Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬಾವಿಯ ಮೇಲೆ ಮಗುವನ್ನು ಕೂರಿಸಿ ರೀಲ್ಸ್..! ಆಮೇಲೆ ಆಗಿದ್ದೇನು?
ಆನ್‌ಲೈನ್ ಜಗತ್ತಿನಲ್ಲಿ ಹೆಚ್ಚು ಲೈಕ್ಸ್, ವೀವ್ಸ್ ಬರಲಿ ಎಂದು ಏನು ಬೇಕಾದರು ಮಾಡುವ ಜನರನ್ನು ನಾವು ನೋಡಿದ್ದೇವೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹತ್ತಾರು ಇಂತಹ ವಿಡಿಯೋಗಳು ಕಾಣಿಸಿಗುತ್ತವೆ. ಸೆಲ್ಫಿಗಾಗಿ ರೈಲಿನ ಮುಂದೆ ನಿಲ್ಲುವುದು, ಕಂದಕದ ಬದಿಯಲ್ಲಿ ನಿಂತು ಅಪಾಯಕಾರಿ ಸ್ಟಂಟ್ ಮಾಡುವುದು, ಬಾವಿಗೆ, ನದಿಗೆ ಹಾರುವುದು, ಬೈಕ್‌ನಲ್ಲಿ ವ್ಹೀಲಿಂಗ್ ಮಾಡುವುದು ಹೀಗೆ ಹೇಳುತ್ತಾ ಹೋದರ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇನ್ನು ಚಿಕ್ಕ ಮಕ್ಕಳನ್ನು ಸಾಕುವ ತಂದೆ ತಾಯಿಯು ಕೂಡ ಇಂತಹ ದುಷ್ಚಕ್ಕೆ ಬಿದ್ದಿದ್ದಾರೆ. ಅವರು ವಿಡಿಯೋಗಾಗಿ ಎಂತಹ ಸಾಹಸಕ್ಕೆ ಬೇಕಾದರೂ ಇಳಿಯಲು ಮುಂದಾಗುವುದನ್ನು ನಾವು ನೋಡಬಹುದು. ಅದರಲ್ಲೂ ಮಕ್ಕಳ ಜೀವಕ್ಕೆ ಅಪಾಯ ತರುವಂತಹ ಸಾಹಸಕ್ಕೆ ಮುಂದಾಗುವುದು ಸಹ ಈ ಸಾಮಾನ್ಯ ಎನ್ನುವಂತಾಗಿದೆ.

ಇಲ್ಲಿಯೂ ಸಹ ತಾಯಿಯೊಬ್ಬಳು ವಿಡಿಯೋ ಮಾಡುವ ಭರದಲ್ಲಿ ತನ್ನ ಮಗುವಿನ ಜೀವಕ್ಕೆ ಅಪಾಯ ತರುವ ರೀತಿ ಸಾಹಸ ಮಾಡುತ್ತಿದ್ದಾಳೆ. ಆಕೆ ಬಾವಿಯ ಪಕ್ಕದಲ್ಲಿಯೇ ಕುಳಿತು ಮಗುವನ್ನು ಕಾಲಿನ ಮೇಲೆ ಇಟ್ಟುಕೊಂಡು ಸಾಹಸ ಮಾಡಲು ಮುಂದಾಗಿದ್ದಾಳೆ. ಮಗು ಸಂಪೂರ್ಣವಾಗಿ ಬಾವಿಯೊಳಗೆ ಇಳಿದಿದೆ. ಅದರ ಒಂದು ಕೈಯನ್ನು ಮಾತ್ರ ಆಕೆ ಹಿಡಿದುಕೊಂಡು ನೇತಾಡುತ್ತಿದ್ದಾಳೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರು ಶಾಕ್‌ಗೆ ಒಳಗಾಗಿದ್ದಾರೆ. ಏಕೆಂದರೆ ತಾಯಿಯೊಬ್ಬಳು ಮಗುವನ್ನು ಅಪಾಯದಿಂದ ಪಾರು ಮಾಡುತ್ತಾಳೆ, ಮಕ್ಕಳಿಗೆ ಆಕೆ ತನ್ನ ಜೀವವನ್ನೇ ಅರ್ಪಿಸುತ್ತಾಳೆ ಎಂದೆಲ್ಲಾ ಕೇಳಿರುವ ನಾವು ಈ ವಿಡಿಯೋ ನೋಡಿದಾಗ ಇದೆಲ್ಲಾ ಒಮ್ಮೆ ಕನಸು ಎಂಬ ಭಾವನೆ ಎದುರಾಗುತ್ತದೆ.
ಬಾವಿಯ ತುದಿಯಲ್ಲಿ ಕುಳಿತ ಆಕೆ ಮಗುವಿನೊಂದಿಗೆ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ, ಬರಿ ಮಗು ಮಾತ್ರವಲ್ಲ ಇದು ಆಕೆಗೂ ಅಪಾಯಕಾರಿ, ನಿಯಂತ್ರಣ ತಪ್ಪಿ ಆಕೆ ಮಗುವಿನೊಂದಿಗೆ ಬಾವಿಯೊಳಗೆ ಬಿದ್ದರೆ ಖಂಡಿತ ಬದುಕುಳಿಯುವುದು ದೂರದ ಮಾತಾಗಿದೆ. ಆದ್ರೆ ಆಕೆ ಇದೆಲ್ಲವನ್ನು ಮರೆತು, ಕೇವಲ ರೀಲ್ಸ್‌ಗಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾಕೆ.
ಆಕೆಯ ಜೊತೆಗೆ ಇನ್ನೊಬ್ಬರು ಯಾರೋ ಇದನ್ನು ಸೆರೆ ಹಿಡಿಯಲು ಬಾವಿಯ ಇನ್ನೊಂದು ಬದಿಯಲ್ಲಿದ್ದಾರೆ. ಆದರೆ ಇದೊಂದು ದೊಡ್ಡ ಅಪಾಯಕ್ಕೆ ದಾರಿಯಾಗುವ ಸಂಭವಿದೆ ಎಂಬ ಕುರಿತು ಆಲೋಚನೆ ಮಾಡದೆ ಮಗುವಿನ ಜೀವಕ್ಕೂ ಆಪತ್ತು ತರಲು ಮುಂದಾಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿಡಿಯೋ ನೋಡಿದ ಮಂದಿ ಆಕೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆಕೆ ನಿಜವಾಗಿಯೂ ಆ ಮಗುವಿನ ಹೆತ್ತ ತಾಯಿಯೇ ಅಲ್ಲ ಎಂಬ ಅನುಮಾನ ಹೊರಹಾಕಿರುವ ಜೊತೆಗೆ ಆಕೆಯ ವಿರುದ್ಧ ಕಾನೂನು ಕ್ರಮಕ್ಕೂ ಆಗ್ರಹಿಸಲಾಗಿದೆ. ಒಂದು ಜೀವವನ್ನು ಅಪಾಯಕ್ಕೆ ತಳ್ಳಿರುವ ಆರೋಪದಲ್ಲಿ ಆಕೆಯನ್ನು ಬಂಧಿಸಬಹುದು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಆಕೆ ಕುಟುಂವ ನಿರ್ವಹಣೆಗಿಂತಲೂ ಜೈಲಿನಲ್ಲಿರುವುದು ಲೇಸು. ಇನ್ನೊಂದು ದಿನ ಆ ಮಗುವಿನ ಜೀವಕ್ಕೆ ಆಪತ್ತು ತಂದೇ ತರುತ್ತಾಳೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಆಕೆ ವಿಡಿಯೋಗಾಗಿ ಇಷ್ಟು ಮಾಡುವುದಕ್ಕಿಂತ ತಾನೇ ಬಾವಿಗೆ ಇಳಿಯುವ ಸಾಹಸ ಮಾಡಬಹುದಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.



Click it and Unblock the Notifications
