Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಡಿಸೆಂಬರ್ 21: ಈ ದಿನ ವರ್ಷದ ಅತ್ಯಂತ ಕಡಿಮೆ ದಿನ, ಈ ದಿನದ ವಿಶೇಷತೆಯೇನು?
ಡಿಸೆಂಬರ್ 21 ವರ್ಷದ ಅತ್ಯಂತ ಕಡಿಮೆ ದಿನವಾಗಿದೆ, ವರ್ಷದ 365 ದಿನಗಳಲ್ಲಿ ಈ ದಿನ ಕಡಿಮೆ ದಿನವಾಗಿದೆ. ಈ ದಿನ ಬಹು ಬೇಗನೆ ಮುಗಿದು ಹೋಗುತ್ತದೆ. ಈ ದಿನ 24 ಗಂಟೆ ಇರುವುದಿಲ್ಲವಾ? ಅಂತ ಕೇಳಿದರೆ ಎಲ್ಲಾ ದಿನದಂತೆ ಈ ದಿನವೂ 24 ಗಂಟೆ ಇದೆ, ಆದರೆ ಹಗಲು ತುಂಬಾ ಕಡಿಮೆ ಇರುತ್ತದೆ, ಬಹು ಬೇಗನೆ ಕತ್ತಲಾಗುವುದು.

ಈ ದಿನದ ವಿಶೇಷತೆ ಬಗ್ಗೆ ಹೇಳುವುದಾದರೆ
ಈ ದಿನದಂದು ಸೂರ್ಯನ ಬೆಳಕು ಭೂಮಿ ಮೇಲೆ 12 ಗಂಟೆ ಮಾತ್ರ ಇರುತ್ತದೆ, ಬಹು ಬೇಗನೆ ಕತ್ತಲಾಗುವುದು. ಇನ್ನು ಈ ದಿನದಂದು ಉತ್ತರ ಧ್ರುವದಲ್ಲು ಬೇಗನೆ ರಾತ್ರಿಯಾದರೆ ದಕ್ಷಿಣ ಧ್ರುವದಲ್ಲಿ ಹಗಲು ದೀರ್ಘವಾಗಿರುತ್ತದೆ. ಇದನ್ನು ಚಳಿಗಾಲದ ಆಯನ ಸಂಕ್ರಾಂತಿ ಎಂದು ಕರೆಯಲಾಗುವುದು.
ಚಳಿಗಾಲದ ಆಯನ ಸಂಕ್ರಾಂತಿಯಿಂದ
ಚಳಿಗಾಳದ ಆಯನ ಇಂದಿನಿಂದ ಆರಂಭವಾಗುವುದು, ಈ ದಿನ ಕ್ರಿಸ್ಮಸ್ ಆಚರಣೆ ಶುರುವಾಗುವುದು.ಈ ದಿನದಂದು ಸೂರ್ಯನು ಬಾಗಿದಂತೆ ಗೋಚರಿಸುತ್ತಾನೆ.
ವರ್ಷದಲ್ಲಿ ಎರಡು ಬಾರಿ ಆಯನ ಸಂಕ್ರಾಂತಿ ಸಂಭವಿಸುತ್ತದೆ
ವರ್ಷದಲ್ಲಿ ಎರಡು ಬಾರಿ ಆಯನ ಸಂಭವಿಸುತ್ತೆ. ಉತ್ತರ ಆಯನ ಹಾಗೂ ದಕ್ಷಿಣ ಆಯನ. ಗೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷವನ್ನು ಮೂರು ಪೂರ್ಣ ತಿಂಗಳುಗಳ ನಾಲ್ಕು ಋತುಗಳಾಗಿ ವಿಂಗಡಿಸಿದೆ. ಅದರ ಪ್ರಕಾರ ಚಳಿಗಾಲವು ಡಿಸೆಂಬರ್ 1ರಿಂದ ಫೆಬ್ರವರಿ ಅಂತ್ಯದವರೆಗೆ ಇರಲಿದೆ.
ಆಯನ ಸಂಕ್ರಾಂತಿ ಬಳಿಕ ಚಳಿ ತೀವ್ರವಾಗುವುದು. ಯುರೋಪ್‌ನಲ್ಲಿ ಸೂರ್ಯನ ಸಾವು ಹಾಗೂ ಮರು ಹುಟ್ಟಿನ ಸಂಕೇತವಾಗಿ ಆಚರಿಸಲಾಗುವುದು. ಈ ಆಯನ ಸಂಕ್ರಾಂತಿ ಚಟುವಟಿಕೆ ಬಳಿಕ ಕೃಷಿ ಚಟುವಟಿಕೆ ಗರಿಗೆದರುವುದು, ಈ ಸಮಯದಿಂದ ಕೊಯ್ಲು ಕಾರ್ಯಗಳು ನಡೆಯುವುದು.
ಪ್ರಾಣಿಗಳ ಸಂತಾನೋತ್ಪತ್ತಿಯ ಸಮಯ
ಪ್ರಾಣಿಗಳು ಸಂತಾನೋತ್ಪತ್ತಿ ಚಟುವಟಿಕೆಯಲ್ಲಿ ವರ್ಷದ ಕೆಲ ಸಮಯದಲ್ಲಿಷ್ಟೇ ತೊಡಗಿಕೊಳ್ಳುತ್ತವೆ. ಆಯನ ಸಂಕ್ರಾಂತಿ ಬಳಿಕ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಚಟುವಟಕೆ ಕಂಡು ಬರುವುದು. ಈ ದಿನದಂದು ಹಗಲು ಕಡಿಮೆಯಿದ್ದು ರಾತ್ರಿ ಹೆಚ್ಚಾಗಿರುತ್ತದೆ, ಮಾರನೇಯ ದಿನದ ಸೂರ್ಯೋದಯವನ್ನು ಸೂರ್ಯನ ಮರು ಹುಟ್ಟು ಎಂದು ಯುರೋಪ್‌ನಲ್ಲಿ ನಂಬಲಾಗಿದೆ.
ಆಯನ ಸಂಕ್ರಾಂತಿಯನ್ನು ಸೋಲ್‌ಸ್ಟೈಸ್ ಎಂದು ಕರೆಯಲಾಗುವುದು. ಸೋಲ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಸೂರ್ಯ ಎಂದರ್ಥ ಸಿಸ್ಟರೆ ಎಂದರೆ ಸ್ಥಿರವಾಗಿ ನಿಲ್ಲುವುದು ಎಂದರ್ಥ. ನಾಸಾ ಪ್ರಕಾರ ಆಯನ ಸಂಕ್ರಾಂತಿ 4:20ಕ್ಕೆ ಪ್ರಾರಂಭವಾಗುವುದು.
ಆಯನ ಸಂಕ್ರಾಂತಿ ಏಕೆ ಸಂಭವಿಸುತ್ತದೆ?
ಭೂಮಿಯು ತನ್ನ ಕಕ್ಷೆಯಲ್ಲಿ ಓರೆಯಾಗಿ ಚಲಿಸುವುದು, ಭೂಮಿಯು ಸುರ್ಯನ ಸುತ್ತ ಸುತ್ತುತ್ತಿರುತ್ತದೆ. ಈ ದಿನದಂದು ಸೂರ್ಯನ ಬೆಳಕು ಭೂಮಿಯ ಮೇಲೆ ಕಡಿಮೆ ಬೀಳುತ್ತದೆ, ದಕ್ಷಿಣಾರ್ಧ ಭಾಗದಲ್ಲಿ ಸೂರ್ಯನ ಬೆಳಕು ಕಡಿಮೆ ಬೀಳುತ್ತದೆ, ಬೇಗನೆ ಕತ್ತಲಾಗುವುದು.
ಈ ಖಗೋಳದಲ್ಲಿ ಎಷ್ಟೊಂದು ಕುತೂಹಲದ ಸಂಗತಿಗಳಿವೆ ಅಲ್ವಾ? ಈ ದಿನ ಕೂಡ ಅಂಥದ್ದೊಂದು ದಿನವಾಗಿದೆ. ಗ್ರಹಣಗಳು, ಹುಣ್ಣಿಮೆ, ಅಮವಾಸ್ಯೆ, ಈ ರೀತಿಯ ಆಯನಗಳು ಈ ಎಲ್ಲಾವನ್ನು ವಿಜ್ಞಾನ ವಿಶ್ಲೇಷಣೆಯಿಂದಲೂ ನೋಡುತ್ತೇವೆ, ಅದೇ ಸಮಯದಲ್ಲಿ ಇವುಗಳ ಬಗ್ಗೆ ಹಲವಾರು ಧಾರ್ಮಿಕ ನಂಬಿಕಎಗಳು ಕೂಡ ಇವೆ, ಇದು ಜಗತ್ತಿನ ಎಲ್ಲಾ ಭಾಗದಲ್ಲಿಯೂ ಇದೆ.



Click it and Unblock the Notifications
