Latest Updates
-
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ!
11 ವರ್ಷದ ಹಿಂದೆಯೇ ತೀರಿ ಹೋದ ಗಂಡ, ಈಗ ನನಗೆ ಹುಟ್ಟಿದ ಮಗುವಿಗೆ ನನ್ನ ಗಂಡನೇ ಅಪ್ಪ ಅಂತಿದ್ದಾಳೆ ಈ ತಾಯಿ!
ಇಂದಜೀತ್ ಬರಾಕ್ ಎಂಬ ವ್ಯಕ್ತಿ ತನ್ನ X ತಾಣದಲ್ಲಿ ಈ ವೀಡಿಯೋ ಹಾಕಿದ್ದು ಆ ಮಹಿಳೆಯ ಇಂಟರ್‌ವ್ಯೂ ವೈರಲ್ ಆಗುತ್ತಿದೆ, ಆ ಮಹಿಳೆ ಹೇಳುವುದನ್ನು ಕೇಳುವಾಗ ನಗು ಬರುತ್ತೆ.
ಯಾವುದೋ ಸುಳ್ಳು ಮರೆ ಮಾಡಲು ತೀರಿ ಹೋಗಿರುವ ಗಂಡನನ್ನು ಅಸ್ತ್ರ ಮಾಡುತ್ತಿದ್ದಾಳೆ ಎಂದನಿಸುವುದು, ಆದರೆ ಆಕೆಯನ್ನು ನೋಡಿದರೆ ಸುಳ್ಳು ಹೇಳುತ್ತಿರುವಂತೆ ಕಾಣುತ್ತಿಲ್ಲ, ಯಾವುದೇ ಹಿಂಜರಿಕೆ ಇಲ್ಲದೆ ಈ ಮಗುವಿನ ತಂದೆ 11 ವರ್ಷದ ಹಿಂದೆ ತೀರಿ ಹೋಗಿರುವ ನನ್ನ ಗಂಡ ಎಂದು ಹೇಳುತ್ತಿದ್ದಾಳೆ.

ಆ ವ್ಯಕ್ತಿ ಆಕೆಯ ಪತಿ ಬಗ್ಗೆ ವಿಚಾರಿಸುತ್ತಾನೆ, ಅದಕ್ಕವಳು ಗಂಡ ತೀರಿ ಹೋಗಿ 11 ವರ್ಷವಾಯ್ತು ಎಂದು ಉತ್ತರಿಸುತ್ತಾಳೆ. ಆವಾಗ ಅಲ್ಲಿದ್ದ ಪುಟ್ಟ ಮಗುವನ್ನು ತೋರಿಸಿ ಈ ಮಗು ಹೇಗಾಯ್ತು ಎಂದು ಕೇಳಿದರೆ ಆ ಮಗು ಹೇಗೆ ಹುಟ್ಟಿತು ಎಂದೇ ಗೊತ್ತಿಲ್ಲ, ಹೇಗೆ ಗರ್ಭಿಣಿಯಾದೆ ಎಂಬುವುದು ನಿಜಕ್ಕೂ ಗೊತ್ತಿಲ್ಲ, ಪತಿ ನನ್ನ ಕನಸಿನಲ್ಲಿ ಬರುತ್ತಿದ್ದ ಎಂದು ಹೇಳುತ್ತಾಳೆ.
ಅದಕ್ಕೆ ಆ ಪತ್ರಕರ್ತ ಕನಸಿನಲ್ಲಿ ಬಂದು ಏನು ಹೇಳುತ್ತಿದ್ದ ಎಂದು ಕೇಳಿದಾಗ ಊಟ ಕೇಳಿ ಊಟ ಮಾಡುತ್ತಿದ್ದ, ನನ್ನ ಜೊತೆ ಜಗಳವಾಡುತ್ತಾನೆ, ನನ್ನ ಜೊತೆ ಮಲಗುತ್ತಾನೆ ಎಂದು ಹೇಳಿದಾಗ ಆ ಪತ್ರಕರ್ತ ಮತ್ತೊಮ್ಮೆ ಕ್ಲಾರಿಟಿ ಪಡೆಯಲು ಕನಸಿನಲ್ಲಿ ನಿಮ್ಮ ಜೊತೆ ಮಲಗುತ್ತಾರಾ ಎಂದು ಕೇಳಿದಾಗ ಹೌದು ಅಂತಾಳೆ.
11 ವರ್ಷದ ಹಿಂದೆ ನಿಮ್ಮ ಗಂಡ ತೀರಿ ಹೋಗಿದ್ದಾರೆ, ಆದರೆ ನಿಮಗೆ 11 ವರ್ಷದ ಬಳಿಕ ಮಗುವಾಗಿದೆ ಹೇಗೆ? ಎಂದು ಹೇಳಿದಾಗ ಗೊತ್ತಿಲ್ಲ ದೇವರು ಕೊಟ್ಟಿದ್ದು ಎಂದು ಉತ್ತರಿಸುತ್ತಾಳೆ. ನನ್ನ ಹೊಟ್ಟೆಯಲ್ಲಿ ಮಗು ಹೇಗೆ ಉಂಟಾಯಿತು ಎಂಬುವುದು ಗೊತ್ತಿಲ್ಲ ಎಂದು ಹೇಳುತ್ತಾಳೆ, ಮತ್ತೆ ಮಗು ಯಾರದು ಎಂದು ಕೇಳಿದಾಗ ಆಕೆಯಿಂದ ಬರುವ ಉತ್ತರ ಒಂದೇ ನನಗೆ ಗೊತ್ತಿಲ್ಲ... ಇದೀಗ
ಈ ವಿಚಿತ್ರ ಹೇಳಿಕೆಯ ವೀಡಿಯೋ ಅಂತು ತುಂಬಾನೇ ವೈರಲ್ ಆಗಿದೆ.
ಮಗುವಿಗೆ ತಂದೆ ಯಾರೆಂದು ಹೇಳುವವಳೇ ತಾಯಿ
ತಾಯಿ ತನ್ನ ಮಗುವಿಗೆ ತನ್ನ ತಂದೆ ಯಾರು ಎಂದು ಹೇಳಬೇಕು, ಆದರೆ ಇವರು ಕನಸಿನಲ್ಲಿ ಬಂದು ಮಗು ಕೊಟ್ಟರು ಎಂದರೆ ಈ ಕಾಲದಲ್ಲಿ ನಂಬುವವರು ಯಾರು? ಇದರಿಂದ ಮುಂದೆ ಆ ಮಗುವಿನ ಭವಿಷ್ಯಕ್ಕೆ ತೊಂದರೆಯಾಗುವುದಿಲ್ಲವೇ?
ಇನ್ನು ಇವರಿಗೆ ಪ್ರಜ್ಞೆ ಇಲ್ಲದಿದ್ದಾಗ ಯಾರಾದರೂ ಇವರನ್ನು ಬಳಸಿಕೊಂಡ್ರಾ?
ಕುಡಿತ ಮುಂತಾದ ಚಟವಿದ್ದರೆ ಕುಡಿದು ಮಲಗಿದರೆ ಏನಾಗುತ್ತೆ ಎಂದು ಗೊತ್ತಾಗುವುದಿಲ್ಲ, ಈ ಮಹಿಳೆಗೆ ಕುಡಿತದ ಚಟವಿದೆಯೇ ಇಲ್ಲವೇ ಎಂಬುವುದು ಕೂಡ ಗೊತ್ತಿಲ್ಲ. ಒಂದು ವೇಳೆ ನಿದ್ದೆಯಲ್ಲಿ ಅಥವಾ ಪ್ರಜ್ಞೆ ಇಲ್ಲದಿದ್ದಾಗ ಏನಾದರೂ ಅವಘಡವಾಯ್ತೇ ಗೊತ್ತಿಲ್ಲ, ಈಕೆಗೆ ಮಾದಕ ವಸ್ತುಗಳ ಅಭ್ಯಾಸವಿದೆಯೇ ಗೊತ್ತಿಲ್ಲ, ಮಗವಿನ ತಂದೆ ಮಾತ್ರ 11 ವರ್ಷದ ಹಿಂದೆ ತೀರಿ ಹೋಗಿರುವ ಗಂಡನೇ ಎಂದು ಹೇಳುತ್ತಿದ್ದಾಳೆ.
पति की मौत के 11 साल बाद बच्चे को जन्म दिया। यही तो है सनातन की खूबसूरती।
— Inderjeet Barak🌾 (@inderjeetbarak) August 1, 2024
पति सपने में आते थे ऐसा तर्क दे रही है।
😲😲😲😲 pic.twitter.com/zEh70uTczH
ತೀರಿ ಹೋದವರ ಜೊತೆ ಮಾತನಾಡುತ್ತೇವೆ, ಅವರ ಜೊತೆ ಒಂದು ರೀತಿಯ ಕನೆಕ್ಷನ್ ಫೀಲ್ ಆಗುತ್ತೆ ಎಂದು ಹೇಳುವವರನ್ನು ಕೇಳಿದ್ದೇವೆ ಆದರೆ ಕನಸಿನಲ್ಲಿ ಬಂದು ಮಗು ಕೊಟ್ಟ ಎಂದು ಹೇಳಿದರೆ ಹೇಗೆ ತಾನೆ ನಂಬಲು ಸಾಧ್ಯ? ಆದರೂ ಅವರು ಮಾತ್ರ ನನಗೆ ನನ್ನ ಗಂಡ ಕನಸಿನಲ್ಲಿ ಬಂದು ಮಗು ಕೊಟ್ಟಿದ್ದಾನೆ ಎಂದು ಬಲವಾಗಿ ನಂಬಿದ್ದಾಳೆ, ಈ ಮಹಿಳೆಯ ನಂಬಿಕೆ ಬಗ್ಗೆ ನಿಮ್ಮ ಅನಿಸಿಕೆಯೇನು?



Click it and Unblock the Notifications
