Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 5 ರಾಶಿಯವರ ಗಂಡಂದಿರು ಪತ್ನಿಯ ಮೇಲೆ ಜೀವನೇ ಇಟ್ಟಿರುತ್ತಾರೆ!
ಪ್ರತಿಯೊಬ್ಬರಿಗೂ ತಮ್ಮ ಬಾಳ ಸಂಗಾತಿ ಆಗುವವರ ಬಗ್ಗೆ ನೂರಾರು ಆಸೆ, ಕನಸುಗಳನ್ನು ಹೊತ್ತುಕೊಂಡಿರುತ್ತಾರೆ. ಅದ್ರಲ್ಲೂ ಹುಡುಗಿಯರಂತೂ ತನ್ನ ಗಂಡ ತನ್ನನ್ನು ರಾಣಿಯ ಹಾಗೆ ನೋಡಿಕೊಳ್ಳಬೇಕು ಎಂದೆಲ್ಲಾ ಆಸೆ ಪಟ್ಟಿರುತ್ತಾಳೆ. ಉತ್ತಮ ಗಂಡನನ್ನು ಪಡೆಯಲು ವೃತ, ಪೂಜೆ-ಪುನಸ್ಕಾರಗಳನ್ನು ಕೈಗೊಳ್ಳುತ್ತಾರೆ. ಆದರೆ ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ ತುಂಬಾನೇ ಪ್ರೀತಿ, ಕಾಳಜಿ ಮಾಡುವ ಪತಿ ಸಿಗುತ್ತಾರಂತೆ. ಅಷ್ಟಕ್ಕು ಆ 5 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ದಯಾಮಯಿಗಳು. ಇವರ ಉತ್ತಮ ಸ್ವಭಾವಕ್ಕೆ ಇವರಿಗೆ ಒಳ್ಳೆಯ ಗಂಡ ಸಿಗುತ್ತಾರಂತೆ. ಇವರ ಗಂಡಂದಿರೂ ಇವರು ಹೇಳಿಕೊಳ್ಳದಿದ್ದರೂ ಕೂಡ ಇವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪ್ರತಿ ವಿಚಾರದಲ್ಲೂ ಇವರಿಗೆ ಬೆಂಬಲವಾಗಿ ನಿಲ್ಲುತ್ತಾರಂತೆ. ಹೆಂಡತಿಗೆ ಗೌರವ ನೀಡುತ್ತಾರೆ. ಹಾಗೂ ಪತ್ನಿಯನ್ನು ಮಗುವಿನಂತೆ ಕಾಳಜಿ ಮಾಡುತ್ತಾರೆ. ಪತ್ನಿಗೆ ಒಂಚೂರು ನೋವಾದರೂ ಇವರು ಸಹಿಸಿಕೊಳ್ಳೋದಿಲ್ಲ.

ತುಲಾ ರಾಶಿ
ತುಲಾ ಗ್ರಹವನ್ನು ಪ್ರೀತಿ, ಸೌಂದರ್ಯ ಮತ್ತು ಪ್ರಣಯದ ಗ್ರಹವಾದ ಶುಕ್ರನು ಆಳುತ್ತಿದ್ದಾನೆ. ತುಲಾ ರಾಶಿಯವರ ಗಂಡಂದಿರು ತಮ್ಮ ಸಂಗಾತಿಯ ಸಂತೋಷ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರಂತೆ. ಇವರ ಸಂತೋಷಕ್ಕಾಗಿ ಗಂಡಂದಿರು ಏನು ಮಾಡೋದಕ್ಕೂ ಸಿದ್ಧರಿರುತ್ತಾರಂತೆ. ಇವರ ಸಾಧನೆಯ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲುತ್ತಾರಂತೆ. ಪತ್ನಿಯ ಬಗ್ಗೆ ಅತೀವ ಕಾಳಜಿ ಹೊಂದಿರುವ ಇವರ ಗಂಡಂದಿರು. ಪತ್ನಿಗೆ ನೋವಾಗುವಂತೆ ನಡೆದುಕೊಳ್ಳೋದಿಲ್ಲ.
ಮೀನ ರಾಶಿ
ತುಲಾ ರಾಶಿಯವರು ತಮ್ಮ ನಿಜವಾದ ಪ್ರೀತಿಯನ್ನು ಪಡೆಯುತ್ತಾರೆ. ಮೀನ ರಾಶಿಯವರ ಗಂಡಂದಿರು ಹೆಂಡತಿಯ ಮೇಲೆ ಪ್ರಾಣವನ್ನೇ ಇಟ್ಟಿರುತ್ತಾರೆ. ತಮ್ಮ ಅಗತ್ಯಕ್ಕಿಂತ ಹೆಂಡತಿಯ ಅಗತ್ಯಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಾರೆ. ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಯಾವಾಗಲೂ ಖುಷಿಯಾಗಿ ಇಡಬೇಕೆಂದು ಬಯಸುತ್ತಾರೆ. ಮೀನ ರಾಶಿಯವರು ಗಂಡನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳೋದ್ರಿಂದ ಇವರ ಸಂಸಾರ ಚೆನ್ನಾಗಿರುತ್ತದೆ.
ವೃಷಭ ರಾಶಿ
ವೃಷಭ ರಾಶಿಯ ಗಂಡಂದಿರು ತಮ್ಮ ದೃಢವಾದ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಮತ್ತು ಹೆಂಡತಿಯ ಮೇಲೆ ಅತೀವ ಕಾಳಜಿಯನ್ನು ಇವರು ಹೊಂದಿರುತ್ತಾರೆ. ಹೆಂಡತಿಯಿಂದ ಯಾವುದೇ ವಿಚಾರವನ್ನೂ ಮುಚ್ಚಿಡೋದಿಲ್ಲ. ಹೆಂಡತಿ ದುಃಖದಲ್ಲಿದ್ದರೆ ಆಕೆ ಬಾಯ್ಬಿಟ್ಟು ಹೇಳೋದಕ್ಕಿಂತ ಮೊದಲೇ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ವೃಷಭ ರಾಶಿಯವರ ಗಂಡಂದಿರು ಹೆಂಡತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಇರುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರ ಗಂಡಂದಿರು ಪತ್ನಿಯನ್ನು ಅತೀವ ಕಾಳಜಿ ಮಾಡುತ್ತಾರೆ. ಹಾಗೂ ಯಾವಾಗಲೂ ಇವರು ಪತ್ನಿಯ ಯೋಗ ಕ್ಷೇಮದ ಬಗ್ಗೆ ಚಿಂತಿಸುತ್ತಾರೆ. ಯಾವಾಗಲೂ ಕುಟುಂಬದ ಬಗ್ಗೆ ಚಿಂತಿಸುತ್ತಿರುತ್ತಾರೆ. ಪತ್ನಿಗೆ ಒಂಚೂರು ನೋವಾದರೂ ಗಂಡಂದಿರೂ ಸಹಿಸೋದಿಲ್ಲ. ಹೆಂಡತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಗಂಡನಾಗಿ ಇರುತ್ತಾರೆ. ಹೆಂಡತಿಯ ಮೇಲೆ ಇವರಿಗೆ ಇರೋ ಪ್ರೀತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.



Click it and Unblock the Notifications
