Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರಾಕಿಂಗ್ ಸ್ಟಾರ್ ಹುಟ್ಟುಹಬ್ಬ: ಇಲ್ಲಿವೆ ಯಶ್ ಕುರಿತ ಅಚ್ಚರಿ ವಿಚಾರಗಳು...!
ರಾಕಿಂಗ್ ಸ್ಟಾರ್ ಯಶ್ ಈ ಹೆಸರೀಗ ಪಾನ್ ಇಂಡಿಯಾದಲ್ಲೂ ಕೇಳಿಬರುತ್ತಿದೆ. ಸ್ಯಾಂಡಲ್‌ವುಡ್‌ನಿಂದ ಹಿಡಿದು ಹಾಲಿವುಡ್‌ವರೆಗೂ ರಾಕಿಂಗ್ ಸ್ಟಾರ್ ಯಶ್ ಹೆಸರು ಚಿರಪರಿಚಿತ. ಇಂದು ಯಶ್ ತಮ್ಮ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಬೆಂಗಳೂರಿನಲ್ಲಿ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಸಿನಿಮಾ ಮಾಡುವಲ್ಲಿ ಬ್ಯುಸಿ ಇರುವ ಅವರು, ಅಭಿಮಾನಿಗಳಿಗೆ ಪತ್ರ ಬರೆದು ಸಹಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ನಟ ಯಶ್ ಕುರಿತು ನಿಮಗೆ ಗೊತ್ತಿಲ್ಲದ ಒಂದಿಷ್ಟು ಮಾಹಿತಿಗಳನ್ನು ನಾವಿಂದು ಹಂಚಿಕೊಳ್ಳುತ್ತೇವೆ. ನಿಮಗೆ ತಿಳಿದಿರುವಂತೆ ಅವರು ಸಣ್ಣ ಪುಟ್ಟ ಪಾತ್ರಗಳ ಮಾಡಿಕೊಂಡಿದ್ದರು. ಜೊತೆಗೆ ಅವಕಾಶಕ್ಕಾಗಿ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದರು ಎಂಬುದು ತಿಳಿದಿದೆ. ಆದರೆ ನಿಮಗೆ ತಿಳಿಯದ ಒಂದಿಷ್ಟು ವಿಚಾರಗಳು ಇಲ್ಲಿವೆ.

ರಾಕಿ ಭಾಯ್ ಅಂತಲೇ ಫೇಮಸ್ ಆಗಿರುವ ಯಶ್ ಅವರ ನಿಜವಾದ ಹೆಸರು ನವೀನ್ ಕುಮಾರ್ ಗೌಡ ಎಂದು. ಆದರೆ ಅವರು ಸ್ಕ್ರೀನ್ ನೇಮ್ ಆಗಿ ಯಶ್ ಎಂದು ಬದಲಾಯಿಸಿದ್ದರು. ಆದರೆ ಈ ರೀತಿ ಬದಲಾಯಿಸಿಕೊಳ್ಳಲು ಯಾವ ಕಾರಣವೆಂದು ಅವರು ಎಲ್ಲಿಯೂ ಹೇಳಿಕೊಂಡಿಲ್ಲ.
ತಮ್ಮ ಸಿನಿಮಾಗೆ ತಾವೇ ಹಾಡಿರುವ ಯಶ್
ಯಶ್ ತಮ್ಮ ನಟನೆಯಿಂದ ಮಾತ್ರವಲ್ಲ ಹಾಡಿನಿಂದಲೂ ಗಮನ ಸೆಳೆದಿದ್ದಾರೆ. ತಾವೇ ನಟಿಸಿರುವ ರಾಮಾಚಾರಿ ಹಾಗೂ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಹಾಡುಗಳಿಗೂ ಧ್ವನಿಯಾಗಿದ್ದಾರೆ.
ನಾಟಕದಿಂದ ವೃತ್ತಿ ಜೀವನ
ಯಶ್ ಏಕಾಏಕಿ ಸಿನಿಮಾ ರಂಗಕ್ಕೆ ಬಂದವರಲ್ಲ, ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರ ಗಿಟ್ಟಿಸಿಕೊಂಡು ಮೇಲೆ ಬಂದವರು. ಮೊಗ್ಗಿನ ಮನಸು ಸಿನಿಮಾದಲ್ಲಿ ಅವರ ನಟನೆಗೆ ಉತ್ತಮ ಪೋಷಕ ನಟ ಎಂಬ ಫಿಲ್ಮ್‌ಫೇರ್ ಅವಾರ್ಡ್ ಸಹ ಸಿಕ್ಕಿತ್ತು. ಇದಾದ ಬಳಿಕ 'ಜಂಬದ ಹುಡುಗಿ'ಯಲ್ಲಿಯೂ ಕಾಣಿಸಿಕೊಂಡಿದ್ದರು.
ತಂಗಿ ನಂದಿನಿಯೊಂದಿಗೆ ನಿಕಟ ಬಂಧ
ಸಿನಿಮಾ ಸೆಟ್‌ನಿಂದ ದೂರವಿದ್ದಾಗಲೆಲ್ಲಾ ಯಶ್ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಯಶ್ ತಮ್ಮ ಕುಟುಂಬದ ಸಂಬಂಧಗಳನ್ನು ಪಾಲಿಸುತ್ತಾರೆ, ಅವರ ಕಿರಿಯ ಸಹೋದರಿ ನಂದಿನಿಯೊಂದಿಗಿನ ಅವರ ನಿಕಟ ಸಂಬಂಧದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ, ಆಗಾಗ್ಗೆ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ತಂದೆ ಬಸ್ ಡ್ರೈವರ್
ನಿಮಗೆಲ್ಲಾ ತಿಳಿದಿರುವಂತೆ ಯಶ್ ಅವರ ತಂದೆ ಬಿಎಂಟಿಸಿಯಲ್ಲಿ ಡ್ರೈವರ್ ಆಗಿದ್ದರು. ಇದನ್ನು ಯಶ್ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಆರಂಭದ ದಿನದಲ್ಲಿ ತಂದೆಯಿಂದ ಹಣ ಕೇಳಿ ಪಡೆದು ಸಿನಿಮಾ ನಟನೆಗೆ ಅವಕಾಶಕ್ಕಾಗಿ ಸುತ್ತಾಡಿದ್ದರಂತೆ. ಆದರೆ 2014ರಲ್ಲಿ ಯಶ್ ತಂದೆ ತಮ್ಮ ಕೆಲಕ್ಕೆ ರಾಜೀನಾಮೆ ನೀಡಿದ್ದಾರೆ.
ಯಶೋಮಾರ್ಗ
ರಾಜ್ಯದ ರೈತರಿಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ಅವರು ಯಶೋಮಾರ್ಗ ಎಂಬ ಫೌಂಡೇಶನ್ ಸ್ಥಾಪಿಸಿದರು. 2017ರಿಂದ ಕಾರ್ಯಾರಂಭ ಮಾಡಿರುವ ಫೌಂಡೇಶನ್, ಕೆರೆ ನೀರು ತುಂಬಿಸುವುದು, ಹೂಳೆತ್ತುವುದು, ಬೋರ್‌ವೆಲ್, ಭಾವಿ, ಕೋಡಿ ನಿರ್ಮಾಣ, ರಸ್ತೆ ನಿರ್ಮಾಣ ಹೀಗೆ ಹತ್ತು ಹಲವು ಕಾರ್ಯಗಳ ಮಾಡಿಕೊಂಡು ಬರುತ್ತಿದೆ. ಯಶ್ ಈ ಫೌಂಡೇಶ್‌ನ ಬೆನ್ನಿಗೆ ನಿಂತು ಮುನ್ನಡೆಸುತ್ತಿದ್ದಾರೆ.
ಅಮಿತಾಭ್, ಶಾರುಖ್ ಹೊಗಳಿದ್ದ ಯಶ್
ಯಶ್ ಅವರ ಫೇಮಸ್ ಬಾಲಿವುಡ್ ನಟರೆಂದರೆ ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಎಂದಿದ್ದರು. 70ರ ದಶಕದಲ್ಲಿ ಅಮಿತಾಭ್ ಅಭಿನಯದ ಚಿತ್ರಗಳನ್ನು ನೋಡಿದ ನಂತರವೇ ಕೆಜಿಎಫ್‌ನಲ್ಲಿ ತಮ್ಮ ಪಾತ್ರಕ್ಕೆ ಸಿದ್ಧಗೊಂಡಿದ್ದೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಕನ್ನಡದಲ್ಲಿ ಅತೀ ಹೆಚ್ಚು ಸಂಭಾವನೆ
ಇನ್ನು ಸಂಭಾವನೆಯ ವಿಷಯಕ್ಕೆ ಬಂದರೆ ಯಶ್ ತಮ್ಮ ಕೆಲಸಕ್ಕೆ ತಕ್ಕಂತೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಕೆಜಿಎಫ್ ಯಶಸ್ಸಿನ ಬಳಿಕ ಯಶ್ ಸಂಭಾವನೆ ಬರೋಬ್ಬರಿ 15 ಕೋಟಿ ರೂಪಾಯಿಯಂತೆ. ಕೆಜಿಎಫ್ ಚಾಪ್ಟರ್ 2 ಹಾಗೂ ಮುಂಬರುವ ಟಾಕ್ಸಿಕ್ ಸಿನಿಮಾಗಳಿಗೆ ಅವರು 15 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.



Click it and Unblock the Notifications
