Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮುಂಬಯಿ ಟ್ರೈನ್ ಹತ್ತುತ್ತಿರುವ ಮಹಿಳೆಯರ ಅವಸ್ಥೆಯ ವೀಡಿಯೋ ವೈರಲ್
ಮುಂಬಯಿಯ ಲೋಕಲ್ ಟ್ರೈನ್‌ಗೆ ಮಹಿಳೆಯರು ಹತ್ತುತ್ತಿರುವ ವೀಡಿಯೋವೊಂದು ತುಂಬಾನೇ ವೈರಲ್ ಆಗಿದೆ. ಅಯ್ಯೋ ರಾಮ... ಇದ್ಯಾಕೆ ಈ ರೀತಿ ಹತ್ತುತ್ತಿದ್ದರೆ ಸ್ವಲ್ಪ ಹೆಚ್ಚು ಕಡಿಮೆ ಆದ್ರೆ ಗತಿಯೇನು? ಅಷ್ಟಕ್ಕೂ ಇಷ್ಟು ಅವಸರ ಏಕೆ? ಎಂದನಿಸದೆ ಇರಲ್ಲ.
ನೀವು ದಿನನಿತ್ಯ ಓಡಾಟಕ್ಕೆ ಮೆಟ್ರೋ ಅಥವಾ ಬಸ್ ಬಳಸುತ್ತಿದ್ದರೆ ಈ ರೀತಿ ನೀವೂ ಮಾಡಿರುತ್ತೀರಿ, ಖಾಲಿ ಸೀಟ್ ಪಡೆಯೋಕೆ ಈ ರೀತಿ ಹರಸಾಹಸ ಮಾಡುವವರಿಗೇನೂ ಕಡಿಮೆಯಿಲ್ಲ, ಬಸ್ ಆದರೆ ಪರ್ವಾಗಿಲ್ಲ ನಾವು ಕೂತಿದ್ದೇವೆ ಎಂದು ಕಂಡಕ್ಟರ್ ಖಚಿತ ಪಡಿಸಿದ ಮೇಲಷ್ಟೇ ಡ್ರೈವರ್ ಬಸ್ ಸ್ಟಾರ್ಟ್ ಮಾಡುತ್ತಾರೆ, ಆದರೆ ಟ್ರೈನ್, ಮೆಟ್ರೋ ಹಾಗಲ್ಲ, ಒಂದು ನಿರ್ದಿಷ್ಟ ಸಮಯ ನಿಂತಿರುತ್ತದೆ, ನಂತರ ಅದರ ಸಮಯಕ್ಕೆ ಸ್ಟಾರ್ಟ್ ಆಗುತ್ತದೆ. ಆದ್ದರಿಂದ ಟ್ರೈನ್, ಮಟ್ರೋ ಹತ್ತುವಾಗ ಹರಸಾಹಸ ಮಾಡದಿದ್ದರೆ ಒಳ್ಳೆಯದು.

ಈ ವೀಡಿಯೋದಲ್ಲಿ ಒಂದು ಗುಂಪಿನ ಮಹಿಳೆಯರು ಓಡೋಡಿ ಬಂದು ಟ್ರೈನ್ ಹತ್ತುತ್ತಿರುತ್ತಾರೆ, ಅದರಲ್ಲೂ ನೂಕು ನುಗ್ಗಲು, ಒಟ್ಟಾರೆಯಾಗಿ ಏನೇ ಆಗಲಿ ಸೀಟ್ ಸಿಗಬೇಕು, ಹೀಗೆ ಮಾಡುವುದರಿಂದ ಯಾರಾದರೂ ಸ್ಲಿಪ್ ಆಗಿ ಬಿದ್ದರೆ ಪ್ರಾಣವೇ ಕಳೆದುಕೊಳ್ಳುತ್ತಾರೆ ಎಂದು ಒಂದಿಷ್ಟೂ ಯೋಚಿಸುವುದಿಲ್ಲ... ಈ ವೀಡಿಯೋ ವಿಚಿತ್ರ ಅನಿಸಿದರೂ ಅಷ್ಟೇ ಕಟು ಸತ್ಯ, ಈ ಮಹಿಳೆಯರಂತಲ್ಲ, ಇಂಥ ದೃಶ್ಯ ಪ್ರತಿನಿತ್ಯ ಕಣ್ಣಿಗೆ ಬೀಳುತ್ತೆ, ಈ ವೀಡಿಯೋ ವೈರಲ್ ಆಗಿದೆಯಷ್ಟೇ.
ಈ ವೀಡಿಯೋವನ್ನು ಸೆಪ್ಟೆಂಬರ್ 16ರಂದು ಶೇರ್ ಮಾಡಲಾಗಿದ್ದು ತುಂಬಾನೇ ವೈರಲ್ ಆಗಿದೆ. ಈ ವೀಡಿಯೋವನ್ನು ನೋಡಿದಾಗ ಕೆಲವರು ಬ್ಯಾಲೆನ್ಸ್ ಮಾಡಲು ತುಂಬಾನೇ ಕಷ್ಟಪಡುವುದು ಗಮನಿಸಬಹುದು. ಆದರೆ ಸೀಟ್ ಪಡೆಯುವ ಬರದಲ್ಲಿ ಪ್ರಾಣವನ್ನೇ ಲೆಕ್ಕಿಸದೆ ಓಡುತ್ತಿದ್ದಾರೆ.
ಮುಂಬಯಿ ನಗರ ಹೇಗಿರುತ್ತೆ ಎಂಬುವುದು ಆ ನಗರದಲ್ಲಿ ಇದ್ದವರಿಗೆ ಅಥವಾ ಅಲ್ಲಿಗೆ ಹೋಗಿದ್ದವರಿಗೆ ತಿಳಿದಿರುತ್ತದೆ, ಅಲ್ಲಿಯ ಜನರನ್ನು ನೋಡುವಾಗ ಇವರಿಗೆ ಓಂದಿಷ್ಟು ನಿಲ್ಲಲು ಸಮಯವಿಲ್ಲವೇ, ಓಡುತ್ತಲೇ ಇರುತ್ತಾಲ್ಲ ಎಂದನಿಸುವುದು, ಜನಾ ತುಂಬಾ ಬ್ಯುಸಿ ಇದ್ದಂತೆ ಕಾಣುತ್ತಾರೆ. ಇನ್ನು ಲೋಕಲ್ ಟ್ರೈನ್ ಬಂದರೆ ಅದರಲ್ಲಿ ತುಂಬಿಕೊಳ್ಳಲು ಸಾವಿರಾರು ಜನರು ನೂಕು ನುಗ್ಗುಲಿನಲ್ಲಿ ಓಡುತ್ತಾ ಇರುತ್ತಾರೆ. ಈ ಜಂಜಾಟದ ಬದುಕಿನಲ್ಲಿ ಸ್ವಲ್ಪ ವಿಶ್ರಮಿಸಲು ಸಿಕ್ಕರೆ ಸಾಕು ಎಂದು ಬಯಸುತ್ತಾರೆ. ಆದ್ದರಿಂದ ಸ್ವಲ್ಪ ಕೂತು ಪ್ರಯಾಣ ಮಾಡುವ ಆಸೆಯಿಂದ ಈ ರೀತಿ ರಿಸ್ಕ್ ತೆಗೆದುಕೊಳ್ಳುತ್ತಾರೆ ಪಾಪ!.. ನೀವು ಬಸ್ ಅಥವಾ ಟ್ರೈನ್ ಹತ್ತುವಾಗ ಸೀಟ್‌ಗಾಗಿ ನಿಮ್ಮ ಪ್ರಾಣವನ್ನು ನಿರ್ಲಕ್ಷ್ಯ ಮಾಡಬೇಡಿ.



Click it and Unblock the Notifications
