Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಇಂದು ಆಗಸದಲ್ಲಿ ಚಂದ್ರನ ವಿಸ್ಮಯ: ವರ್ಷದ 3ನೇ ಸೂಪರ್‌ಮೂನ್ ಗೋಚರ
ಆಕಾಶದಲ್ಲಿ ಹುಣ್ಣಿಮೆ, ಅಮವಾಸ್ಯೆ, ಗ್ರಹಣ ಹೀಗೆ ಚಂದ್ರನ ಅಂಗಳದಲ್ಲಿ ಒಂದಲ್ಲಾ ಒಂದು ಕುತೂಹಲಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿಯೇ ಚಂದ್ರನ ಮೇಲೆ ವಿಜ್ಞಾನಿಗಳಿಗೆ ಎಂದಿಗೂ ಕುತೂಹಲ ಕಡಿಮೆ ಆಗಿಯೇ ಇಲ್ಲ. ಇಂದು ಈ ಕುತೂಹಲಕ್ಕೆ ಮತ್ತೊಂದು ವಿಶೇಷತೆ ಸೇರಿಕೊಳ್ಳುತ್ತಿದೆ. ಹೌದು ಆಗಸದಲ್ಲಿ ವರ್ಷದ ಅತ್ಯಂತ ದೊಡ್ಡ ಸೂಪರ್‌ಮೂನ್ ಇಂದು ಸಂಭವಿಸುತ್ತಿದೆ.
ಮಂಗಳವಾರ ಸಂಜೆಯಿಂದ ಶುಕ್ರವಾರ ಬೆಳಗಿನವರೆಗೆ ಪೂರ್ಣ ಚಂದ್ರ ಕಾಣಿಸಿಕೊಳ್ಳಲಿದೆ. ಆದ್ರೆ ಅತೀ ದೊಡ್ಡವಾಗಿ ಕಾಣಿಸಿಕೊಳ್ಳುವುದು ಇಂದು ಸಂಜೆ ಎಂದು ತಿಳಿದುಬಂದಿದೆ. ಬುಧವಾರ ಹಾಗೂ ಗುರುವಾರದ ನಡುವೆ ಚಂದ್ರನ ಭೂಮಿಗೆ ಅತ್ಯಂತ ಸಮೀಪಕ್ಕೆ ಬರಲಿದ್ದಾನೆ. ಹೀಗಾಗಿ ಚಂದ್ರ ಸಾಮಾನ್ಯ ದಿನಕ್ಕಿಂತ ಅತ್ಯಂತ ದೊಡ್ಡದಾಗಿ ಕಾಣಿಸಲಿದ್ದಾನೆ.

ಈ ವರ್ಷ ಒಟ್ಟು 4 ಸೂಪರ್‌ಮೂನ್ ಸಂಭವಿಸುತ್ತಿದೆ. ಕೊನೆಯದಾಗಿ ನಾವು ಆಗಸ್ಟ್ 19ರ ಸೋಮವಾರ ರಾತ್ರಿ ಸಂಭವಿಸಿತ್ತು. ಅಂದು ಬ್ಲೂ ಮೂನ್ ಹಾಗೂ ಸೂಪರ್ ಮೂನ್ ಎರಡು ವಿಸ್ಮಯಗಳು ಒಟ್ಟಿಗೆ ಸಂಭವಿಸಿತ್ತು. ಚಂದ್ರನು ಭೂಮಿಗೆ ಸಮೀಪದಲ್ಲಿರುವಾಗ ಈ ಸೂಪರ್ ಮೂನ್ ವಿದ್ಯಮಾನ ಸಂಭವಿಸುತ್ತದೆ. ಸೂಪರ್‌ಮೂನ್ ಎಂಬ ಪದವನ್ನು ಖಗೋಳಶಾಸ್ತ್ರಜ್ಞ ರಿಚರ್ಡ್ ನೊಲ್ಲೆ ಅವರು 1979 ರಲ್ಲಿ ಮೊದಲ ಬಾರಿಗೆ ಬಳಸಿದ್ದರು.
ಈ ಸೂಪರ್ ಮೂನ್ ವಿಶ್ವದ ಯಾವುದೇ ಮೂಲೆಯಿಂದ ಬೇಕಾದರು ನೋಡಬಹುದು. ಹಾಗೆ ಭಾರತದಲ್ಲೂ ಸೂಪರ್ ಮೂನ್ ಘೋಚರವಾಗಲಿದೆ. ಆದ್ರೆ ಮೋಡವಿರುವ ಕಾರಣ ಕೆಲವು ಭಾಗದಲ್ಲಿ ಚಂದ್ರನ ದರ್ಶನ ಆಗುವುದು ಅನುಮಾನವಾಗಿದೆ. ಇಂದು ರಾತ್ರಿ 7 ಗಂಟೆ 50 ನಿಮಿಷಕ್ಕೆ ಚಂದ್ರ ತನ್ನ ಅತೀ ದೊಡ್ಡ ಸ್ಥಿತಿಗೆ ತಲುಪುತ್ತಾನೆ. ಅಂದರೆ ಈ ವೇಳೆ ಚಂದ್ರ ಭೂಮಿಗೆ ಅತ್ಯಂತ ಸಮೀಪ ಬಂದಿರುತ್ತಾನೆ.
ಈ ಸೂಪರ್‌ಮಮೂನ್ ಸರಾಸರಿಗಿಂತ ಶೇ.14 ರಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲ್ಲಿದೆ. ಗುರುವಾರ ರಾತ್ರಿ 7:26ರಂದು ಚಂದ್ರ ಭೂಮಿಯಿಂದ ಸರಾಸರಿ 17 ಸಾವಿರ ಮೈಲು ಹತ್ತಿರಕ್ಕೆ ಬರಲಿದೆ. ಈ ಸೂಪರ್ ಮೂನ್ ವೀಕ್ಷಣೆಗೆ ಯಾವುದೇ ಉಪಕರಣದ ಅಗತ್ಯವಿಲ್ಲ, ಆದರೆ ಚಂದ್ರನ ಅಧ್ಯಯನದಲ್ಲಿ ತೊಡಗಿರುವ ತಜ್ಞರಿಗೆ ಚಂದ್ರನನ್ನು ಮತ್ತಷ್ಟು ಹತ್ತಿರಕ್ಕೆ ನೋಡಲು ಇದೊಂದು ಸುಸಂದರ್ಭ. ಹೀಗಾಗಿ ಟೆಲಿಸ್ಕೋಪಿಕ್ ಸಾಧನದ ಮೂಲಕ ಚಂದ್ರನನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ವಿಜ್ಞಾನಿಗಳು ಕಾಯುತ್ತಿದ್ದಾರೆ.
ಈ ಸೂಪರ್‌ಮೂನ್ ಈ ವರ್ಷ ನಡೆಯಲಿರುವ 4 ಸೂಪರ್‌ಮೂನ್‌ಗಳ ಪೈಕಿ ಇದು 3ನೇ ಸೂಪರ್‌ಮೂನ್ ಆಗಿದೆ. ಇನ್ನೊಂದು ನವೆಂಬರ್‌ನಲ್ಲಿ ಸಂಭವಿಸುತ್ತಿದೆ. ಹುಣ್ಣಿಮೆಯಂದು ಈ ಸೂಪರ್‌ಮೂನ್ ಅತ್ಯಂತ ಪ್ರಕಾಶಮಾನವಾಗಿ ಕಾಣಲಿದೆ. ಹೀಗಾಗಿ ಈ ಸೂಪರ್ ಮೂನ್ ಅನ್ನು ಹಂಟರ್ಸ್ ಮೂನ್ ಎಂದು ಕೆರೆಯಲಾಗಿದೆ. ಹಾಗೆ ಮುಂದಿನ ವರ್ಷ 2025ರಲ್ಲಿ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸೂಪರ್ ಮೂನ್ ಸರಣಿಯಾಗಿ ಸಂಭವಿಸಲಿದೆ.
ಕಳೆದ 2023ರಲ್ಲಿ ಜುಲೈ 3, ಆಗಸ್ಟ್ 1, ಆಗಸ್ಟ್ 31 ಹಾಗೂ ಸೆಪ್ಟೆಂಬರ್ 29ಕ್ಕೆ ಸೂಪರ್ ಮೂನ್ ಗೋಚರಿಸಿತ್ತು. ಆದರೆ ಈ ವರ್ಷ ಆಗಸ್ಟ್‌ನಲ್ಲಿ ಸೂಪರ್ ಮೂನ್ ಹಾಗೂ ಬ್ಲೂ ಮೂನ್ ಎರಡು ಒಂದೇ ಬಾರಿಗೆ ಸಂಭವಿಸಿತ್ತು. ಬ್ಲೂ ಮೂನ್ ಎಂದರೆ ಚಂದ್ರ ನೀಲಿಯಾಗಿ ಕಾಣಿಸಿಕೊಳ್ಳುವುದು ಎಂದರ್ಥವಲ್ಲ. ಬ್ಲೂ ಮೂನ್ ಎಂದರೆ ಒಂದೇ ತಿಂಗಳಿನಲ್ಲಿ ಹುಣ್ಣಿಮೆ ಎರಡು ಬಾರಿ ಬರುವ ಅಪರೂಪದ ವಿದ್ಯಮಾನವಾಗಿದೆ. ಕಳೆದ ಆಗಸ್ಟ್‌ನಲ್ಲಿ ಈ ರೀತಿ ವಿದ್ಯಮಾನ ಸಂಭವಿಸಿತ್ತು. ಹುಣ್ಣಿಮೆಯಂದು ಈ ಸೂಪರ್ ಮೂನ್ ಸಂಭವಿಸುವುದು ಸಾಮಾನ್ಯ ಆದ್ರೆ ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಗೆ ಬರುವುದು ಅಪರೂಪದ ವಿದ್ಯಮಾನವಾಗಿದೆ.



Click it and Unblock the Notifications
