Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
Year Ender 2024: ಈ ವರ್ಷ ಭಾರತೀಯರು ಗೂಗಲ್‌ನಲ್ಲಿ ಹುಡುಕಾಡಿದ ತಾಣಗಳು ಯಾವುದು ಗೊತ್ತಾ?
2024ನೇ ವರ್ಷ ಮುಗಿಯುತ್ತಾ ಬಂದಿದೆ. 2025ನ್ನು ನಾವು ಸ್ವಾಗತಿಸಲು ಸಜ್ಜಾಗಿದ್ದೇವೆ, 2024ರ ನೆನಪುಗಳನ್ನು ಮೆಲುಕು ಹಾಕುವ ಸಮಯದಲ್ಲಿ ನಾವಿದ್ದೇವೆ. ಈ ವರ್ಷ ಜನರು ಏನೆಲ್ಲಾ ಕೆಲಸಗಳ ಮಾಡಿದ್ದಾರೆ ಅಂತಹ ವಿಶೇಷ ಕೆಲಸಗಳನ್ನು ನೆನೆಯುವ ಸಮಯವಿದು. ಹಾಗೆ ನಾವು ವರ್ಷವಿಡೀ ಬಹಳಷ್ಟು ಕೆಲಸಗಳನ್ನು ಮಾಡುತ್ತೇವೆ ಮತ್ತು ಈಗ ವರ್ಷವು ಕೊನೆಗೊಳ್ಳಲಿರುವುದರಿಂದ ವರ್ಷವಿಡೀ ಮಾಡಿದ ಎಲ್ಲಾ ಕೆಲಸಗಳನ್ನು ನೆನಪಿಟ್ಟುಕೊಳ್ಳಲು ಇದು ಒಂದು ಅವಕಾಶವಾಗಿದೆ.
ಇನ್ನು ಜನರು ಈ ವರ್ಷ ವಿಶ್ವದ ಪ್ರಮುಖ ಪ್ರವಾಸಿಗ ತಾಣಗಳಿಗೆ ಭೇಟಿ ನೀಡಿರುವುದನ್ನು ಗೂಗಲ್ ತನ್ನ ಪಟ್ಟಿಯಲ್ಲಿ ವಿವರಿಸಿದೆ. ಜನರು ಅತೀ ಹೆಚ್ಚು ಬಾರಿ ಜನರು ವಿಶ್ವದ ಈ ಪ್ರವಾಸಿ ತಾಣಗಳನ್ನು ಹುಡುಕಾಡಿದ್ದಾರೆ. ವಿಶ್ವದಾದ್ಯಂತ ಹುಡುಕಲಾದ ಟಾಪ್ 10 ವಿಷಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶ್ವದ ಯಾವೆಲ್ಲಾ ಸ್ಥಳಗಳಿವೆ ಎಂಬುದನ್ನು ನೀವು ಸಹ ತಿಳಿದುಕೊಳ್ಳಿ.

ಭಾರತೀಯರು ಗೂಗಲ್ ಸಹಾಯ ಪಡೆದು ಹುಡುಕಿರುವ ವಿಶ್ವದ ಟಾಪ್ 10 ಸ್ಥಳಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಅಜೆರ್ಬೈಜಾನ್
ಕೆಲವು ವರ್ಷಗಳಿಂದ ಅಜೆರ್ಬೈಜಾನ್ ನೆಚ್ಚಿನ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತಿದೆ. ಪ್ರಪಂಚ ಪರ್ಯಟನೆ ಮಾಡುವವರು ಮೊದಲಿಗೆ ಈಗ ಅಜೆರ್ಬೈಜಾನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಜೆರ್ಬೈಜಾನ್ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ದೇಶವಾಗಿದೆ. ಅದರ ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯಿಂದಾಗಿ ಜನರು ಅದರತ್ತ ಆಕರ್ಷಿತರಾಗಿದ್ದಾರೆ. ಇಲ್ಲಿ ಭೇಟಿ ನೀಡಲು ಯೋಗ್ಯವಾದ ಅನೇಕ ಸ್ಥಳಗಳಿವೆ, ಅಲ್ಲಿ ನೀವು ಅದ್ಭುತ ರಜಾದಿನವನ್ನು ಕಳೆಯಬಹುದು. ಹಾಗೆ ಅಜೆರ್ಬೈಜಾನ್ ಪ್ರವಾಸಿಗರನ್ನು ಅತ್ಯಂತ ಆಧರರಿಂದ ಭರಮಾಡಿಕೊಳ್ಳುತ್ತದೆ. ಹಾಗೆ ಕಡಿಮೆ ಹಣದಲ್ಲಿ ಅಲ್ಲಿನ ಪ್ರವಾಸ ಮುಗಿಸಬಹುದಾದ ಒಂದು ದೇಶವಾಗಿದೆ. ಹೀಗಾಗಿ ಈ ವರ್ಷ ಭಾರತೀಯರು ಅತೀ ಹೆಚ್ಚಾಗಿ ಗೂಗಲ್‌ನಲ್ಲಿ ಅಜೆರ್ಬೈಜಾನ್ ಕುರಿತು ಹುಡುಕಾಡಿದ್ದಾರೆ.
ಬಾಲಿ
ಹೊಸದಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಿರುವವರ ಮೊದಲ ಆಯ್ಕೆ ಬಾಲಿ ಆಗಿರಲಿದೆ. ಅದ್ಭುತ ಕಡಲ ತೀರಗಳು, ನೈಟ್ ಲೈಫ್‌ಗೆ ಬಾಲಿ ಅದ್ಭುತ ಪ್ರವಾಸಿ ತಾಣವಾಗಿದೆ. ಹೀಗಾಗಿ ಯುವ ಸಮುದಾಯ ಈಗ ಬಾಲಿ ಕಡೆಗೆ ಹೆಚ್ಚಾಗಿ ಪ್ರವಾಸ ತೆರಳಲು ಇಷ್ಟಪಡುತ್ತಿದ್ದಾರೆ. ಬಹುಶಃ ಇದೇ ಕಾರಣಕ್ಕೆ 2024 ರಲ್ಲಿ ಹೆಚ್ಚು ಹುಡುಕಲ್ಪಟ್ಟ ವಿದೇಶಿ ಸ್ಥಳಗಳಲ್ಲಿ ಒಂದಾಗಿದೆ.
ಖಝಾಕಿಸ್ತಾನ್
ಆಫ್‌ಬೀಟ್ ವಿದೇಶಿ ತಾಣಗಳ ಪಟ್ಟಿಯಲ್ಲಿ ಖಝಾಕಿಸ್ತಾನ್ ಕೂಡ ಜನಪ್ರಿಯ ಆಯ್ಕೆಯಾಗಿದೆ. ಈ ವರ್ಷ ಇದನ್ನು ಭಾರತದಲ್ಲಿ ಸಾಕಷ್ಟು ಹುಡುಕಲಾಗಿದೆ. ಸಹೋವರಗಳು, ಬೆರಗುಗೊಳಿಸುವ ನೈಸರ್ಗಿಕ ಸೌಂದರ್ಯ ಈ ದೇಶದ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿವೆ. ಹೀಗಾಗಿ ಭಾರತೀಯರು ಕಡಿಮೆ ಹಣದಲ್ಲಿ ಈ ಖಜಕಿಸ್ತಾನ್ ಪ್ರವಾಸ ಕೈಗೊಳ್ಳಲು ಮುಂದಾಗುತ್ತಿದ್ದಾರೆ.
ಜಾರ್ಜಿಯಾ
ಹಲವು ಐತಿಹಾಸಿಕ ಸ್ಮಾರಕಗಳು, ಸಾಹಸಮಯ ದಿನಗಳ ಕಳೆಯಬೇಕೆಂದರೆ ನೀವು ಚಾರ್ಜಿಯಾ ಸುತ್ತಾಡಬೇಕು. ಈ ದೇಶವು ತನ್ನ ಸೌಂದರ್ಯ, ವಾಸ್ತುಶಿಲ್ಪ ಮತ್ತು ವೈನ್ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಹೀಗಾಗಿ ಭಾರತೀಯರು ಕೂಡ ಈ ದೇಶವನ್ನು ಬಹಳಷ್ಟು ಹುಡುಕಾಡಿದ್ದಾರೆ.
ಮಲೇಷ್ಯಾ
ಮಲೇಷ್ಯಾದ ಸೌಂದರ್ಯವು ಯಾವಾಗಲೂ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಾರತೀಯ ಪ್ರವಾಸಿಗರು ವಿಶೇಷವಾಗಿ ಮಲೇಷ್ಯಾ ಕಡೆಗೆ ಹೆಚ್ಚು ಪ್ರವಾಸ ಹೊರಡುತ್ತಾರೆ. ಕೌಲಲಾಂಪೂರ್ ಟವರ್‌ಗಳು, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಸೌಂದರ್ಯ ಸವಿಯುವ ಉದ್ದೇಶದಿಂದ ಜನರು ಅಲ್ಲಿಗೆ ಹೆಚ್ಚಾಗಿ ಪ್ರವಾಸ ಹೊರಡುತ್ತಾರೆ. ಇವಿಷ್ಟು ಭಾರತೀಯರು ಈ ವರ್ಷ ಅತೀ ಹೆಚ್ಚು ಗೂಗಲ್‌ನಲ್ಲಿ ಹುಡುಕಾಡಿದ ಪ್ರವಾಸಿ ತಾಣಗಳಾಗಿವೆ.



Click it and Unblock the Notifications