Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Year Ender 2024: ಸ್ವಿಗ್ಗಿಯಲ್ಲಿ ಆರ್ಡರ್ ಮಾಡಲಾದ ಟಾಪ್ ಫುಡ್ ಐಟಂ ಯಾವುದು ಗೊತ್ತಾ?
ನಾವೀಗ 2024ಕ್ಕೆ ವಿದಾಯ ಹೇಳುವ ದಿನಕ್ಕೆ ಹತ್ತಿರವಾಗುತ್ತಿದ್ದೇವೆ. 2025ನ್ನು ಇನ್ನೇನು ಕೆಲವೇ ದಿನಗಳಲ್ಲಿ ಸ್ವಾಗತಿಸಲಿದ್ದೇವೆ. ಹಾಗೆ ಈ ವರ್ಷ ಹತ್ತು ಹಲವು ವಿಚಾರಗಳು ನಡೆದಿವೆ. ಅದರಲ್ಲೂ ಕೆಲವೊಂದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬಹುದಾದ ವಿಚಾರಗಳಾಗಿವೆ. ಅದರಲ್ಲೂ ಭಾರತೀಯರು ಈ ಬಾರಿ ಅತೀ ಹೆಚ್ಚು ಆರ್ಡರ್ ಮಾಡಿ ಸವಿದು ಆಹಾರ ಯಾವುದು ಎಂಬುದು ನಿಮಗೆ ಗೊತ್ತಾ?
ಆನ್‌ಲೈನ್ ಆಹಾರ ವಿತರಣಾ ಕಂಪನಿಗಳು ವರ್ಷದ ಕೊನೆಯಲ್ಲಿ ತಮ್ಮ ಫ್ಲಾಟ್‌ಫಾರ್ಮ್ ಮೂಲಕ ಜನರು ಅತೀ ಹೆಚ್ಚಾಗಿ ಆರ್ಡರ್ ಮಾಡಿರುವ ಫುಡ್‌ಗಳು ಯಾವುದು ಎಂಬ ಪಟ್ಟಿ ಬಿಡುಗಡೆ ಮಾಡಿವೆ. ಅದರಲ್ಲೂ ಈಗ ಸ್ವಿಗ್ಗಿ ತನ್ನ ಬಳಕೆದಾರರು 2024ರಲ್ಲಿ ಹೆಚ್ಚು ಸವಿಯಲು ಇಷ್ಟಪಟ್ಟಿದ್ದ ಡಿಷ್‌ಗಳು ಯಾವುದು ಎಂಬುದನ್ನು ತಿಳಿಸಿದೆ.

ಇತ್ತೀಚಿಗೆ ಜನರು ಆನ್‌ಲೈನ್‌ನಲ್ಲಿಯೇ ಫುಡ್ ಆರ್ಡರ್ ಮಾಡಿ ಸವಿಯಲು ಇಷ್ಟಪಡುತ್ತಾರೆ. ಅದರಲ್ಲಿ ಪ್ರಮುಖವಾಗಿ ಸ್ವಿಗ್ಗಿ ಹಾಗೂ ಜೊಮೆಟೋ ಎರಡು ಕಂಪನಿಗಳು ಜನರ ಮನ ಗೆದ್ದಿವೆ. ಇನ್ನು ಈ ವರ್ಷ ಸ್ವಿಗ್ಗಿ ಮೂಲಕ ಜನರು ಏನೆಲ್ಲಾ ಆರ್ಡರ್ ಮಾಡಿದ್ದಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
2024 ರಲ್ಲಿ ಭಾರತೀಯರು ಹೆಚ್ಚು ಆರ್ಡರ್ ಮಾಡಿದ ಆಹಾರಗಳ ಪಟ್ಟಿಯಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿದೆ. ಈ ವರ್ಷ ಬರೋಬ್ಬರಿ 83 ಮಿಲಿಯನ್ ಬಿರಿಯಾನಿ ಆರ್ಡರ್ ಅನ್ನು ಡೆಲಿವರಿ ಮಾಡಿರುವುದಾಗಿ ಸ್ವಿಗ್ಗಿ ಹೇಳಿಕೊಂಡಿದೆ. ದೇಶದಲ್ಲಿ ಪ್ರತಿ ನಿಮಿಷಕ್ಕೆ 158 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗುತ್ತದೆ ಎಂದು ಹೇಳಿದೆ. ಹಾಗೆ ಇದಾದ ಬಳಿಕ 2ನೇ ಸ್ಥಾನದಲ್ಲಿ ದೋಸೆ ಇದೆ. ದೋಸೆಯನ್ನು ಬೆಳಗ್ಗೆ ತಿಂಡಿಗೆ ಅತೀ ಹೆಚ್ಚು ಆರ್ಡರ್ ಮಾಡಲಾಗಿದೆ. ಸುಮಾರು 23 ಮಿಲಿಯನ್ ದೋಸೆಯನ್ನು ಈ ಬಾರಿ ಸ್ವಿಗ್ಗಿ ಮೂಲಕ ತರಿಸಿಕೊಂಡು ಜನರು ರುಚಿ ನೋಡಿದ್ದಾರೆ.
ಚಿಕನ್ ಬಿರಿಯಾನಿ ವರ್ಷದ ಅತ್ಯಂತ ಆದ್ಯತೆಯ ಬಿರಿಯಾನಿ ಆರ್ಡರ್ ಆಗಿದೆ ಎಂದು ಸ್ವಿಗ್ಗಿ ತಿಳಿಸಿದೆ. ಸುಮಾರು 49 ಮಿಲಿಯನ್ ಜನರು ಈ ಚಿಕನ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ. ಅದೂ ದಕ್ಷಿಣ ಭಾರತದಲ್ಲಿ ಹೆಚ್ಚಿನವರು ಆರ್ಡರ್ ಮಾಡಿದ್ದಾರೆ. ವಿಶೇಷವಾಗಿ ಬಿರಿಯಾನಿಗೆ ಹೆಸರುವಾಸಿಯಾಗಿರುವ ಹೈದರಾಬಾದ್‌ನಲ್ಲಿ 9.7 ಮಿಲಿಯನ್ ಬಿರಿಯಾನಿ ಆರ್ಡರ್ ಮಾಡಲಾಗಿದೆ. ಅದರ ನಂತರದ ಸ್ಥಾನದಲ್ಲಿ ಬೆಂಗಳೂರು ಇದ್ದು ಇಲ್ಲಿ ಸುಮಾರು 7.7 ಮಿಲಿಯನ್ ಮತ್ತು ಚೆನ್ನೈನಲ್ಲಿ 4.6 ಮಿಲಿಯನ್ ಬಿರಿಯಾನಿ ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.
ಮಧ್ಯರಾತ್ರಿ ಫುಡ್ ಪ್ರಿಯರ ಆರ್ಡರ್‌ಗಳು
ಹಗಲಿನಲ್ಲಿ ಬಿರಿಯಾನಿಗಳು ಅತೀ ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ, ರಾತ್ರಿಯ ಸಮಯದಲ್ಲಿ ಅಂದರೆ ಮಧ್ಯರಾತ್ರಿ 12 ರಿಂದ 2 ಗಂಟೆಯವರೆಗೆ ಆರ್ಡರ್ ಮಾಡಿದ ಎರಡನೇ ಅತ್ಯಂತ ಜನಪ್ರಿಯ ಆಹಾರ ಅಂದರೆ ಅದೂ ಕೂಡ ಬಿರಿಯಾನಿಯಾಗಿದೆ. ಮೊದಲ ಸ್ಥಾನದಲ್ಲಿ ಚಿಕನ್ ಬರ್ಗರ್ ಹೆಚ್ಚು ಆರ್ಡರ್ ಪಡೆದಿದೆ ಎಂದು ಸ್ವಿಗ್ಗಿ ತಿಳಿಸಿದೆ. ಈ ವರ್ಷದ ರಂಜಾನ್ ಸಮಯದಲ್ಲಿ ಸುಮಾರು 6 ಮಿಲಿಯನ್ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ ಎಂದು Zwiggy ವರದಿ ಮಾಡಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ದೋಸೆ ಆರ್ಡರ್‌ಗಳನ್ನು ಮಾಡಲಾಗಿದೆ, ಹಾಗೆ ಹೈದರಾಬಾದ್‌ನಲ್ಲಿ ಬಿರಿಯಾನಿಯನ್ನು ಹೆಚ್ಚಾಗಿ ಜನರು ಆರ್ಡರ್ ಮಾಡಿದ್ದಾರೆ. ಚೋಲಾ ಪುರಿಯನ್ನು ಹೆಚ್ಚಾಗಿ ದೆಹಲಿಯಲ್ಲಿ ಆರ್ಡರ್ ಮಾಡಲಾಗಿದೆ, ಆಲೂ ಪರಾಠಾ ಮತ್ತು ಕಚೋರಿಯನ್ನು ಕ್ರಮವಾಗಿ ಚಂಡೀಗಢ ಮತ್ತು ಕೋಲ್ಕತ್ತಾದಲ್ಲಿ ಅತೀ ಹೆಚ್ಚುಗಿ ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.



Click it and Unblock the Notifications
