Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದ ಈ ಸ್ಥಳಗಳಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ..! ಯಾವ ಸ್ಥಳಗಳು ಗೊತ್ತಾ?
ಭಾರತ ದೇವಾಲಯಗಳ ಬೀಡಾಗಿದೆ. ಪ್ರತಿ ಹಳ್ಳಿಯಲ್ಲೂ ಒಂದೊಂದು ದೇವಾಲಯಗಳು ಕಾಣಸಿಗುತ್ತವೆ. ಇದರಲ್ಲಿ ಕೆಲವು ದೇವಾಲಯಗಳು ತಮ್ಮದೇ ಆದ ನೀತಿ ನಿಯಮಗಳ ಹಾಖಿಕೊಂಡಿವೆ. ಅದರಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ನಿಯಮ ಕೂಡ ಇದೆ.
ಭಾರತದ ಈ ಕೆಲವು ಸ್ಥಳಗಳಿಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಹಾಗಾದರೆ ಆ ಪ್ರದೇಶಗಳು ಯಾವುದು? ಯಾಕಾಗಿ ಮಹಿಳೆಯರ ಪ್ರವೇಶವನ್ನ ನಿರ್ಬಂಧಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಶನಿ ಶಿಂಗ್ನಾಪುರ - 'ಬಂಡೆ' ದೇವತೆ
ಮಹಾರಾಷ್ಟ್ರದಲ್ಲಿರುವ ಶಿಂಗ್ನಾಪುರದ ಶನಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧವಂತೆ. ಇತ್ತೀಚಿಗೆ ಶನಿದೇವನ ಮೂರ್ತಿಯನ್ನು ಯುವತಿಯೊಬ್ಬಳು ಸ್ಪರ್ಶಿಸಿದ್ದಳು ಎಂಬ ಕಾರಣಕ್ಕೆ ದೇಗುಲ ಅಪವಿತ್ರವಾಗಿದೆ ಎಂದು ಟ್ರಸ್ಟ್ ಅಧಿಕಾರಿಗಳು ಶುದ್ಧೀಕರಣವನ್ನು ನಡೆಸಿ ಮಹಿಳೆಯರಿಗೆ ನಿಷೇಧ ಹೇರಿದ್ದರು ಎಂದು ತಿಳಿದುಬಂದಿದೆ.
ಶಬರಿಮಲೆ - ಅಯ್ಯಪ್ಪನ ದೇವಸ್ಥಾನ
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇಗುಲವಾಗಿರುವ ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧವಾಗಿದೆ. 10-50 ವರ್ಷದೊಳಗಿನ ಮಹಿಳೆಯರಿಗೆ ಆವರಣ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಈ ವಯಸ್ಸಿನಲ್ಲಿ ಮಹಿಳೆಯರು ಋತುಮತಿಯಾಗಲು ಪ್ರಾರಂಭಿಸುತ್ತಾರೆ ಮತ್ತು ಬ್ರಹ್ಮಚಾರಿ ದೇವರಾದ ಅಯ್ಯಪ್ಪನನ್ನು ಭೇಟಿ ಮಾಡಲು ಅನುಮತಿ ನೀಡಲಾಗುವುದಿಲ್ಲ. ಆದರೆ ಇತ್ತೀಚಿಗೆ ನಡೆದಿರುವ ಪ್ರಕರಣದಲ್ಲಿ ಕೋರ್ಟ್ ಎಲ್ಲಾ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಿ ಆದೇಶಿಸಿದೆ.
ಜಾಮಾ ಮಸೀದಿ - ದಕ್ಷಿಣ ಮಿನಾರೆಟ್
ಪುರುಷ ಸಂಗಾತಿಯಿಲ್ಲದೆ ಯಾವುದೇ ಮಹಿಳೆ ಜಾಮಾ ಮಸೀದಿಯ ಆವರಣವನ್ನು ಪ್ರವೇಶಿಸುವಂತಿಲ್ಲ ಮತ್ತು ಮಗ್ರಿಬ್ ಪ್ರಾರ್ಥನೆಯ ನಂತರ ಅವರು ಮಸೀದಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಪದ್ಮನಾಭಸ್ವಾಮಿ ದೇವಸ್ಥಾನ
ಮಹಿಳೆಯರು ಈ ದೇವಸ್ಥಾನದ ಹೊರಗೆ ಪ್ರಾರ್ಥಿನೆ ಸಲ್ಲಿಸಬಹುದು, ಆದರೆ ಅವರು ಎಂದಿಗೂ ಆವರಣದೊಳಗೆ ಪ್ರವೇಶಿಸುವಂತಿಲ್ಲ. ಶತಮಾನಗಳ ಹಿಂದಿನ ಸಂಪ್ರದಾಯಗಳನ್ನು ಉಲ್ಲೇಖಿಸಿ, ದೇವಾಲಯದ ಅಧಿಕಾರಿಗಳು ಮಹಿಳೆಯರು, ಉನ್ನತ ಮಹಿಳಾ ಅಧಿಕಾರಿಗಳು ಅಥವಾ ತಜ್ಞರನ್ನು ದೇವಾಲಯದ ಕಮಾನುಗಳ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ.
ಕಾರ್ತಿಕೇಯ ದೇವಸ್ಥಾನ - ಪುಷ್ಕರ್
ಈ ದೇವಾಲಯವು ಮಹಿಳಾ ಭಕ್ತರಿಗೆ ಶಾಪಗ್ರಸ್ತವಾಗಿದೆ ಎಂದು ನಂಬಲಾಗಿದೆ ಮತ್ತು ಎಂದಾದರೂ ಮಹಿಳೆ ಆವರಣವನ್ನು ಪ್ರವೇಶಿಸಲು ಧೈರ್ಯ ಮಾಡಿದರೆ ಆಕೆ ಆಶೀರ್ವಾದ ಪಡೆಯುವ ಬದಲು ಶಾಪಕ್ಕೆ ಒಳಗಾಗುತ್ತಾಳೆ ಎಂದು ನಂಬಲಾಗಿದೆ. ಒಮ್ಮೆ, ಇಂದ್ರನು ಕಾರ್ತಿಕೇಯನನ್ನು ತನ್ನ ಧ್ಯಾನದಿಂದ ವಿಚಲಿತಗೊಳಿಸಲು ಪ್ರಯತ್ನಿಸಿದನು ಮತ್ತು ಹಾಗೆ ಮಾಡಲು ಸ್ವರ್ಗದ ದೇವತೆಗಳನ್ನು ಕಳುಹಿಸಿದನು. ಆದ್ದರಿಂದ ಅವನು ತನ್ನನ್ನು ಭೇಟಿ ಮಾಡಲು ಪ್ರಯತ್ನಿಸಿದ ಎಲ್ಲಾ ಸ್ತ್ರೀಯರನ್ನು ಶಪಿಸುತ್ತಾನೆ ಎಂಬ ಪುರಾಣವಿದೆ.
ಪಟ್ಪೇಲಸಿ ಛತ್ರ - ಒಳಗಿನ ಗರ್ಭಗುಡಿ
ಅಸ್ಸಾಂನಲ್ಲಿರುವ ಈ ಹಿಂದೂ ದೇವಾಲಯದೊಳಗೆ ಮಹಿಳೆಯರ ಪ್ರವೇಶ ನಿಷೇಧಿಸಿದೆ. ಸುಮಾರು 500 ವರ್ಷಗಳಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. 2010 ರಲ್ಲಿ ಅಸ್ಸಾಂ ರಾಜ್ಯಪಾಲ ಜೆಪಿ ಪಟ್ನಾಯಕ್ ಅವರು ದೇವಾಲಯದೊಳಗೆ ಗುಂಪನ್ನು ಕರೆದೊಯ್ದು ಸುದ್ದಿಯಾಗಿದ್ದರು.
ಇದಿಷ್ಟೇ ಅಲ್ಲ ವಿದೇಶದ ನೆಲೆಗಳಲ್ಲೂ ಮಹಿಳೆಯರನ್ನು ನಿಷೇಧಿಸಿರುವ ಒಂದಿಷ್ಟು ಸ್ಥಳಗಳಿವೆ. ಅಮೆರಿಕದಲ್ಲೂ ಕೆಲ ಸ್ಥಳಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲಾಗಿದೆ. ಹಾಗಾದ್ರೆ ಅದ್ಯಾವ ಸ್ಥಳಗಳು ನೋಡಿ...
ಬರ್ನಿಂಗ್ ಟ್ರೀ ಕ್ಲಬ್
ಅಮರಿಕದ ಮೇರಿಲ್ಯಾಂಡ್‌ನ ಬೆಥೆಸ್ಡಾದಲ್ಲಿರುವ ಎಲ್ಲಾ ಪುರುಷ ಗಾಲ್ಫ್ ಕ್ಲಬ್ ಇದಾಗಿದೆ. ಈ ಬರ್ನಿಂಗ್ ಟ್ರೀನಲ್ಲಿನ ಕೋರ್ಸ್ ಅನ್ನು ಆರ್ಚ್ ಮ್ಯಾನಿಂಗ್, ಹಲವಾರು ಅಧ್ಯಕ್ಷರು, ವಿದೇಶಿ ಗಣ್ಯರು, ಉನ್ನತ-ಶ್ರೇಣಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾಂಗ್ರೆಸ್ ಸದಸ್ಯರು ಮತ್ತು ಮಿಲಿಟರಿ ನಾಯಕರು ಆಡಿದ್ದಾರೆ. ಆದರೆ ಈ ಕ್ಲಬ್‌ಗೆ ವಿಶೇಷ ಸಂದರ್ಭ ಹೊರತುಪಡಿಸಿ ಉಳಿದ ಸಮಯದಲ್ಲಿ ಮಹಿಳೆಯರಿಗೆ ನಿಷೇಧ ಹೇರಲಾಗಿದೆ.
ಗ್ರೀಸ್‌ನ ಮೌಂಟ್ ಆಥೋಸ್
ನೀವು ಗ್ರೀಸ್‌ನ ಮೌಂಟ್ ಅಥೋಸ್‌ಗೆ ಭೇಟಿ ನೀಡಲು ಬಯಸಿದರೆ ನಿಮ್ಮ ಪಾಸ್‌ಪೋರ್ಟ್‌ನ ನಕಲನ್ನು ಮೌಂಟ್ ಅಥೋಸ್ ಪಿಲ್ಗ್ರಿಮ್ಸ್ ಬ್ಯೂರೋಗೆ ಸಲ್ಲಿಸುವುದು ಮೊದಲ ಹಂತವಾಗಿದೆ. ಈ ಪ್ರದೇಶವು ಆರ್ಥೊಡಾಕ್ಸ್ ಚರ್ಚುಗಳಿಗೆ ನೆಲೆಯಾಗಿದೆ, ಮೌಂಟ್ ಅಥೋಸ್ ಕೇವಲ 100 ಆರ್ಥೊಡಾಕ್ಸ್ ಮತ್ತು 10 ಆರ್ಥೊಡಾಕ್ಸ್ ಅಲ್ಲದ ಪುರುಷ ಯಾತ್ರಿಕರಿಗೆ ಪ್ರವೇಶ ಅನುಮತಿ ನೀಡುತ್ತದೆ. ಆದರೆ ಈ ಸುಂದರ ತಾಣಕ್ಕೆ 1000 ವರ್ಷದಿಂದ ಓರ್ವ ಮಹಿಳೆ ಸಹ ಭೇಟಿ ನೀಡಿಲ್ಲ. ಅವರಿಗೆ ಅವಕಾಶವೂ ಇಲ್ಲ.
ಮೌಂಟ್ ಓಮಿನ್ ಜಪಾನ್
ಜಪಾನ್‌ನಲ್ಲಿರು ಅತ್ಯಂತ ಪವಿತ್ರ ಸ್ಥಳವಾದ ಮೌಂಟ್ ಓಮಿನಿಗೆ ಮಹಿಳೆಯರ ಪ್ರವೇಶ ನಿಷೇಧವಿದೆ. ಅಲ್ಲಿ ಭೌಧ ದೇವಾಲಯವಿದ್ದು, 4ನೇ ಶತಮಾನದಿಂದಲೂ ಅಲ್ಲಿಗೆ ಮಹಿಳೆಯರ ಪ್ರವೇಶ ನಿಷೇಧವಂತೆ. ಆದರೆ ಈ ನಿಯಮ ಮುರಿದು ಹಲವು ಬಾರಿ ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದ್ದು, ಅದು ಯಶಸ್ವಿಯಾಗಲಿಲ್ಲ.



Click it and Unblock the Notifications
