Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
2023ರಲ್ಲಿ ವಿವಾದ ಎಬ್ಬಿಸಿ ಬಹಿಷ್ಕಾರಕ್ಕೊಳಗಾದ ವಿಚಾರಗಳಿವು...!
ಇನ್ನೇನು ನಾವು 2023ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ ಸ್ವಾಗತಿಸುವ ದಿನಗಳ ಎಣಿಸುತ್ತಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ 2023ರ ನೆನಪುಗಳು ನಿತ್ಯವೂ ಹರಿದಾಡುತ್ತಲೇ ಇವೆ. ಅದ್ರಲ್ಲೂ ಬಾಲಿವುಡ್ ಮಂದಿಗೆ ಈ ವರ್ಷ ಸ್ವಲ್ಪ ಖಾರವಾಗಿತ್ತು. ಸಾಲು ಸಾಲು ಹಿಟ್ ಸಿನಿಮಾಗಳು ಬಂದರೂ ವಿವಾದಗಳು ಸಹ ಅದರ ಸುತ್ತ ಹರಿದಾಡಿದ್ದವು.
2023ರಲ್ಲಿ ಸೋಶಿಯಲ್ ಮೀಡಿಯಾ ಖ್ಯಾತ ನಾಮರ ಹಾಗೂ ಒಂದಿಷ್ಟು ಸಿನಿಮಾಗಳ, ವ್ಯಕ್ತಿಗಳು ಮತ್ತು ಸಂಸ್ಥೆಗಳ ಬಹಿಷ್ಕರಿಸುವ ಕರೆಗಳಿಗಾಗಿ ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು. ಒಂದಿಷ್ಟು ವಿವಚಾರಗಳು ಅನಗತ್ಯ ಎನಿಸಿದರೂ ಮತ್ತೊಂದಿಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಗಾಜಾಪಟ್ಟಿಯಲ್ಲಿ ನಡೆಯುತ್ತಿದ್ದ ಯುದ್ಧಕ್ಕೂ ಬಾಲಿವುಡ್‌ನ ಶಾರುಖ್ ನಟನೆಯ ಚಿತ್ರವೂ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು.
ಜರಾ
ಫ್ಯಾಷನ್ ಜಗತ್ತಿನಲ್ಲಿ ಜರಾ ಬಟ್ಟೆ ಬ್ರಾಂಡ್ ಸೃಷ್ಟಿಸಿದೆ. ಆದರೆ ಈ ವರ್ಷ ಜರಾ ಬಹಿಷ್ಕಾರಕ್ಕೆ ಒಳಗಾಗಿತ್ತು. ತನ್ನ ಅಟೆಲಿಯರ್ ಸರಣಿಯ ಕಲೆಕ್ಷನ್ 4 ರ ಭಾಗವಾದ "ದಿ ಜಾಕೆಟ್" ಎಂಬ ಜಾಹೀರಾತು ಪ್ರಕಟಿಸಿದ್ದ ಜರಾ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿತ್ತು. ಈ ಜಾಹಿರಾತಿನಲ್ಲಿ ಬಿಳಿ ಬಟ್ಟೆಯನ್ನು ಸುತ್ತಿರುವ ಮನುಷ್ಯನನ್ನು ಹೊತ್ತೊಯ್ಯಲಾಗುತ್ತಿತ್ತು. ಅಲ್ಲದೆ ಪ್ಯಾಲೆಸ್ಟೈನ್ ನಕ್ಷೆಯನ್ನು ಹೋಲುವ ಪ್ಲ್ಯಾಸ್ಟರ್‌ಬೋರ್ಡ್ ಸೇರಿದಂತೆ, ಇಸ್ರೇಲ್-ಹಮಾಸ್ ಸಂಘರ್ಷದ ಸಮಯದಲ್ಲಿ ಗಾಜಾದಲ್ಲಿನ ಪರಿಸ್ಥಿತಿಗೆ ಹೋಲಿಕೆ ಮಾಡಿತು. ಈ ಜಾಹಿರಾತಿನ ವಿರುದ್ಧ ಟೀಕೆ ಕೇಳಿಬಂದ ಬಳಿಕ ಜರಾ ಜಾಹಿರಾತು ಪ್ರಸಾರ ನಿಲ್ಲಿಸಿತ್ತು.
ಆದಿಪುರುಷ
ನಟ ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾ ಕೂಡ ಬಹಿಷ್ಕಾರಕ್ಕೆ ಒಳಗಾಗಿತ್ತು. ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ, ಚಿತ್ರವು ಹಿಂದೂ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಮತ್ತು ಭಾರತದ ಶ್ರೀಮಂತ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಚಿತ್ರವನ್ನು ಬಹಿಷ್ಕರಿಸಲು ಕರೆ ನೀಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ಕೇಳಿಬಂದಿತ್ತು. ಬಳಿಕ ಕೆಲವು ದೃಶ್ಯ ಹಾಗೂ ಸಂಭಾಷಣೆಗೆ ಕತ್ತರಿ ಪ್ರಯೋಗ ನಡೆಸಿದ ಬಳಿಕ ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಕ್ಕಿತ್ತು.
ಸ್ಟಾರ್‌ಬಕ್ಸ್
ವಿಶ್ವ-ಪ್ರಸಿದ್ಧ ಕಾಫಿ ಬ್ರ್ಯಾಂಡ್ ಸ್ಟಾರ್‌ಬಕ್ಸ್, ಟ್ರಾನ್ಸ್‌ಜೆಂಡರ್ ಹಕ್ಕುಗಳನ್ನು ಅನುಮೋದಿಸುವ ಜಾಹೀರಾತನ್ನು ಬಿಡುಗಡೆ ಮಾಡಿದ ನಂತರ ಟೀಕೆಗೆ ಸಿಲುಕಿತ್ತು. ಬ್ರ್ಯಾಂಡ್ 'Woke culture' ಅನ್ನು ಬೆಂಬಲಿಸಿದ್ದಕ್ಕಾಗಿ ಟೀಕೆಗೆ ಗುರಿಯಾಯಿತು. ಔಟ್‌ಲೆಟ್ ಒಂದರಲ್ಲಿ ಟ್ರಾನ್ಸ್‌ಜೆಂಡರ್ ಮಹಿಳೆಯೊಬ್ಬರು ತನ್ನ ಪೋಷಕರನ್ನು ಭೇಟಿಯಾಗುತ್ತಿರುವ ಜಾಹೀರಾತು ಪ್ರಕಟಿಸಿತ್ತು. ಆದರೆ ಸಲಿಂಗ ವಿವಾಹ ಸೇರಿ ಕೆಲವು ವಿಚಾರಗಳು ಸುಪ್ರಿಂಕೋರ್ಟ್ ಅಂಗಳದಲ್ಲಿರುವ ಕಾರಣ ಟೀಕೆಗೆ ಗುರಿಯಾಯಿತು.

ದೈನಿಕ್ ಜಾಗರಣ್
ದೈನಿಕ್ ಜಾಗರಣ್ ಪತ್ರಿಕೆಯು ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಶೈಲಿಯ ಬಗ್ಗೆ ಮಾತನಾಡುವ ಲೇಖನದೊಂದಿಗೆ ವಿವಾದವನ್ನು ಹುಟ್ಟುಹಾಕಿತ್ತು. 'ಶತಕ್ ಪರ್ ರಾವಯ್ಯ ಅಲಗ್ ಅಲಗ್' ಎಂಬ ಶೀರ್ಷಿಕೆಯ ಈ ತುಣುಕು ಕೊಹ್ಲಿಯ ಶೈಲಿಯನ್ನು ರೋಹಿತ್ ಶರ್ಮಾ ಅವರೊಂದಿಗೆ ಹೋಲಿಸಿತ್ತು. ಈ ಲೇಖನವು ಕೊಹ್ಲಿಯ ವಿಧಾನದ ಬಗ್ಗೆ ಟೀಕೆ ಮಾಡಿತ್ತು. ಇದು ಕೊಹ್ಲಿ ಅಭಿಮಾನಿಗಳ ಕೆರಳಿಸಿತ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಬಹಿಷ್ಕಾರಕ್ಕೆ ಒಳಗಾಗಿತ್ತು.
ಪಠಾನ್
ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರವು ಬೇಷರಂ ರಂಗ್ ಹಾಡಿನ ಬಿಡುಗಡೆಯ ನಂತರ ಕೆಲವು ಗುಂಪುಗಳಿಂದ ಬಹಿಷ್ಕಾರಕ್ಕೆ ಒಳಗಾಯಿತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಚಡ್ಡಿ ಧರಿಸಿ ಕಾಣಿಸಿಕೊಂಡರು ಎಂಬ ಕಾರಣಕ್ಕೆ ಚಿತ್ರವನ್ನು ಬಹಿಷ್ಕರಿಸಲು ಕರೆ ನೀಡಲಾಗಿತ್ತು. ಕೆಲವು ಕಡೆ ಗಲಾಟೆಗಳು ಸಹ ನಡೆದಿದ್ದವು.
ಶುಭ್
ಕೆನಡಾ ಮೂಲದ ಗಾಯಕ ಶುಭ್ ಅವರು ಭಾರತದಲ್ಲಿ ತಮ್ಮ ಮ್ಯೂಸಿಕ್ ಈವೆಂಟ್ ಆಗಮನಕ್ಕೂ ಮುನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್‌ನಂದ ಟೀಕೆ ಅನುಭವಿಸಿದ್ದರು. ಪಂಜಾಬ್ ಕುರಿತ ಅವರ ಪೋಸ್ಟ್‌ನಿಂದ ಭಾರತೀಯರು ಆಕ್ರೋಶ ಹೊರಹಾಕಿದ್ದರು. ಇದು ಖಲಿಸ್ತಾನ್, ಪಂಜಾಬ್ ವಿವಾದ ಕುರಿತು ಮತ್ತಷ್ಟು ವಿವಾದಕ್ಕೆ ಕಾರಣವಾಯಿತು. ಹೀಗಾಗಿ ಅವರ ಭಾರತ ಪ್ರವಾಸ ರದ್ದು ಮಾಡಬೇಕಾಯಿತು.
ಜೊಮ್ಯಾಟೋ
ಜೂನ್‌ನಲ್ಲಿ, Zomato ವಿಶ್ವ ಪರಿಸರ ದಿನದಂದು ಜಾಹೀರಾತನ್ನು ಹಂಚಿಕೊಂಡಿತ್ತು. ಜಾಹೀರಾತು ಲಗಾನ್ ಚಲನಚಿತ್ರದ ಕಚ್ರಾ ಪಾತ್ರ ಮತ್ತು ಕಸದ ಹಿಂದಿ ಪದದ ನಡುವಿನ ವ್ಯತ್ಯಾಸ ತೋರಿಸಲು ಯತ್ನ ನಡೆಸಿತ್ತು. ಆದರೆ ನೆಟ್ಟಿಗರು ಜಾತಿವಾದಿ ಆರೋಪ ಹೊರಿಸಿದ್ದರಲ್ಲದೆ ಜೊಮ್ಯಾಟೋ ಬಹಿಷ್ಕರಿಸಲು ಕರೆ ನೀಡಿದ್ದರು.



Click it and Unblock the Notifications