Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ 5 ರಾಶಿಯ ಮಹಿಳೆಯರು ಕಡಿಮೆ ದೈರ್ಯಶಾಲಿಗಳು!
ದೈರ್ಯ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯವಾಗಿ ಇರಬೇಕಾಗುತ್ತದೆ. ಯಾವುದಾದರೂ ಕೆಲಸ ಮಾಡೋದಕ್ಕೆ ಮುಂದೆ ಹೋಗಬೇಕಾದ್ರು ಕೂಡ ದೈರ್ಯಬೇಕು. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗ್ತಿದೆ. ಹೀಗಾಗಿ ಮಹಿಳೆಯರೂ ಕೂಡ ದೈರ್ಯವಂತರಾಗಿ ಇರಬೇಕು. ಹಾಗೂ ಎಲ್ಲವನ್ನೂ ದೈರ್ಯದಿಂದ ಎದುರಿಸಬೇಕು.

ಆದರೆ ಕೆಲ ಮಹಿಳೆಯರಂತೂ ತುಂಬಾನೇ ಹೆದರುತ್ತಾರೆ. ಇಬ್ಬರ ಮುಂದೆ ನಿಂತು ದೈರ್ಯವಾಗಿ ಮಾತನಾಡುವಷ್ಟು ಸಾಮರ್ಥ್ಯವೂ ಅವರಲ್ಲಿ ಇರೋದಿಲ್ಲ. ಅಷ್ಟಕ್ಕು ಯಾವ ರಾಶಿಯ ಮಹಿಳೆಯರು ಅಷ್ಟೊಂದು ದೈರ್ಯಶಾಲಿಗಳಾಗಿ ಇರೋದಿಲ್ಲ ಅನ್ನೋದನ್ನು ತಿಳಿಯೋಣ.
ಮೀನ ರಾಶಿ
ಮೀನ ರಾಶಿಯ ಮಹಿಳೆಯರು ತಮ್ಮ ಸಂವೇದನಾಶೀಲತೆ ಮತ್ತು ಸಹಾನುಭೂತಿಗೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಇವರಿಗೆ ದೈರ್ಯದ ಕೊರತೆ ಇದೆ ಎಂದು ಅನೇಕರು ತಪ್ಪಾಗಿ ಭಾವಿಸುತ್ತಾರೆ. ಮೀನ ರಾಶಿಯ ಮಹಿಳೆಯರು ಕನಸುಗಾರರು ಮತ್ತು ಆದರ್ಶವಾದಿಗಳಾಗಿರುತ್ತಾರೆ. ಸವಾಲಿನ ಸಂದರ್ಭಗಳನ್ನು ಇವರಿಂದ ಎದುರಿಸೋದು ಕಷ್ಟವಾಗುತ್ತದೆ. ನಿಜ ಜೀವನದಲ್ಲಿ ತೊಂದರೆಗಳನ್ನು ಎದುರಿಸುವುದಕ್ಕಿಂತ ಹೆಚ್ಚಾಗಿ ಅದಿಂದ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತಾರೆ.
ತುಲಾ ರಾಶಿ
ತುಲಾ ರಾಶಿಯ ಮಹಿಳೆಯರು ರಾಜತಾಂತ್ರಿಕ, ಆಕರ್ಷಕ ಮತ್ತು ಸಂಬಂಧಗಳಲ್ಲಿ ಸಾಮರಸ್ಯಕ್ಕಾಗಿ ಹೆಸರುವಾಸಿಯಾಗಿರುತ್ತಾರೆ. ಅವರು ಸಾಧ್ಯವಾದಾಗಲೆಲ್ಲಾ ಸಂಘರ್ಷ ಮತ್ತು ಘರ್ಷಣೆಯನ್ನು ತಪ್ಪಿಸುತ್ತಾರೆ. ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇವರಿಂದಾಗಿ ಇವರು ಕಡಿಮೆ ದೈರ್ಯಶಾಲಿಗಳೆಂದು ಗುರುತಿಸಿಕೊಳ್ಳುತ್ತಾರೆ. ಯಾವುದಾದರೂ ಸಂಕಷ್ಟದ ಸಂದರ್ಭ ಎದುರಾಗುವಾಗ ನಾವು ಇವರಲ್ಲಿ ದೈರ್ಯದ ಕೊರತೆಯನ್ನು ಕಾಣುತ್ತೇವೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಮಹಿಳೆಯರು ಅರ್ಥಗರ್ಭಿತರಾಗಿದ್ದಾರೆ ಮತ್ತು ಒಬ್ಬರನ್ನು ಪೋಷಿಸುವ ಗುಣ ಇವರಲ್ಲಿದೆ. ತಮ್ಮ ಪ್ರೀತಿಪಾತ್ರರ ಅಗತ್ಯತೆಗಳನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ನಿಸ್ವಾರ್ಥ ಗುಣವು ಇವರಲ್ಲಿದೆ. ಈ ರಾಶಿಯವರು ಭಾವನಾತ್ಮಕ ಜೀವಿಗಳು. ಸಣ್ಣ ಸಣ್ಣ ವಿಚಾರಗಳು ಇವರಿಗೆ ನೋವುಂಟು ಮಾಡಬಹುದು. ಹೀಗಾಗಿ ಸವಾಲುಗಳಿಗೆ ಮೈಯೊಡ್ಡೋದಕ್ಕೆ ಇವರು ಕೊಂಚ ಹಿಂದೆ ಸರಿಯುತ್ತಾರೆ. ಹೀಗಾಗಿ ಕೆಲವು ಸಂದರ್ಭಗಳಲ್ಲಿ ಕೊಂಚ ಕಡಿಮೆ ಧೈರ್ಯಶಾಲಿಗಳಂತೆ ಕಾಣಿಸುತ್ತಾರೆ.
ಕನ್ಯಾ ರಾಶಿ
ಕನ್ಯಾರಾಶಿ ಮಹಿಳೆಯರು ಪ್ರಾಯೋಗಿಕ ಮತ್ತು ಪರಿಪೂರ್ಣತೆಗೆ ಹೆಸರುವಾಸಿಯಾಗಿರುತ್ತಾರೆ. ಈ ಗುಣಲಕ್ಷಣಗಳು ಅವರ ದಕ್ಷತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯಕ್ಕೆ ಕೊಡುಗೆ ನೀಡುತ್ತವೆಯಾದರೂ ಅವರು ರಿಸ್ಕ್ ತೆಗೆದುಕೊಳ್ಳದಂತೆ ತಡೆಯಬಹುದು. ವೈಫಲ್ಯದ ಭಯವು ಕೆಲವೊಮ್ಮೆ ಅವರ ಕಂಫರ್ಟ್ ಜೋನ್ ನಿಂದ ಹೊರಬರಲು ಮತ್ತು ಹೊಸ ಅನುಭವಗಳನ್ನು ಸ್ವೀಕರಿಸಲು ಅವರ ಇಚ್ಛೆಗೆ ಅಡ್ಡಿಯಾಗಬಹುದು. ಹೀಗಾಗಿ ಇವರು ಕೆಲವೊಂದು ಸಲ ಕಡಿಮೆ ದೈರ್ಯವಂತರು ಅಂತ ಅನ್ನಿಸಿ ಬಿಡುತ್ತದೆ.
ವೃಷಭ ರಾಶಿ
ವೃಷಭ ರಾಶಿಯ ಮಹಿಳೆಯರು ತಮ್ಮ ವಿಶ್ವಾಸಾರ್ಹತೆ, ನಿರ್ಣಯ ಮತ್ತು ಅಚಲವಾದ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರು ಕೂಡ ಶಾಂತಿಯನ್ನು ಕಾಯ್ದುಕೊಳ್ಳುತ್ತಾರೆ. ಹೀಗಾಗಿ ಸಂಘರ್ಷಗಳಿಂದ ಆದಷ್ಟು ದೂರ ಇರೋದಕ್ಕೆ ಇಷ್ಟ ಪಡುತ್ತಾರೆ. ಹೀಗಾಗಿ ಇವರನ್ನು ಕಡಿಮೆ ದೈರ್ಯಶಾಲಿಗಳು ಅಂತಾನೂ ಹೇಳಲಾಗುತ್ತದೆ.



Click it and Unblock the Notifications
