Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಇದು ವಿಶ್ವದ ದುಬಾರಿ ಕೀಟ: ಇದರ ಬೆಲೆ ಬರೋಬ್ಬರಿ ₹75 ಲಕ್ಷ!!
ಕೀಟಗಳ ಜಗತ್ತಿನಲ್ಲಿ ಎಷ್ಟು ವಿಚಿತ್ರ ಜೀವಿಗಳು, ಅಚ್ಚರಿಗಳ ಅಡಗಿವೆ ಅಂದ್ರೆ ನಿಮಗೆ ಶಾಕ್ ಆಗಬಹುದು, ಅದ್ರಲ್ಲೂ ನೀವು ನಾವು ಕೇಳಿರದ ಅದೆಷ್ಟೋ ವಿಚಾರಗಳಿವೆ. ಭೂಮಿಯ ಮೇಲೆ ಅದೆಷ್ಟೋ ಕೀಟಗಳು ನಿಗೂಢತೆ ತಮ್ಮಲ್ಲಿ ಅಡಗಿಸಿಕೊಂಡಿವೆ. ಅದರಲ್ಲೀ ಈ ಜೀರುಂಡೆ ಕುರಿತು ನಿಮಗೆ ಗೊತ್ತಾ?
ಬೀಟಲ್ ಎಂದು ಕರೆಯಲ್ಪಡುವ ಸಾರಂಗ ಜೀರುಂಡೆ ವಿಶ್ವದ ಅತ್ಯಂತ ದುಬಾರಿ ಕೀಟ ಎನಿಸಿಕೊಂಡಿದೆ. ಈ ಒಂದು ಕೀಟಕ್ಕೆ ಬರೋಬ್ಬರಿ 75 ಲಕ್ಷ ರೂಪಾಯಿ ಬೆಲೆ ಇದೆ ಎಂಬುದು ನಿಮಗೆ ಗೊತ್ತಾ? ಹಾಗಾದ್ರೆ ಈ ಕೀಟಕ್ಕೆ ಇಷ್ಟೊಂದು ದುಬಾರಿ ಬೆಲೆ ಏಕೆ? ಇದರ ಉಪಯೋಗವೇನು? ಎಂಬುದನ್ನು ನೋಡಿ.

ಜಾಗತಿಕ ಮಾರುಕಟ್ಟೆಯಲ್ಲಿ ಈ ಕೀಟಕ್ಕೆ ದುಬಾರಿ ಬೆಲೆ ಇದೆ. ಏಕೆಂದರೆ ಡಾಲರ್ ಮೂಲಕ ವ್ಯವಹಾರ ಮಾಡಲು ಇದಕ್ಕೆ ಮಾರುಕಟ್ಟೆಯೂ ಇದೆ. ಈ ಜೀರುಂಡೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹಲವರು ನಂಬುತ್ತಾರೆ. ಇದರ ಅಸ್ಥಿತ್ವವು ಹಠಾತ್ ಸಂಪತ್ತನ್ನು ನೀಡುತ್ತದೆ ಎಂದು ಭಾವಿಸಲಾಗಿದೆ.
ಸಾರಂಗ ಜೀರುಂಡೆಯ ನೋಡಲು ವಿಚಿತ್ರವಾಗಿ ಕಾಣುತ್ತದೆ. ತನ್ನ ದೇಹಕ್ಕಿಂತ ದೊಡ್ಡದಾದ ದವಡೆ ಆಕಾರದ ಕೊಂಬುಗಳ ಹೊಂದಿರುತ್ತದೆ. ಈ ಆಕಾರದಿಂದಲೇ ಇದನ್ನು ಸಾರಂಗ ಜೀರುಂಡೆ ಎಂದು ಕರೆಯಲಾಗುತ್ತದೆ. ಈ ಜೀರುಂಡೆಗಳು ಔಷಧೀಯ ಮಹತ್ವವನ್ನು ಹೊಂದಿವೆ. ವಿವಿಧ ಸಾಂಪ್ರದಾಯಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ, ಸಾರಂಗ ಜೀರುಂಡೆಗಳು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ ಎಂದು ನಂಬಲಾಗಿದೆ.
ಗಂಡು ಸಾರಂಗ ಜೀರುಂಡೆಗಳು 4 ಸೆಂ.ಮೀ ನಿಂದ 9 ಸೆಂ.ಮೀ ಉದ್ದವಿರುತ್ತದೆ, ಆದರೆ ಹೆಣ್ಣುಗಳು ಸ್ವಲ್ಪ ಚಿಕ್ಕದಾಗಿರುತ್ತವೆ, 3 ಸೆಂ.ಮೀ ನಿಂದ 4 ಸೆಂ.ಮೀ ವರೆಗೆ ಇರುತ್ತದೆ. ಅವುಗಳ ಜೀವಿತಾವಧಿಯು ಮೂರರಿಂದ ಏಳು ವರ್ಷಗಳವರೆಗೆ ಬದಲಾಗುತ್ತದೆ, ಅವುಗಳಲ್ಲಿ ಹೆಚ್ಚಿನವು ಸುರಂಗಗಳನ್ನು ರಚಿಸುವ ಲಾರ್ವಾಗಳಾಗಿ ಭೂಮಿ ಒಳಗೆ ಜೀವಿಸಲಿವೆ.
ನ್ಯಾಶನಲ್ ಹಿಸ್ಟರಿ ಮ್ಯೂಸಿಯಂ ಪ್ರಕಾರ, ವಯಸ್ಕ ಸಾರಂಗ ಜೀರುಂಡೆಗಳು ಆಹಾರ ಸೇವಿಸುವುದಿಲ್ಲವಂತೆ, ಆದರೆ ಅವು ಸಿಹಿ ದ್ರವಗಳಾದ ಮರದ ಸಾಪ್ ಮತ್ತು ಕೊಳೆಯುವ ಹಣ್ಣುಗಳಿಂದ ದ್ರವವನ್ನು ಕುಡಿಯುತ್ತವೆ. ಇವು ಹೆಚ್ಚಾಗಿ ಸತ್ತ ಮರವನ್ನು ತಮ್ಮ ಲಾವಾಗಳ ಬಳಸಿ ತಿನ್ನುತ್ತವೆ. ಅಲ್ಲದೆ ಇದರಲ್ಲಿ ಅಡಗಿರುವ ಹುಳುಗಳು, ಕೀಟಗಳನ್ನೂ ಸಹ ಲಾರ್ವಾಗಳು ಜೀರ್ಣಿಸಿಕೊಳ್ಳುತ್ತವೆ.
ವಿದೇಶದಲ್ಲಿ ಈ ಜೀರುಂಡೆಗಳನ್ನು ಸಾಕು ಪ್ರಾಣಿಗಳಂತೆ ಸಾಕುವ ಹವ್ಯಾಸ ಹೊಂದಿದ್ದಾರೆ. ಮೀನು ಸಾಕುವ ಅಕ್ವೇರಿಯಂನಂತಹ ಗ್ಲಾಸ್‌ನಲ್ಲಿ ಇವುಗಳನ್ನು ಸಾಕಲಾಗುತ್ತದೆ. ಇವು ಭೂಮಿ ಮೇಲಿನ ಅತ್ಯಂತ ದೊಡ್ಡ ಜೀರುಂಡೆಗಳು. ಹೆಣ್ಣು ಜೀರುಂಡೆಗಳು ನೆಲದ ಮೇಲೆ ತೇವ ಪ್ರದೇಶದಲ್ಲಿ ಮೊಟ್ಟೆಗಳ ಇಡುತ್ತವೆ. ಇವು ತೆಳುವಾದ ರೆಕ್ಕೆಗಳ ಹಿಂದಿರುತ್ತವೆ, ಆದರೆ ಬಹಳ ದೂರ ಹಾಗೂ ಎತ್ತರಕ್ಕೆ ಹಾರಲು ಇವುಗಳಿಗೆ ಸಾಧ್ಯವಾಗುವುದಿಲ್ಲ.
ಹಿಂದೆ ಬ್ರಿಟಿಷ್ ಜಾನಪದದ ಪ್ರಕಾರ ಈ ಜೀರುಂಡೆಗಳು ಇರುವ ಕಡೆಗಳಲ್ಲಿ ಸಿಡಿಲು ಬಡಿಯುವುದಿಲ್ಲ ಎಂದು ನಂಬಲಾಗಿತ್ತು, ಹೀಗಾಗಿ ಹೈನುಗಾರಿಕೆ ಮಾಡುತ್ತಿದ್ದ ಮಂದಿ ಇವುಗಳನ್ನು ಹಿಡಿದು ತಂದು ತಮ್ಮ ಜಾನುವಾರು ಕೊಟ್ಟಿಗೆಯಲ್ಲಿ ಇಡುತ್ತಿದ್ದರು ಎಂದು ನಂಬಲಾಗಿದೆ. ಸಾಮಾನ್ಯವಾಗಿ ಈ ಜೀರುಂಡೆಗಳ ಆಯಸ್ಸು 6ರಿಂದ 7 ವರ್ಷಗಳಂತೆ. ಆದರೆ ಇವು ಕೊನೆಯವರೆಗೂ ಬದುಕುವುದು ಕಷ್ಟ, ಇವುಗಳು ನಿತ್ಯ ಬದುಕಿಗಾಗಿ ಹೋರಾಡಬೇಕಾಗುತ್ತದೆ. ಇವುಗಳ ಚಲನೆ ಅತ್ಯಂತ ನಿಧಾನವಾಗಿರೋದ್ರಿಂದ ಬೇರೆ ಕೀಟಗಳು, ಪಕ್ಷಿಗಳು, ಪ್ರಾಣಿಗಳು ಇವುಗಳ ಮೇಲೆ ದಾಳಿ ಮಾಡುವುದು ಸುಲಭವಾಗಿರುತ್ತದೆ.
ಇನ್ನು ಪರಿಸರದ ಸಮತೋಲನ ಕಾಪಾಡುವಲ್ಲಿ ಈ ಜೀರುಂಡೆ ಮಹತ್ವದ ಪಾತ್ರವಹಿಸುತ್ತದೆ. ಅರಣ್ಯದಲ್ಲಿ ಎಲೆಗಳು ಹಾಗೂ ಬಿದ್ದ ಒಣಮರಗಳ ಕೊಳೆಯುವಿಕೆಯಲ್ಲೂ ಈ ಜೀರುಂಡೆ ಪಾತ್ರವಹಿಸುತ್ತದೆ. ಹೀಗಾಗಿ ಇವು ದಟ್ಟ ಅರಣ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.



Click it and Unblock the Notifications











