Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದಂಡ ತಪ್ಪಿಸಲು ಪೊಲೀಸರ 11 ಕಾರಿಗೆ ಜಿಪಿಎಸ್ ಅಳವಡಿಸಿದ ಚಾಲಾಕಿ ಮಹಿಳೆ..! ಆಮೇಲೆ ಆಗಿದ್ದೇನು ಗೊತ್ತಾ?
ನೀವು ರಸ್ತೆಯಲ್ಲಿ ನಿಮ್ಮ ವಾಹನದಲ್ಲಿ ಹೋಗುವಾಗ ಟ್ರಾಫಿಕ್ ಪೊಲೀಸರು ತಡೆಯುತ್ತಾರೆ. ನಿಮ್ಮ ಬಳಿ ಎಲ್ಲಾ ದಾಖಲೆಗಳು ಇದ್ದರೆ ಬಿಟ್ಟು ಕಳುಹಿಸುತ್ತಾರೆ, ಆದರೆ ಯಾವುದಾದರೂ ಒಂದು ದಾಖಲೆ ಇಲ್ಲದಿದ್ದರೂ ನಿಯಮ ಪಾಲನೆ ಕಂಡು ಬಾರದಿದ್ದರೆ ದಂಡ ಹಾಕುತ್ತಾರೆ. ಆದ್ರೆ ಇದನ್ನು ತಪ್ಪಿಸಲು ನೀವು ನಾನಾ ರೀತಿಯ ಸಾಹಸ ಮಾಡಿರುತ್ತೀರಿ. ಪೊಲೀಸರು ಮುಂದೆ ಇದ್ದಾರೆ ಎಂದು ತಿಳಿದರೆ ಆ ರಸ್ತೆಯನ್ನೇ ಬದಲಾಯಿಸುತ್ತೀರಿ.
ಅಲ್ಲದೆ ಪೊಲೀಸರು ನಿಮ್ಮ ವಾಹನ ಅಡ್ಡ ಹಾಕಿದರೂ ವಾಹನ ನಿಲ್ಲಿಸದೆ ಅಲ್ಲಿಂದ ಪಾರಾಗಲು ಯತ್ನಿಸುತ್ತಿರುತ್ತೀರಿ. ಆದ್ರೆ ಇಲ್ಲೊಬ್ಬ ಮಹಿಳೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಡಿದ ಐಡಿಯಾ ಕೇಳಿದರೆ ನಿಮಗೂ ಅಚ್ಚರಿಯಾಗುತ್ತೆ. ಹೌದು ಚೀನಾದಲ್ಲಿನ ಟ್ರಕ್ಕಿಂಗ್ ಕಂಪನಿಯ ಮಾಲಕಿಯೊಬ್ಬರು ತಮ್ಮ ಟ್ರಕ್‌ಗಳನ್ನು ಪೊಲೀಸರು ತಡೆಯದಂತೆ ಮಾಡಲು ಹೊಸ ಐಡಿಯಾ ಮಾಡಿ ಬಂಧನಕ್ಕೂ ಒಳಗಾಗಿದ್ದಾಳೆ.

ಹುಬೈ ಪ್ರಾಂತ್ಯದ ಕ್ಸಿಯಾಂಗ್‌ಯಾಂಗ್‌ನಲ್ಲಿರುವ ಮಹಿಳೆ ತನ್ನ ಕಂಪನಿಯ ಟ್ರಕ್‌ಗಳನ್ನು ಪೊಲೀಸರ ಕಣ್ಣಿಂದ ತಪ್ಪಿಸಲು ಆಕೆ ಪೊಲೀಸರ ಕಾರುಗಳಿಗೆ ಜಿಪಿಎಸ್ ಅಳವಡಿಸಿದ್ದಳು. ಕೇಳಲು ವಿಚಿತ್ರ ಎನಿಸಿದರು ಇದು ಅತ್ಯ ಘಟನೆಯಾಗಿದೆ. ತನ್ನ ಪ್ರದೇಶದಲ್ಲಿ ಸುತ್ತಾಡುವ ಸುಮಾರು 11 ಪೊಲೀಸ್ ಕಾರುಗಳಿಗೆ ಆಕೆ ಜಿಪಿಎಸ್ ಅಳವಡಿಸಿ ಪೊಲೀಸರ ಚಲನೆ ಪತ್ತೆ ಮಾಡುತ್ತಿದ್ದಳು.ಪೊಲೀಸರು ಇರುವ ರಸ್ತೆಯಲ್ಲಿ ತನ್ನ ಟ್ರಕ್‌ಗಳನ್ನು ಚಲಾಯಿಸದಂತೆ ಡ್ರೈವರ್‍ಗಳಿಗೆ ಮಾಹಿತಿ ನೀಡುತ್ತಿದ್ದಳು.
ಜಿಪಿಎಸ್ ಅಳವಡಿಸಿದ್ದು ಹೇಗೆ?
ಈ ರೀತಿ ಪೊಲೀಸರ ಕಾರಿಗೆ ಜಿಪಿಎಸ್ ಅಳವಡಿಸುವ ಪ್ಲಾನ್ ಮಾಡಿದ್ದ ಆಕೆ ಆನ್‌ಲೈನ್‌ನಲ್ಲಿ ಜಿಪಿಎಸ್ ಡಿವೈಸ್‌ಗಳ ಖರೀದಿ ಮಾಡಿದ್ದಳು, ಎಲ್ಲಾ ಡಿವೈಸ್‌ಗಳು ಬಂದ ನಂತರ ತಮ್ಮ ಡ್ರೈವರ್‍ಗಳ ಸಹಾಯ ಪಡೆದಳು. ಆಕೆ ಎಲ್ಲಾ ಪೊಲೀಸ್ ಕಾರುಗಳು ಎಲ್ಲಿ ಪಾರ್ಕ್ ಮಾಡುತ್ತಾರೆ ಎಂದು ಪತ್ತೆ ಮಾಡಿದ್ದಳು. ಬಳಿಕ ಎಲ್ಲಾ ಪೊಲೀಸ್ ಕಾರುಗಳು ನಿಲ್ಲಿಸಿದಾಗ ರಾತ್ರಿ ಅವುಗಳ ಕೆಳಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದಳು.
ಝು ಕಳೆದ ವರ್ಷದ ಜೂನ್‌ನಲ್ಲಿ 350 ಯುವಾನ್‌ಗೆ ಆರು ಮ್ಯಾಗ್ನೆಟಿಕ್ ಜಿಪಿಎಸ್ ಟ್ರ್ಯಾಕರ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದಳು ಮತ್ತು ಕಳೆದ ತಿಂಗಳ ಕೊನೆಯವರೆಗೂ ತನ್ನ ಫೋನ್‌ನಲ್ಲಿನ ಅಪ್ಲಿಕೇಶನ್ ಮೂಲಕ ಕಾರುಗಳನ್ನು ಟ್ರ್ಯಾಕ್ ಮಾಡಲು ಬಳಸಿದರು. ಹೀಗಾಗಿ ಟ್ರಾಫಿಕ್ ಪೋಲೀಸ್ ಕಾರುಗಳ ಸ್ಥಳಗಳನ್ನು ಗುರುತಿಸಲು ಮತ್ತು ಅವುಗಳನ್ನು ತಪ್ಪಿಸಲು ತನ್ನ ಚಾಲಕರನ್ನು ಎಚ್ಚರಿಸಲು ಆಕೆಗೆ ಸಾಧ್ಯವಾಯಿತು.
ಸಿಕ್ಕಿಬಿದ್ದಿದ್ದು ಹೇಗೆ?
ಕಾರಿನ ಜಿಪಿಎಸ್ ಇದ್ದರೂ ಪೊಲೀಸರಿಗೆ ಪತ್ತೆ ಮಾಡಲು ಹಲವು ತಿಂಗಳೇ ಬೇಕಾಗಿತ್ತು. ಪೊಲೀಸರು ತಮ್ಮ ಕಾರುಗಳನ್ನು ಪರಿಶೀಲನೆಗಾಗಿ ಬಿಟ್ಟಾಗ ಕಾರಿನ ಕೆಳಗೆ ಅನುಮಾಸ್ಪದವಾದ ಕಪ್ಪು ಬಣ್ಣದ ಬಾಕ್ಸ್ ಕಂಡುಬಂದಿತ್ತು. ಅದನ್ನು ಮತ್ತಷ್ಟು ಪರಿಶೀಲಿಸಿದಾಗ ಜಿಪಿಎಸ್ ಟ್ರ್ಯಾಕರ್ ಎಂಬುದು ತಿಳಿದುಬಂದಿತ್ತು. ತಕ್ಷಣ ಎಲ್ಲಾ ಕಾರುಗಳನ್ನು ಪರೀಕ್ಷಿಸಿ ಈ ಟ್ರ್ಯಾಕರ್‌ಗಳ ತೆಗೆಯಲಾಯಿತು. ಇನ್ನು ಜಿಪಿಎಸ್ ಬಾಕ್ಸ್‌ನಲ್ಲಿದ್ದ ಸಿಮ್ ಕಾರ್ಡ್‌ನಿಂದ ಅದನ್ನು ಯಾರು ಅಳವಡಿಸಿದ್ದಾರೆ ಎಂಬುದನ್ನು ಪೊಲೀಸರು ಸುಲಭವಾಗಿ ಪತ್ತೆ ಮಾಡಿದರು.
ತಪ್ಪೊಪ್ಪಿಕೊಂಡ ಮಹಿಳೆ
ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಳು, ಎಲ್ಲಿಯೇ ಹೋದರು ಪೊಲೀಸರು ಆಕೆಯ ಟ್ರಕ್ ಅನ್ನು ತಡೆದು ಒಂದಲ್ಲಾ ಒಂದು ಕಾರಣಕ್ಕೆ ದಂಡ ವಿಧಿಸುತ್ತಿದ್ದರಂತೆ. ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾಳೆ. ಹೀಗಾಗಿ ಆಕೆಗೆ 8 ದಿನಗಳ ಕಾಲ ಜೈಲು ಶಿಕ್ಷೆ ಹಾಗೂ 500 ಯುವಾನ್ ದಂಡ ವಿಧಿಸಲಾಗಿತ್ತು.



Click it and Unblock the Notifications
