Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ವಿಶ್ವದ ಅತೀ ತೂಕದ ಚಿನ್ನ ಬಟ್ಟೆ: ಬೆಲೆ 9.5 ಕೋಟಿ!! ಧರಿಸೋದು ಯಾರು?
ನೀವು ಇಡೀ ವಿಶ್ವದಲ್ಲಿ ದುಬಾರಿ ವಸ್ತುಗಳ ಮಾಡಿರುವುದು ನೋಡಿರಹುದು. ಮಾನವ ನಿರ್ಮಿತ ದುಬಾರಿ ವಸ್ತುಗಳಲ್ಲಿ ನೀವು ಹಲವು ವಸ್ತುಗಳ ನೋಡಿ ದಂಗಾಗಿರುತ್ತೀರಿ. ಅದ್ರಲ್ಲೂ ಚಿನ್ನದಿಂದ ಮಾಡುವಂತಹ ದುಬಾರಿ ವಸ್ತುಗಳೆಂದರೆ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗುತ್ತೆ. ಈಗಂತು ಚಿನ್ನದ ದರ ಗಗನಕ್ಕೇರಿದೆ. ಈ ನಡುವೆ ಚಿನ್ನದಿಂದ ಮಾಡಿದ ಅತ್ಯಂತ ದುಬಾರಿ ವಸ್ತುಗಳ ಪಟ್ಟಿಯಲ್ಲಿ ಈಗ ಈ ಬಟ್ಟೆಯೊಂದು ಸೇರಿಕೊಂಡಿದೆ.
ಬಟ್ಟೆಗಳನ್ನು ಹಲವು ವಸ್ತುಗಳ ಮಿಶ್ರಣದಿಂದ ಮಾಡಬಹುದಾದರು ಅವುಗಳನ್ನು ದುಬಾರಿಯನ್ನಾಗಿ ಮಾಡಲು ಹಲವು ವಸ್ತುಗಳು ಕಾರಣವಾಗಬಹುದು. ಈಗ ಇಲ್ಲೊಂದು ವಿಶ್ವದ ಅತ್ಯಂತ ತೂಕದ ಬಟ್ಟೆ ನಿರ್ಮಾಣಗೊಂಡಿದೆ. ಚಿನ್ನದಿಂದ ಮಾಡಿದ ವಿಶ್ವದ ಅತ್ಯಂತ ತೂಕ ಹೊಂದಿರುವ ಬಟ್ಟೆ ಇದಾಗಿದೆ. ಫ್ಯಾಷನ್ ಲೋಕದಲ್ಲಿನ ಹೊಸ ಅಚ್ಚರಿಯಾದ ಈ ಬಟ್ಟೆ ಕುರಿತು ನೀವು ಸಹ ತಿಳಿದರೆ ಅಚ್ಚರಿ ಪಡುತ್ತೀರಿ.

ಚಿನ್ನದಿಂದ ಮಾಡಿದ ಈ ಬಟ್ಟೆಯು ಬರೋಬ್ಬರಿ 10.5 ಕೆ,ಜಿ ತೂಕವಿದೆ. 24 ಕ್ಯಾರೆಟ್‌ನಿಂದ ಮಾಡಲಾದ ಈ ಬಟ್ಟೆಯು ವಿಶ್ವದ ತೂಕದ ಬಟ್ಟೆಯಾಗಿದೆ. ಹಾಗೆ ಇದನ್ನು ಅದ್ಭುತ ಸ್ಪೋನ್‌ಗಳಿಂದಲೂ ಕಸೂತಿ ಕೆಲಸ ಮಾಡಲಾಗಿದೆ. ದುಬೈನಲ್ಲಿ ತಯಾರಾಗಿರುವ ಈ ಬಟ್ಟೆ ಈಗ ಫ್ಯಾಷನ್ ಲೋಕದ ದಿಗ್ಗಜರ ಗಮನ ಸೆಳೆದಿದೆ.
ಇದು 398 ಗ್ರಾಂ ತೂಕದ ಚಿನ್ನದ ಕಿರೀಟ, 8,810.60 ಗ್ರಾಂ ತೂಕದ ಸ್ಟೇಟ್‌ಮೆಂಟ್ ನೆಕ್ಲೇಸ್, 134.1 ಗ್ರಾಂ ತೂಕದ ಕಿವಿಯೋಲೆಗಳು ಮತ್ತು 738.5 ಗ್ರಾಂ ತೂಕದ ಹಿಯಾರ್ ಎಂಬ ಸೊಂಟದ ಆಭರಣ ಒಳಗೊಂಡಿದೆ. ಇದರ ಮೌಲ್ಯ ಬರೋಬ್ಬರಿ 9.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹಾಗೆ ಇಷ್ಟು ತೂಕದ ಬಟ್ಟೆ ಧರಿಸಿ ಓಡಾಡುವುದು ಕೂಡ ಕಷ್ಟ ಎನಿಸಿದೆ.
ಈ ಉಡುಗೆಯ ವಿನ್ಯಾಸವು ಮಧ್ಯಪ್ರಾಚ್ಯ ಕಲಾತ್ಮಕತೆಯಿಂದ ಪ್ರೇರಿತವಾದ ಸಂಕೀರ್ಣವಾದ ವಿವರಗಳನ್ನು ಹೊಂದಿದೆ, ಸಮೃದ್ಧಿ, ಸೌಂದರ್ಯ ಮತ್ತು ಸಬಲೀಕರಣವನ್ನು ಪ್ರತಿನಿಧಿಸುವ ಲಕ್ಷಣಗಳೊಂದಿಗೆ ಎಲ್ಲರ ಗಮನ ಸೆಳೆದಿದೆ. ಈ ಚಿನ್ನದ ಡಿಸೈನ್‌ನ ನಡುವೆಯೇ ವಜ್ರಗಳು, ಮಾಣಿಕ್ಯ ಹರಳು, ಹಾಗೆ ಪಚ್ಛೆಗಳಂತಹ ಅಮೂಲ್ಯ ಸ್ಟೋನ್‌ಗಳ ಬಳಸಿ ಕಸೂರಿ ಕೆಲಸ ಮಾಡಲಾಗಿದೆ.
ಸೌದಿ ಅರೇಬಿಯಾದ ಪ್ರಮುಖ ಚಿನ್ನ ಮತ್ತು ಆಭರಣ ಬ್ರ್ಯಾಂಡ್ ಅಲ್ ರೊಮೈಜಾನ್ ರಚಿಸಿದ ಈ ಚಿನ್ನದ ಮೇರುಕೃತಿಯನ್ನು ಫ್ಯಾಷನ್, ಆಭರಣ ಮತ್ತು ಐಷಾರಾಮಿ ಉದ್ಯಮಗಳ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ ವಿಶೇಷ ಕಾರ್ಯಕ್ರಮದಲ್ಲಿ ಜಗತ್ತಿಗೆ ಪ್ರಸ್ತುತಪಡಿಸಲಾಯಿತು. ಇದು ಅತಿದೊಡ್ಡ ಆಭರಣ ಕಾರ್ಯಕ್ರಮವಾದ ಶಾರ್ಜಾದಲ್ಲಿ ನಡೆದ 56 ನೇ ಮಧ್ಯಪ್ರಾಚ್ಯ ವಾಚ್ ಮತ್ತು ಆಭರಣ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಇದು ಗಿನ್ನೀಸ್ ವಿಶ್ವ ದಾಖಲೆಗಳ ಮನ್ನಣೆಗೂ ಕಾರಣವಾಯಿತು.
ಈ ಚಿನ್ನದ ಡಿಸೈನ್ ಹೊಂದಿರುವ ವಿಶೇಷ ಧರಿಸು ಮಾರಾಟದ ದೃಷ್ಟಿಯಿಂದ ಮಾಡಲಾಗಿಲ್ಲವಂತೆ. ಬದಲಿಗೆ ಇದು ವಿಶ್ವದ ಪ್ರಮುಖ ನಗರಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಂತೆ. ಯುರೋಪ್ ಮತ್ತು ಏಷ್ಯಾದಲ್ಲಿ ಮುಂಬರುವ ಫ್ಯಾಷನ್ ಮತ್ತು ಆಭರಣ ಪ್ರದರ್ಶನಗಳಲ್ಲಿ ಈ ವಿಶೇಷ ವಿನ್ಯಾಸದ ಬಟ್ಟೆಯನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಸದ್ಯ ಆಭರಣ ಪ್ರಿಯರು ಹಾಗೆ ಫ್ಯಾಷನ್ ಫ್ರಿಯರು ಈ ವಿಶೇಷ ರೀತಿಯ ಬಟ್ಟೆಯನ್ನ ನೋಡಿ ಆಘಾತಕ್ಕೊಳಗಾಗಿದ್ದಾರೆ. ಹಾಗೆ ಇದರ ಬೆಲೆ ಕೂಡ ಕಂಡು ದಂಗಾಗಿದ್ದಾರೆ. ಹಾಗೆ ಅದರ ವಿನ್ಯಾಸ ನೋಡಿ ಧರಿಸುವ ಆಸೆಯಾದರು ಅದರ ಬೆಲೆ ಕೇಳಿದ್ರೆ ಹತ್ತಿರ ಸುಳಿಯೋಕು ಯೋಚನೆ ಮಾಡುವಂತಾಗುತ್ತದೆ. ಸದ್ಯ ಈ ಪೋಸ್ಟ್ ಅನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗೆ ನೋಡಿದವರು ಬಾಯಿ ಮೇಲೆ ಬೆರಳಿಡುವಂತೆ ಮಾಡಿದೆ.



Click it and Unblock the Notifications