Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವಿಶ್ವದ 10 ಶ್ರೀಮಂತರ ಪಟ್ಟಿ ಪ್ರಕಟ: 80 ವರ್ಷದ ವ್ಯಕ್ತಿ 2ನೇ ಶ್ರೀಮಂತ..ಅದಾನಿ, ಅಂಬಾನಿ ಹೆಸರೇ ಇಲ್ಲ..!
ವಿಶ್ವದ ಶ್ರೀಮಂತರು ಅಂದ್ರೆ ಅವರ ಬಳಿಕ ಲಕ್ಷ ಕೋಟಿ ಸಂಪತ್ತು ಅವರ ಜೀವಮಾನದಲ್ಲಿ ಕರಗದಷ್ಟು ಆಸ್ತಿ ಮಾಡಿರುವುದು ನೋಡಬಹುದು. ಉದ್ಯಮಿಗಳು ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ 2025ರ ಶ್ರೀಮಂತರ ಪಟ್ಟಿಯನ್ನ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮಾರ್ಕ್ ಜುಕರ್‌ಬರ್ಗ್ ಒಂದು ಸ್ಥಾನ ಇಳಿಕೆ ಕಂಡಿದ್ದರೆ ಭಾರತದ ಯಾರೊಬ್ಬರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.
ಜುಲೈ 16 2025ರ ವಿಶ್ವದ ಶ್ರೀಮಂತರ ಪಟ್ಟಿಯನ್ನು ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿದೆ. ಅದರಲ್ಲಿ ಹಲವರ ಸಂಪತ್ತು ಕರಗಿರುವುದು ಹಾಗೆ ಹಲವರಲ್ಲಿ ಸಂಪತ್ತು ಹೆಚ್ಚಳ ಆಗಿರುವುದು ನೋಡಬಹುದು. ಜಾಗತಿಕ ಶ್ರೇಯಾಂಕದಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಒಂದು ಸ್ಥಾನ ಕುಸಿತ ಕಂಡಿದ್ದು, ಮೂರನೇ ಸ್ಥಾನದಲ್ಲಿದ್ದಾರೆ. ಹಾಗೆ ಒರಾಕಲ್ ಕಾರ್ಪೊರೇಷನ್‌ನ ಅಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಲ್ಯಾರಿ ಎಲಿಸನ್ ಜುಕರ್‌ಬರ್ಗ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. 80 ವರ್ಷದ ಆತ ಇದೇ ಮೊದಲ ಬಾರಿಗೆ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ಲ್ಯಾರಿ ಎಲಿಸನ್ ಅವರ ಒರಾಕಲ್ ಕಂಪನಿ ಷೇರುಗಳ ಮೌಲ್ಯ ಏಕಾಏಕಿ ಏರಿಕೆ ಕಂಡಿದ್ದ ಕಾರಣ ಅವರ ಆಸ್ತಿ ಹೆಚ್ಚಳವಾಗಿದೆ. ಎಲಿಸನ್ ಅವರ ನಿವ್ವಳ ಮೌಲ್ಯವು ಈಗ $251.2 ಬಿಲಿಯನ್ ಆಗಿದೆ, ಇದು ಜುಕರ್‌ಬರ್ಗ್ ಅವರ $251 ಬಿಲಿಯನ್‌ಗಿಂತ ಸ್ವಲ್ಪ ಹೆಚ್ಚಾಗಿದೆ. ಎಲಿಸನ್ ಅವರ ಸಂಪತ್ತು ಒಂದೇ ದಿನದಲ್ಲಿ $4.71 ಬಿಲಿಯನ್ ಏರಿಕೆ ಕಂಡಿತ್ತು, ಹಾಗೆ ಜುಕರ್‌ಬರ್ಗ್ ಆಸ್ತಿ $3.59 ಬಿಲಿಯನ್ ಕುಸಿತ ಕಂಡಿತ್ತು.
ಒರಾಕಲ್ ಕಂಪನಿಯು ಚಾಟ್ ಜಿಪಿಟಿಯಲ್ಲಿ ಹೂಡಿಕೆ ಮಾಡಿರುವುದಲ್ಲದೆ ಒಪ್ಪಂದಗಳನ್ನೂ ಕೂಡ ಮಾಡಿಕೊಂಡಿದೆ. ಇದರಿಂದ ಕಂಪನಿ ಮೌಲ್ಯ ಏರಿಕೆಯಾಗುತ್ತಿದೆ. ಹೀಗಾಗಿ ಏಪ್ರಿಲ್ 2025ರಿಂದ ಕಂಪನಿ ಶೇ 90ರಷ್ಟು ಲಾಭ ಗಳಿಸಿದೆ ಎಂದು ತಿಳಿದುಬಂದಿದೆ. ಒರಾಕಲ್ ಸಾಫ್ಟ್‌ವೇರ್, ಕೃತಕ ಬುದ್ದಿಮತ್ತೆ ಸಂಬಂಧಿಸಿದಂತೆ ಹೂಡಿಕೆ ಮಾಡುತ್ತಿದೆ.
ಇನ್ನು ಈ ಪಟ್ಟಿಯಲ್ಲಿ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ. ಅವರು $358 ಬಿಲಿಯನ್ ಆಸ್ತಿ ಹೊಂದಿದ್ದಾರೆ. ಇತ್ತೀಚಿಗೆ ಮಸ್ಕ್ ಅವರ ಆಸ್ತಿ ಮೌಲ್ಯದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಮಸ್ಕ್ ಇತ್ತೀಚಿಗೆ ಹೊಸ ಹೂಡಿಕೆಗಳಲ್ಲು ಲಾಭದಾದಯ ಏರಿಕೆ ನೋಡಿದ್ದಾರೆ. ಆದರೆ ಟೆಸ್ಲಾ ಷೇರುಗಳಲ್ಲಿ ಇಳಿಕೆಯ ಹೊರತಾಗಿಯೂ ಅವರು ವಿಶ್ವದ ಶ್ರೀಮಂತ ಉದ್ಯಮಿಯಾಗಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.
ಅದಾನಿ, ಅಂಬಾನಿಯ ಹೆಸರಿಲ್ಲ!
ಇನ್ನು ಭಾರತೀಯ ಉದ್ಯಮಿಗಳಾಗಿರುವ ಗೌತಮ್ ಅದಾನಿ ಹಾಗೆ ಮುಖೇಶ್ ಅಂಬಾನಿ ಸೇರಿದಂತೆ ಅಗ್ರ ಹತ್ತರ ಪಟ್ಟಿಯಲ್ಲಿ ಭಾರತೀಯ ಉದ್ಯಮಿಗಳ ಹೆಸರಿಲ್ಲ. ಈ ಮೊದಲು ಈ ಪಟ್ಟಿಯಲ್ಲಿ ಗೌತಮ್ ಅದಾನಿ ಸ್ಥಾನ ಪಡೆದಿದ್ದರು. ಸದ್ಯ ಅದಾನಿ ಅವರು ಈಗ $56.3 ಬಿಲಿಯನ್ ಆಸ್ತಿ ಹೊಂದಿದ್ದಾರೆ. ಹಾಗೆ ಮುಖೇಶ್ ಅಂಬಾನಿ $112.4 ಬಿಲಿಯನ್ ಆಸ್ತಿ ಹೊಂದಿದ್ದಾರೆ.
ವಿಶ್ವ ಶ್ರೀಮಂತ ಉದ್ಯಮಿಗಳ ಪಟ್ಟಿ ಹಾಗೂ ಅವರ ಆಸ್ತಿ ಮೌಲ್ಯ!
- ಎಲಾನ್ ಮಸ್ಕ್ : $358 ಬಿಲಿಯನ್
- ಲ್ಯಾರಿ ಎಲಿಸನ್: $251 ಬಿಲಿಯನ್
- ಮಾರ್ಕ್ ಜುಕರ್‌ಬರ್ಗ್: $251 ಬಿಲಿಯನ್
- ಜೆಫ್ ಬೆಜೋಸ್: $247 ಬಿಲಿಯನ್
- ಸ್ಟೀವ್ ಬಾಲ್ಮರ್: $174 ಬಿಲಿಯನ್
- ಲ್ಯಾರಿ ಪೇಜ್: $165 ಬಿಲಿಯನ್
- ಬರ್ನಾರ್ಡ್ ಅರ್ನಾಲ್ಟ್: $156 ಬಿಲಿಯನ್
- ಸೆರ್ಗೆ ಬ್ರಿನ್: $154 ಬಿಲಿಯನ್
- ಜೆನ್ಸನ್ ಹುವಾಂಗ್: $149 ಬಿಲಿಯನ್
- ವಾರೆನ್ ಬಫೆಟ್: $141 ಬಿಲಿಯನ್



Click it and Unblock the Notifications
