Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Year ender 2024: ಈ ವರ್ಷ ಹೊರಬಿದ್ದ ವೈಜ್ಞಾನಿಕ ಆವಿಷ್ಕಾರಗಳಿವು..!!
2024 ಮುಗಿಯುತ್ತಾ ಬಂದಿದೆ. 2025ನ್ನು ನಾವು ಸ್ವಾಗತಿಸಲು ಸಜ್ಜಾಗಿದ್ದೇವೆ, 2024ರ ನೆನಪುಗಳನ್ನು ಮೆಲುಕು ಹಾಕುವ ಸಮಯದಲ್ಲಿ ನಾವಿದ್ದೇವೆ. ಈ ವರ್ಷ ಹಲವು ಕ್ಷೇತ್ರದಲ್ಲಿ ಹಲವು ರೀತಿಯ ಘಟನೆಗಳು ಅಚ್ಚರಿಗಳು ನಡೆದಿವೆ. ಅದರಲ್ಲೂ ವಿಜ್ಞಾನದಲ್ಲಿ ಹತ್ತು ಹಲವು ಅಚ್ಚರಿ ಹಾಗೂ ಹೊಸ ಸಂಶೋಧನೆಗಳು ಈ ವರ್ಷ ಹೊರಬಿದ್ದಿವೆ.
ಅದರಲ್ಲೂ ಯಾರು ಊಹಿಸದಂತಹ ಕೆಲವು ವಿಚಾರಗಳು 2024ರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ನಾವಿಂದು 2024ರಲ್ಲಿ ಸಂಭವಿಸಿದಂತಹ ಪ್ರಮುಖ ವೈಜ್ಞಾನಿಕ ಆವಿಷ್ಕಾರಗಳ ಕುರಿತು ತಿಳಿದುಕೊಳ್ಳೋಣ. ಮುಖ್ಯಾವಾಗಿ ಬಾಹ್ಯಾಕಾಶದಲ್ಲಿ ಉಂಟಾಗಿದ್ದ ಹೊಸ ಸಂಶೋಧನೆಗಳು ಈ ವರ್ಷ ಬಹಳ ಗಮನ ಸೆಳೆದಿವೆ.

ಮಂಗಳ ಗ್ರಹದಲ್ಲಿ ನೀರಿನ ಆವಿಷ್ಕಾರ
ಮಂಗಳನಲ್ಲಿ ನೀರಿನ ಅಂಶವಿದೆಯೇ. ಅಲ್ಲಿ ಜೀವಿಗಳು ನೆಲೆಸಿದ್ದವೇ ಎಂಬುದನ್ನು ತಿಳಿಯುವ ಉದ್ದೇಶದಿಂದ ನಾಸಾ ದಶಕಗಳಿಂದ ಸಂಶೋಧನೆಯಲ್ಲಿ ತೊಡಗಿದೆ. ಆದ್ರೆ ಈ ವರ್ಷ ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಕಾಲೋಚಿತ ನೀರಿನ ಪುರಾವೆಗಳನ್ನು ಪತ್ತೆ ಮಾಡಿತ್ತು. ಅಲ್ಲಿ ಮಂಜುಗಡ್ಡೆಯಂತಹ ರಚನೆಯಲ್ಲಿ ಹಿಂದೆ ನೀರು ಇರುವುದು ಸಾಬೀತು ಮಾಡಲು ಹಲವು ಪುರಾವೆಗಳು ಸಿಕ್ಕಿದ್ದವು. ಹಾಗೆ ಮಂಗಳನ ಅಂಗಳಲ್ಲಿ ಈ ಹಿಂದೆ ದೊಡ್ಡ ನದಿಗಳು ಹರಿದಿದ್ದವು ಎಂಬುದು ಕೂಡ ಈ ವೇಳೆ ತಿಳಿದುಬಂದಿತ್ತು. ಹಾಗೆ ಭೂಮಿ ಹೊರತುಪಡಿಸಿ ಮಂಗಳನಲ್ಲಿ ಜೀವನಕ್ಕಾಗಿ ಹುಡುಕಾಟದ ಭರವಸೆಗೆ ಮತ್ತಷ್ಟು ಬಲ ನೀಡಿತ್ತು.
ಮೊಟ್ಟ ಮೊದಲ ಬ್ಲಾಕ್ ಹೋಲ್ ಫೋಟೋ
ಶತಮಾನದಿಂದ ಮಾನವನ ಕುತೂಹಲಗಳಿಗೆ ಕಾರಣವಾಗಿ ಇಂದಿಗೂ ಹತ್ತಾರು ರಹಸ್ಯಗಳ ತನ್ನಲ್ಲಿಟ್ಟುಕೊಂಡಿರುವ ಬ್ಲಾಕ್ ಹೋಲ್ ಚಿತ್ರ ಇದೇ ಮೊದಲ ಬಾರಿಗೆ ಹೊರಬಿದ್ದಿತ್ತು. ಈವೆರೆಗೂ ಬ್ಲಾಕ್ ಹೋಲ್ ಒಂದು ಕಲ್ಪನೆ ಎಂದು ನಂಬಲಾಗಿತ್ತು, ಹಾಗೆ ಸಿನಿಮಾಗಳಲ್ಲಿ, ಚಿತ್ರಗಳಲ್ಲಿ ಮಾತ್ರ ನಾವು ನೋಡಿದ್ದೆವು. ಆದ್ರೆ ಮೊಟ್ಟ ಮೊದಲ ಬಾರಿಗೆ ಬ್ಲಾಕ್ ಹೋಲ್‌ನ ಫೋಟೊ ಲಭ್ಯವಾಗಿತ್ತು. ಇದು ಇಡೀ ವಿಶ್ವದ ಜನರ ಕುತೂಹಲ ಕೆರಳಿಸಿತ್ತು.
ಭೂಮಿ ಹೋಲುವ ಎಕ್ಸೋಪ್ಲಾನೆಟ್
ಖಗೋಳಶಾಸ್ತ್ರಜ್ಞರು KMT-2020-BLG-0414 ಎಂದು ಹೆಸರಿಸಿರುವ ಭೂಮಿಯನ್ನೇ ಹೋಲುವ ಗ್ರಹ ಪತ್ತೆ ಮಾಡಿದರು. ಇದನ್ನು ಎಕ್ಸೋಪ್ಲಾನೆಟ್ ಎಂದು ಕರೆಯಲಾಗಿತ್ತು. ಇದು ನಮ್ಮ ಗ್ರಹ ಹೊರತುಪಡಿಸಿ ಹೊರಗೆ ಕೂಡ ಜೀವಿಗಳಿವೆ ಎಂಬ ಅಧ್ಯಯನಕ್ಕೆ ಮತ್ತಷ್ಟು ಬಲ ನೀಡಿತು.
ಜೀನ್ ಎಡಿಟಿಂಗ್
ಈ ವರ್ಷ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಾಳಾದವು ಅದರಲ್ಲೂ ಈ ಜೀನ್ ಎಡಿಟಿಂಗ್ ಸಂಶೋಧನೆ ಬಹುದೊಡ್ಡ ಮೈಲಿಲ್ಲಾಗಿದೆ. ಒಂದು ಜೀನ್‌ನ ಎಡಿಟಿಂಗ್ ಮತ್ತು ಜೀನ್‌ಗಳ ಅಭಿವೃದ್ಧಿಗೆ ಹೊಸ ಕೊಡುಗೆ ನೀಡಲಾಗಿದೆ.
ನಾಸಾದ ಆರ್ಟಿಮಿಸ್ ಮಿಷನ್
ಈ ಯೋಜನೆಯು ಏಪ್ರಿಲ್ 2026 ರಲ್ಲಿ ನಡೆಯಲಿದೆ. ಓರಿಯನ್ ಬಾಹ್ಯಾಕಾಶ ನೌಕೆಯ ಮೊದಲ ಸಿಬ್ಬಂದಿ ಮಿಷನ್ ಆಗಿರುತ್ತದೆ. ನಾಲ್ಕು ಗಗನಯಾತ್ರಿಗಳು ಚಂದ್ರನತ್ತ ಹಾರಲಿದ್ದು, ಮರಳಿ ಭೂಮಿಗೆ ಬರಲಿದ್ದಾರೆ. ಈ ಕುರಿತ ಅಚ್ಚರಿಯ ಬೆಳವಣಿಗೆಗಳು 2024ರಲ್ಲಿ ಸಂಭವಿಸಿದೆ. ಈ ಗಗನಯಾತ್ರಿಗಳಿಗೆ ಈಗಾಗಲೇ ತರಬೇತಿಯೂ ನಡೆಯುತ್ತಿದೆ.
ಬ್ರಹ್ಮಾಂಡದ ಅತ್ಯಂತ ಹಳೆಯ ನಕ್ಷತ್ರ ಪತ್ತೆ
ಖಗೋಳಶಾಸ್ತ್ರಜ್ಞರು ಬ್ರಹ್ಮಾಂಡದ ಅತ್ಯಂತ ಹಳೆಯ ನಕ್ಷತ್ರಗಳ ರಹಸ್ಯಗಳನ್ನು ಬಹಿರಂಗಪಡಿಸಿದರು. ಇದು ಈ ಬ್ರಹ್ಮಾಂಡದ ವಿಕಸನದ ಸಮಯದಿಂದಲೂ ಅದರ ಒಳನೋಟಗಳ್ನು ತನ್ನಲ್ಲಿಟ್ಟುಕೊಂಡಿದೆ ಎಂದು ವಿವರಿಸಲಾಗಿತ್ತು.



Click it and Unblock the Notifications
