Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕಾಲಿನಿಂದ ಹೆಸರು ಬರೆದು ಸಾವಿರಾರು ರೂಪಾಯಿ ದುಡಿಯುವ ಯುವತಿ..!
ಬದುಕಬೇಕು, ತಮ್ಮದೇ ಬ್ಯುಸಿನೆಸ್ ಮಾಡಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತೆ. ಅದರಂತೆ ಹಲರು ಹತ್ತಾರು ರೀತಿಯ ಮಾರ್ಗಗಳ ಆಯ್ದುಕೊಳ್ಳುತ್ತಾರೆ. ಕೆಲವರು ತಮ್ಮ ವಿಶಿಷ್ಟ ಮಾರ್ಗದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಆದ್ರೆ ಮತ್ತೆ ಕೆಲವರು ಆಯ್ಕೆ ಮಾಡಿಕೊಳ್ಳುವ ದಾರಿ ಕಂಡು ಎಲ್ಲರಿಗೂ ಅಚ್ಚರಿಯ ಜೊತೆಗೆ ಶಾಕ್ ಸಹ ಆಗುತ್ತದೆ.
ಹಾಗೆ ಇಲ್ಲೊಬ್ಬ ಯುವತಿ ಸಹ ಹಣ ಮಾಡಲು ಆಯ್ಕೆ ಮಾಡಿಕೊಂಡ ದಾರಿ ನೋಡಿದರೆ ನಿಮಗೂ ಶಾಕ್ ಆಗಬಹುದು. ಹೌದು ಇಲ್ಲೊಬ್ಬಾಕೆ ತನ್ನ ಕಾಲಿನಲ್ಲಿ ಹೆಸರು ಬರೆಯುವ ಮೂಲಕ ಸಾವಿರಾರು ರೂಪಾಯಿ ದುಡಿಯುತ್ತಿದ್ದಾಳೆ. ಇದರಲ್ಲೇನು ವಿಶೇಷವಿದೆ ಎಂದು ನೀವು ಯೋಚಿಸುತ್ತಿರಬಹುದು. ಇಲ್ಲೊಂದು ವಿಶೇಷವಿದೆ.

ವೈರಲ್ ವೀಡಿಯೊದಲ್ಲಿ, ಹುಡುಗಿ ಕೆಂಪು ಉಗುರು ಬಣ್ಣದಿಂದ ಖಾಲಿ ಕಾಗದದ ಮೇಲೆ ಹೆಸರು ಬರೆಯುವುದನ್ನು ಕಾಣಬಹುದು. ಕಾಗದದ ಹಾಳೆಗಳಲ್ಲಿ ಪುರುಷರ ಹೆಸರನ್ನು ಬರೆಯುವ ಮೂಲಕ ಹಣವನ್ನು ಗಳಿಸುತ್ತಿದ್ದಾಳೆ. ಆಕೆ ಹೆಸರು ಬರೆಯಲು ಉಗುರು ಬಣ್ಣ, ಮಾರ್ಕರ್‌ಗಳು ಮತ್ತು ಪೆನ್ನುಗಳನ್ನು ಹೆಚ್ಚಾಗಿ ಬಳಸುತ್ತಾಳೆ.
ಹುಡುಗಿ ಪ್ರತಿ ಪೇಪರ್‌ಗೆ $300 (ರೂ. 25,050) ಗಳಿಸುತ್ತಾಳೆ. ಅವಳು ತನ್ನ ಪಾದಗಳಿಂದ ಪುರುಷರ ಹೆಸರನ್ನು ಬರೆಯುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಾಳೆ. ಆಕೆಯ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ, ಹುಡುಗಿ ಕೆಂಪು ಉಗುರು ಬಣ್ಣದಿಂದ ಖಾಲಿ ಕಾಗದದ ಮೇಲೆ ಹೆಸರು ಬರೆಯುವುದನ್ನು ಕಾಣಬಹುದು. ಈ ಹೆಸರು ಬರೆದು ಕೊಟ್ಟು ಆಕೆ ತನ್ನ ವಿದ್ಯಾರ್ಥಿಯಾಗಿದ್ದಾಗ ಮಾಡಿದ್ದ ಸಾಲ ತೀರಿಸುತ್ತಿದ್ದಾಳಂತೆ. ಕಾಗದದ ಮೇಲೆ ಹೆಸರುಗಳನ್ನು ಬರೆಯುವುದಲ್ಲದೆ, ಹೆಸರು ಬರೆದಿರುವ ಆಟೋಗ್ರಾಫ್ ಮತ್ತು ಸಾಕ್ಸ್‌ಗಳನ್ನು ಸಹ ಮಾರಾಟ ಮಾಡುತ್ತಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಟೋ ಗ್ಯಾಲರಿ ಎಂಬ ಹೆಸರಿನ ಪುಟವು ಆಕೆಯ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ.
ಈ ಹಣದಿಂದ ಮನೆ ಬಾಡಿಗೆ ಸೇರಿ ವಿದ್ಯಾರ್ಥಿ ಸಾಲವನ್ನು ತೀರಿಸುತ್ತಿದ್ದೇನೆ ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದಾಳೆ. ವೀಡಿಯೊವೊಂದರಲ್ಲಿ, ಅವಳು ಲೆಸ್ಟರ್ ಎಂಬ ಹೆಸರನ್ನು ಬರೆಯುವುದನ್ನು ನೋಡಿದಳು. ಹೆಸರನ್ನು ಬರೆದ ನಂತರ ಅವಳು ಈ ಕಾಗದವನ್ನು ಅದೇ ವ್ಯಕ್ತಿಗೆ ಮಾರಿದ್ದಾಳೆ. ಆತ ಈ ಹೆಸರನ್ನು 25 ಸಾವಿರ ರೂಪಾಯಿ ನೀಡಿ ಖರೀದಿಸಿದನಂತೆ.
ಒಮ್ಮೆ ಅವಳು ತನ್ನ ತಂದೆಯ ಸಾಕ್ಸ್‌ಗಳನ್ನು ತೆಗೆದುಕೊಂಡು ತನ್ನ ಕೈಗಳಿಂದ ಹೆಸರನ್ನು ಕಾಲ್ಚೀಲದ ಮೇಲೆ ಬರೆಯುವ ಮೊದಲು ಸ್ವಲ್ಪ ಸಮಯದವರೆಗೆ ಧರಿಸಿದ್ದಳು. ನಂತರ ಆಕೆ ಅದನ್ನು 33,000 ಸಾವಿರ ರೂಪಾಯಿಗೆ ಮಾರಿದಳು. ಮಾಧ್ಯಮ ವರದಿಗಳ ಪ್ರಕಾರ, ಈ ಕೆಲಸಕ್ಕಾಗಿ ಆಕೆ 2,000 ರಿಂದ ಆರಂಭಿಸಿ ಬರೋಬ್ಬರಿ 50,000 ರೂಪಾಯಿವರೆಗೂ ದರ ನಿಗದಿ ಮಾಡುತ್ತಾಳೆ.
ಆದ್ರೆ ಆಕೆಯಿಂದ ಏಕೆ ಜನರು ಹೆಸರು ಬರೆಸಿ ದುಬಾರಿ ಹಣ ನೀಡಿ ಖರೀದಿಸುತ್ತಿದ್ದಾರೆ ಎಂಬುದೇ ನಿಗೂಢವಾಗಿದೆ. ಈ ರೀತಿ ಯಾರು ಬೇಕಾದರು ಬರೆಯಬಹುದು. ಆದರೆ ಹಣ ನೀಡಿ ಈ ಕಾಗದವನ್ನು ಖರೀದಿಸುತ್ತಿರುವುದು ಏಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಕೆಲವರು ಇದೊಂದು ಹುಚ್ಚುತನ ಎಂದರೆ, ಮತ್ತೆ ಕೆಲವರು ಹೀಗೂ ದುಡಿಮೆ ಮಾಡಬಹುದೇ ಎಂದು ಬಾಯಿ ಮೇಲೆ ಬೆರಳಿಟ್ಟಿದ್ದಾರೆ.
ಒಟ್ಟಿನಲ್ಲಿ ಜನ ಮರುಳೋ ಜಾತ್ರ ಮರುಳೋ ಎಂಬುದು ತಿಳಿಯದಾಗಿದೆ. ಆಕೆ ಒಂದು ಚೂರು ಕಷ್ಟ ಪಡದೆ, ಹಣ ಹೂಡಿಕೆ ಮಾಡದೆಯೇ ಸಾವಿರಾರು ರೂಪಾಯಿ ಗಳಿಸುತ್ತಿರುವುದು ಮಾತ್ರ ಹಲವರ ಅಚ್ಚರಿಗೆ ಕಾರಣವಾಗಿದೆ. ಇತ್ತೀಚಿಗೆ ಜನ ಯಾವುದಕ್ಕೆ ಪ್ರಾಶಸ್ತ್ರ್ಯ ನೀಡುತ್ತಿದ್ದಾರೆ ಎಂಬುದು ತಿಳಿಯುವುದೇ ನಿಗೂಢವಾಗಿದೆ.



Click it and Unblock the Notifications
