Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ವಿಶ್ವದ ಅತೀದೊಡ್ಡ ಅನಕೊಂಡ ಹಾವು ಪತ್ತೆ...! ಇದು 26 ಅಡಿ ಹಾವಿನ ವಿಡಿಯೋ
ಜಗತ್ತಿನ ಅತೀ ದೊಡ್ಡ ಹಾವು ಯಾವುದು ಅಂತ ಕೇಳಿದ್ರೆ ನೀವು ಥಂಟ್ ಅಂತ ಅನಕೊಂಡ ಎನ್ನುತ್ತೀರಿ. ಇದರಲ್ಲಿ ಅನುಮಾನವೇನಿಲ್ಲ, ಏಕೆಂದರೆ ಅನಕೊಂಡ ಜಗತ್ತಿನ ಅತ್ಯಂತ ದೊಡ್ಡ ಹಾವಾಗಿದೆ. ಆದರೆ ನಾವು ಯಾವುದಾರು ಇಂಗ್ಲಿಷ್ ಸಿನಿಮಾದಲ್ಲಿ ಇದನ್ನು ನೋಡಿರುವುದು ಇಲ್ಲವೆ ಯಾವುದಾದರು ಝೂನಲ್ಲಿ ನೋಡಿರುತ್ತೇವೆ ಅಷ್ಟೆ.
ಏಕೆಂದರೆ ದೊಡ್ಡ ಅನಕೊಂಡಗಳ ತಳಿ ಈಗ ಕ್ಷೀಣಿಸಿದ್ದು, ಕೇವಲ ಅಮೇಜಾನ್ ಮಳೆ ಕಾಡುಗಳಲ್ಲಿ ಮಾತ್ರ ಕಂಡುಬರುತ್ತಿವೆ ಎಂದು ವರದಿಯಾಗಿದೆ. ಹೀಗೆ ಈಗ ಅಮೇಜಾನ್ ಮಳೆ ಕಾಡಿನ ನದಿಯಲ್ಲಿ ಪ್ರಪಂಚದ ಅತ್ಯಂತ ಉದ್ದದ ಹಾವು ಪತ್ತೆಯಾಗಿದೆ. ಹೌದು ಈವರೆಗೆ ಪತ್ತೆಯಾದ ಹಾವುಗಳಲ್ಲಿ ಇದು ಅತ್ಯಂತ ಉದ್ದ ಮತ್ತು ಬಾರದ ಹಾವು ಎಂದು ಹೇಳಲಾಗಿದೆ.

ಈ ಜಾತಿಯ ಹಾವು ಪ್ರಪಂಚದಲ್ಲೇ ಅತಿ ದೊಡ್ಡ ಮತ್ತು ಭಾರವಾದ ಹಾವು ಎಂದು ಹೇಳಲಾಗುತ್ತದೆ. ವಿಲ್ ಸ್ಮಿತ್ ಅವರೊಂದಿಗೆ ನ್ಯಾಷನಲ್ ಜಿಯೋಗ್ರಾಫಿಕ್ಸ್ ಡಿಸ್ನಿ+ ಸರಣಿಯ 'ಪೋಲ್ ಟು ಪೋಲ್' ಶೋ ಚಿತ್ರೀಕರಣದ ಸಮಯದಲ್ಲಿ ಈ ಹಾವು ಪತ್ತೆಯಾಗಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಮೆಜಾನ್ ಮಳೆಕಾಡಿನ ಮಧ್ಯೆ ವಿಶ್ವದ ಅತಿ ದೊಡ್ಡ ಹಾವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಹಿಂದೆ ದಾಖಲೆಗಳಿಲ್ಲದ ದೈತ್ಯ ಅನಕೊಂಡವನ್ನು ಇತ್ತೀಚೆಗೆ ಟಿವಿ ವನ್ಯಜೀವಿ ನಿರೂಪಕ ಪ್ರೊಫೆಸರ್ ಫ್ರೀಕ್ ವೊಂಕ್ ಅವರು ನ್ಯಾಷನಲ್ ಜಿಯಾಗ್ರಫಿಕ್ ಸರಣಿಯ ಸಮಯದಲ್ಲಿ ಕಂಡುಹಿಡಿದರು. ಬೃಹತ್ ಅನಕೊಂಡವು 26 ಅಡಿ ಉದ್ದ ಹಾಗೂ 440 ಪೌಂಡ್‌ಗಳಷ್ಟು ತೂಕವಿದೆ ಮತ್ತು ಅದರ ತಲೆಯು ಮಾನವನ ತಲೆಯಷ್ಟೇ ದೊಡ್ಡದಾಗಿದೆ ಎಂದು ಹೇಳಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ಪ್ರೊಫೆಸರ್ ವೊಂಕ್ ದೈತ್ಯ ಅನಕೊಂಡದ ಜೊತೆಗೆ ಈಜುತ್ತಿದ್ದಾರೆ. ''ನಾನು ನೋಡಿದ ಅತಿದೊಡ್ಡ ಅನಕೊಂಡವನ್ನು ವಡಿಯೋದಲ್ಲಿ ನೋಡಬಹುದು, ಕಾರಿನ ಟೈರ್‌ನಷ್ಟು ದಪ್ಪ, ಎಂಟು ಮೀಟರ್ ಉದ್ದ ಮತ್ತು 200 ಕೆಜಿಗಿಂತ ಹೆಚ್ಚು ಭಾರ - ನನ್ನ ತಲೆಯಷ್ಟು ದೊಡ್ಡ ತಲೆ ಹೊಂದಿದೆ. ದೈತ್ಯಾಕಾರದ ಸಂಪೂರ್ಣ ವಿಸ್ಮಯವಿದು'' ಎಂದು ಅವರು ಬರೆದುಕೊಂಡಿದ್ದಾರೆ.
ಹಿಂದೆ ಹಸಿರು ಅನಕೊಂಡದ ಒಂದು ಜಾತಿಯನ್ನು ಮಾತ್ರ ಅಮೇಜಾನ್ ಕಾಡಿನಲ್ಲಿದೆ ಎಂದು ಅಂದಾಜಿಸಲಾಗಿತ್ತು, ಇದನ್ನು ಜೈಂಟ್ ಅನಕೊಂಡ ಎಂದೂ ಕರೆಯುತ್ತಾರೆ. ಆದಾಗ್ಯೂ, ವೊಂಕ್ ಮತ್ತು ಅವರ ಒಂಬತ್ತು ದೇಶಗಳ ಇತರ 14 ವಿಜ್ಞಾನಿಗಳ ತಂಡವು ಈ ಅನಕೊಂಡ ಗ್ರೀನ್ ಅನಕೊಂಡ ಜಾತಿಗಿಂತಲೂ ಸಂಪೂರ್ಣ ಭಿನ್ನವಾಗಿದೆ ಎಂದು ಕಂಡುಕೊಂಡಿದ್ದಾರೆ.
ಸಾಮಾನ್ಯವಾಗಿ ಈ ಅನಕೊಂಡಗಳು ಹೆಚ್ಚು ಕಾಲ ವಿಶ್ರಾಂತಿ ಪಡೆಯುತ್ತವೆ, ಒಮ್ಮೆ ಭೇಟಿಯಾಡಿದರೆ ದೊಡ್ಡ ಪ್ರಾಣಿಗಳನ್ನು ಇಡಿಯಾಗಿ ತಿಂದು ಮಲಗಿಬಿಡುತ್ತವೆ. ಹೀಗಾಗಿ ಇವುಗಳ ಆಯಸ್ಸಿ ಸಹ ಹೆಚ್ಚಾಗಿರುತ್ತದೆ. ಈ ಅನಕೊಂಡದ ಬೆನ್ನ ಮೇಲೆ ಗಾಯಗಳಿವೆ, ಆದರೆ ಇದು ಮಾರಾಣಾಂತಿಕವಲ್ಲ ಬದಲಿಗೆ ಇದು ವಯಸ್ಸಿನ ಕಾರಣಕ್ಕೆ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.
ಅನಕೊಂಡ ಹಾವಿನ ಕುರಿತ ಅಚ್ಚರಿ ವಿಚಾರಗಳು
ಅನಕೊಂಡಗಳು ಎಷ್ಟಿ ದೊಡ್ಡದಾಗಿದ್ದರು ಅವು ವಿಷಕಾರಿಯಲ್ಲ, ಜೊತೆಗೆ ಅವುಗಳಿಗೆ ಹಲ್ಲುಗಳೂ ಇಲ್ಲ. ಹೀಗಾಗಿ ಅವುಗಳನ್ನು ಬೋವಾಸ್ ಎಂದು ಕರೆಯಲಾಗುತ್ತದೆ. ಅನಕೊಂಡಗಳಲ್ಲಿ 4 ಜಾತಿಗಳಿವೆ, ಗ್ರೀನ್ ಅನಕೊಂಡ (ಯುನೆಕ್ಟೀಸ್ ಮುರಿನಸ್), ಹಳದಿ ಅನಕೊಂಡಗಳು (ಇ. ನೋಟೇಯಸ್), ಬೊಲಿವಿಯನ್ ಅನಕೊಂಡ (ಇ. ಬೆನಿಯೆನ್ಸಿಸ್), ಮತ್ತು ಡಾರ್ಕ್ ಸ್ಪಾಟೆಡ್ ಅನಕೊಂಡ (ಇ. ಡೆಸ್ಚೌನ್ಸೀ).
ಬ್ರೆಜಿಲ್, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಬೊಲಿವಿಯಾ, ಪೆರು ಮತ್ತು ಈಕ್ವೆಡಾರ್‌ನ ಭಾಗಗಳನ್ನು ಒಳಗೊಂಡಂತೆ ಉಷ್ಣವಲಯದ ದಕ್ಷಿಣ ಅಮೆರಿಕಾದ ಮೂಲಕ ತೇವ ಪ್ರದೇಶಗಳು ಮತ್ತು ನದಿ ಜಲಾನಯನ ಪ್ರದೇಶಗಳಲ್ಲಿ ವಾಸಿಸುವ ಗ್ರೀನ್ ಅನಕೊಂಡಗಳು ಅತಿದೊಡ್ಡ ಮತ್ತು ಪ್ರಸಿದ್ಧವಾಗಿವೆ.
ದೊಡ್ಡ ಅನಕೊಂಡಗಳು ಸಾಮಾನ್ಯವಾಗಿ 200 ಪೌಂಡ್‌ಗಳಿಗಿಂತ ಹೆಚ್ಚು ತೂಗುತ್ತವೆ, ಆದರೆ ಭೂಮಿಯ ಮೇಲಿನ ಅತಿ ಉದ್ದದ ಹಾವು ರೆಟಿಕ್ಯುಲೇಟೆಡ್ ಪೈಥಾನ್ (ಪೈಥಾನ್ ರೆಟಿಕ್ಯುಲಾಟಸ್) ಆಗಿದೆ. ಇವುಗಳ ಸರಾಸರಿ ಉದ್ದ ಸುಮಾರು 25 ಅಡಿ ಆಗಿದೆ. ಇನ್ನು ಅನಕೊಂಡಗಳು ವರ್ಷಕ್ಕೆ ಒಮ್ಮೆ ಮೊಟ್ಟೆಗಳ ಇಡುತ್ತವೆ. ಒಂದೇ ಬಾರಿಗೆ ಅವು ಸುಮಾರು 35ರಿಂದ 40 ಮೊಟ್ಟೆಗಳ ಇಡಬಹುದು. ಆದರೆ ಈ ಮರಿಗಳಲ್ಲಿ 10ರಿಂದ 15 ಮರಿಗಳು ಮಾತ್ರ ಬದುಕುಳಿಯುತ್ತವೆ ಎನ್ನಲಾಗಿದೆ.



Click it and Unblock the Notifications