Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Year Ender 2024: ಈ ವರ್ಷ ಅತೀ ಹೆಚ್ಚು ವೀಕ್ಷಣೆ ಕಂಡ ಯೂಟ್ಯೂಬ್ ವಿಡಿಯೋ ಇದು..!
Year Ender 2024: ಹೊಸ ವರ್ಷವನ್ನು ಆಗಮಿಸಲು ಇಡೀ ವಿಶ್ವವೇ ಕಾದು ಕುಳಿತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷವನ್ನು ನಾವು ಸ್ವಾಗತಿಸಲಿದ್ದೇವೆ. ಹಾಗೆ 2024ಕ್ಕೆ ಗುಡ್ ಬೈ ಹೇಳಲಿದ್ದೇವೆ. ಇನ್ನು 2024ರಲ್ಲಿ ನಾವು ಎಷ್ಟೆಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದ್ದೇವೆ. ಹಲವು ಹೊಸತು, ಹಲವು ಮೊದಲುಗಳಿಗೆ ನಾವು ಕಾರಣರಾಗಿದ್ದೇವೆ.
ಇನ್ನು ಭಾರತ ಮಾತ್ರವಲ್ಲ ಇಡೀ ವಿಶ್ವ 2024ರಲ್ಲಿ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಅತ್ಯಧಿಕ ಏರಿಕೆ ಕಂಡಿದೆ. ಹಾಗೆ ಯೂಟ್ಯೂಬ್ ಬಳಕೆದಾರರ ಸಂಖ್ಯೆ ಕೂಡ ಏರಿಕೆ ಕಂಡಿದೆ. ಭಾರತದಲ್ಲಿಯೂ ಕೋಟಿ ಕೋಟಿ ಮಂದಿ ಯೂಟ್ಯೂಬ್ ವೀಕ್ಷಿಸಿದ್ದಾರೆ. ಅದರಲ್ಲೂ ಹಲವು ವಿಡಿಯೋಗಳು ಈ ವರ್ಷ ವೈರಲ್ ಆಗಿದ್ದವು, ಅದರಲ್ಲೂ 2024ರಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡಿರುವ ವಿಡಿಯೋಗಳು ಯಾವುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

2024ನೇ ವರ್ಷ ಮುಗಿಯುತ್ತಿದ್ದಂತೆ ಯೂಟ್ಯೂಬ್ ಭಾರತದಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ವಿಡಿಯೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವಿಡಿಯೋಗಳು ಈ ವರ್ಷ ಮಿಲಿಯನ್ ಮಿಲಿಯನ್ ವೀಕ್ಷಣೆ ಕಂಡಿವೆ. ಹಾಗೆ ವೈರಲ್ ಆಗಿ ಎಲ್ಲರ ಗಮನ ಸೆಳೆದಿವೆ. ಹಾಗಾದ್ರೆ ಈ ವರ್ಷ ಅತೀ ಹೆಚ್ಚು ವೀಕ್ಷಣೆ ಕಂಡ ವಿಡಿಯೋಗಳು ಯಾವುದು ಎಂಬುದರ ಪಟ್ಟಿ ಇಲ್ಲಿದೆ.
ಅನಂತ್ ಅಂಬಾನಿ ಮದುವೆ
ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಡುವಿನ ವಿವಾಹ ಮಹೋತ್ಸವವು ಈ ವರ್ಷ ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡಿರುವ ವಿಡಿಯೋಗಳಲ್ಲಿ ಒಂದಾಗಿದೆ. ಹಲವು ದಿನಗಳ ಕಾಲ ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗಿರುವ ವಿಡಿಯೋ ಆಗಿದೆ. ಅಂಬಾನಿ ಮತ್ತು ವಿವಾಹ ಎಂಬ ಎರಡು ಹ್ಯಾಷ್ ಟ್ಯಾಗ್ ಮಾಡಲಾದ ವಿಡಿಯೋಗಳು ಬರೋಬ್ಬರಿ 6.5 ಬಿಲಿಯನ್ ವೀಕ್ಷಣೆ ಗಳಿಸಿದೆ. ಇದು 2024ರ ಅತೀ ದೊಡ್ಡ ಡಿಜಿಟಲ್ ಕ್ಷಣಗಳಲ್ಲಿ ಒಂದಾಗಿದೆ.
ಮೋಯೆ ಮೋಯೆ ಸಾಂಗ್
ರೀಲ್ಸ್‌ಗಳಲ್ಲಿ ವೈರಲ್ ಆಗಿದ್ದ ಮೋಯೆ ಮೋಯೆ ಸಾಂಗ್ 4.5 ಬಿಲಿಯನ್ ವೀಕ್ಷಣೆ ಕಂಡಿದೆ. ಇದು ಯುಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಣೆ ವಿಡಿಯೋಗಳಲ್ಲಿ ಎರಡನೇ ಸ್ಥಾನದಲ್ಲಿದೆ.
ಕ್ರಿಕೆಟ್ ವಿಡಿಯೋಗಳು
ಭಾರತದಲ್ಲಿ ಕ್ರಿಕೆಟ್ ಎಷ್ಟೊಂದು ಫೇಮಸ್ ಎಂಬುದನ್ನು ನೀವೆಲ್ಲಾ ತಿಳಿದಿದ್ದೀರಿ. ಭಾರತದಲ್ಲಿ ಕ್ರಿಕೆಟ್ ಕೂಡ ಒಂದು ಧರ್ಮವಾಗಿದೆ. ಈ ವರ್ಷ ಯುಟ್ಯೂಬ್‌ನಲ್ಲಿ ಐಸಿಸಿ ಪುರುಷರ T20 ವಿಶ್ವಕಪ್, ಐಪಿಎಲ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಂತಹ ಈವೆಂಟ್‌ಗಳು ಶತಕೋಟಿ ವೀಕ್ಷಣೆಗಳನ್ನು ಗಳಿಸುವುದರೊಂದಿಗೆ ಯೂಟ್ಯೂಬ್‌ನಲ್ಲಿ ಕ್ರಿಕೆಟ್ ಪ್ರೇಮಿಗಳು ದಾಖಲೆ ಬರೆದಿದ್ದಾರೆ. ಈ ಮೂಲಕ ಈ ಕ್ರೀಡಾ ವಿಡಿಯೋಗಳು ಮೂರನೇ ಸ್ಥಾನದಲ್ಲಿವೆ.
ದಿಲ್ಜಿತ್ ದೋಸಾಂಜ್
ಈ ಹೆಸರು ದಕ್ಷಿಣ ಭಾರತದಲ್ಲಿ ಅಷ್ಟೊಂದು ಜನಪ್ರಿಯವಾಗಿಲ್ಲದಿರಬಹುದು, ಆದರೆ ಉತ್ತರ ಭಾರತದಲ್ಲಿ ದೊಡ್ಡ ಅಭಿಮಾನಿಗಳ ಹೊಂದಿರುವ ಸಿಂಗರ್ ಆಗಿದ್ದಾರೆ. ಪಂಜಾಬಿ ಗಾಯಕನ ವಿಡಿಯೋಗಳು ಬರೋಬ್ಬರಿ 4 ಬಿಲಿಯನ್ ವೀಕ್ಷಣೆ ಕಂಡು 4ನೇ ಸ್ಥಾನ ಪಡೆದುಕೊಂಡಿದೆ.
2024ರಲ್ಲಿ ಅತೀ ಹೆಚ್ಚು ಚಂದಾದಾರರ ಹೊಂದಿರುವ ಭಾರತೀಯ ಯೂಟ್ಯೂಬರ್‌ಗಳು ಯಾರು?
ಸುಜಲ್ ಥಕ್ರಾಲ್ 33.5 ಮಿಲಿಯನ್ ಚಂದಾದಾರರನ್ನು ಮತ್ತು ಫಿಲ್ಮಿ ಸೂರಜ್ ನಟ 32.5 ಮಿಲಿಯನ್ ಚಂದಾದಾರರನ್ನು ಪಡೆದಿದ್ದಾರೆ. ಇವರಿಬ್ಬರು ಈ ವರ್ಷ ಅತೀ ಹೆಚ್ಚು ಚಂದಾದಾರರನ್ನು ಪಡೆದ ಯೂಟ್ಯೂಬರ್‌ಗಳಾಗಿದ್ದಾರೆ.
ಮಹೇಶ್ ಬಾಬು ಅಭಿನಯದ ಗುಂಟೂರ್ ಕರಮ್‌ನ ಕುರ್ಚಿ ಮತ್ತಟ್ಟಪೆಟ್ಟಿ ಮತ್ತು ಆಜ್ ಕಿ ರಾತ್ ನಂತಹ ಹಾಡುಗಳು ಹೆಚ್ಚಿನ ಜನರ ನೆಚ್ಚಿನ ಹಾಡುಗಳಾಗಿವೆ. ಈ ಎರಡು ವಿಡಿಯೋಗಳನ್ನು ಕೋಟಿ ಕೋಟಿ ಜನರು ವೀಕ್ಷಿಸಿದ್ದಾರೆ.



Click it and Unblock the Notifications