Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವದ ಅತಿದೊಡ್ಡ ಖಾಸಗಿ ನಿವಾಸ ಇದು: ಬಕಿಂಗ್ಹ್ಯಾಮ್ ಅರಮನೆ ಇದರ ಮುಂದೆ ಏನು ಅಲ್ಲ!!
ವಿಶ್ವದ ದೊಡ್ಡ ಮನೆ ಯಾವುದು ಎಂದು ಯಾರಾದ್ರು ಕೇಳಿದ್ರೆ ಹಲವು ರೀತಿಯ ಉತ್ತರಗಳ ನಿರೀಕ್ಷಿಸಬಹುದು, ಅದ್ರಲ್ಲಿ ಅಂಬಾನಿ ನಿವಾಸವೂ ಕೂಡ ಒಂದು ಎನ್ನಬಹುದು. ಜನರು ವಾಸವಿರುವ ಅತ್ಯಂತ ದೊಡ್ಡ ವಿಲಾಸಿ ನಿವಾಸದಲ್ಲಿ ಇದು ಕೂಡ ಒಂದು ಮುಂಬೈನ ಆಂಟಿಲಿಯಾ ಕಟ್ಟಡವು ಅದ್ಭುತ ವಿನ್ಯಾಸದಿಂದ ತುಂಬಿರುವ ಅಚ್ಚರಿ ಎನ್ನಬಹುದು.
ಆದ್ರೆ ಭಾರತ ಮಾತ್ರವಲ್ಲ ವಿಶ್ವದ ಅತ್ಯಂತ ದೊಡ್ಡ ನಿವಾಸ ಗುಜರಾತ್‌ನಲ್ಲಿದೆ ಎಂಬುದು ನಿಮಗೆ ಗೊತ್ತಾ? ಬ್ರಿಟೀಷರ ಕಾಲದ ಈ ಅರಮನೆ ವಿಶ್ವದ ಅತೀ ದೊಡ್ಡ ಖಾಸಗಿ ನಿವಾಸವಾಗಿದೆ. ಗುಜರಾತ್‌ನ ವಡೋದರಾದಲ್ಲಿರುವ ಲಕ್ಷ್ಮಿ ವಿಲಾಸ್ ಅರಮನೆಯು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾಗಿದೆ,

ಈ ಅರಮನೆ ಬರೋಬ್ಬರಿ 700 ಎಕರೆ ಜಾಗದಲ್ಲಿ ಹರಡಿದೆ. ಇದು ಲಂಡನ್‌ನಲ್ಲಿರುವ ಪ್ರಸಿದ್ಧ ಬಕಿಂಗ್ಯಾಮ್ ಅರಮನೆಗಿಂತಲೂ ದೊಡ್ಡದಾಗಿದೆ. ಈ ಅರಮನೆಯಲ್ಲಿ 170 ಕೊಠಡಿಗಳು, ರಾಜಮನೆತನದ ಸಭಾಂಗಣ, ಬೃಹತ್ ಉದ್ಯಾನ, ಗಾಲ್ಫ್ ಕೋರ್ಸ್, ಈರುಕೊಳ, ಕುದುರೆ ಸವಾರಿ, ಸೇರಿ ಹಲವು ರೀತಿಯ ಐಷಾರಾಮಿ ಸೌಲಭ್ಯಗಳ ಹೊಂದಿದೆ.
ಈ ಅರಮನೆಯನ್ನು 1875ರಲ್ಲಿ ಬರೋಡಾ ರಾಜ್ಯದ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ನಿರ್ಮಾಣವನ್ನು ಪ್ರಾರಂಭಿಸಿದರು, ಇದು ಪೂರ್ಣಗೊಳ್ಳಲು ಬರೋಬ್ಬರಿ 12 ವರ್ಷಗಳ ತೆಗೆದುಕೊಂಡಿತು. ಬ್ರಿಟಿಷ್ ವಾಸ್ತುಶಿಲ್ಪಿ ಚಾರ್ಲ್ಸ್ ಫೆಲೋಸ್ ಚಿಶೋಲ್ಮ್ ವಿನ್ಯಾಸಗೊಳಿಸಿದ್ದ. ಬ್ರಿಟೀಷರ ಕಾಲದಲ್ಲಿಯೇ ಅದು ಸುಮಾರು 18,000 ಗ್ರೇಟ್ ಬ್ರಿಟನ್ ಪೌಂಡ್‌ಗಳಾಗಿತ್ತು. ಅಂದರೆ ಇಂದಿನ ರೂಪಾಯಿಗೆ ಹೋಲಿಸಿದರೆ ಇದು ಬರೋಬ್ಬರಿ 24,393 ಕೋಟಿ ಮೌಲ್ಯವಾಗಲಿದೆ.
ಇದು ಭಾರತದ ಅತ್ಯಂತ ದುಬಾರಿ ಮನೆಯಾಗಿದೆ. 3,04,92,000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅರಮನೆಯು ಇನ್ನೂ ರಾಯಲ್ ಗಾಯಕ್ವಾಡ್ ಕುಟುಂಬದ ನಿವಾಸವಾಗಿದೆ. ಸದ್ಯ ಈಗ ಈ ಅರಮನೆಯು ಮಹಾರಾಜ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಮತ್ತು ಅವರ ಪತ್ನಿ ಮಹಾರಾಣಿ ರಾಧಿಕಾ ರಾಜೇ ಗಾಯಕ್ವಾಡ್ ನಿರ್ವಹಿಸುತ್ತಿದ್ದಾರೆ.
ಸಮರ್ಜಿತ್ ಸಿಂಗ್ ಮಹಾರಾಜ ರಂಜಿತ್ ಸಿಂಗ್ ಪ್ರತಾಪ್ ಸಿಂಗ್ ಗಾಯಕ್ವಾಡ್ ಅವರ ಏಕೈಕ ಪುತ್ರ. ಅವರ ಒಟ್ಟು ಆಸ್ತಿ ಸುಮಾರು 20,000 ಕೋಟಿ ರೂ.ಗಳಾಗಿದೆ. ಅವರ ಆಸ್ತಿ ಗುಜರಾತ್‌ನ ಮೂಲೆ ಮೂಲೆಯಲ್ಲೂ ಹರಡಿದೆ. ಸಮರ್ಜಿತ್ ಮಹಾನ್ ಕ್ರಿಕೆಟ್ ಪ್ರೇಮಿ. ಹೀಗಾಗಿ ಅವರು ರಣಜಿ ಟ್ರೋಫಿಯಲ್ಲಿ ಬರೋಡಾ ತಂಡವನ್ನು ಕೂಡ ಪ್ರತಿನಿಧಿಸಿದ್ದಾರೆ. ಸದ್ಯ ಈಗ ಈ ಮಹರಾಜರ ವಂಶಸ್ಥರು ಸಾಮಾನ್ಯರಂತೆ ಜೀವನ ನಡೆಸುತ್ತಾರೆ.
ಸದ್ಯ ಅರಮನೆಯ ಒಂದು ಭಾಗವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ, ಅಲ್ಲಿ ಜನರು ರಾಜರ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತುಗಳನ್ನು ನೋಡಬಹುದು. ಗಾಯಕ್ವಾಡ್ ಕುಟುಂಬವು 1886 ರ ಮೊದಲ ಮರ್ಸಿಡಿಸ್ ಬೆಂಚ್ ಪೇಟೆಂಟ್ ಮೋಟಾರ್‌ವ್ಯಾಗನ್, 1934 ರ ರೋಲ್ಸ್ ರಾಯ್ಸ್, 1948ರ ಬೆಂಟ್ಲಿ ಮಾರ್ಕ್ VI ಮತ್ತು 1937ರ ರೋಲ್ಸ್ ರಾಯ್ಸ್ ಫ್ಯಾಂಟಮ್ III ನಂತಹ ಅಪರೂಪದ ಕಾರುಗಳನ್ನು ಹೊಂದಿದೆ.
ಈ ವಿಶೇಷ ಅರಮನೆ ಈಗ ವಿಶ್ವದ ಅತೀ ದೊಡ್ಡ ಖಾಸಗಿ ನಿವಾಸ ಎಂಬ ಹೆಗ್ಗಳಿಕೆ ಪಡೆದಿದೆ. ಹಾಗೆ ಈ ಅರಮನೆ ವೀಕ್ಷಿಸಲು ವರ್ಷವು ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಅದ್ರಲ್ಲೂ ಅಂಬಾನಿ ನಿವಾಸಕ್ಕಿಂತಲೂ ಈ ನಿವಾಸ ಬಹಳ ಅದ್ದೂರಿಯಿಂದ ನಿರ್ಮಿತಗೊಂಡಿದೆ. ಹಾಗೆ ದುಬಾರಿಯೂ ಹೌದು. ನೀವು ಕೂಡ ಗುಜರಾತ್‌ಗೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಬಕಿಂಗ್‌ಹ್ಯಾಮ್ ಅರಮನೆಗಿಂತಲೂ ದೊಡ್ಡದಾದ ಈ ಅರಮನೆಯ ಸೌಂದರ್ಯ ಸವಿಯುವುದನ್ನು ಮರೆಯಬೇಡಿ.



Click it and Unblock the Notifications


