Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಮೂರು ತಿಂಗಳ ಹಿಂದೆ ನಾಪತ್ತೆಯಾದ ಮಹಿಳೆ ಗುಹೆಯಲ್ಲಿ ಹಾವಾಗಿ ಪತ್ತೆ..!!
ಭೂಮಿ ಮೇಲೆ ಎಷ್ಟೆಲ್ಲಾ ವಿಚಿತ್ರ ಘಟನೆಗಳು ನಡೆಯುತ್ತೆ ಅಂದ್ರೆ ನೀವು ಕೆಲವೊಂದನ್ನ ನಂಬಲು ಸಾಧ್ಯವಾಗುವುದಿಲ್ಲ. ಕೆಲವೊಂದು ಘಟನೆಗಳು ಮಾತ್ರ ಎಂತವರಲ್ಲು ಅಚ್ಚರಿ ಮೂಡಿಸುತ್ತವೆ. ಹೀಗೆ ಇಲ್ಲೊಂದು ಘಟನೆ ಸಹ ಅಚ್ಚರಿ ಹುಟ್ಟಿಸುತ್ತಿರುವುದು ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಕಾಡಿನೊಳಗೆ ಪತ್ತೆಯಾಗಿರುವ ಅಚ್ಚರಿಯ ಘಟನೆ ನಡೆದಿದೆ. ನಾಪತ್ತೆಯಾಗಿ ಮೂರು ತಿಂಗಳ ಬಳಿಕ ಕಾಡಿನ ಗುಹೆಯೊಂದರಲ್ಲಿ ಮಹಿಳೆ ಪತ್ತೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಇದಿಷ್ಟೇ ಅಲ್ಲ ಆಕೆ ಹಾವಿನಂತೆ ಬದಲಾಗಿರುವುದು ಮತ್ತಷ್ಟು ಅಚ್ಚರಿಯ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ.

ಮೂರು ತಿಂಗಳಿನಿಂದ ಮಹಿಳೆಗಾಗಿ ಮನೆಯವರು, ಊರಿನವರು ಹುಡುಕಾಡಿದ್ದರು. ಆದ್ರೆ ಆಕೆ ಕಾಡಿನ ಮಧ್ಯದಲ್ಲಿರುವ ಗುಹೆಯೊಂದರಲ್ಲಿ ಪತ್ತೆಯಾಗಿದ್ದು, ಹಾವಿನಂತೆ ನಾಲಗೆ ಹೊರಹಾಕಿ ತೆವಳುತ್ತಿರುವುದು ಕಂಡುಬಂದಿದೆ. ಆಕೆಯನ್ನ ಕಂಡ ಮನೆಯವರು ಹಾಗೂ ಊರಿನವರು ನಿಜಕ್ಕೂ ಶಾಕ್ ಆಗಿದ್ದಾರೆ.
ಜಾರ್ಖಂಡ್ ಗರ್ವಾ ಜಿಲ್ಲೆಯ ಕರಿವಾಡಿಹ್ ಗ್ರಾಮದಲ್ಲಿರುವ ರಾಣಿದಿಹ್ ಗುಪ್ತಾ ಗುಹೆಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಆಕೆಗಾಗಿ ತಿಂಗಳುಗಳಿಂದ ಹುಡುಕಾಟ ನಡೆದಿತ್ತು. ಆದರೆ ಮನೆಯವರಿಗೆ ಕಾಡಿನಲ್ಲಿ ಮಹಿಳೆ ಇರುವ ಕುರಿತು ವಿಚಾರ ತಿಳಿದು ನೋಡಲು ಬಂದಾಗ ಆಕೆ ಗುಹೆಯಲ್ಲಿ ಹಾವಿನಂತೆ ನಾಲಗೆ ಹೊರಹಾಕುತ್ತಾ ತೆವಳುತ್ತಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಮಂದಿ ಅಚ್ಚರಿಗೊಂಡಿರುವ ಜೊತೆಗೆ ಶಾಕ್‌ಗೆ ಒಳಗಾಗಿದ್ದಾರೆ. ಅಲ್ಲದೆ ಆಕೆ ಗುಹೆಯೊಳಗೆ ಸೇರಿಕೊಂಡಿದ್ದು ಹೇಗೆ ಎಂಬ ಕುತೂಹಲ ಮೂಡಿದೆ. ಜೊತೆಗೆ ಆಕೆಯ ನಿಜ ಕಥೆ ಬೇರೆಯದ್ದೇ ಇದೆ, ಮೂರು ತಿಂಗಳ ಕಾಲ ಗುಹೆಯೊಳಗೆ ಇರಲು ಸಾಧ್ಯವಾಗಿದ್ದು ಹೇಗೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ.
ಆದರೆ ಮಹಿಳೆಯ ವರ್ತನೆ ಕಂಡು ಜನರು ಈಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದು ಹೇಳುತ್ತಿದ್ದಾರೆ. ಆದರೆ ಆಕೆಯ ನಿಖರ ಮಾಹಿತಿ ಏನು? ಯಾವಾಗ ನಾಪಾತ್ತೆಯಾಗಿದ್ದು, ಕಾರಣವೇನು ಎಂಬುದು ತಿಳಿದುಬಂದಿಲ್ಲ. ವಿಡಿಯೋ ನೊಡುತ್ತಿದ್ದಂತೆ ಇದರ ಹಿಂದಿರುವ ಒಂದೊಂದೇ ಕಥೆಯನ್ನ ಜನರು ತೆರೆದಿಡುತ್ತಿದ್ದಾರೆ.
ಈ ನಡವಳಿಕೆಯು ಆಧಾರವಾಗಿರುವ ವೈದ್ಯಕೀಯ ಅಥವಾ ಮಾನಸಿಕ ಸ್ಥಿತಿಯಿಂದ ಉಂಟಾಗಿರಬಹುದು. ಆದಾಗ್ಯೂ, ನಿಖರವಾದ ವಿವರಗಳು ತಿಳಿದಿಲ್ಲ. ಯಾರೋ ಗುಹೆಯಲ್ಲಿ ನಿಜವಾಗಿಯೂ ಹಾವಿನಂತೆ ನಟಿಸುತ್ತಿದ್ದಾರೆ ಎಂದು ನನಗೆ ನಂಬಲು ಸಾಧ್ಯವಿಲ್ಲ. ಅವಳು ಅಗತ್ಯವಿರುವ ವೈದ್ಯಕೀಯ ಸಹಾಯ ಪಡೆಯುತ್ತಾಳೆ ಎಂದು ನಾನು ಭಾವಿಸುತ್ತೇನೆ. ಮಾನಸಿಕ ಆರೋಗ್ಯ ತುಂಬಾ ಮುಖ್ಯ. ಆಕೆಗೆ ಸ್ವಲ್ಪ ಬೆಂಬಲ ಬೇಕಾಗಬಹುದು ಎಂದು ತೋರುತ್ತದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಕೆಲವರು ಅದರ ಸತ್ಯಾಸತ್ಯತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು, ಇಡೀ ಘಟನೆಯು ಕೇವಲ ಒಂದು ದಬ್ಬಾಳಿಕೆಯಾಗಿರಬಹುದು. ಆಕೆಯ ಕೈಲಿ ಈ ರೀತಿ ನಟಿಸುವಂತೆ ಹೇಳಿರಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.
ಬಡ ಹುಡುಗಿ ಮೂರು ತಿಂಗಳ ಕಾಲ ಕಣ್ಮರೆಯಾಗಲು ಕಾರಣವೇನು ಎಂದು ನಾನು ಊಹಿಸಲು ಸಾಧ್ಯವಿಲ್ಲ, ಕೇವಲ ಗುಹೆಯೊಂದರಲ್ಲಿ ಕಂಡುಬರುತ್ತದೆ ?? ನಂತರ ಹಾವಿನಂತೆ ಕಂಡುಬರುತ್ತದೆ. ಇದು ನಾನು ಮಾತ್ರವೇ ಅಥವಾ ಇಡೀ ಕಥೆಯು ನಕಲಿ ಎಂದು ತೋರುತ್ತದೆಯೇ? ಅಥವಾ ಇದು ಮೂಢನಂಬಿಕೆಯ ಸ್ವಾಧೀನ ಕಥೆಗಳಲ್ಲಿ ಒಂದಾಗಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಆದ್ರೆ ಈ ರೀತಿ ಮಹಿಳೆಯೊಬ್ಬರು ವರ್ತಿಸಲು ಆಕೆಯ ಮಾನಸಿಕ ಸ್ಥಿತಿ ಹದಗೆಡಲು ಕಾರಣವಿರುತ್ತದೆ ಎಂಬುದು ತಜ್ಞರ ಮಾತಾಗಿದೆ. ಆಕೆಗೆ ಆಪ್ತ ಸಮಾಲೋಚನೆಯ ಅಗತ್ಯವಿದ್ದು, ಜನರು ಮಾತ್ರ ಆಕೆಗೆ ಪೂಜೆ ಮಾಡಲು ಮುಂದಾಗಿರುವುದು ಮತ್ತಷ್ಟು ಅಚ್ಚರಿ ಮೂಡಿಸುತ್ತಿದೆ.



Click it and Unblock the Notifications
