Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಪ್ರಪಂಚದ ದುಬಾರಿ ನೌಕೆಯಿದು, ಇದನ್ನು ತಯಾರಿಸಲು 10,000 ಕೆಜಿ ಚಿನ್ನ, ಪ್ಲಾಟಿನಂ ಬಳಸಲಾಗಿದೆ!
ಕೈಯಲ್ಲಿ ದುಡ್ಡಿದ್ದರೆ ಏನು ಮಾಡಕ್ಕಾಗಲ್ಲ ಅಲ್ವಾ? ಇಲ್ಲೊಬ್ಬರು ಚಿನ್ನ ಹಾಗೂ ಪ್ಲಾಟಿನಂನಿಂದ ವಿವಾರ ನೌಕೆಯನ್ನು ತಯಾರಿಸಿದ್ದರೆ. ಈ ನೌಕೆಯನ್ನು ತಯಾರಿಸಲು 10,000 ಕೆಜಿ ಚಿನ್ನ ಬಳಸಿದ್ದಾರೆ, ಜೊತೆಗೆ ಪ್ಲಾಟಿನಂ ಕೂಡ ಬಳಸಿದ್ದಾರೆ ಇದರ ಬೆಲೆ ಎಷ್ಟಿದೆ ಎಂಬುವುದನ್ನು ನೀವೇ ಊಹಿಸಬಹುದು. ಇದು ಪ್ರಪಂಚದ ಅತ್ಯಂತ ದುಬಾರಿ ನೌಕೆಯಾಗಿದೆ.
ಬ್ರಿಟನ್‌ನ ಗ್ಯಾಡ್ಜೆಟ್ ಗುರುಯಾಗಿರುವ ಸ್ಟುವರ್ಟ್ ಹ್ಯೂಸ್ ಐಪ್ಯಾಡ್ ತಯಾರಿಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ತಯಾರಿಸಿದ ನೌಕೆ ಇದಾಗಿದೆ. ಇದರ ಬೆಲೆ $4.8 ಬಿಲಿಯನ್ ಅಂದರೆ 4,00,19,78,40,000.00 ರುಪಾಯಿ ಮೌಲ್ಯದ ನೌಕೆ ಇದಾಗಿದೆ.

ಇದುವರೆಗೆ ಅನೇಕ ದುಬಾರಿ ನೌಕೆಗಳು ಬಂದಿವೆ, ಅವುಗಳಲ್ಲಿಯೇ ಅತಿ ದುಬಾರಿ ನೌಕೆ ಇದಾಗಿದೆ. ಇದನ್ನು ಮಲೇಷ್ಯಾದ ಶ್ರೀಮಂತ ವ್ಯಕ್ತಿಯೊಬ್ಬರು ಖರೀದಿಸಿದ್ದಾರೆ. ಅವರ ಹೆಸರು ರಾಬರ್ಟ್ ನಾಕ್. ಇದರಲ್ಲಿ 220,462 ಪೌಂಡ್‌ನಷ್ಟು ಅಮೂಲ್ಯ ಮೌಲ್ಯದ ಲೋಹಗಳನ್ನು ಬಳಸಿ ಈ ನೌಕೆ ತಯಾರಿಸಲಾಗಿದೆ. ಈ ನೌಕೆಯ ರೈಲ್ಸ್, ಡೈನಿಂಗ್ ಹಾಲ್, ಬೋಟ್ ಬೇಸ್ ಇವುಗಳನ್ನು ನಿರ್ಮಿಸಲು ಚಿನ್ನ ಬಳಸಲಾಗಿದೆ.
ಈ ನೌಕೆಯಲ್ಲಿ 10,000 ಕಿ. ಗ್ರಾಂ ಚಿನ್ನವಿದ್ದು ಅವುಗಳನ್ನು ಬಳಸಿ ಅತ್ಯಾಕರ್ಷಕ ವಿನ್ಯಾಸವನ್ನು ನೀಡಲಾಗಿದೆ. ಈ ನೌಕೆಯಲ್ಲಿ ಪ್ರತಿಯೊಂದು ಮೂಲೆ-ಮೂಲೆಯೂ ಗಮನ ಸೆಳೆಯುತ್ತದೆ, ಆದರೆ ತುಂಬಾನೇ ಗಮನ ಸೆಳೆಯುವುದು ಇದರ ಬೆಡ್‌ರೂಂ ವಿನ್ಯಾಸ. 18.5-carat ಕ್ಯಾರೆಟ್ ಚಿನನ್ ಹಾಗೂ ವಜ್ರ ಬಳಸಿ ಲಿಕ್ಕರ್ ಬಾಟಲ್ ಮಾಡಲಾಗಿದೆ. 68 kg 24ಕ್ಯಾರೆಟ್ ಚಿನ್ನ ಬಳಸಿ ಪನೋರಾಮಿಕ್ ವಾಲ್ ಅಕ್ವೇರಿಯಂ ಮಾಡಲಾಗಿದೆ.
ಸಮುದ್ರದಲ್ಲಿ ಇರುವುದಕ್ಕಿಂತ ಮ್ಯೂಸಿಯಂ ಇದ್ದರೆ ಚೆಂದ ಎಂಬ ಮಾತುಗಳು
ಈ ನೌಕೆ ಎಷ್ಟು ಸುರಕ್ಷಿತ ಎಂಬುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲಲವರು ಈ ನೌಕೆ ಸಮುದ್ರದಲ್ಲಿ ಇರುವುದಕ್ಕಿಂತ ಮ್ಯೂಸಿಯಂನಲ್ಲಿದ್ದರೆ ಚೆಂದ ಎಂಬ ಅಭಿಪ್ರಾಯ ಹೇಳುತ್ತಿದ್ದಾರೆ.
ವಿಶ್ವದಲ್ಲಿರುವ ಇತರ ದುಬಾರಿ ನೌಕೆಗಳೆಂದರೆ
ಡೇವಿಡ್ ಗಟ್ಟಿನ್ ಅವರ ದಿ ರೈಸಿಂಗ್ ಸನ್
ಈ ನೌಕೆಯ ಬೆಲೆ ಬರೋಬರಿ $590 ಮಿಲಿಯನ್. ಇದನ್ನು 2004ರಲ್ಲಿ ತಯಾರಿಸಲಾಯ್ತು. ಈ ನೌಕೆಯಲ್ಲಿ ಬಾಸ್ಕೆಟ್‌ಬಾಲ್ ಕೋರ್ಟ್, ಹೆಲಿಕಾಪ್ಟರ್ ಇಳಿಯಲು ಸ್ಥಳ, ವೈನ್ ಸೆಲ್ಲರ್ , ಮೂವಿ ಥಿಯೇಟರ್ ಹೀಗೆ ಎಲ್ಲಾ ಲಕ್ಷುರಿ ಸೌಕರ್ಯ ಹೊಂದಿದೆ.
ಜೆಫ್ ಬೆಝೋಸ್‌ರವರ ಕೊರು
ಇದನ್ನು ಹೊಂದಿರುವವರು ಬೇರೆ ಯಾರೂ ಅಲ್ಲ ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋಸ್. ಇದರಲ್ಲಿ ಬಗೆ ಬಗೆಯ ಡೈನಿಂಗ್ ಟೇಬಲ್, ಬಾರ್, ಹಾಟ್ ಟಬ್ ಹೀಗೆ ಅನೇಕ ಸೌಕರ್ಯಗಳನ್ನು ಹೊಂದಿರುವ ದಬಾರಿ ನೌಕೆಯಾಗಿದೆ. ಇದರ ಬೆಲೆ $500 ಮಿಲಿಯನ್ ಇದೆ.
ಬಾರ್ರಿ ಡಿಲ್ಲರ್ ಅವರ ಡಯಾನೆ ವೋನ್ ಫಸ್ಟಂಡ್‌ಬರ್ಗ್ "Eos"
ಫ್ಯಾಷನ್ ಡಿಸೈನರ್ ಡಯಾನೆ ವೋನ್ ಫಸ್ಟಂರ್‌ಬರ್ಗ್‌ಗೆ ಸೇರಿದ ನೌಕೆಯಾಗಿದೆ. ಇದನ್ನು 2009ರಲ್ಲಿ ತಯಾರಿಸಲಾಯ್ತು, ಇದರ ಬೆಲೆ $200 ಮಿಲಿಯನ್ ಇದೆ.
ಲೌರೆನೆ ಪೌಲ್ ವೀನಸ್
ಇದರ ಮಾಲಿಕ ಸ್ಟೀವ್ ಜಾಬ್ಸ್ ಆಗಿದ್ದಾರೆ. ಇದರ ಬೆಲೆ $120 ಮಿಲಿಯನ್ ಇದೆ. ಈ ನೌಕೆ 225 ಅಡಿ ಉದ್ದವನ್ನು ಹೊಂದಿದೆ.
#5 Sean ಡಿಡ್ಡಿ ಕೋಂಬ್ಸ್ ದಿ ಮರಯಾ
177 ಅಡಿಯ ಈ ನೌಕೆಯನ್ನು 2012ರಲ್ಲಿ ಖರೀದಿಸಲಾಗುವುದು. ಇದರ ಬೆಲೆ $65 ಮಿಲಿಯನ್ ಆಗಿದೆ.



Click it and Unblock the Notifications
