೆದು ತೆರಳಬೇಕಿದೆ. ಆದ್ರೆ ಹಲವು ದೇಶಗಳಿಗೆ ವೀಸಾ ಇಲ್ಲದೆಯೂ ನೀವು ಪ್ರವೇಶಿಸಬಹುದು. ಭಾರತೀಯ ಪ್ರಜೆಗಳು 55 ದೇಶಗಳಿಗೆ ವೀಸಾ ಪಡೆಯದೆ ಪ್ರವೇಶಿಸಬಹುದು. ನೀವು ಪ್ರವಾಸಿಗರಾಗಿ ಈ ದೇಶಗಳಿಗೆ ಕೇವಲ ಪಾಸ್‌ಪೋರ್ಟ್ ಮೂಲಕ ತೆರಳಬಹುದು. ಹಾಗಾದ್ರೆ ಆ ದೇಶಗಳು ಯಾವುದು ಅನ್ನೋದು ನಿಮಗೆ ಗೊತ್ತಿದ್ಯಾ?

2026ರಲ್ಲಿ ನೀವು 55 ದೇಶಗಳಿಗೆ ವೀಸಾ ಪಡೆಯದೆ ತೆರಳಬಹುದು.
ಅಂಗೋಲಾ
ಬಾರ್ಬಡೋಸ್
ಭೂತಾನ್
ಬ್ರಿಟಿಷ್ ವರ್ಜಿನ್ ದ್ವೀಪಗಳು
ಕುಕ್ ದ್ವೀಪಗಳು
ಡೊಮಿನಿಕಾ
ಫಿಜಿ
ಗ್ರೆನಡಾ
ಹೈಟಿ
ಜಮೈಕಾ
ಕಝಾಕಿಸ್ತಾನ್
ಕಿರಿಬಾಟಿ
ಮಕಾವೊ (SAR ಚೀನಾ)
ಮ್ಯಾನ್ಮಾರ್
ಮಲೇಷ್ಯಾ
ಮಾರಿಷಸ್
ಮೈಕ್ರೋನೇಶಿಯಾ
ಮಾಂಟ್ಸೆರಾಟ್
ನೇಪಾಳ
ನಿಯು
ರುವಾಂಡಾ
ಸೆನೆಗಲ್
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಥೈಲ್ಯಾಂಡ್
ಟ್ರಿನಿಡಾಡ್ ಮತ್ತು ಟೊಬಾಗೊ
ವನಾವ್ಟ್
ಆಗಮನದ ಮೇಲೆ ವೀಸಾ ಅಗತ್ಯವಿರುವ ದೇಶಗಳು
ಬುರುಂಡಿ
ಕಾಂಬೋಡಿಯಾ
ಕೇಪ್ ವರ್ಡೆ ದ್ವೀಪಗಳು
ಕೊಮೊರೊ ದ್ವೀಪಗಳು
ಜಿಬೌಟಿ
ಇಥಿಯೋಪಿಯಾ
ಗಿನಿ-ಬಿಸ್ಸೌ
ಇಂಡೋನೇಷ್ಯಾ
ಜೋರ್ಡಾನ್
ಲಾವೋಸ್
ಮಡಗಾಸ್ಕರ್
ಮಾಲ್ಡೀವ್ಸ್
ಮಾರ್ಷಲ್ ದ್ವೀಪಗಳು
ಮಂಗೋಲಿಯಾ
ಮೊಜಾಂಬಿಕ್
ಫಿಲಿಪೈನ್ಸ್
ಪಲೌ ದ್ವೀಪಗಳು
ಕತಾರ್
ಸಮೋವಾ
ಸಿಯೆರಾ ಲಿಯೋನ್
ಸೊಮಾಲಿಯಾ
ಶ್ರೀಲಂಕಾ
ಟಾಂಜಾನಿಯಾ
ಟಿಮೋರ್-ಲೆಸ್ಟೆ
ಟುವಾಲು
ಜಿಂಬಾಬ್ವೆ
ಎಲೆಕ್ಟ್ರಾನಿಕ್ ವಿಸಾ ಅಗತ್ಯ ಇರುವ ದೇಶಗಳು
ಕೀನ್ಯಾ
ಸೀಶೆಲ್ಸ್
ಸೇಂಟ್ ಕಿಟ್ಸ್ ಮತ್ತು ನೆವಿಸ್
ವೀಸಾ ಫ್ರೀ ಎಂಟ್ರಿಯಿಂದ ವಿನಾಯಿತಿ ನಿರಾಕರಿಸಿದ 2 ದೇಶಗಳು
2026ರಲ್ಲಿ ಎರಡು ದೇಶಗಳು ಭಾರತೀಯರಿಗೆ ವೀಸಾ ಫ್ರೀ ಎಂಟ್ರಿಯನ್ನು ನಿರಾಕರಿಸಿವೆ. ಇನ್ಮುಂದೆ ಭಾರತೀಯರು ಕಡ್ಡಾಯವಾಗಿ ವೀಸಾ ಪಡೆದು ದೇಶಕ್ಕೆ ಆಗಮಿಸಬೇಕಿದೆ. ಅದ್ರಲ್ಲೂ ಒಂದು ಇರಾನ್ ಹಾಗೆ ಬೊಲಿವಿಯಾ. ಈ ಎರಡು ದೇಶಗಳಿಗೆ ಇನ್ಮುಂದೆ ವೀಸಾ ಪಡೆದು ಪ್ರವಾಸಿಗರು ತೆರಳಬೇಕಾಗುತ್ತದೆ. ಭಾರತೀಯರಿಗೆ ವೀಸಾ ಇಲ್ಲದೆಯೂ ಇರಾನ್‌ನಲ್ಲಿ ಉದ್ಯೋ, ವಾಸದ ಭರವಸೆ ನೀಡಿ ಹಣ ಪಡೆದು ಮೋಸ ಮಾಡಿರುವ ಹಲವು ಪ್ರಕರಣಗಳು ವರದಿಯಾದ ಬೆನ್ನಲ್ಲೆ ಈ ರೀತಿ ಕ್ರಮ ಕೈಗೊಳ್ಳಲಾಗಿದೆ.
ಹಾಗೆ ಬೊಲಿವಿಯಾ ತೆರಳಲು ನಿಮಗೆ ಇ-ವೀಸಾದ ಅಗತ್ಯವಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಇ-ವೀಸಾ ಪಡೆದ ನಂತರ ಬೊಲಿವಿಯಾಕ್ಕೆ ಪ್ರಯಾಣಿಸಬಹುದು. ಫಾರ್ಮ್, ಡಾಕ್ಯುಮೆಂಟ್ ಅಪ್‌ಲೋಡ್‌ಗಳು ಮತ್ತು ಎಲೆಕ್ಟ್ರಾನಿಕ್ ಶುಲ್ಕ ಪಾವತಿ ಮಾಡಿ ವೀಸಾ ಪಡೆಯಬಹುದು. ಅನುಮೋದಿತ ವೀಸಾವನ್ನು ಡಿಜಿಟಲ್ ಆಗಿ ಕಳುಹಿಸಲಾಗುತ್ತದೆ.
ಭಾರತೀಯ ಪಾಸ್‌ಪೋರ್ಟ್ ಹಾಗೂ ಭಾರತದ ವಿದೇಶಾಂಗ ನೀತಿಯ ಆಧಾರದ ಮೇಲೆ ವೀಸಾ ಫ್ರೀ ಎಂಟ್ರಿ ಸಿಗುವುದು ನೋಡಬಹುದು. ಹಾಗೆ ಪಾಸ್‌ಪೋರ್ಟ್ ಪ್ರಬಲವಾದಷ್ಟು ವೀಸಾ ಇಲ್ಲದೆಯೇ ತೆರಳುವ ದೇಶಗಳ ಸಂಖ್ಯೆ ಹೆಚ್ಚಾಗಲಿದೆ. ಆದ್ರೆ ಭಾರತದ ಪಾಸ್‌ಪೋರ್ಟ್ ಸ್ಥಾನ ಇಳಿಕೆಯಾಗುತ್ತಿದೆ. ಹಾಗೆ ವೀಸಾ ಇಲ್ಲದೆ ತೆರಳಬಹುದಾದ ದಶಗಳ ಸಂಖ್ಯೆಯಲ್ಲೂ ಇಳಿಕೆಯಾಗುತ್ತಿದೆ. ಇರಾನ್ ಮತ್ತು ಬೊಲಿವಿಯಾ ಇನ್ನು ಮುಂದೆ ವೀಸಾ-ಮುಕ್ತ ಅಥವಾ ವೀಸಾ-ಆಗಮನ ಪ್ರವೇಶವನ್ನು ನೀಡದ ಕಾರಣ, ಭಾರತದ ಸುಲಭ ಪ್ರವೇಶ ತಾಣಗಳ ಸಂಖ್ಯೆ 2026 ರಲ್ಲಿ 55 ರಷ್ಟಿದೆ. ವೀಸಾ-ಮುಕ್ತ ನಿಯಮಗಳನ್ನು ರಾಜತಾಂತ್ರಿಕ, ಭದ್ರತೆ, ಆರೋಗ್ಯ, ವಲಸೆ ಅಥವಾ ಪರಸ್ಪರ ನೀತಿಗಳಲ್ಲಿನ ಬದಲಾವಣೆಗಳಿಂದಾಗಿ ಯಾವುದೇ ಸಮಯದಲ್ಲಿ ನವೀಕರಿಸಬಹುದು, ತಿದ್ದುಪಡಿ ಮಾಡಬಹುದು.



Click it and Unblock the Notifications