Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Year Ender 2024: ಈ ವರ್ಷ ಭೂಮಿ ಹಾಗೂ ಬಾಹ್ಯಾಕಾಶದ ಅಚ್ಚರಿಗೆ ಕಾರಣವಾದ ಘಟನೆಗಳಿವು..!
2024ರಲ್ಲಿ ಈ ಜಗತ್ತಿನಲ್ಲಿ ಎಷ್ಟೆಲ್ಲಾ ಘಟನೆಗಳು ನಡೆದಿವೆ. ಹತ್ತು ಹಲವು ನೈಸರ್ಗಿಕ ವಿಕೋಪಗಳು ಸಹ ಸಂಭವಿಸಿವೆ. ಇತ್ರೀಚಿಗೆ ಇಡೀ ವಿಶ್ವಕ್ಕೆ ಕಾಡುತ್ತಿರುವಂತಹ ಸಮಸ್ಯೆ ಅಂದರೆ ಜಾಗತಿಕ ತಾಪಮಾಣ ಏರಿಕೆ. ಜಗತ್ತಿನ ಬಹಳಷ್ಟು ಕಡೆ ತಾಪಮಾನ ಏರಿಕೆ ದೊಡ್ಡ ಪಿಡುಗಾಗಿ ಕಾಡಿದೆ. ಹಾಗೆ ಪ್ರವಾಹ, ಬರ, ಅತೀವೃಷ್ಟಿ, ಅನಾವೃಷ್ಟಿಗಳಿಂದ ಹಲವು ದೇಶಗಳು ತತ್ತರಿಸಿರುವ ಉದಾಹರಣೆ ಕೂಡ ಇದೆ.
ಹಾಗೆ 2024ರಲ್ಲಿ ನಮ್ಮ ಭೂಮಿಯ ಮೇಲೆ ಹಾಗೂ ಸೌರ ಮಂಡಲದಲ್ಲಿ ಹಲವು ರೀತಿಯ ಘಟನೆಗಳು ಸಂಭವಿಸಿವೆ. ಈ ಘಟನೆಗಳಿಂದ ಮೂಲ ರಚನೆಗಳು, ಹಲವು ಬದಲಾವಣೆಗಳು ಕೂಡ ಸಂಭವಿಸಿವೆ. ಇಂತಹ ಹಲವು ಬದಲಾವಣೆಗೆ ಕಾರಣವಾಗಿರುವ ಕೆಲವೊಂದು ಘಟನೆಗಳನ್ನು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಸ್ಪೇಸ್‌ನಿಂದ ತೆಗೆದಿದ್ದ ಅತ್ಯಂತ ಸುಂದರ ಚಿತ್ರಗಳು ಯಾವುದು ಎಂಬುದನ್ನು ನಾವು ತಿಳಿಯೋಣ.

ಚಿಡೋ ಚಂಡಮಾರುತ
ಈ ವರ್ಷದ ಅತ್ಯಂತ ಭೀಕರ ಚಂಡಮಾರುತಗಳಲ್ಲಿ ಚಿಡೋ ಚಂಡಮಾರುತ ಒಂದಾಗಿದೆ. ಈಸ್ಟ್ ಆಫ್ರಿಕಾದ ಮೊಜಾಂಬಿಕ್ ದೇಶದ ಮಾಪುಟೊದಲ್ಲಿ ಈ ಚಿಡೋ ಚಂಡಮಾರುತ ಅನಾಹುತ ಸೃಷ್ಟಿಸಿದೆ. ಕಳೆದ 24 ಗಂಟೆಯಲ್ಲಿ ಭೀಕರ ವೇಗ ಪಡೆದುಕೊಂಡಿರುವ ಚಿಡೋ ಅಲ್ಲಿ 73ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಹಾಗೆ ಅದರ ವಿನಾಶಕಾರಿ ವೇಗ ಗಂಟೆಗೆ 260 ಕಿ.ಮೀಟರ್‌ಗೆ ತಲುಪಿದೆ. ಇದು ಅಲ್ಲಿನ ಭೂಮಂಡಲದ ಚಿತ್ರಣವನ್ನೇ ಬದಲಿಸಿದೆ. ಈ ಚಿಡೋ ಈ ವರ್ಷ ಭೂಮಿ ಮೇಲೆ ಸಂಭವಿಸಿದ ಅತ್ಯಂತ ವಿನಾಶಕಾರಿ ಚಂಡಮಾರುತ ಎನ್ನಲಾಗಿದೆ.
ದೆಹಲಿ, ಮೆಕ್ಕಾ, ಅಥೆನ್ಸ್
ದೆಹಲಿ ಈ ವರ್ಷ ಹಲವು ವಿಚಾರವಾಗಿ ಸುದ್ದಿಯಾಗಿದ್ದ ನಗರ, ಅದರಲ್ಲೂ ವಾಯುಮಾಲಿನ್ಯದ ಕಾರಣಕ್ಕೆ ಹೆಚ್ಚು ಸುದ್ದಿಯಾಗಿತ್ತು, ಆದ್ರೆ ಈ ಮೊದಲು ದೆಹಲಿಯು ಅತ್ಯಂತ ಹೆಚ್ಚು ತಾಪಮಾನ ದಾಖಲಾದ ನಗರ ಎಂಬುದಾಗಿ ಕರೆಯಲ್ಪಟ್ಟಿತ್ತು. ಅದೇ ರೀತಿ ಮುಸ್ಲಿಂಮರ ಪವಿತ್ರ ಸ್ಥಳ ಮೆಕ್ಕಾದಲ್ಲೂ ಕೂಡ ಹೀಟ್ ವೇವ್‌ಗೆ ಹಲವರು ಪ್ರಾಣ ಕಳೆದುಕೊಂಡರು, ಅದೆ ರೀತಿ ಅಥೆನ್ಸ್ ಕೂಡ ಬಿಸಿಗಾಲಿಗೆ ಸಿಲುಕಿ ತತ್ತರಿಸಿತ್ತು.
ವಾಷಿಂಗ್ಟನ್ ಡಿಸಿಯ ಸೂರ್ಯಗ್ರಹಣ
ಈ ವರ್ಷ ಏಪ್ರಿಲ್‌ನಲ್ಲಿ ಸಂಭವಿಸಿದ್ದ ಸೂರ್ಯಗ್ರಹಣ ಇಡೀ ವಿಶ್ವದಲ್ಲಿ ಸುದ್ದಿಯಾಗಿತ್ತು. ಅದರಲ್ಲೂ ಅಮೆರಿಕದಲ್ಲಿ ಈ ಸೂರ್ಯಗ್ರಹಣ ಅದ್ಭುತವಾಗಿ ಕಾಣಿಸಿಕೊಂಡಿತ್ತು. ವಾಷಿಂಗ್ಟನ್‌ನಲ್ಲಿ ಸುಮಾರು ಶೇ.87ರಷ್ಟು ಸೂರ್ಯಗ್ರಹಣ ಗೋಚರವಾಗಿತ್ತು, ಈ ಗ್ರಹಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದ್ದವು. ಈ ಫೋಟೋವನ್ನು ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳು ಸೇರಿ ಅಮೆರಿಕನ್ ಸರ್ಕಾರದ ಅಡಿ ಕಾರ್ಯ ನಿರ್ವಹಿಸುವ ಇಲಾಖೆಗಳು ಹಂಚಿಕೊಂಡಿದ್ದವು.
ಹಬಲ್ ಟೆಲಿಸ್ಕೋಪ್‌ನ ನಕ್ಷತ್ರ
ಈ ವರ್ಷ ಹಬಲ್ ಟೆಲಿಸ್ಕೋಪ್ ಹಲವು ವಿಚಿತ್ರಗಳನ್ನು, ಸೌರ ಮಂಡಲದ ಅದ್ಭುತಗಳನ್ನು ಸೆರೆಹಿಡಿದಿದೆ. ಅದರಲ್ಲೂ R Aquarii ಎಂಬ ಬೈನರಿ ನಕ್ಷತ್ರ ಪುಂಜದ ಸ್ಪೋಟ, ಹಾಗೂ ಅದರಿಂದ ಹೊರಹೊಮ್ಮಿದ ಅನಿಲಗಳ ಚಿತ್ರಣವನ್ನು ಒದಗಿಸಿತ್ತು. ಬೈನರಿಯಲ್ಲಿನ ಮುಖ್ಯ ನಕ್ಷತ್ರವು ಕೆಂಪು ದೈತ್ಯವಾಗಿದ್ದು ಅದು ನಮ್ಮ ಸೂರ್ಯನ ಗಾತ್ರಕ್ಕಿಂತ 400 ಪಟ್ಟು ಹೆಚ್ಚು ದೊಡ್ಡದಾಗಿತ್ತು. ಈ ಪೋಟೋ ಕೂಡ ಈ ವರ್ಷ ಅಚ್ಚರಿಯ ಜೊತೆಗೆ ವೈರಲ್ ಆಗಿತ್ತಲ್ಲದೆ ಖಗೋಳಶಾಸ್ತ್ರಜ್ಞರಲ್ಲಿ ಅಚ್ಚರಿ ಮೂಡಿಸಿತ್ತು.
ಪೋಲಾರಿಸ್ ಡಾನ್ ಬಾಹ್ಯಾಕಾಶ ನಡಿಗೆ
ಬಿಲಿಯನೇರ್ ಉದ್ಯಮಿ ಜೇರೆಡ್ ಐಸಾಕ್‌ಮನ್ ಈ ವರ್ಷ ಹೊಸ ಅಧ್ಯಾಯ ಬರೆದರು. ಅವರು ಸೆಪ್ಟೆಂಬರ್ 12, 2024 ರಂದು ಪೋಲಾರಿಸ್ ಡಾನ್ ಮಿಷನ್‌ನ ಭಾಗವಾಗಿ ಮೊದಲ ಬಾರಿಗೆ ವಾಣಿಜ್ಯ ಬಾಹ್ಯಾಕಾಶ ನಡಿಗೆ ಪೂರ್ಣಗೊಳಿಸಿ ಎಲ್ಲರ ಹುಬ್ಬೇರಿಸಿದರು. ಇದು ವಿಶ್ವದ ಮೊದಲ ಖಾಸಗಿ ಗಗನಯಾತ್ರಿ ಹಾಗೂ ವಾಣಿಜ್ಯ ಬಾಹ್ಯಾಕಾಶ ಪ್ರಕ್ರಿಯೆಯಾಗಿ ಗುರುತಿಸಿಕೊಂಡಿತು. ಅವರ ಹಲವು ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದವು.



Click it and Unblock the Notifications
