Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾವನ್ನು ಇಷ್ಟೊಂದು ಸಲೀಸಾಗಿ ಹಿಡಿದವರನ್ನು ನೋಡಿರ್ಲಿಕ್ಕಿಲ್ಲ, ಆ ಹಾವು ಕೂಡ ಅಷ್ಟೇ ಆಕೆಯ ಫ್ರೆಂಡ್‌ನಂತೆ ವರ್ತಿಸಿದೆ!
ಈ ವೀಡಿಯೋ ನೋಡುವಾಗ ಆ ಮಹಿಳೆ ಹಾವನ್ನು ತಿಂಡಿ ಪ್ಯಾಕ್ ಮಾಡಿದಂತೆ ಮಾಡಿದ ವೀಡಿಯೋ ತುಂಬಾ ವೈರಲ್ ಆಗುತ್ತಿದೆ, ಹಾವನ್ನು ಹಿಡಿಯುವ ಎಷ್ಟೋ ವೀಡಿಯೋ ನೋಡಿದ್ದೇವೆ, ಆದರೆ ಈ ರೀತಿ ಹಾವು ಹಿಡಿದಿರುವುದನ್ನು ಬಹುಶಃ ನೀವೆಂದೂ ನೋಡಿರಲು ಸಾಧ್ಯವಿಲ್ಲ, ಆ ಹಾವು ಕೂಡ ಅವಳು ಸಾಕಿದ ಪ್ರಾಣಿಯಂತೆ ಬುಸ್ ಬುಸ್ ಅನ್ನದೆ ಸುಮ್ಮನೆ ಇತ್ತು, ಹಾವನ್ನು ಮಧ್ಯಭಾಗದಲ್ಲಿ ಹಿಡಿದುಕೊಂಡಿದ್ದಲು ಅದು ಕೂಡ ಸುಮ್ಮನೆ ಇತ್ತು, ಇದೀಗ ಈ ಭಲೇ ಹೆಣ್ಣಿನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆಕೆ ಲ್ಯಾಪ್‌ಟಾಪ್ ಹಿಂದೆ ಹುಡುಕುತ್ತಿರುವುದು ನೋಡುವಾಗ ಯಾವುದೋ ವೈರ್ ಏನೋ ನೋಡುತ್ತಿರಬಹುದು ಎಂದನಿಸುವುದು, ಆದರೆ ಆಕೆ ಹುಡುಕುತ್ತಿದ್ದದ್ದು ಆಫೀಸ್‌ನೊಳಗಡೆ ಕಂಪ್ಯೂಟರ್ ಹಿಂದೆ ಸೇರಿದ ಹಾವನ್ನು. ಆಫೀಸ್‌ನಲ್ಲಿದ್ದವರು ದೂರ ನಿಂತು ವೀಡಿಯೋ ಮಾಡುತ್ತಿದ್ದರು, ಈಕೆ ಹಾವನ್ನು ಎಷ್ಟೊಂದು ಸಲೀಸಾಗಿ ಹಿಡಿಯುತ್ತಾಳೆ ಎಂದರೆ ಅರೆ.. ಹಾವು ಹಿಡಿಯುವುದು ಇಷ್ಟೊಂದು ಸುಲಭನಾ ಎಂದನಿಸುವುದು.
ನಂತರ ಹಾವನ್ನು ಹಿಡಿದು ಆರಾಮವಾಗಿ ಬರುತ್ತಾಳೆ. ನಾವು ಹಾವು ಕಚ್ಚದಿರಲು ಹಾವಿನ ತಲೆಭಾಗದಲ್ಲಿ ಹಿಡಿಯುವುದು ನೋಡುತ್ತೇವೆ, ಆದರೆ ಈಕೆ ಆ ರೀತಿ ಹಿಡಿದಿಲ್ಲ. ಹಾವಿನ ಮಧ್ಯಭಾಗದಲ್ಲಿ ಹಿಡಿದಿದ್ದಾಳೆ, ಅದು ಅವಳನ್ನು ಸುತ್ತಿಕೊಳ್ಳುತ್ತಿದೆ,, ಏನೂ ತಲೆಕೆಡಿಸಿಕೊಳ್ಳಲ್ಲ, ಒಂದಿಷ್ಟೂ ಭಯವಿಲ್ಲ, ಒಂದು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಹಾಕಿ ನಗು ನಗುತ್ತಾ ಕೊಂಡೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ.
I first thought she’s here to fix the HDMI cable that might have come loose 😭😭 pic.twitter.com/U3vt3o53R2
— Yo Yo Funny Singh (@moronhumor) July 27, 2024
ಅವರು ಹಾವು ಹಿಡಿಯುವಾಗ ಆ ಆಫೀಸ್‌ನಲ್ಲಿ ಇದದ್ವರು ಅಷ್ಟೂ ಮಂದಿ ಹೆದರಿ ನಿಂತಿದ್ದರು
ಹೌದು ಯಾರೂ ಕೆಲಸ ಮಾಡುತ್ತಿರಲಿಲ್ಲ, ಚೇರ್‌ನಿಂದ ಎದ್ದು ದೂರ ನಿಂತು ಎಲ್ಲಾದರೂ ಹಾವು ನುಸುಳಿ ಬಂದರೆ ಹೊರಗೆ ಓಡಲು ಸಿದ್ಧರಾಗಿ ನಿಂತಿದ್ದರು, ಆದರೆ ಈ ಮಹಿಳೆ ಮಾತ್ರ ಎಷ್ಟೊಂದು ಧೈರ್ಯಶಾಲಿ ಅನಿಸುತ್ತಾರೆ. ಅವರು ಕೂಡ ಅದೇ ಆಫೀಸ್‌ನ ಉದ್ಯೊಗಿ, ಆದರೆ ಈ ಹಾವನ್ನು ಇಷ್ಟೊಂದು ಧೈರ್ಯವಾಗಿ ಹಿಡಿದಿದ್ದಾರೆ ಎಂದರೆ ಈಕೆ ಉರಗ ತಜ್ಞೆಯೇ ಇರಬಹುದು ಅಲ್ವಾ?
ಹಾವನ್ನು ಹಿಡಿದು ಚೀಲದಲ್ಲಿ ತುಂಬಿದ ಬಳಿಕ ಅದನ್ನು ಎತ್ತಿಕೊಂಡು ಹೋದ ರೀತಿ ಇನ್ನಷ್ಟು ಅಚ್ಚರಿ ಮೂಡಿಸುತ್ತದೆ, ಏಕೆಂದರೆ ವ್ಯಾನಿಟಿ ಬ್ಯಾಗ್‌ನ ಹಿಡಿದು ಹೋಗುತ್ತೇವೆ ಅಲ್ವಾ ಆ ರೀತಿ ಹಾವು ತುಂಬಿದ ಚೀಲವನ್ನು ಹಿಡಿದು ಹೋಗಿದ್ದಾಳೆ, ಬಹುಶಃ ಈಕೆಯ ಜಾತಕದಲ್ಲಿ ಹಾವು ಇವಳನ್ನು ಏನೂ ಮಾಡಲ್ಲ ಎಂದಿರಬೇಕು, ಹಾಗಾಗಿ ಇಷ್ಟೊಂದು ಧೈರ್ಯ , ಇಲ್ಲದಿದ್ದರೆ ಇಷ್ಟು ಧೈರ್ಯ ಹೇಗೆ ತಾನೆ ಬರುತ್ತೆ ಅಲ್ವಾ?
ಇಂಥ ವೀಡಿಯೋ ನೋಡಿ ನೀವು ಹಿಡಿಯಲು ಹೋಗಬೇಡಿ?
ಹಾವನ್ನು ಹಿಡಿಯುವುದು ಕೂಡ ಒಂದು ವಿದ್ಯೆ , ಇದನ್ನು ಗೊತ್ತಿಲ್ಲದೆ ವೈರಲ್ ಆಗುತ್ತೇವೆ ಎಂದು ಹಿಡಿಯಲು ಹೋಗಬೇಡಿ, ಉರಗ ತಜ್ಞರೇ ಹಾವಿನಿಂದ ಕಚ್ಚಿಸಿಕೊಂಡು ಸತ್ತ ಉದಾಹರಣೆಗಳಿವೆ, ಅಂತದ್ದರಲ್ಲಿ ಗೊತ್ತಿಲ್ಲದೆ ಹಡಿಇಯಬೇಡಿ, ಹಾವನ್ನು ಹೇಗೆ ಹಿಡಿಯಬೇಕು, ಹಾವನ್ನು ಹೇಗೆ ಚಿಲದಲ್ಲಿ ತುಂಬಬೇಕು ಎಂಬುವುದು ಅವರಿಗೆ ಗೊತ್ತಿರುತ್ತದೆ.



Click it and Unblock the Notifications