Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Year Ender 2024: ಈ ವರ್ಷ ನಿಜವಾದ ಬಾಬಾ ವಂಗಾ ಭವಿಷ್ಯಗಳಿವು..!
2024ನೇ ವರ್ಷ ಅಂತ್ಯಕ್ಕೆ ನಾವೀಗ ತಲುಪಿದ್ದೇವೆ. ಇನ್ನೇನು ಕೆಲ ದಿನದಲ್ಲಿ 2025ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ನಡುವೆ 2024ರಲ್ಲಿ ನಾವು ಏನೆಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದ್ದೇವೆ ಎಂಬುದನ್ನು ಮತ್ತೀಗ ಮೆಲುಕು ಹಾಕುವ ಸಮಯವಿದು. ಅದರಲ್ಲೂ ಈ ವರ್ಷ ನಡೆದಿರುವ ಹಲವು ಘಟನೆಗಳನ್ನು ಮೊದಲೇ ಊಹಿಸಿರುವುದು ಕೂಡ ನಾವು ನೋಡಬಹುದು.
ಬಾಬಾ ವಂಗಾ ಹೆಸರು ನೀವು ಕೇಳಿರಬಹುದು ಆಕೆ ಮುಂದಾಗುವ ಘಟನೆಗಳ ಕುರಿತು ಭವಿಷ್ಯ ನುಡಿದಿರುವ ದಿವ್ಯಾಂಗ ಮಹಿಳೆ. ಪೂರ್ವ ಯೂರೋಪ್‌ನಲ್ಲಿ ಫೇಮಸ್ ಆಗಿರುವ ಆಕೆಯ ಹೆಸರು ಮುಂದೆ ನಡೆಯುವ ಘಟನಾವಳಿಗಳ ಜೊತೆಗೆ ಯಾವಾಗಲು ಕೇಳಿಸುತ್ತೆ. ಆಕೆ ಹೇಳಿರುವ ಹಲವು ಭವಿಷ್ಯಗಳು ಕೂಡ ನಿಜವಾಗಿದೆ. ಅದರಲ್ಲೂ ಅಮೆರಿಕದ ಟ್ವಿನ್ ಟವರ್ ಮೇಲಿನ ವಿಮಾನ ದಾಳಿಯನ್ನು ಆಕೆ ಮೊದಲೇ ಊಹಿಸಿದ್ದಳಂತೆ. ಆದರೆ ಆ ಭವಿಷ್ಯವನ್ನು ವಿಶ್ಲೇಷಣೆ ಮಾಡುವಲ್ಲಿ ಸೋತಿದ್ದರು ಎನ್ನಲಾಗಿದೆ.

ಹಾಗೆ ಆಕೆ 2024ರಲ್ಲಿ ನಡೆಯಲಿದೆ ಎಂದಿದ್ದ ಹಲವು ಘಟನೆಗಳು ನಿಜವಾಗಿರುವುದು ಕೂಡ ನಾವು ನೋಡಬಹುದು. ಅವರು 1911 ರಲ್ಲಿ ಜನಿಸಿದರು ಮತ್ತು ಚಂಡಮಾರುತಕ್ಕೆ ಸಿಲುಕಿದ ನಂತರ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡಳು. ಇದಾದ ಬಳಿಕ ಆಕೆ ಭವಿಷ್ಯದ ಘಟನೆಗಳ ವಿವರಿಸಲು ನಿಂತಳು. ಹಾಗಾದ್ರೆ 2024ರಲ್ಲಿ ಆಕೆ ಹೇಳಿದ ಯಾವ ಭವಿಷ್ಯಗಳು ನಿಜವಾಗಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆರ್ಥಿಕ ಹಿಂಜರಿಕೆ
2024ರಲ್ಲಿ ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿತ ಅನುಭವಿಸಲಿದೆ ಎಂಬುದಾಗಿ ಬಾಬಾ ವಂಗಾ ಮೊದಲೇ ಹೇಳಿದ್ದರು. ಅದರಲ್ಲೂ ಹಣದುಬ್ಬರ, ಸಾಂಸ್ಥಿಕ ಅಭಿವೃದ್ಧಿಯಂತಹ ಸೂಚಕದಲ್ಲಿ ಹಲವು ರಾಷ್ಟ್ರಗಳು ಕಳಪೆ ಸಾಧನೆ ಮಾಡಿರುವುದು ನಾವು ನೋಡಬಹುದು. ವಿಶ್ವದ ಹಲವು ದೇಶಗಳಲ್ಲಿ ಈ ಆರ್ಥಿಕ ಹಿಂಜರಿತ ಉಂಟಾಗಿರುವುದು ನೋಡಬಹುದು. ಆದ್ರೆ ಬಾಬಾ ವಂಗಾ ಹೇಳಿದ್ದಂತೆ ಆರ್ಥಿಕ ಸಮಸ್ಯೆಯ ಪ್ರಮಾಣ ಕಡಿಮೆಯಾಗಿದೆ.
ನೈಸರ್ಗಿಕ ವಿಕೋಪಗಳು
2024ರಲ್ಲಿ ಹಲವು ರೀತಿಯ ನೈಸರ್ಗಿಕ ವಿಕೋಪಗಳು ಸಂಭವಿಸಲಿದೆ ಎಂಬ ಬಾಬಾ ವಂಗಾ ಭವಿಷ್ಯ ಹಲವು ಕಡೆಗಳಲ್ಲಿ ನಿಜವಾಗಿದೆ. 2024ರಲ್ಲಿ ಹಲವು ವಿಕೋಪಗಳಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬುದಾಗಿ ಆಕೆ ನುಡಿದಿದ್ದ ಭವಿಷ್ಯ ನಿಜವಾಗಿದೆ. ಈ ವರ್ಷ ವೇಲೆನ್ಸಿಯಾದಲ್ಲಿ, ಧಾರಾಕಾರ ಮಳೆಯು ಮಾರಣಾಂತಿಕ ಪ್ರವಾಹವನ್ನು ಉಂಟುಮಾಡಿತು, ಅದು ಹಿಂದೆಂದೂ ಇಲ್ಲದ ಪ್ರದೇಶಗಳನ್ನು ಪ್ರವಾಹಕ್ಕೆ ಒಳಪಡಿಸಿತು, ಎಲ್ಲಾ ಬೀದಿಗಳನ್ನು ನದಿಗಳಾಗಿ ಪರಿವರ್ತಿಸಿತು. ಹಾಗೆ ಪೋಲೆಂಡ್, ಜೆಕ್ ರಿಪಬ್ಲಿಕ್, ಆಸ್ಟ್ರಿಯಾ, ರೊಮೇನಿಯಾ, ಹಂಗೇರಿ, ಜರ್ಮನಿ ಮತ್ತು ಸ್ಲೋವಾಕಿಯಾ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳು ಸೆಪ್ಟೆಂಬರ್‌ನಲ್ಲಿ ದಾಖಲೆಯ ಮಳೆಯನ್ನು ಅನುಭವಿಸಿವೆ. ಅಷ್ಟೇ ಅಲ್ಲ ಹೀಟ್ ವೇವ್, ಕಾಡ್ಗಿಚ್ಚು, ಚಂಡಮಾರುತದಂತಹ ವಿನಾಶಕಾರಿ ಘಟನೆಗಳು ನಡೆದಿರುವುದನ್ನು ಕೂಡ ನಾವಿಂದು ನೆನಯಬಹುದು.
ವೈದ್ಯಕೀಯ ಪ್ರಗತಿ
ಬಾಬಾ ವಂಗಾ ಅಲ್ಝೈಮರ್ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಗತಿಯನ್ನು ಸಾಧಿಸುವ ವರ್ಷ ಎಂದು ಭವಿಷ್ಯ ನುಡಿದಿದ್ದರು. ಅದರಂತೆ 2024ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೊಸ ಪರೀಕ್ಷೆಗಳು ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಹೊಸ ಚಿಕಿತ್ಸೆಯೊಂದಿಗೆ ಕ್ಯಾನ್ಸರ್ ಚಿಕಿತ್ಸೆ ಮತ್ತು ಪತ್ತೆ ಮಾಡುವಿಕೆಯಲ್ಲಿ ಪ್ರಗತಿ ಸಾಧಿಸಲಾಗಿದೆ. ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿಯು ಆಲ್ಝೈಮರ್‌ಗೆ ಮೊದಲ ಬಾರಿಗೆ ರೋಗ-ಮಾರ್ಪಡಿಸುವ ಚಿಕಿತ್ಸೆಯನ್ನು ಅನುಮೋದಿಸಿತ್ತು. ಇದು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆಯಾಗಿದೆ.
ಇದಿಷ್ಟೇ ಅಲ್ಲ ಆಕೆ ನುಡಿದ ಇನ್ನೊಂದಿಷ್ಟು ಭವಿಷ್ಯಗಳು ಈ ವರ್ಷ ಜರುಗಿಲ್ಲ. ಹಾಗೆ 2025ರಲ್ಲೂ ಏನೆಲ್ಲಾ ಸಂಭವಿಸಲಿದೆ ಎಂಬುದನ್ನು ಆಕೆ ಮೊದಲೇ ಊಹಿಸಿದ್ದಾಳೆ.



Click it and Unblock the Notifications


