Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
Year Ender 2025: ಈ ವರ್ಷದ 10 ಜನಪ್ರಿಯ ಸಿನಿಮಾಗಳಿವು, ಅವುಗಳ ಬಜೆಟ್, ಕಲೆಕ್ಷನ್ ವಿವರ ಇಲ್ಲಿದೆ!!
2025ನೇ ವರ್ಷ ಮುಗಿಯುತ್ತಾ ಬಂದಿದೆ. ಹಾಗೆ ಚಿತ್ರರಂಗ ಕೂಡ ಈ ವರ್ಷ ಏಳುಬೀಳುಗಳ ಕಂಡಿದೆ. ಅದ್ರಲ್ಲೂ 2025ರ ವರ್ಷ ಬಿಗ್ ಬಜೆಟ್ ಸಿನಿಮಾಗಳಿಗೆ ಅದೃಷ್ಟದಾಯಕ ವರ್ಷ ಎನ್ನಬಹುದು. ತೆರೆಕಂಡ ಹಲವು ಸಿನಿಮಾಗಳು ಪ್ರೇಕ್ಷಕರ ಸೆಳೆಯುವಲ್ಲಿ ಯಶಸ್ವಿಯಾದವು. ಹಾಗೆ ಕೆಲವು ಸಣ್ಣ ಬಜೆಟ್ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ಲಾಭಗಳಿಸಿದವು.
ಹಾಗೆ ಭಾರತೀಯ ಸಿನಿಮಾಗಳಲ್ಲಿ ಭಾರತದಲ್ಲಿ ಈವರೆಗೆ 1500ಕ್ಕೂ ಹೆಚ್ಚು ಸಿನಿಮಾ ಈ ವರ್ಷ ತೆರೆಕಂಡಿವೆ. ಅದ್ರಲ್ಲೂ IMDb ಈ ವರ್ಷದ ಟಾಪ್ 10 ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ವರ್ಷ ತೆರೆಕಂಡು ಪ್ರೇಕ್ಷಕರ ಮನ ಗೆದ್ದ 10 ಜನಪ್ರಿಯ ಸಿನಿಮಾಗಳು ಯಾವುದು ಎಂಬುದನ್ನು ಈ ಪಟ್ಟಿ ವಿವರಿಸಲಿದೆ.

IMDbPro MOVIEmeter ಚಾರ್ಟ್ ಆಧರಿಸಿ ಶ್ರೇಯಾಂಕವನ್ನು ನಿರ್ಧರಿಸಲಾಯಿತು. ಈ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಸಿನಿಮಾಗಳು ಕೂಡ ಸ್ಥಾನ ಪಡೆದಿದೆ. ಹಾಗಾದ್ರೆ 2025ರಲ್ಲಿ ತೆರೆಕಂಡು ಪ್ರೇಕ್ಷಕರ ಮನಗೆದ್ದ ಅತ್ಯುತ್ತಮ 10 ಸಿನಿಮಾಗಳು ಯಾವುದು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ಪಟ್ಟಿಯು ಬಾಕ್ಸ್ ಆಫೀಸ್ ಕಲೆಕ್ಷನ್, ಮ್ಯೂಸಿಕ್, ಪ್ರೇಕ್ಷಕರ ರೇಟಿಂಗ್, ಮಾರಾಟವಾದ ಟಿಕೆಟ್ ಸಂಖ್ಯೆಗಳ ಆಧರಿಸಿ ನಿರ್ಧರಿಸಲಾಗುತ್ತದೆ.
ಸೈಯಾರಾ
ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ನಟಿಸಿದ ಸೈಯಾರಾ 2025 ರ IMDb ಟಾಪ್ 10ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಚಿತ್ರವು ಮ್ಯೂಸಿಗ್ ಲವರ್ ಪ್ರೀತಿಯಲ್ಲಿ ಬೀಳುವ ಕಥಾ ಹಂದರ ಹೊಂದಿದೆ. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಈ ಸಿನಿಮಾ 45ರಿಂದ 50 ಕೋಟ ರೂಪಾಯಿಯಲ್ಲಿ ನಿರ್ಮಾಣಗೊಂಡಿತ್ತು, ಆದ್ರೆ 570ರಿಂದ 580 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಮಹಾವತಾರ ನರಸಿಂಹ
ಭಕ್ತ ಪ್ರಹ್ಲಾದನ ಹಿಂದೂ ಪೌರಾಣಿಕ ಕಥೆಯನ್ನು ಆಧರಿಸಿದ ಮಹಾವತಾರ ನರಸಿಂಹ ಒಂದು ಅನಿಮೇಟೆಡ್ ಚಲನಚಿತ್ರವಾಗಿದೆ. ಇದು ಬಹುಭಾಷಾ ಚಲನಚಿತ್ರವಾಗಿದ್ದು, ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆರಂಭದಲ್ಲಿ ಕಡಿಮೆ ಕಲೆಕ್ಷನ್‌ನಿಂದ ಆರಂಭಗೊಂಡಿದ್ದ ಸಿನಿಮಾ ಬಳಿಕ ದೊಡ್ಡ ಲಾಭದತ್ತ ತಿರುಗಿತ್ತು. ಈ ಸಿನಿಮಾವನ್ನು 10ರಿಂದ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದ್ರೆ ಬಾಕ್ಸ್ ಆಫಿಸ್‌ನಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.
ಛಾವಾ
2025 ರ ಬಾಲಿವುಡ್‌ನ ಅತಿ ಹೆಚ್ಚು ಗಳಿಕೆಯ ಚಿತ್ರ, ವಿಕ್ಕಿ ಕೌಶಲ್, ಅಕ್ಷಯ್ ಖನ್ನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಸಿನಿಮಾವನ್ನು 130 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಹಾಗೆ 729 ಕೋಟಿ ರೂಪಾಯಿ ಕಲೆಕ್ಷನ್ ಕೂಡ ಮಾಡಿತ್ತು.
ಕಾಂತಾರಾ ಚಾಪ್ಟರ್-1
ಕಾಂಕಾತಾ ಯಶಸ್ಸಿನ ಬಳಿಕ ಕಾಂತಾರಾ ಚಾಪ್ಟರ್ 1 ಕೂಡ ಯಶಸ್ಸಿನತ್ತು ತಿರುಗಿತ್ತು. ಸುಮಾರು 130 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿದ್ದ ರಿಷಭ್ ಶೆಟ್ಟಿ ಸಿನಿಮಾ ಬರೋಬ್ಬರಿ 850 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.
ಕೂಲಿ
ರಜನಿಕಾಂತ್ ನಟನೆಯ ಕೂಲಿ ತಮಿಳಿನ ಅತ್ಯಂತ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ. ನಾಗಾರ್ಜುನ, ಶ್ರುತಿ ಹಾಸನ್, ಅಮೀರ್ ಖಾನ್ ಮತ್ತು ಉಪೇಂದ್ರ ಸೇರಿ ಇತರರು ನಟಿಸಿದ್ದರು. ಈ ಸಿನಿಮಾವು 375 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿತ್ತು, ಆದ್ರೆ 500 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು.
ಡ್ರ್ಯಾಗನ್
ಪ್ರದೀಪ್ ರಂಗನಾಥನ್ ಮತ್ತು ಕಾಯದು ಲೋಹರ್ ಅವರ ತಮಿಳು ಚಿತ್ರ ಡ್ರ್ಯಾಗನ್ ಈ ವರ್ಷ ಅಚ್ಚರಿಯ ಗೆಲುವು ಪಡೆದ ಸಿನಿಮಾ ಆಗಿದೆ. ಕೇವಲ 35 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡ ಈ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಕಂಡಿತ್ತು.
ಸಿತಾರೆ ಜಮೀನ್ ಪರ್
ಬಾಲಿವುಡ್ ನಟ ಅಮೀರ್ ಖಾನ್ ನಟಿಸಿದ್ದ ಈ ಸಿನಿಮಾ ವಿಶ್ಲೇಷಕರಿಂದ ಬರಪೂರ ಮೆಚ್ಚುಗೆ ಗಳಿಸಿತ್ತು. ಒಟ್ಟು 80ರಿಂದ 90 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡ ಸಿನಿಮಾ ಒಟ್ಟು 270ರಿಂದ 280 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.
ದೇವಾ
ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಪೂಜಾ ಹೆಗ್ಡೆ ನಟಿಸಿದ್ದ ದೇವಾ ಸಿನಿಮಾ ನೆನಪಿನ ಶಕ್ತಿ ಕಳೆದುಕೊಂಡಿದ್ದ ಪೊಲೀಸ್ ಅಧಿಕಾರಿ ಕುರಿತಾದ ಸಿನಿಮಾ ಆಗಿತ್ತು. ಸುಮಾರು 50 ಕೋಟಿ ರೂಪಾಯಿಯಲ್ಲಿ ತಯಾರಾಗಿತ್ತು, ಹಾಗೆ 55 ಕೋಟಿ ಕಲೆಕ್ಷನ್ ಸಹ ಮಾಡಿತ್ತು, ಆದ್ರೆ ಜನರು ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದರು. ಆದ್ರೆ ಕಲೆಕ್ಷನ್ ವಿಚಾರದಲ್ಲಿ ಸೋಲು ಕಂಡಿತ್ತು. ಈ ಸಿನಿಮಾ ಕೂಡ IMDb ಜನಪ್ರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ರೈಡ್ 2
ರೈಡ್ 2 ಚಿತ್ರವು ಅಜಯ್ ದೇವ್‌ಗನ್ ನಟನೆಯ ಸಿನಿಮಾ ಈ ಸಿನಿಮಾವು 120 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡು 242 ಕೋಟಿ ರೂಪಾಯಿ ಕಲೆಕ್ಷನ್ ಕಂಡಿದೆ.
ಲೋಕಾ
ಕಲ್ಯಾಣಿ ಪ್ರಿಯದರ್ಶನ್ ಮಲಯಾಳಂ ಚಿತ್ರರಂಗದ ಸೂಪರ್‌ಹೀರೋ ಬ್ಲಾಕ್‌ಬಸ್ಟರ್ ಲೋಕಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಲೋಕಾ ಚಾಪ್ಟರ್ 1-ಚಂದ್ರ ಸಿನಿಮಾ ಇಂಡಿಯನ್ ಸೂಪರ್ ಹೀರೋ ಸಿನಿಮಾದ ದೃಷ್ಟಿಯಲ್ಲಿ ಯಶಸ್ಸಿನ ಸಿನಿಮಾ. ಇದು 30 ಕೋಟಿಯಲ್ಲಿ ನಿರ್ಮಾಣಗೊಂಡು 300 ಕೋಟಿಗೂ ಅಧಿಕ ಕಲೆಕ್ಷನ್ ಕಂಡಿದೆ.



Click it and Unblock the Notifications

