Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
Year Ender 2023: ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್ ನೀಡುವ ಮೂಲಕ ಸುದ್ದಿಯಾದ ಪ್ರಮುಖ ಕಂಪನಿಗಳಿವು
2023ರಲ್ಲಿ ನಡೆದ ಹಲವಾರು ಒಳ್ಳೆಯ ಘಟನೆಯನ್ನು ಮೆಲುಕು ಹಾಕಿದ್ದೇವೆ, ವರ್ಷ ಎಂದ ಮೇಲೆ ಒಳ್ಳೆಯದು ಮಾತ್ರವಲ್ಲ, ಕೆಲವೊಂದು ಕೆಟ್ಟ ವಿಚಾರಗಳೂ ನಡೆದಿರುತ್ತದೆ. ಕಳೆದೆರಡು ವರ್ಷ ಕೊರೊನಾ ಜನರ ಜೀವನ ಮೇಲೆ ಹೊಡೆದರೆ ಈ ವರ್ಷ ಲೇಆಫ್ ಅಥವಾ ಪಿಂಕ್ ಸ್ಲಿಪ್ ಎಂಬುವುದು ಉದ್ಯೋಗಿಗಳನ್ನು ತುಂಬಾನೇ ಕಾಡಿತು.
ದೊಡ್ಡ ಕಂಪನಿ, ಇಲ್ಲಿ ನಮಗೆ ಉದ್ಯೋಗದಲ್ಲಿ ಸ್ಥಿರತೆ ಇರಬಹುದು ಎಂದು ಭಾವಿಸಿದ ಉದ್ಯೋಗಿಗಳು ಲೇಆಫ್‌ನಿಂದ ಅಕ್ಷರಶಃ ತತ್ತರಿಸಿದರು, ಮುಂದೇನು ಎಂದು ಕಂಗಾಲಾದರು. 2023ರಲ್ಲಿ ಬಹುತೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ, ಆದರೆ ಲೇಆಫ್ ವಿಚಾರಕ್ಕೆ ತುಂಬಾನೇ ಸದ್ದು ಮಾಡಿದ ಕಂಪನಿಗಳೆಂದರೆ

* ಮೀಶೋ
ಮೀಶೋ ಎಂಬುವುಉದ ಪ್ರಸಿದ್ಧ ಇ ಕಾಮರ್ಸ್ ವೆಬ್‌ಸೈಟ್. ಈ ಕಂಪನಿಯು ಶೇ. 15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತು. ಎಷ್ಟು ವರ್ಷ ಈ ಕಂಪನಿಗಾಗಿ ದುಡಿದಿದ್ದಾರೆ ಎಂಬುವುದನ್ನೂ ಲೆಕ್ಕಿಸದೆ ಕೆಲಸದಿಂದ ತೆಗಿಯಲಾಯಿತು, ಕೆಲಸದಿಂದ ತೆಗಿದ ಉದ್ಯೋಗಿಗಳು ಒಂದು ತಿಂಗಳ ಸಂಬಳ ನೀಡಿತ್ತು, ಆದರೆ ಇದ್ದಕ್ಕಿದ್ದಂತೆ ಕೆಲಸ ಹೋದರೆ ಉದ್ಯೋಗಿಗಳ ಪಾಡೇನು ಎಂಬುವುದನ್ನು ಊಹಿಸಬಹುದು ಅಲ್ವಾ?
ಉಡಾನ್
B2B ಇ ಕಾಮರ್ಸ್ ಕಂಪನಿ ಶೇ. 10ರಷ್ಟು ಜನರನ್ನು ಉದ್ಯೋಗದಿಂದ ಕಡಿತಗೊಳಿಸಲಾಯಿತು. ಉಡಾನ್ ತನ್ನ ಸಪ್ಲೈ ಚೈನ್ ಬಲಪಡಿಸುವ ಹೆಸರಿನಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸಿತು.
ಮೊಹಲ್ಲಾ ಟೆಕ್
Mohalla Tech Pvt Ltd ಎಂಬುವುದು ಶೇರ್ ಚಾಟ್, ಶಾರ್ಟ್ ವೀಡಿಯೋಗಳನ್ನು ಮಾಡುವ ಕಂಪನಿಯಾಗಿದೆ, ಇದು ಸೋಮವಾರ ಒಂದೇ ದಿನ ಶೇ. 20ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸುವ ಮೂಲಕ ಸುದ್ದಿ ಮಾಡಿತು. ಒಂದೇ ದಿನ 200 ಜನ ಉದ್ಯೋಗಿಗಳ ಬದುಕು ಅತಂತ್ರವಾಯಿತು.
ಬೈಜೂಸ್
ಅಲ್ಪಾವಧಿಯಲ್ಲಿ ತುಂಬಾನೇ ದೊಡ್ಡ ಹೆಸರು ಮಾಡಿದ್ದ ಕಂಪನಿ, ಆದರೆ 2023ರಲ್ಲಿ ಸುಮಾರು 2, 500 ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್ ನೀಡುವ ಮೂಲಕ ಗಮನಸೆಳೆಯಿತು. ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದು 2500 ಜನರನ್ನು ಕೆಲಸದಿಂದ ತೆಗೆಯಲಾಯಿತು
ಡುಂಜೊ
ಡುಂಜೋ ಕೂಡ ಶೇ. 30ರಷ್ಟು ಉದ್ಯೋಗಿಗಳಿಗೆ ಕೆಲಸವಿಲ್ಲವೆಂದು ಮನೆಗೆ ಕಳುಹಿಸಿತು. ಅಡುಗೆ ಸಾಮಗ್ರಿ ಮನೆ-ಮನೆಗೆ ತಂದು ಕೊಡುವ ಕಂಪನಿ ಇದಾಗಿದೆ. 75 ಮಿಲಿಯನ್ ಡಾಲರ್ ಫಂಡ್‌ನ ಈ ಕಂಪನಿ ಕೂಡ ಉದ್ಯೋಗಿಗಳನ್ನು ಕಡಿತಗೊಳಿಸಿತು.
ಸ್ವಿಗ್ಗಿ
ಸ್ವಿಗ್ಗಿ ಕೂಡ 380 ಉದ್ಯೋಗಿಗಳನ್ನು ಕೆಲಸದಿಂದ ತೆಗಿಯಿತು, ಅಲ್ಲದೆ ಮಾಂಸದ ಮಾರ್ಕೆಟ್ ಅನ್ನು ಬಂದ್ ಮಾಡಿತು.
ಜೆಸ್ಟ್ ಮನಿ (ZestMoney ) ಕಂಪನಿ ಮುಚ್ಚಲಿದ್ದು ಅದು ತನ್ನ ಉದ್ಯೋಗಿಗಳಿಗೆ ಬೇರೆ ಕಡೆ ಕೆಲಸ ಹುಡುಕಿಕೊಳ್ಳುವಂತೆ ಸೂಚಿಸಿದೆ. ಇದು ಡಿಸೆಂಬರ್ 31ರವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ.
ಓಲಾ
ಓಲಾ ಕೂಡ ಸುಮಾರು 200 ಉದ್ಯೋಗಿಗಳನ್ನು ಉದ್ಯೋಗದಿಂದ ಕಡಿತಗೊಳಿಸಿದೆ. ಓಲಾ ಕ್ಯಾಬ್, Ola Financial Services Pvt Ltd. ಓಲಾ ಎಲೆಕ್ಟ್ರಿಕ್ ಎಲ್ಲದರಿಂದಲೂ ಉದ್ಯೋಗಿಗಳನ್ನು ಕಡಿತಗೊಳಿಸಿತು.
ಇವೆಲ್ಲಾ ಬಹುತೇಕ ಜನರಿಗೆ ಗೊತ್ತಿರುವ ಕಂಪನಿ, ಆದರೆ ಕಂಪನಿಗಳಲ್ಲದೆ ಬಹುತೇಕ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್ ನೀಡಿತ್ತು, ಟ್ವಿಟರ್, ಫೇಸ್‌ಬುಕ್‌ನಲ್ಲೂ ಕೆಲ ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್ ಸಿಕ್ಕಿದೆ, 2023ರಲ್ಲಿ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ಕಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಉದ್ಯೋಗಿಗಳಿಗೆ ಈ ವರ್ಷ ಕೆಲಸದಲ್ಲಿ ಅಭದ್ರತೆ ಕಾಡಿತ್ತು.



Click it and Unblock the Notifications