Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
2023ರಲ್ಲಿ ಅಲೆಕ್ಸಾ ಬಳಿ ಜನ ಅತೀ ಹೆಚ್ಚು ಕೇಳಿದ ಪ್ರಶ್ನೆಗಳಿವು..ಏನೆಲ್ಲಾ ಕೇಳಿದ್ದಾರೆ ಗೊತ್ತಾ?
ಅಮೆಜಾನ್ ಕಂಪನಿಯ ಸ್ಮಾರ್ಟ್ ಅಸಿಸ್ಟೆಂಟ್ 'ಅಲೆಕ್ಸಾ' ಈಗ ಬಹುಪಾಲು ಎಲ್ಲರೂ ಸುಲಭವಾಗಿ ಬಳಸಲ್ಪಡುತ್ತಿರುವ ಸಾಧನವಾಗಿದೆ. ಇಂಟರ್‌ನೆಟ್ ಮೂಲಕ ನೀವು ಕುಳಿತಲ್ಲೇ ಎಲ್ಲಾ ವಿಚಾರವನ್ನು ಧ್ವನಿಯ ರೂಪದಲ್ಲಿ ಪಡೆಯಬಹುದಾಗಿದೆ. ನೀವು ಕೇಳುವ ಪ್ರಶ್ನೆಗೆ ಕ್ಷಣಾರ್ಧದಲ್ಲಿ ಸೂಕ್ತ ಉತ್ತರವನ್ನ ಹೇಳಿಬಿಡುತ್ತದೆ. ಈಗಂತು ಅಲೆಕ್ಸಾದಿಂದ ಆಗದ ಕೆಲಸವೇ ಇಲ್ಲ ಎಂಬಂತಾಗಿದೆ. ಈಗ ಅಮೆಜಾನ್ 2023ರಲ್ಲಿ ಜನ ಅಲೆಕ್ಸಾ ಬಳಿ ಕೇಳಿರುವ ಅತೀ ಹೆಚ್ಚು ಪ್ರಶ್ನೆಗಳ ದೊಡ್ಡ ಪಟ್ಟಿಯನ್ನು ಮುಂದಿಟ್ಟಿದೆ. ಅಲೆಕ್ಸಾ ಬಳಿ ಜನರು ಇಟ್ಟಿರುವ ಒಂದೊಂದು ಪ್ರಶ್ನೆಗಳು ಕುತೂಹಲ ಮೂಡಿಸಿವೆ.
ಈ ಸಾಲಿನಲ್ಲಿ ಹತ್ತಾರು ಪ್ರಶ್ನೆಗಳು ವಿಚಿತ್ರ ಎನಿಸಿದರು ಮತ್ತೆ ಕೆಲವು ಆಶ್ಚರ್ಯಕರವಾಗಿವೆ. ಅಲೆಕ್ಸಾ ಕಿಂಗ್ ಚಾಲ್ಸ್‌ನ ವಯಸ್ಸು ಎಷ್ಟು.? ಅಲೆಕ್ಸಾ ರಾಷ್ಟ್ರಗೀತೆ ಹಾಡು, ಅಲೆಕ್ಸಾ ನನಗೆ ಅವಮಾನ ಮಾಡು, ಹೀಗೆ ಇಂಟರೆಸ್ಟಿಂಗ್ ಎನಿಸುವ ಪ್ರಶ್ನೆಗಳನ್ನು ಜನರು ಅಲೆಕ್ಸಾ ಮುಂದಿಟ್ಟಿದ್ದಾರೆ. ಪ್ರತಿ ವಿಭಾಗದಲ್ಲಿ ಅಲೆಕ್ಸಾ ಬಳಿ ಜನರು ಕೇಳಿರುವ ಪ್ರಶ್ನೆಗಳ ಪಟ್ಟಿ ಇಲ್ಲಿವೆ.
ಕ್ರೀಡೆ ಬಗ್ಗೆ ಕೇಳಲಾದ ಪ್ರಶ್ನೆಗಳಿವು
1. ಸ್ಕೋರ್ ಎಷ್ಟು.?
2. ಲಿವರ್ ಪೂಲ್ ಸ್ಕೋರ್ ಎಷ್ಟಾಗಿದೆ?
3. ವಿಶ್ವಕಪ್ ಯಾರು ಗೆದ್ದುಕೊಂಡರು?
4. ಮ್ಯಾಂಚೆಸ್ಟರ್ ಯಯುನೈಟೆಡ್ ಸ್ಕೋರ್ ಎಷ್ಟು.?
5. ಮ್ಯಾಂಚೆಸ್ಟರ್ ಸಿಟಿ ಸ್ಕೋರ್ ಎಷ್ಟು?
6. ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಪ್ರದರ್ಶನ ಹೇಗಿದೆ?
7. ಗ್ರ್ಯಾಂಡ್ ಪ್ರಿಕ್ಸ್ ಯಾವಾಗ ಆರಂಭವಾಗಲಿದೆ?
8. ವಿಂಬಲ್ಡನ್ ಯಾವಾಗ ಆರಂಭವಾಗಲಿದೆ?
9. ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯ ಯಾವಾಗ?
10. ಮಹಿಳಾ ವಿಶ್ವಕಪ್ ವಿಜೇತರು ಯಾರು?
ಉಳಿದಂತೆ ವಿಶ್ವದ ಶ್ರೀಮಂತ ವ್ಯಕ್ತಿಗಳ ಒಟ್ಟು ಆದಾಯದ ಕುರಿತು ಜನ ಅಲೆಕ್ಸಾ ಬಳಿ ಉತ್ತರಕ್ಕೆ ಹುಡುಕಾಡಿದ್ದಾರೆ. ಅವರ ಒಟ್ಟು ಆದಾಯ ಎಷ್ಟು ಎಂಬ ಪ್ರಶ್ನೆ ಅಲೆಕ್ಸಾ ಮುಂದಿಟ್ಟಿದ್ದಾರೆ. ದೇಶ ಖ್ಯಾತ ಉದ್ಯಮಿಗಳು, ಸಿನಿಮಾ ನಟರು, ಕ್ರೀಡಾ ಪಟುಗಳು ಸೇರಿದಂತೆ ಖ್ಯಾತನಾಮರ ಆಸ್ತಿ ತಿಳಿದುಕೊಳ್ಳುವ ಸಲುವಾಗ ಅಲೆಕ್ಸಾ ಬಳಿ ಈ ಪ್ರಶ್ನೆಗಳ ಕೇಳಿದ್ದಾರೆ.
ಆಸ್ತಿ ಕುರಿತು ಕೇಳಲಾದ ಪ್ರಶ್ನೆಗಳು
1. ಎಲಾನ್ ಮಸ್ಕ್ ಆಸ್ತಿ ಎಷ್ಟು?
2. ಈದ್ ಶಿರಿನ್ ಆಸ್ತಿ ಎಷ್ಟು?
3. ಪೌಲ್ ಮೆಕ್‌ಕಾರ್ಟಿನಿ ಆಸ್ತಿ ಎಷ್ಟು?
4. ಪ್ರಿನ್ಸ್ ಹ್ಯಾರಿಯ ಒಟ್ಟು ಆಸ್ತಿ ಎಷ್ಟು?
5. ಡೇವಿಡ್ ಬೆಕ್ಹ್ಯಾಮ್ ಆಸ್ತಿ ಎಷ್ಟು?
6. ಬಿಲ್ ಗೇಟ್ಸ್ ಒಟ್ಟು ಆದಾಯ ಎಷ್ಟು?

ಅಲೆಕ್ಸಾ ಬಳಿ ಅತೀ ಹೆಚ್ಚು ಬಾರಿ ಕೇಳಲಾದ ವಿಚಿತ್ರ ಪ್ರಶ್ನೆಗಳು
1. ಅಲೆಕ್ಸಾ.. ನನಗೆ ಅವಮಾನ ಮಾಡು.
2. ಅಲೆಕ್ಸಾ..ನಿನ್ನ ವಯಸ್ಸು ಎಷ್ಟು?
3. ಅಲೆಕ್ಸಾ..ನೀನು ನನ್ನ ಮದುವೆ ಆಗುತ್ತೀಯಾ?
4. ಅಲೆಕ್ಸಾ..ಅಸಭ್ಯ ಪದ ಹೇಳು.
5. ಅಲೆಕ್ಸಾ..ಗುಡ್ ನೈಟ್..ಸ್ಲೀಪ್ ಟೈಟ್.
6. ಅಲೆಕ್ಸಾ..ನಾಶವಾಗು.
7. ಅಲೆಕ್ಸಾ..ನಿನ್ನ ಇಷ್ಟವಾದ ಬಣ್ಣ ಯಾವುದು?
8. ಅಲೆಕ್ಸಾ..ನನ್ನ ಭಯಪಡಿಸು.
9.ಅಲೆಕ್ಸಾ..ಮಿ.ವೂಲ್ಫ್ ಸಮಯ ಎಷ್ಟು?
10. ಅಲೆಕ್ಸಾ..ನೀನು ನನ್ನ ಇಷ್ಟ ಪಡುತ್ತೀಯಾ?
ಇಷ್ಟೆಲ್ಲಾ ವಿಚಿತ್ರ ಪ್ರಶ್ನೆಗಳನ್ನು ಅಲೆಕ್ಸಾ ಮುಂದಿಟ್ಟಿದ್ದಾರೆ ಎಂದು ಅಮೆಜಾನ್ ರಿವೀಲ್ ಮಾಡಿದೆ. ಅಲೆಕ್ಸಾ ಎಂತಹ ಪ್ರಶ್ನೆಗಾದರೂ ಉತ್ತರ ನೀಡಲಿದೆ. ಕೆಲವು ಬಾರಿ ತಮಾಷೆಯಾಗಿ ಕೇಳುವ ಪ್ರಶ್ನೆಗೆ ಸೀರಿಯಸ್ ಆಗಿಯೂ, ಸೀರಿಯಸ್ ಆಗಿ ಕೇಳುವ ಪ್ರಶ್ನೆಗೆ ತಮಾಷೆಯಾಗಿಯೂ ಉತ್ತರ ಸಿಗಲಿದೆ. ಜನರ ಕೈಗೆ ಸಿಕ್ಕಿರುವ ಅಲೆಕ್ಸಾಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಉತ್ತರ ಪಡೆಯುವ ಪ್ರಯತ್ನವಂತು ಮುಂದುವರೆದಿದೆ. ನಿಮ್ಮ ಬಳಿಯೂ ಇಂತಹ ಪ್ರಶ್ನೆಗಳಿದ್ದರೆ ಅಲೆಕ್ಸಾ ಬಳಿ ಕೇಳಿ ನೋಡಿ.



Click it and Unblock the Notifications
