Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಹಿಳೆಗೆ ₹91 ಲಕ್ಷ...ಭಾರತೀಯನಿಗೆ ₹44 ಕೋಟಿ ಲಾಟರಿ..! ಅದೃಷ್ಟ ಅಂದ್ರೆ ಇದಪ್ಪಾ..!
ಜನರಿಗೆ ಅದೃಷ್ಟ ಹೇಗೆ ಯಾವಾಗ ಒಲಿದು ಬರುತ್ತೆ ಅನ್ನೋದನ್ನು ಊಹಿಸಲು ಸಹ ಸಾಧ್ಯವಿಲ್ಲ. ಕೆಲವರು ಕೊನೆ ಉಸಿರಿನ ವರೆಗೂ ಯಾವುದಾದರೊಂದು ಅದೃಷ್ಟಕ್ಕೆ, ವಿಸ್ಮಯಕ್ಕೆ ಕಾದಿರುತ್ತಾರೆ. ಇನ್ನು ಕೆಲವರಿಗೆ ಅನಿರೀಕ್ಷಿತವಾಗಿ ಅದೃಷ್ಟ ಹುಡುಕಿಕೊಂಡು ಬರುತ್ತದೆ.
ಇಲ್ಲೊಬ್ಬ ಮಹಿಳೆಗೂ ಸಹ ಅದೃಷ್ಟ ತಾನಾಗಿಯೇ ಹುಡುಕಿಕೊಂಡು ಬಂದಿದೆ. ಜರ್ಮನಿಯ ಮಹಿಳೆಯೊಬ್ಬರು ಮನೆ ಕ್ಲೀನ್ ಮಾಡುತ್ತಲೇ 91 ಲಕ್ಷ ರೂಪಾಯಿ ತನ್ನದಾಗಿಸಿಕೊಂಡಿದ್ದಾಳೆ. ಅರೇ ಇದು ಹೇಗೆ ಸಂಭವಿಸಿತು ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಜರ್ಮನಿಯ ಮಹಿಳೆಯೊಬ್ಬರು ಇತ್ತೀಚಿಗೆ ಕ್ರಿಸ್‌ಮಸ್ ಹಬ್ಬಕ್ಕಾಗಿ ತನ್ನ ಮನೆಯನ್ನು ಸ್ವಚ್ಛ ಮಾಡುವಾಗ 2 ವರ್ಷದ ಹಳೆಯ ಲಾಟರಿ ಟಿಕೆಟ್ ವೊಂದು ಆಕೆಯ ಕಣ್ಣಿಗೆ ಬಿದ್ದಿತ್ತು. ಅದು 2011ರ ಲಾಟರಿಯಾಗಿತ್ತು. ಅದನ್ನು ಮತ್ತಷ್ಟು ಪರೀಕ್ಷಿಸಿದಾ ಆ ವರ್ಷ ಇದೇ ಲಾಟರಿ ಟಿಕೆಟ್‌ಗೆ ಬಂಪರ್ ಬಹುಮಾನ ಹೊಡೆದಿತ್ತು.
ಜರ್ಮನಿಯ $110,000 ಮೊತ್ತ ಅಂದರೆ ಭಾರತದಲ್ಲಿ ಸುಮಾರು 91,61,449 ರೂಪಾಯಿಯನ್ನು ಆಕೆ ಗೆದ್ದಿದ್ದಳು. ಲಾಟರಿ ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದಾಗ ಚೀಟಿ ಅಚ್ಚ ಸ್ಥಿತಿಯಲ್ಲಿದ್ದು ಕಂಡು ಬೆರಗಾದರು. ಸ್ಯಾಕ್ಸೋನಿ-ಅನ್ಹಾಲ್ಟ್‌ನಲ್ಲಿ 2021 ರ ಈ ಟಿಕೆಟ್ ಅನ್ನು ಹಣವಾಗಿ ಪರಿವರ್ತಿಸಲು ಡಿಸೆಂಬರ್ 31 2024 ಕೊನೆಯ ದಿನವಾಗಿತ್ತು. ಈ ವಿಷಯ ಕಂಡ ಮಹಿಳೆಗೆ ನಿಜಕ್ಕೂ ಅಚ್ಚರಿಯಾಗಿತ್ತು.
2011ರಲ್ಲಿ ಈ ಲಾಟರಿ ಟಿಕೆಟ್ ಖರೀದಿಸಿದ್ದ ಆಕೆ ಬಳಿಕ ಆ ಕುರಿತು ಮರೆತು ಬಿಟ್ಟಿದ್ದಳು, ಆದರೆ ಕ್ರಿಸ್‌ಮಸ್‌ಗಾಗಿ ಮನೆ ಕ್ಲೀನ್ ಮಾಡುವಾಗ ಟಿವಿಯ ಟೇಬಲ್ ಕೆಳಗೆ ಈ ಲಾಟರಿ ಪತ್ತೆಯಾಗಿತ್ತು. ಈ ಲಾಟರಿ ನಂಬರ್ ಹಿಡಿದು ಆನ್‌ಲೈನ್‌ನಲ್ಲಿ ಪರೀಕ್ಷೆಗೊಳಪಡಿಸಿದಾಗ ಆಕೆಯ ಅದೃಷ್ಟ ಬದಲಾಗಿತ್ತು.
ಗಾರ್ಡನ್‌ನಲ್ಲಿ ಬಿದ್ದಿತ್ತು ಲಾಟರಿ ಟಿಕೆಟ್
ಇದೊಂದೆ ಅಲ್ಲ ಕೆಲವು ತಿಂಗಳ ಹಿಂದೆ, ಮ್ಯಾಸಚೂಸೆಟ್ಸ್‌ನ ವ್ಯಕ್ತಿಯೊಬ್ಬರು ತಿಂಗಳ ಹಿಂದೆ ಕಳೆದುಹೋದ ಟಿಕೆಟ್‌ನಲ್ಲಿ $ 1 ಮಿಲಿಯನ್ ಲಾಟರಿ ಬಹುಮಾನವನ್ನು ಗೆದ್ದರು. ಖಲೀಲ್ ಸೌಸಾ ಅವರು ಲಾಟರಿ ಟಿಕೆಟ್ ಖರೀದಿಸಿದ್ದರು. ಆದರೆ ಮನೆಯಲ್ಲಿ ಎಸೆದಿದ್ದರು. ಒಂದು ದಿನ ಮನೆಯ ಗಾರ್ಡನ್‌ಗೆ ನೀರು ಹಾಯಿಸಲು ಕೆಲಸಗಾರ ಬಂದಾಗ ಆತನಿಗೆ ಗಿಡಗಳ ಮಧ್ಯದಲ್ಲಿ ಈ ಲಾಟರಿ ಟಿಕೆಟ್ ಸಿಕ್ಕಿತ್ತು. ಈ ಟಿಕೆಟ್ ಅನ್ನು ತಂದು ಮಾಲಿಕನಿಗೆ ನೀಡದಾಗ ಲಾಟರಿಗೆ ಬರೋಬ್ಬರಿ 1 ಮಿಲಿಯನ್ ಡಾಲರ್ ಲಾಟರಿ ಹೊಡೆದಿತ್ತು.
ಭಾರತೀಯರಿಗೂ ಬಂಪರ್
ಯುಎಇಯಲ್ಲಿ ಕೆಲಸ ಮಾಡುತ್ತಿರುವ ಭಾರತದ ವ್ಯಕ್ತಿಯೊಬ್ಬರು ಲಾಟರಿಯಲ್ಲಿ 20 ಮಿಲಿಯನ್ ದಿರ್ಹಂ ಬಹುಮಾನವನ್ನು ಗೆದ್ದಿದ್ದಾರೆ. ಅಲ್ ಐನ್ ನಗರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಮುನಾವರ್ ಫೈರೂಸ್ ಕಳೆದ ಐದು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಇತ್ತೀಚಿನ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ, ಅವರು ಸುಮಾರು ₹44 ಕೋಟಿ ಮೊತ್ತವನ್ನು ಗೆದ್ದಿದ್ದಾರೆ.
ಮತ್ತೊಬ್ಬ ಭಾರತೀಯ ಸುತೇಶ್ ಕುಮಾರ್ ಕುಮರೇಶನ್ ಅದೇ ದಿನ 1 ಮಿಲಿಯನ್ ದಿರ್ಹಂ ಗೆದ್ದಿದ್ದಾರೆ. ಅಬುಧಾಬಿಯ ನಿವಾಸಿಯಾಗಿರುವ ಅವರು ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಖರೀದಿಸಿದ್ದರು. ನನ್ನ ಏಳು ವರ್ಷದ ಮಗಳು ಗೆಲ್ಲುವ ಟಿಕೆಟ್ ಸಂಖ್ಯೆಗಳನ್ನು ಆಯ್ಕೆ ಮಾಡಿದ್ದಳು ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
ಲಾಟರಿ ಗೆದ್ದ ಸಹೋದರರು
ವರ್ಜೀನಿಯಾದಲ್ಲಿ ಇಬ್ಬರು ಸಹೋದರರು ಒಂದೇ ಟಿಕೆಟ್ ಮೂಲಕ 10 ಲಕ್ಷ ರೂ.ಲಾಟರಿ ಗೆದ್ದಿದ್ದರು. ಬಳಿಕ ಇಬ್ಬರೂ ಇ ಹಣವನ್ನು ಹಂಚಿಕೊಂಡಿದ್ದಾರೆ. ಟಿಮ್ ಮತ್ತು ಸ್ಟೀವ್ ಕಾನ್ವೆಲ್ ಲಾಟರಿ ಟಿಕೆಟ್ ಖರೀದಿಸುವಾಗಲೇ ಈ ರೀತಿ ಮಾತನಾಡಿಕೊಂಡಿದ್ದರಂತೆ. ಅದರಂತೆ ಇಬ್ಬರಿಗೂ ಅದೃಷ್ಟದಂತೆ ಲಾಟರಿ ಹೊಡೆದಿದ್ದು, ಗೆದ್ದ ಹಣ ಹಂಚಿಕೊಂಡಿದ್ದಾರೆ.



Click it and Unblock the Notifications
