Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ತಪ್ಪಾದ ಮೊಬೈಲ್ ನಂಬರ್‌ಗೆ UPI ಮಾಡಿದ್ರೆ ಏನು ಮಾಡಬೇಕು? ಹಣ ಮರಳಿ ಪಡೆಯುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ನಾವು ಬ್ಯಾಂಕಿಂಗ್ ಹಾಗೂ ಹಣಕಾಸು ವಿಚಾರವಾಗಿ ಆಪ್‌ಗಳ ಮೊರೆ ಹೋಗಿದ್ದೇವೆ. ಬ್ಯಾಂಕ್ ತೆರಳುವುದು ಅಥವಾ ಕೈಯಲ್ಲಿ ನೋಟು ಹಿಡಿದುಕೊಂಡು ವ್ಯವಹಾರ ಮಾಡುವುದು ಅಪರೂಪ ಎಂಬಂತಾಗಿದೆ. ಏಕೆಂದರೆ ಯುಪಿಐ ಮೂಲಕ ಪಾವತಿ ಮಾಡುವುದು ಈಗ ಎಲ್ಲರೂ ಬಳಸುತ್ತಿರುವ ವಿಧಾನವಾಗಿದೆ. ಸಾಮಾನ್ಯವಾಗಿ ಬಹುತೇಕರು ಇಂದು ಸ್ಮಾರ್ಟ್ ಫೋನ್ ಹೊಂದಿದ್ದು ಯುಪಿಐ ಮೂಲಕ ಹಣಪಾವತಿ ಮಾಡುತ್ತಾರೆ.
2016ರಲ್ಲಿ ಆರಂಭಗೊಂಡ ಯುಪಿಐ ವ್ಯವಸ್ಥೆ ಇಂದು ಲಕ್ಷ ಕೋಟಿ ವ್ಯವಹಾರ ಮಾಡುತ್ತಿದೆ. ಬಹುತೇಕ ಮಂದಿ ಇದೇ ವಿಧಾನದ ಮೂಲಕ ಹಣ ಪಾವತಿ ಮಾಡುತ್ತಾರೆ. ಆದ್ರೆ ಕೆಲವೊಮ್ಮೆ ನೀವು ಒಂದು ಯುಪಿಐ ಐಡಿ ಬದಲಾಗಿ ಮತ್ತೊಂದು ಯುಪಿಐ ಐಡಿಗೆ ಹಣ ಹಾಕಿ ಆಘಾತಕ್ಕೊಳಗಾಗಿರುತ್ತೀರಿ. ಮೊಬೈಲ್ ನಂಬರ್ ತಪ್ಪಾಗಿ ನಮೂದಿಸಿ ಮಾಡುವ ಪಾವತಿಯೂ ತಪ್ಪಾದ ಯುಪಿಐ ಐಡಿಗೆ ಸಂದಾಯವಾಗುತ್ತದೆ.

ಹಲವು ಬಾರಿ ನೀವು ಕೂಡ ಈ ರೀತಿ ತಪ್ಪಾಗಿ ಯುಪಿಐಗೆ ಪಾವತಿ ಮಾಡಿರಬಬಹುದು. ಕಡಿಮೆ ಮೊತ್ತವಾದರೆ ಕೆಲವರು ಅದನ್ನು ನಿರ್ಲಕ್ಷಿಸುತ್ತಾರೆ. ಆದ್ರೆ ದೊಡ್ಡ ಮೊತ್ತವಾದರೆ ಆ ನಂಬರ್ ಹೊಂದಿರುವ ವ್ಯಕ್ತಿಯನ್ನು ಸಂಪರ್ಕಿಸಿ ಮರಳಿ ನೀಡುವಂತೆ ಕೇಳಬೇಕಾಗುತ್ತದೆ. ಒಂದು ವೇಳೆ ಅವರು ನಿರಾಕರಿಸಿದರೆ ಹಣ ಕಳೆದುಕೊಂಡಂತೆಯೇ ಲೆಕ್ಕ.
ಆದ್ರೆ ಈ ರೀತಿ ನೀವು ಗಡಿಬಿಡಿಯಲ್ಲಿ ಪಾವತಿ ಮಾಡುವಾಗ ತಪ್ಪಾದ ನಂಬರ್‌ಗೆ ಹಣ ಸಂದಾಯವಾದರೆ ಏನು ಮಾಡಬೇಕು? ಹಣ ಮರಳಿ ಪಡೆಯುವುದು ಹೇಗೆ ಅನ್ನೋದು ನಿಮಗೆ ಗೊತ್ತಾ? ಹೌದು ತಪ್ಪಾದ ಯುಪಿಐ ಐಡಿಗೆ ಹಣ ಸಂದಾಯವಾದರೆ ತಲೆಕೆಡಿಸಿಕೊಳ್ಳಬೇಡಿ. ಸುಲಭ ವಿಧಾನದ ಮೂಲಕ ಆ ಹಣವನ್ನು ಮರಳಿ ಪಡೆಯಬಹುದು.
ಯುಪಿಐ ಬಹಳ ಸುಲಭವಾಗಿ ಪಾವತಿ ಮಾಡಬಬಹುದಾದ ವಿಧಾನ. ಹೀಗಾಗಿ ದೊಡ್ಡ ದೊಡ್ಡ ಉದ್ಯಮಗಳಿಂದ ಹಿಡಿದು ಸಣ್ಣ ಪುಟ್ಟ ಮಾರಾಟಗಾರರು ಕೂಡ ಇಂದು ಅಂಗಡಿಗಳ ಮುಂದೆ ಕ್ಯೂಆರ್ ಕೋಡ್ ಹೊಂದಿರುತ್ತಾರೆ. ನೀವು ತಪ್ಪಾಗಿ ಹಣ ಪಾವತಿಸಿದ ಬಳಿಕ ರೀಫಂಡ್ ಪಡೆಯಲು ಯಾವುದೇ ವಿಧಾನಗಳಿಲ್ಲ. ಆದ್ರೆ ನೀವು ಯಾರಿಗೆ ಪಾವತಿಸಿದ್ದೀರೋ ಅವರನ್ನು ಸಂಪರ್ಕಿಸಿ ಅವರಿಂದ ಮರಳಿ ಪಡೆಯುವುದು ಬಹಳ ಸೂಕ್ತ ಹಾಗೂ ಸುಲಭದ ವಿಧಾನವಾಗಿರಲಿದೆ.
ಇನ್ನು ನೀವೇನಾದರು ಗೂಗಲ್ ಪೇ, ಫೋನ್ ಪೇ, ಭಾರತ್ ಪೇ, ಅಮೇಜಾನ್ ಪೇ ಮೂಲಕ ಪಾವತಿ ಮಾಡಿದ್ದರೆ ಅದರಲ್ಲಿರುವ ದೂರು ಸಲ್ಲಿಸಿ ಎಂಬ ಆಯ್ಕೆಯನ್ನು ಒತ್ತಿ ಬಳಿಕ ತಪ್ಪಾಗಿರುವ ಯುಪಿಐ ವ್ಯವಹಾರದ ಮಾಹಿತಿ ನಮೂದಿಸಬಹುದು. ಈ ರೀತಿ ಮಾಡಿದಾಗ ದೂರು ಸ್ವೀಕರಿಸಿದ 3ರಿಂದ 5 ಕೆಲಸದ ದಿನಗಳಲ್ಲಿ ನಿಮ್ಮ ಸಮಸ್ಯೆ ಬಗೆಹರಿಯಬಹುದು. ಅದ್ರೆ ವಂಚನೆಯಂತಹ ಪ್ರಕರಣದಲ್ಲಿ ಈ ಸಮಯವು ತಿಂಗಳ ಕಾಲ ತೆಗೆದುಕೊಳ್ಳಬಹುದು.
ಇನ್ನು ಆಪ್ ಮೂಲಕ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ ನೀವು ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ನೀವು ಯಾವ ಬ್ಯಾಂಕ್ ಮೂಲಕ ವ್ಯವಹಾರ ಮಾಡಿದ್ದೀರೋ ಆ ಬ್ಯಾಂಕ್ ಸಂಪರ್ಕಿಸಿ, ಅಲ್ಲಿ ದಾಖಲಾತಿಗಳ ನೀಡಬೇಕಾಗುತ್ತದೆ. ಬ್ಯಾಂಕ್ ಖಾತೆ, ವಹಿವಾಟಿನ ಐಡಿ, ಯುಪಿಐ ಐಡಿ, ಸ್ಕ್ರೀನ್ ಶಾಟ್, ಹಣ ಸ್ವೀಕರಿಸಿದವರ ಐಡಿ, ಮೊಬೈಲ್ ನಂಬರ್, ಹೀಗೆ ಕೆಲವು ದಾಖಲೆಗಳ ನೀಡಬಹುದು.
ಸಹಾಯವಾಣಿ ಸಂರ್ಪಕಿಸಿ
ನೀವು ತಪ್ಪಾಗಿ ಯುಪಿಐ ವಹಿವಾಟು ಮಾಡಿದ್ದರೆ NPCI (ಭಾರತೀಯ ರಾಷ್ಟ್ರೀಯ ಪಾವತಿ ನಿಗಮ) ಮೂಲಕ ದೂರ ನೀಡಬಹುದು. ಹಾಗೆ ಅಲ್ಲಿರುವ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಹಾಗೆ [email protected] ಅಥವಾ 1800-120-1740ಗೆ ಕರೆ ಮಾಡಿ ದೂರು ನೀಡಬಹುದು.



Click it and Unblock the Notifications
