Latest Updates
-
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ?
ಚಿಕ್ಕ ಕಂದಮ್ಮನ ತಾಯಿ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ: ಇಂಡೋನೇಷ್ಯಾದಲ್ಲಿ ಈ ವರ್ಷ ಎರಡನೇ ಪ್ರಕರಣ
ತನ್ನ ಕಂದಮ್ಮನಿಗೆ ಆರೋಗ್ಯ ಸರಿಯಿಲ್ಲ, ಔಷಧ ತರುತ್ತೇನೆ ಎಂದು ಹೋದ ತಾಯಿ ನಂತರ ಕಾಣ ಸಿಕ್ಕಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ. ಮಗುವಿಗೆ ಔಷಧ ತರಲು ಹೋದ ಆ ಮಹಿಳೆಯನ್ನು ಹೆಬ್ಬಾವು ನುಂಗಿದೆ. ಮಗುವಿಗೆ ಔಷಧ ತರುತ್ತೇನೆ ಎಂದು ಹೋದ ತಾಯಿ ಇಷ್ಟು ಹೊತ್ತಾದರೂ ಏಕೆ ಬರಲಿಲ್ಲ ಎಂಬ ಆ ಆತಂಕ ಮನೆಯವರನ್ನು, ಆ ಊರಿನವರನ್ನು ಕಾಡಿದೆ, ನಂತರ ಹುಡುಕಿ ನೋಡಿದರೆ ಅವರ ಕಣ್ಣಿಗೆ ಬಿದ್ದದ್ದು ಕರುಳು ಹಿಂಡುವ ದೃಶ್ಯ...

ಅವರದ್ದು ಬಡ ಕುಟುಂಬ . ಕೂಲಿ ಮಾಡಿದರೆ ಆ ದಿನದ ಜೀವನ ನಡೆಯಬಹುದು, ಇಲ್ಲದಿದ್ದರೆ ಕಷ್ಟ. ಹೀಗೆ ಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದ ಅವರಿಗೆ ಪುಟ್ಟ ಮಗು ಬೇರೆ, ಮಗುವಿಗೆ ಅನಾರೋಗ್ಯ ಉಂಟಾಗಿದೆ. ತಮಗೆ ಗೊತ್ತಿರುವ ಮದ್ದು ಮಾಡಿದರೂ ಮಗುವಿನ ಕಾಯಿಲೆ ಕಡಿಮೆಯಾಗುತ್ತಿಲ್ಲ, ಹಾಗಾಗಿ ಆಸ್ಪತ್ರೆಯಿಂದ ಔಷಧಿ ತಂದು ಕೊಡೋಣ ಅಂತ ಆ ತಾಯಿ ಯೋಚಿಸುತ್ತಾಳೆ.
ಆದರೆ ಅವರಿರುವ ಗ್ರಾಮದಿಂದ ಆಸ್ಪತ್ರೆಗೆ ಹೋಗಲು ಕಾಡು ದಾರಿಯಲ್ಲಿಯೇ ಹೋಗಬೇಕು, ಅಲ್ಲಿಯವರಿಗೆ ಕಾಡಿನಲ್ಲಿ ಈ ರೀತಿ ನಡೆದಾಡಿ ಅಭ್ಯಾಸವಿರುತ್ತೆ, ಹಾಗಾಗಿ ಆಕೆ ಒಬ್ಬಳೇ ಹೋಗಿದ್ದಾಳೆ.ಆದರೆ ಆಕೆಯ ಅದೃಷ್ಟ ಕೈ ಕೊಟ್ಟಿತ್ತು, ಕಾಡಿನಲ್ಲಿದ್ದ ಹೆಬ್ಬಾವು ಆಕೆಯನ್ನು ಉಸಿರುಕಟ್ಟಿಸಿ ನುಂಗಿದೆ. ಈ ಘಟನೆ ನಡೆಯುವಾಗ ಆಕೆಯ ಪತಿ ಕೆಲಸಕ್ಕೆ ಹೋಗಿದ್ದರು. ಆಕೆ ಮಗುವನ್ನು ಮನೆಯಲ್ಲಿದ್ದ ವಯಸ್ಸಾದ ಮಗುವಿಗೆ ನೋಡಿಕೊಳ್ಳಲು ಹೇಳಿ ಆಸ್ಪತ್ರೆಗೆ ಹೋಗಿದ್ದಳು. ಇತ್ತ ಮನೆಯವರಿಗೆ ಈಕೆಯ ದಾರಿ ಕಾದು ಸಾಕಾಗುತ್ತದೆ. ಕೆಲಸದಿಂದ ಮರಳಿ ಬಂದ ಆಕೆಯ ಪತಿಗೆ ವಿಷಯ ತಿಳಿಸಿದಾಗ ಆತಂಕಗೊಂಡು ಹುಡುಕಿದ್ದಾರೆ. ಆವಾಗ ಕಾಡಿನಲ್ಲಿ ಆಕೆಯ ಚಪ್ಪಲಿ, ಬ್ಯಾಗ್ ಸಿಕ್ಕಿದೆ. ಸ್ವಲ್ಪ ದೂರದಲ್ಲಿಯೇ ಹೆಬ್ಬಾವು ಹೊಟ್ಟೆ ತುಂಬಿ ಹಾಯಾಗಿ ಮಲಗಿತ್ತು, ಅದರ ಹೊಟ್ಟೆ ನೋಡಿದಾಗ ಜನರಿಗೆ ದೌಟು ಆಗುತ್ತೆ, ಏಕೆಂದರೆ ಹೆಬ್ಬಾವು ಮಹಿಳೆಯನ್ನು ನುಂಗಿದ ಪ್ರಕರಣ ನಡೆದು ತುಂಬಾ ದಿನಗಳಾಗಿರಲಿಲ್ಲ.
ನಂತರ ಅಲ್ಲಿಗೆ ಪೊಲೀಸ್, ಉರಗ ತಜ್ಞರು ಬರುತ್ತಾರೆ, ನಂತರ ಹಾವು ಹಿಡಿದು ಅದರ ಹೊಟ್ಟೆ ಕತ್ತರಿಸಿದಾಗ ಹೊಟ್ಟೆಯಲ್ಲಿ ಮಹಿಳೆಯ ದೇಹ ಪತ್ತೆಯಾಗಿದೆ. ಆಕೆ ನಡೆದು ಹೆಚ್ಚೇನು ದೂರ ಹೋಗಿರಲಿಲ್ಲ, ಬರಿ 800 ಮೀ ಹೋಗಿದ್ದಳು ಅಷ್ಟೆ.
ಸ್ವಲ್ಪ ದಿನಗಳ ಹಿಂದೆ ನಡೆದಿತ್ತು ಇಂಥದ್ದೇ ಘಟನೆ
ಕೆಲವು ದಿನಗಳ ಹಿಂದೆ 45 ವರ್ಷದ ಮಹಿಳೆ ದೊಡ್ಡ ಹೆಬ್ಬಾವಿನ ಹೊಟ್ಟೆಯಲ್ಲಿ ಇದೇ ರೀತಿ ಪತ್ತೆಯಾಗಿದ್ದಳು, ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆಯನ್ನು ನೋಡಿ ಆಕೆಯ ಗಂಡ ಹಾಗೂ ಸೌತ್ ಸುಲವೆಸಿ ಜನರಿಗೆ ಅಚ್ಚರಿಯಾಗಿತ್ತು, ಆ ಹಾವು 16 ಅಡಿ ಉದ್ದವಿತ್ತು.
ಮಹಿಳೆ ಕಾಣೆಯಾದಾಗ ಇಡೀ ಊರಿನವರು ಹುಡುಕಿದ್ದಾರೆ, ಆವಾಗ ಅಲ್ಲಿ ಅವಳ ಕೆಲ ವಸ್ತುಗಳು ಸಿಕ್ಕಿವೆ ನೋಡಿದರೆ ದೊಡ್ಡ ಹೆಬ್ಬಾವು ಮಲಗಿತ್ತು ಅದರ ಹೊಟ್ಟೆ ತುಂಬಾನೇ ದಪ್ಪವಿತ್ತು. ಜನರಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡುತ್ತಾರೆ, ಉರಗ ತಜ್ಞರು ಹೊಟ್ಟೆ ಕತ್ತರಿಸಿದಾಗ ಮಹಿಳೆ ಹೆಬ್ಬಾವು ಹೊಟ್ಟೆಯಲ್ಲಿತ್ತು. ಈಗ ಮತ್ತೆ ಆ ಘಟನೆ ನಡೆದಿರುವುದು ಆ ಭಾಗದ ಜನರ ಆತಂ ಹೆಚ್ಚಿಸಿದೆ.



Click it and Unblock the Notifications
