Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
2023ರಲ್ಲಿ ನೆಟ್ಟಿಗರ ಗಮನ ಸೆಳೆದ ಚಿತ್ರ ವಿಚಿತ್ರ ಘಟನೆಗಳಿವು..
ಇನ್ನೇನು ಹೊಸ ವರ್ಷಕ್ಕೆ ಕೆಲ ದಿನಗಳಷ್ಟೇ ಉಳಿದಿದೆ. ಈ ವರ್ಷವನ್ನು ಉತ್ಸಾಹದಿಂದ ಸ್ವಾಗತಿಸುವ ಮೊದಲು ಹಳೆಯ ವರ್ಷ ನಮ್ಮ ಗಮನಸೆಳೆದ ಒಂದಿಷ್ಟು ವಿಷಯಗಳ ಬಗ್ಗೆ ಗಮನ ಹರಿಸೋಣ, ಅದ್ರಲ್ಲೂ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿ ಎಲ್ಲರ ಬಾಯಲ್ಲೂ ಹರಿದಾಡಿದ ಒಂದಿಷ್ಟು ವಿಚಾರಗಳ ಪಟ್ಟಿ ಇಲ್ಲಿದೆ ನೋಡಿ.
2023ರಲ್ಲಿ ಬೇಡವೆಂದರೂ ಕೆಲವರು ಸುದ್ದಿಯಾದರು. ಜೊತೆಗೆ ಅವರ ಹೆಸರಿನ ಮುಂದೆ ವಿವಾದಗಳನ್ನೇ ಸೃಷ್ಟಿಸಿದ್ದರು. ಇನ್ನೂ ಕೆಲವರು ಚಿತ್ರ ವಿಚಿತ್ರ ವಿಚಾರಕ್ಕಾಗಿ ಸುದ್ದಿಯಾದರು. ಹಾಗಾದ್ರೆ ಅವರೆಲ್ಲಾ ಯಾರು ನೋಡಿ..

ಓಪನ್ ಎಐ (ಚಾಟ್‌ಜಿಟಿಪಿ) ರಾದ್ಧಾಂತ
ಓಪನ್‌ಎಐ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮ್ಯಾನ್‌ನ ವಜಾ ಮತ್ತು ಇಡೀ ಮ್ಯಾನೇಜ್‌ಮೆಂಟ್ ಅನ್ನು ಹೊಸದಾಗಿ ನೇಮಕ ಮಾಡಲು ಕಾರಣವಾದ ಘಟನೆಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
OpenAI ನಲ್ಲಿನ ಬೋರ್ಡ್‌ರೂಮ್ ಶೇಕ್-ಅಪ್ ಸ್ಯಾಮ್ ಆಲ್ಟ್‌ಮ್ಯಾನ್‌ನ ನಿರ್ಗಮನವನ್ನು ಪ್ರೇರೇಪಿಸಿತು, ಇದು ತರುವಾಯ ಗೂಗಲ್ ಸಿಇಒ ಸತ್ಯ ನಾಡೆಲ್ಲಾ ಅವರಿಂದ ಉದ್ಯೋಗದ ಪ್ರಸ್ತಾಪಕ್ಕೆ ಕಾರಣವಾಯಿತು, ಅವರು ಆಲ್ಟ್‌ಮ್ಯಾನ್‌ಗಾಗಿ ಎಕ್ಸ್‌ನಲ್ಲಿ ದೀರ್ಘವಾದ ಸ್ವಾಗತ ಬರಹ ಪೋಸ್ಟ್ ಮಾಡಿದ್ದರು. ಆಲ್ಟ್‌ಮ್ಯಾನ್ ಕೆಲ ದಿನದಲ್ಲೇ OpenAI ಗೆ ಮರಳಿದರು ಹೀಗಾಗಿ ಗೂಗಲ್ ಸಿಇಓ ತಮ್ಮ ಲೆಟರ್ ಅನ್ನು ಹಿಂತೆಗದುಕೊಂಡರು. ಈ ಎಲ್ಲಾ ಘಟನೆಗಳು ನೆಟ್ಟಿಗರ ಗಮನ ಸೆಳೆದಿತ್ತು. ಒಬ್ಬರಂತು ಇದು ನೆಟ್‌ಫ್ಲಿಕ್ಸ್ ಸೀರಿಸ್‌ಗಿಂತ ಹೆಚ್ಚು ಇಂಟರೆಸ್ಟಿಂಗ್ ಆಗಿದೆ ಎಂದು ಹೊಗಳಿದ್ದರು.
ಹೆಸರು ಬದಲಿಸಿದ ಟ್ವಿಟರ್
ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಎಲಾನ್ ಮಸ್ಕ್ ಖರೀದಿ ಮಾಡಿಯೇಬಿಟ್ಟರು. ಟ್ವಿಟರ್‌ನಲ್ಲೇ ನಡೆಯುತ್ತಿದ್ದ ಸರಣಿ ಟ್ವೀಟ್ ಮೂಲಕ ಅವರು ಖರೀದಿ ವಿಚಾರ ಪ್ರಸ್ತಾಪಿಸಿ ಬಳಿಕ ಖರೀದಿ ಮಾಡಿಯೇ ಬಿಟ್ಟರು. ಆದ್ರೆ ಇದಾದ ಬಳಿಕ ಮಸ್ಕ್ ಟ್ವಿಟರ್ ಮೇಲಿನ ತಮ್ಮ ಹಕ್ಕನ್ನು ಇಡೀ ಜಗತ್ತಿನ ತೋರಿಸಲು ಮುಂದಾದರು. ಟ್ವಿಟರ್ ಹೆಸರನ್ನು ಎಕ್ಸ್ ಎಂದು ಬದಲಿಸಿದರು. ಅಲ್ಲದೆ ಹಕ್ಕಿಯ ಬದಲಿಗೆ ನಾಯಿಯೊಂದನ್ನು ಟ್ವಿಟರ್ ಲೋಗೋವಾಗಿ ಮಾಡಿದ್ದರು. ಈ ಎಲ್ಲಾ ಘಟನೆಗಳು 2023ರಲ್ಲಿ ಗಮನ ಸೆಳೆದಿದ್ದವು.
ಜುಗರ್‌ಬರ್ಗ್‌ಗೆ ಕೈಕೊಟ್ಟ ಥ್ರೆಡ್
ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಫೇಸ್‌ಬುಕ್ ಸಹ ಈ ಸ್ಪರ್ಧೆಗೆ ಮುಂದಾಯಿತು. ಹೀಗಾಗಿ ಥ್ರೆಡ್ಸ್ ಎಂಬ ಹೊಸ ಆಪ್ ಹೊರತಂದಿತು. ಆ ಆಪ್ ಬಗ್ಗೆ ಭಾರೀ ನಿರೀಕ್ಷೆಯೂ ಹುಟ್ಟಿಕೊಂಡಿತು. ಆದರೆ ಎಲಾನ್ ಮಸ್ಕ್ ಜಾಣತನದ ಮುಂದೆ ಥ್ರೆಡ್ಸ್ ಆಟ ನಡೆಯಲೇ ಇಲ್ಲ. ಆರಂಭದಲ್ಲಿ ದಾಖಲೆ ಮಟ್ಟದ ಡೌನ್‌ಲೋಡ್ಸ್ ಕಂಡ ಥ್ರೆಡ್ಸ್ ಬಳಿಕ ಒಂದಿಷ್ಟು ದಿನದಲ್ಲಿ ರೇಟಿಂಗ್ ಇಳಿಮುಖವಾಗಿತ್ತಲ್ಲದೆ ಸಕ್ರಿಯ ಬಳಕೆದಾರರ ಸಂಖ್ಯೆ ಗಣನೀಯ ಇಳಿಮುಖವಾಯಿತು.
ಹಲ್‌ಚಲ್ ಎಬ್ಬಿಸಿದ ಎಲ್ವಿಶ್ ಯಾದವ್
ಬಿಗ್‌ಬಾಸ್ ಓಟಿಟಿಗೆ ಎಂಟ್ರಿ ಕೊಟ್ಟಿದ್ದ ವಿವಾದಾತ್ಮಕ ಯುಟ್ಯೂಬರ್ ಎಲ್ವಿಶ್ ಯಾದವ್ ಬಳಿಕ ಹೊರಬಂದು ಮತ್ತೊಂದಿಷ್ಟು ವಿವಾದ ಸೃಷ್ಟಿಸಿದ್ದರು. ಉತ್ತರ ಪ್ರದೇಶದಲ್ಲಿ ಆತ ಪಾರ್ಟಿ ಮಾಡಿ ಅದರಲ್ಲಿ ವಿಷಕಾರಿ ಹಾವು ಬಳಕೆ ಮಾಡಲಾಗಿತ್ತು. ಈ ವೇಳೆ ಪೊಲೀಸರು ದಾಳಿ ಮಾಡಿದಾಗ ಹಾವು ಸೇರಿ ಇತರೆ ವಸ್ತುಗಳ ಸೀಜ್ ಮಾಡಲಾಯ್ತು. ಇದಾದ ಬಳಿಕ ಬಿಜೆಪಿ ನಾಯಕರ ಜೊತೆಯೂ ಆತ ಕಾಣಿಸಿಕೊಂಡಿದ್ದ, ಆತನನ್ನು ಪೊಲೀಸರು ಅರೆಸ್ಟ್ ಮಾಡದೇ ಇರುವುದು ಮತ್ತಷ್ಟು ಚರ್ಚೆ ಹುಟ್ಟುಹಾಕಿತ್ತು.
ಪ್ರಭಾಸ್ ಆದಿಪುರುಷ್ ಹಂಗಾಮ
ನಟ ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾ ಭಾರೀ ಸದ್ದು ಮಾಡಿದ್ದು ಸಿನಿಮಾ ರಿಲೀಸ್‌ಗೂ ಮುನ್ನ ಮಾತ್ರ. ಚಿತ್ರದಲ್ಲಿ ವಿಎಫ್‌ಎಕ್ಸ್ ಸರಿಯಿಲ್ಲ ಎಂಬ ಕಾರಣಕ್ಕೆ ಮೊದಲು ಬಾರೀ ಸದ್ದು ಮಾಡಿತು. ಇದಾದ ಬಳಿಕ ಹಿಂದೂ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಟ್ವಿಟರ್‌ನಲ್ಲಿ ಸಿನಿಮಾ ವಿರುದ್ಧ ಅಭಿಯಾನವೇ ಆರಂಭಗೊಂಡಿತ್ತು. ಆದರೆ ಸಿನಿಮಾ ಪ್ರದರ್ಶನ ಆರಂಭಗೊಂಡಾಗ ಅಲ್ಲಲ್ಲಿ ಗಲಾಟೆಗಳೂ ಸಹ ನಡೆದಿತ್ತು.



Click it and Unblock the Notifications
