Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Year Ender 2024: ಈ ವರ್ಷ ಜಿಐ ಟ್ಯಾಗ್ ಪಡೆದ ಭಾರತದ ಆಹಾರ ಪದಾರ್ಥಗಳಿವು..!
ಭಾರತ ವಿವಿಧತೆಯಿಂದ ಕೂಡಿರುವ ದೇಶ. ಹೀಗಾಗಿ ನೀವು ಒಂದೊಂದು ಭಾಗದಲ್ಲಿ ಒಂದೊಂದು ಭಾಷೆ, ಸಂಸ್ಕೃತಿ, ಆಚರಣೆ, ಆಹಾರ ಕ್ರಮ ಹೀಗೆ ಎಲ್ಲವೂ ಬದಲಾಗುವುದನ್ನು ನೋಡಬಹುದು. ಹೀಗಾಗಿ ಭಾರತದ ಯಾವುದೇ ಮೂಲೆಗೆ ನೀವು ಹೋದರು ಅಲ್ಲೊಂದು ಹೊಸ ಸಂಸ್ಕೃತಿ ನಿಮಗೆ ಎದುರಾಗುತ್ತದೆ.
ಇನ್ನು ಆಹಾರದ ವಿಚಾರದಲ್ಲಿ ಭಾರತ ವಿಭಿನ್ನ ದೇಶ. 1 ಕಿಮೀ ದೂರ ಸಾಗಿದರ ಒಂದೊಂದು ವಿಶೇಷ ಖಾದ್ಯ ಸವಿಯಲು ಸಿಗುತ್ತದೆ. ಹೀಗಾಗಿ ಭಾರತದ ಖಾದ್ಯ ವಿಶ್ವದೆಲ್ಲೆಡೆ ಫೇಮಸ್ ಆಗಿದೆ. ಇನ್ನು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಒಂದೊಂದು ಫುಡ್ ಸವಿಯಬಹುದು. ಹಾಗೆ ಒಂದೊಂದು ಕಡೆ ಒಂದೊಂದು ಖಾದ್ಯ ಫೇಮಸ್ ಆಗಿರುವುದು ಕೂಡ ನಾವು ನೋಡಬಹುದು.

ಹಾಗೆ ಈ ವರ್ಷ 2024ರಲ್ಲಿ ಜಿಐ ಮಾನ್ಯತೆ ಪಡೆದ ಹಲವು ಫುಡ್‌ಗಳನ್ನು ನಾವಿಂದು ನೋಡೋಣ. ಈ ವರ್ಷ ಹತ್ತು ಹಲವು ಫುಡ್‌ಗಳಿಗೆ ಈ ಮಾನ್ಯತೆ ಸಿಕ್ಕಿದೆ. ಜಿಐ (Geographical Indication) ಮೂಲಕ ಇಡೀ ದೇಶದಲ್ಲಿ ಸುದ್ದಿಯಾದ ಕೆಲವು ಖಾದ್ಯವನ್ನು ನಾವಿಂದು ತಿಳಿದುಕೊಳ್ಳೋಣ.
2024 ರಲ್ಲಿ, ಭಾರತದ ಒಟ್ಟು 11 ವಿಶಿಷ್ಟ ಆಹಾರಗಳು ಜಿಐ ಟ್ಯಾಗ್ ಪಡೆದಿವೆ. ಇವು ಸಾಂಸ್ಕೃತಿಕ ಪರಂಪರೆ ಮತ್ತು ಪ್ರಾದೇಶಿಕ ಪ್ರಾಮುಖ್ಯತೆಗಳ ಒಳಗೊಂಡಿರುವ ಆಹಾರ ಕ್ರಮಗಳಾಗಿವೆ. ಹಾಗಾದ್ರೆ ಯಾವೆಲ್ಲಾ ಆಹಾರಗಳಿಗೆ ಈ ಮಾನ್ಯತೆ ಸಿಕ್ಕದೆ ನೋಡಿ.
ಒಡಿಶಾದ ಕೆಂಪು ಇರುವೆ ಚಟ್ನಿ
ಈ ವರ್ಷ ಬಹಳ ಅಚ್ಚರಿಯಾಗಿ ಜಿಐ ಮಾನ್ಯತೆ ಪಡೆದ ಆಹಾರದ ಎಂದರೆ ಒಡಿಶಾದ ಕೆಂಪು ಇರುವೆ ಚಟ್ನಿಯಾಗಿದೆ. ಒಡಿಶಾದ ಮಯೂರ್ಭಂಜ್ ಕಾಡುಗಳಲ್ಲಿ ಕಂಡುಬರುವ ಕೆಂಪು ಇರುವೆಗಳಿಂದ ತಯಾರಿಸಲಾಗುವ ಈ ಚಟ್ನಿಗೆ ಜಿಐ ಮಾನ್ಯತೆ ನೀಡಲಾಗಿದೆ. ಔಷಧೀಯ ಮತ್ತು ಪೌಷ್ಟಿಕಾಂಶದ ಕಾರಣಕ್ಕೆ ಈ ಕೆಂಪು ಇರುವೆಯ ಚಟ್ನಿ ಫೇಮಸ್ ಆಗಿದೆ. 2 ಜನವರಿ 2024 ರಂದು, ಈ ವಿಶಿಷ್ಟವಾದ ಚಟ್ನಿಗೆ ಜಿಐ ಟ್ಯಾಗ್ ನೀಡಲಾಗಿದೆ.
ಒಡಿಶಾದ ಕರಿ ಜೀರಾ ಅಕ್ಕಿ
ಒಡಿಶಾದ ಬುಡಕಟ್ಟು ರೈತರು ಈ ಕಪ್ಪು-ಬಣ್ಣದ ಭತ್ತದ ತಳಿಯನ್ನು 1000 ವರ್ಷಗಳಿಗೂ ಹೆಚ್ಚು ಕಾಲ ಸಂರಕ್ಷಿಸಿದ್ದಾರೆ ಮತ್ತು ಇದು ಅದರ ರಚನೆ ಮತ್ತು ಪರಿಮಳಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಈ ಅಕ್ಕಿಗೂ ಕೂಡ ಜನವರಿಯಲ್ಲಿ ಐಜಿ ಟ್ಯಾಗ್ ನೀಡಲಾಗಿದೆ.
ಮಹಾರಾಷ್ಟ್ರದ ವಸ್ಮತ್ ಅರಶಿಣ
ಮಹಾರಾಷ್ಟ್ರದಲ್ಲಿನ ವಾಸ್ಮತ್ ಅಥವಾ ಬಾಸ್ಮತ್ ಅರಶಿಣ ವಿಶಿಷ್ಟವಾದ ಸುವಾಸನೆ ಹಾಗೂ ರುಚಿಯಿಂದ ಗುರುತಿಸಲ್ಪಟ್ಟಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಇದಕ್ಕೆ ಜಿಐ ಟ್ಯಾಗ್ ನೀಡಲಾಗಿದೆ.
ಅರುಣಾಚಲ ಪ್ರದೇಶದ ಸಿಂಗ್ಫೊ ಫಲಪ್ ಟೀ
ಸಿಂಗ್ಫೋ ಬುಡಕಟ್ಟಿನವರಿಂದ ತಯಾರಿಸಲ್ಪಟ್ಟ ಸಿಂಗ್ಫೊ ಫಲಪ್ ಟೀ ಮಣ್ಣು ಮತ್ತು ಮರದ ಸುವಾಸನೆಯೊಂದಿಗೆ ಸಾಂಪ್ರದಾಯಿಕ ಕಪ್ಪು ಟೀ ಆಗಿದೆ. ಜನವರಿಯಲ್ಲಿ ಇದಕ್ಕೂ ಕೂಡ ಜಿಐ ಟ್ಯಾಗ್ ನೀಡಲಾಗಿದೆ.
ಮಧ್ಯಪ್ರದೇಶದ ರತ್ಲಾಮ್ ರಿಯಾವಾನ್ ಲಹ್ಸುನ್
ಮಧ್ಯಪ್ರದೇಶದಲ್ಲಿ ಬೆಳೆಯುವ ಅತ್ಯಂತ ಗಾಢವಾದ ಸುವಾಸನೆಯೊಂದಿಗೆ ಗಮನ ಸೆಳೆಯುತ್ತದೆ. ಇದಕ್ಕೂ ಕೂಡ ಮಾರ್ಚ್‌ನಲ್ಲಿ ಜಿಐ ಟ್ಯಾಗ್ ನೀಡಲಾಗಿದೆ.
ತ್ರಿಪುರದ ಮತಾಬರಿ ಪೇಡಾ
ರುಚಿಯಿಂದ ಬಹಳ ಹೆಸರುವಾಸಿಯಾಗಿರುವ ತ್ರಿಪುರದ ಮತಾಬರಿ ಪೇಡಾ ಈ ಬಾರಿ ಜಿಐ ಟ್ಯಾಗ್ ಪಡೆದುಕೊಂಡಿದೆ. ತ್ರಿಪುರಾದ ಗೋಮತಿ ಜಿಲ್ಲೆಯ ತ್ರಿಪುರಸುಂದರಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವಾಗಿದೆ ಮತ್ತು ಈ ವರ್ಷದ ಮಾರ್ಚ್‌ನಲ್ಲಿ ಜಿಐ ಟ್ಯಾಗ್ ನೀಡಲಾಯಿತು. ಇದಿಷ್ಟೆ ಅಲ್ಲದೆ ಈ ಸಾಲಿಗೆ ಮೇಘಾಲಯದ ಲಕಾಡಾಂಗ್ ಅರಿಶಿನ, ಉತ್ತರ ಪ್ರದೇಶದ ಜಾನ್ಪುರ್ ಇಮಾರ್ತಿ ಸಿಹಿ ತಿಂಡಿ, ಉತ್ತರ ಪ್ರದೇಶದ ಬನಾರಸ್ ಥಂಡೈಗೂ ಕೂಡ ಈ ವರ್ಷ ಜಿಐ ಮಾನ್ಯತೆ ಸಿಕ್ಕಿದೆ.



Click it and Unblock the Notifications











