Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಲಸ ಕೊಡುತ್ತಿಲ್ಲ ಆದರೆ 20 ವರ್ಷದಿಂದ ಸಂಬಳ ಮಾತ್ರ ಕೊಡುತ್ತಿದೆ ಎಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆ
ಫ್ರೆಂಚ್ ಮಹಿಳೆ telecom giant Orange ಎಂಬ ಕಂಪನಿ ವಿರುದ್ಧ ನನಗೆ ಕೆಲಸದ ಜಾಗದಲ್ಲಿ ತುಂಬಾ ಬೇಧಭಾವ ಮಾಡುತ್ತಿದ್ದಾರೆ, ಯಾವುದೇ ಕೆಲಸ ಮಾಡದೆ ನನಗೆ 20 ವರ್ಷದಿಂದ ಸಂಬಳ ಕೊಡುತ್ತಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.
ನಾವೆಲ್ಲಾ ಸಂಬಳಕ್ಕಾಗಿ ಎಷ್ಟು ಕೆಲಸ ಮಾಡುತ್ತೇವೆ, ಆದರೆ ಕೆಲಸವೇ ಮಾಡದೆ ಸಂಬಳ ಕೊಡುತ್ತಿದ್ದಾರೆ ಎಂದ ಮೇಲೆ ಇವರು ಏಕೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದುಕೆಲವರಿಗೆ ಅನಿಸಬಹುದು , ನಾವು ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿ ನಾವು ನಮ್ಮ ಕೌಶಲ್ಯದಿಂದ ಬೆಳೆಯುತ್ತೇವೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಇರುತ್ತದೆ, ಆದರೆ ನೀನು ಏನೂ ಕೆಲಸ ಮಾಡಬೇಡಿ, ಸಂಬಳ ಕೊಡ್ತೀವಿ ಎಂದರೆ ಅದರಷ್ಟು ದೊಡ್ಡ ಅವಮಾನ ಮತ್ತೊಂದಿಲ್ಲ.

ಆಕೆಯ ಹೆಸರು ಲಾರೆನ್ಸ್ ವ್ಯಾನ್ ವ್ಯಾಸನ್‌ವೋವ್, 1993ರಲ್ಲಿ ಟೆಲಿಗ್ರಾಂ ಸಂಸ್ಥೆಗೆ ಕೆಲಸಕ್ಕೆ ಸೇರಿದರು, ಆ ಕಂಪನಿ ಹೆಸರು ಆರೇಂಜ್, ಆದರೆ ಈಕೆ ಸ್ವಲ್ಪ ವಿಶೇಷ ಚೇತನವಾಗುದ್ದರು, ಮುಖ ಹಾಗೂ ಸೊಂಟದ ಭಾಗ ಸ್ವಲ್ಪ ತಿರುಗಿಕೊಂಡಂತೆ ಇತ್ತು ಅಲ್ಲದೆ ಆಕೆಗೆ ಹುಟ್ಟಿದಲ್ಲಿಂದ ಮೂರ್ಛೆ ರೋಗವಿತ್ತು. ಇವರಲ್ಲಿರುವ ದೈಹಿಕ ಸಮಸ್ಯೆ ಮೊದಲಿದ್ದ ಇವರ ಬಾಸ್‌ಗೆ ಗೊತ್ತಿದ್ದೇ ಕೆಲಸ ನೀಡಿದ್ದರು, 2002ರವರೆಗೆ ಸೆಕ್ರಟರಿ ಆಗಿ ಹೆಚ್‌ಆರ್ ವಿಭಾಗದಲ್ಲಿ ಕೆಲಸ ಮಾಡಿದ್ದರು.
2002ರಲ್ಲಿ ಫ್ರಾನ್ಸ್‌ನ ಬೇರೆ ಭಾಗಕ್ಕೆ ವರ್ಗಾವಣೆಯಾಯ್ತು, ಇದು ಇವರೇ ಬಯಸಿ ಕೇಳಿದ ವರ್ಗಾವಣೆಯಾಗಿತ್ತು,. ಕಂಪನಿ ಕೂಡ ಇವರ ವರ್ಗಾವಣೆಗೆ ಅನುಮತಿ ನೀಡಿತು, ಆದರೆ ಹೊಸ ಆಕೆ ಊಹಿಸಿದಂತೆ ಇರಲಿಲ್ಲ, ಅಲ್ಲಿ ಆಕೆಗೆ ಅವಶ್ಯಕತೆ ಇರುವ ಸೌಲಭ್ಯವಿರಲಿಲ್ಲ, ಆಕೆಯ ಕೆಲಸ ಸುಗಮವಾಗಿ ನಡೆಯಲು ಕಂಪನಿ ಕೂಡ ಯಾವುದೇ ಅಡ್ಜೆಸ್ಟ್‌ಮೆಂಟ್ ಮಾಡಿಲ್ಲ ಬದಲಿಗೆ ಮುಂದಿನ 20 ವರ್ಷದವರೆಗೆ ಸಂಬಳ ಕೊಡುವುದಾಗಿ ಒಪ್ಪಿಕೊಂಡಿತು, ಆದರೆ ಆಕೆಗೆ ಮಾತ್ರ ಯಾವುದೇ ಕೆಲಸ ನೀಡದೆ ಸಂಬಳ ನೀಡುತ್ತಿತ್ತು.
2015ರಲ್ಲಿಯೂ ಕಂಪನಿಗೆ ತಮ್ಮ ಕಳವಳದ ಬಗ್ಗೆ ಹೇಳಿದ್ದರು
ವ್ಯಾನ್ ವಿಶೇಷ ಚೇತನ ವ್ಯಕ್ತಿ, ನನಗೆ ಕೂತು ಕೆಲಸ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿ ನಾನು ಕೆಲಸ ಮಾಡುತ್ತೇನೆ ಎಂದು ಕೇಳಿಕೊಂಡಿದ್ದಳು, ಆದರೆ ಕಂಪನಿ ಮಾತ್ರ ಆಕೆಯ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲ, ನಾವು ಸಂಬಳ ಕೊಡುತ್ತಿದ್ದೇವೆ ಇನ್ನೇನು ಎಂಬ ಧೋರಣೆ ಕಂಪನಿಯದ್ದು ಆಗಿರಬಹುದು.
ಮಾನಸಿಕವಾಗಿ ತುಂಬಾನೇ ನೊಂದುಕೊಂಡರು
ಹೌದು ಕೆಲಸ ಇಲ್ಲದೆ ಸಂಬಳ ಪಡೆಯುವುದು ಒಂದು ರೀತಿಯ ನರಕ, ಅವಮಾನ, ಏನೋ ಇವರ ಕೈಯಲ್ಲಾದ ಕೆಲಸ ಮಾಡಿಸಿಕೊಂಡು ಸಂಬಳ ಕೊಟ್ಟಿದ್ದರೆ ಚೆನ್ನಾಗಿತ್ತು, ಇವರಿಗೂ ತೃಪ್ತಿ ಇರುತ್ತಿತ್ತು, ಆದರೆ ಏನೂ ಕೆಲಸ ಮಾಡದೆ ಸಂಬಳ ಕೊಡ್ತಾ ಇದ್ದಿದ್ದು ಇವರ ಬೇಸರಕ್ಕೆ ಕಾರಣವಾಗಿತ್ತು, ಅಲ್ಲದೆ ಇದು ಒಂದು ರೀತಿಯ ಅವಮಾನ ಕೂಡ ಹೀಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಏನೂ ಕೆಲಸ ನೀಡದಿರುವ ಬುದ್ಧಿವಂತಿಕೆಯನ್ನು ಒಬ್ಬ ವ್ಯಕ್ತಿಯನ್ನು ಒಂದು ಪೋಸ್ಟ್‌ನಿಂದ ತೆಗೆಯಲೂ ಕೂಡ ಬಳಸುತ್ತಾರೆ
ಹೌದು ದೊಡ್ಡ ಹುದ್ದೆಯಲ್ಲಿರುವ ಮ್ಯಾನೇಜರ್, ಟೀಂ ಹೆಡ್ ಹೀಗೆ ಒಳ್ಳೆಯ ಪೋಸ್ಟ್‌ನಲ್ಲಿರುವ ವ್ಯಕ್ತಿಯನ್ನು ಕೆಲಸದಿಂದ ಹಾಕಲು ಈ ರೀತಿಯ ಮಾರ್ಗ ಬಳಸುತ್ತಾರೆ, ಅವರ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಕೊಡುವುದು, ಅವರು ಅವರ ಜೂನಿಯರ್‌ಗೆ ರಿಪೋರ್ಟ್ ಮಾಡುವಂತೆ ಹೇಳುವಂತೆ ಮಾಡುತ್ತದೆ, ಆವಾಗ ಅವರೇ ಸ್ವತಃ ರಾಜೀನಾಮೆ ಕಳುಹಿಸುತ್ತಾರೆ, ಕಂಪನಿ ನಂತರ ಅವರಿಗೆ ಗುಡ್‌ಬೈ ಹೇಳುತ್ತದೆ, ಇವರೇ ಫೈರ್ ಮಾಡಿದರೆ 3 ತಿಂಗಳ ಹಣ ಕೇಳಬಹುದು, ಇದಾದರೆ ಅವರೇ ಕೆಲಸ ಬೇಡವೆಂದು ಹೋಗುತ್ತಾರೆ. ಇವೆಲ್ಲಾ ಕಾರ್ಪೋರೇಟ್ ಗತ್ತಿನಲ್ಲಿ ಕಂಡು ಬರುವ ಕಟುಸತ್ಯಗಳು....



Click it and Unblock the Notifications